Breaking News
Home / ರಾಷ್ಟ್ರೀಯ (page 702)

ರಾಷ್ಟ್ರೀಯ

ಪುಷ್ಪ ಸಿನಿಮಾ 10 ಕೆಜಿಎಫ್​ಗೆ ಸಮ’; ಅಲ್ಲು ಅರ್ಜುನ್​ ಚಿತ್ರಕ್ಕೆ ಸಿಕ್ತು ಹೊಸ ಮೆಚ್ಚುಗೆ

ಅಲ್ಲು ಅರ್ಜುನ್​ ನಟನೆಯ ‘ಪುಷ್ಪ’ ಸಿನಿಮಾದ ಬಗ್ಗೆ ನಿತ್ಯ ಹೊಸ ಹೊಸ ಅಪ್​ಡೇಟ್​ ಸಿಗುತ್ತಿದೆ. ಕೆಲ ತಿಂಗಳ ಹಿಂದೆ ರಿಲೀಸ್​ ಆಗಿದ್ದ ಸಿನಿಮಾದ ಟೀಸರ್ ಸಾಕಷ್ಟು ಮೆಚ್ಚುಗೆ ಪಡೆದುಕೊಂಡಿತ್ತು. ಈಗ ಸಿನಿಮಾ ಹೇಗಿರಲಿದೆ ಎನ್ನುವ ಬಗ್ಗೆ ಉಪ್ಪೇನಾ ನಿರ್ದೇಶಕ ಬುಚಿ ಬಾಬು ಈ ರೀತಿಯ ಹೇಳಿಕೆ ನೀಡಿದ್ದಾರೆ. ಪುಷ್ಪ ಸಿನಿಮಾದಲ್ಲಿ ಅಲ್ಲು ಅರ್ಜುನ್​ ಟ್ರಕ್​ ಡ್ರೈವರ್ ಆಗಿ ಕಾಣಿಸಿಕೊಂಡಿದ್ದಾರೆ. ಸಿನಿಮಾದಲ್ಲಿ ರಕ್ತ ಚಂದನದ ಕಳ್ಳ ಸಾಗಾಣಿಕೆಯ ಬಗ್ಗೆ ಹೇಳಲಾಗಿದೆ. ಈಗಾಗಲೇ …

Read More »

ಸುಶಾಂತ್‌ ಸಿಂಗ್ ಸಾವನ್ನಪ್ಪಿ 1 ವರ್ಷ ಕಳೆದರೂ ಮುಗಿದಿಲ್ಲ CBI ತನಿಖೆ; ನಿಗೂಢವಾಗಿದೆ ಸಾವಿನ ರಹಸ್ಯ!

ಮುಂಬೈ (ಜೂನ್ 14): ಬಾಲಿವುಡ್‌ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿಗೀಡಾಗಿ ಇಂದಿಗೆ ಒಂದು ವರ್ಷವಾಗಿದೆ. ಜೂನ್ 14,2020 ರಂದು ಅವರು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಕಳೆದ ವರ್ಷ ಬಿಹಾರ ಪೊಲೀಸರು ದಾಖಲಿಸಿದ್ದ ಕೊಲೆ ಪ್ರಕರಣವನ್ನು ವಹಿಸಿಕೊಂಡ ಸಿಬಿಐ ಇದುವರೆಗೆ ತನ್ನ ತನಿಖೆಯ ಬಗ್ಗೆ ಯಾವುದೇ ಮಾಹಿತಿ ಬಿಟ್ಟುಕೊಟ್ಟಿಲ್ಲ. ಕಳೆದ ವರ್ಷ ಆಗಸ್ಟ್‌ನಲ್ಲಿ ಬಿಹಾರ ಪೊಲೀಸರು ಪ್ರಕರಣವನ್ನು ವಹಿಸಿಕೊಂಡ ಕೂಡಲೇ ಸಿಬಿಐ ಹಲವಾರು ವ್ಯಕ್ತಿಗಳ ಹೇಳಿಕೆಗಳನ್ನು ದಾಖಲಿಸಿದರೂ, ಈ …

Read More »

5 ಗಂಟೆ ವಿಚಾರಣೆ ಎದುರಿಸಿದ ನರೇಶ್; ಇಂದು ಏನೆಲ್ಲಾ ನಡೀತು?

ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧದ ಸಿಡಿ ಬಹಿರಂಗ ಪ್ರಕರಣದಲ್ಲಿ ಆರೋಪಿಯಾಗಿರುವ ನರೇಶ್​ ಗೌಡನ ವಿಚಾರಣೆ ಇಂದು ಕೂಡ ನಡೆಯಿತು. ಐದು ಗಂಟೆಗಳ ಕಾಲ ನಡೆದ ಇಂದಿನ ಎಸ್‌ಐಟಿ ವಿಚಾರಣೆ ಅಂತ್ಯವಾಗಿದೆ. ಅದರಂತೆ 2ನೇ ದಿನದ ವಿಚಾರಣೆ ಮುಗಿಸಿ ವಕೀಲರೊಂದಿಗೆ ನರೇಶ್ ಗೌಡ ತೆರಳಿದ್ದಾರೆ. ಸದಾಶಿವನಗರದಲ್ಲಿ ರಮೇಶ್ ಜಾರಕಿಹೊಳಿ ದಾಖಲಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನರೇಶ್​​ನನ್ನ ವಿಚಾರಣೆಗೆ ಕರೆಯಲಾಗಿತ್ತು. ಅಗತ್ಯವಿದ್ದಲ್ಲಿ‌ ವಿಚಾರಣೆಗೆ ಕರೆಯುವುದಾಗಿ ಹೇಳಿ ಎಸ್‌ಐಟಿ ಅಧಿಕಾರಿಗಳ ತಂಡ ವಾಪಸ್ …

Read More »

ಸ್ಟಾರ್ ಪೊಲೀಸರ ಚೇಸ್ಟೇ ಜಾಸ್ತಿಯಾಗಿದೆ : ಡಿ.ಕೆ.ಶಿವಕುಮಾರ್

ಕೆಆರ್ ಪುರ, ಜೂ.14 : ಸ್ಟಾರ್ ಪೊಲೀಸರ ಚೇಸ್ಟೇ ಜಾಸ್ತಿಯಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪೊಲೀಸರ ವಿರುದ್ಧ ಹರಿಹಾಯ್ದರು. ರಾಮಮೂರ್ತಿನಗರ ವಾರ್ಡ್ ನ ಕಲ್ಕೆರೆಯಲ್ಲಿ ರೇಷನ್ ಕಿಟ್ ಗಳನ್ನು ವಿತರಸಿ ಅವರು ಮಾತನಾಡಿದರು. ಒಳ್ಳೆಯ ಪೊಲೀಸರು ಇದ್ದಾರೆ ಕಾನ್ಸ್ ಟೇಬಲ್ ಗಳು ಪಾಪ ಏನೂ ಮಾಡೋದಿಲ್ಲ ಆದರೆ ಸ್ಟಾರ್ ಗಳನ್ನು ಹಾಕಿಕೊಂಡವರು ಬಿಜೆಪಿ ಏಜೆಂಟರಂತೆ ವರ್ತಿಸುತ್ತಿರುತ್ತಾರೆ ಎಂದು ಆರೋಪಿಸಿದರು. ಜನರ ಕಷ್ಟಗಳಿಗೆ ಸ್ಪಂದನೆ ಮಾಡುವುದಕ್ಕಾಗಿಯೇ ಕಾಂಗ್ರೆಸ್ ಪಕ್ಷದ ವತಿಯಿಂದ …

Read More »

38 ಹೆಂಡ್ತಿಯರ ಮುದ್ದಿನ ಗಂಡ, 89 ಮಕ್ಕಳ ತಂದೆ ಇನ್ನಿಲ್ಲ! ಇವರ ವೈವಾಹಿಕ ಬದುಕೇ ಕುತೂಹಲ

ಮಿಜೋರಾಂ: ಬರೋಬ್ಬರಿ 38 ಮಹಿಳೆಯರನ್ನು ಮದುವೆ ಆಗಿದ್ದ, 89 ಮಕ್ಕಳಿಗೆ ಜನ್ಮ ನೀಡಿದ್ದ, 33 ಮೊಮ್ಮಕ್ಕಳ ಅಜ್ಜ ಜಿಯೋನಾ ಚನಾ ಭಾನುವಾರ ನಿಧನರಾದರು. ಜಗತ್ತಿನ ಅತಿದೊಡ್ಡ ಕುಟುಂಬದ ವಾರಸ್ದಾರ ಎಂದೇ ಗುರುತಿಸಿಕೊಂಡಿದ್ದ ಜಿಯೋನಾ ಚನಾರ ವೈವಾಹಿಕ ಬದುಕೇ ಎಲ್ಲರಿಗೂ ಕುತೂಹಲ ಮೂಡಿಸಿತ್ತು. ಪತ್ನಿ, ಮಕ್ಕಳು, ಮೊಮ್ಮಕ್ಕಳು ಸೇರಿ 181 ಸದಸ್ಯರನ್ನ ಹೊಂದಿತ್ತು ಜಿಯೋನಾ ಕುಟುಂಬ. ಮಿಜೋರಾಂನ ಬಕ್ತಾಂಗ್​ನಲ್ಲಿ ಜಿಯಾನ್​ರ ನಾಲ್ಕಂತಸ್ತಿನ ಆಕರ್ಷಕ ಬಂಗಲೆ ಇದೆ. ಅಲ್ಲಿಯೇ ಜಿಯೋನಾ ವಾಸವಿದ್ದರು. ಇದು …

Read More »

ಸಗಟು ಹಣದುಬ್ಬರ ದಾಖಲೆ ಮಟ್ಟ ಶೇ.12.94ಕ್ಕೆ ಏರಿಕೆ

ನವದೆಹಲಿ: ಸಗಟು ಮಾರಾಟ ದರ ಆಧರಿಸಿದ ಹಣದುಬ್ಬರ ಸೂಚ್ಯಂಕವು (ಡಬ್ಲ್ಯುಪಿಐ) ಮತ್ತೆ ಸಾರ್ವಕಾಲಿಕ ದಾಖಲೆಯ ಮಟ್ಟಕ್ಕೆ ಏರಿಕೆಯಾಗಿದ್ದು, ಮೇ ತಿಂಗಳಿನಲ್ಲಿ ಶೇ.10.49ಕ್ಕೆ ತಲುಪಿದೆ. ಹಾಲಿ ಪರಿಸ್ಥಿತಿಗೆ ತಯಾರಾದ ಉತ್ಪನ್ನಗಳು ಹಾಗೂ ತೈಲ ಬೆಲೆಯಲ್ಲಿ ಆದ ಹೆಚ್ಚಳ ಹಣದುಬ್ಬರವೇ ಈ ಏರಿಕೆಗೆ ಕಾರಣ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಈ ವರ್ಷದ ಏಪ್ರಿಲ್ ನಲ್ಲಿ ಸಗಟು ಹಣದುಬ್ಬರ ಪ್ರಮಾಣವು ಶೇ 10.49ರಷ್ಟಿತ್ತು. ಹಿಂದಿನ ವರ್ಷದ ಮೇ ತಿಂಗಳಿನಲ್ಲಿ ಇದು ಶೇ (-)3.37ರಷ್ಟಾಗಿತ್ತು. ಸಗಟು …

Read More »

ಸಂಚಾರಿ ವಿಜಯ್ ಸಂಪೂರ್ಣ ಚಿಕಿತ್ಸಾ ವೆಚ್ಚ ಭರಿಸುವೆ: ಡಿಸಿಎಂ ಅಶ್ವಥ ನಾರಾಯಣ

ಬೆಂಗಳೂರು: ಬೈಕ್ ಅಪಘಾತದಲ್ಲಿ ಮೆದುಳಿಗೆ ತೀವ್ರ ಸ್ವರೂಪದ ಗಾಯಗಳಾಗಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿರುವ ರಾಷ್ಟ್ರಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ ಅವರ ಚಿಕಿತ್ಸಾ ವೆಚ್ಚವನ್ನು ಸಂಪೂರ್ಣವಾಗಿ ತಾವು ಭರಿಸುವುದಾಗಿ ಉಪ ಮುಖ್ಯಮಂತ್ರಿ ಡಾ ಸಿ ಎನ್ ಅಶ್ವಥ್ ನಾರಾಯಣ ಹೇಳಿದ್ದಾರೆ. ಸದ್ಯ ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯಲ್ಲಿರುವ ಅಪೋಲೋ ಆಸ್ಪತ್ರೆಯಲ್ಲಿ ನ್ಯೂರೋ ವೆಂಟಿಲೇಟರ್ ನಲ್ಲಿ ಚಿಕಿತ್ಸೆ ಮುಂದುವರಿಯುತ್ತಿದ್ದು, ಉಸಿರಾಟವನ್ನೂ ನಿಲ್ಲಿಸಿದ್ದಾರೆ, ಮೆದುಳು ಸಂಪೂರ್ಣವಾಗಿ ನಿಷ್ಕ್ರಿಯವಾಗಿದೆ, ಸಂಪೂರ್ಣವಾಗಿ ಜೀವ ರಕ್ಷಕದ …

Read More »

ಸಂಚಾರಿ ವಿಜಯ್‌ ಸತ್ತಿಲ್ಲ, ಆಸ್ಪತ್ರೆ ವೈದ್ಯರಿಂದ ಸ್ಪಷ್ಟೀಕರಣ

ಬೆಂಗಳೂರು: ಸಂಚಾರಿ ವಿಜಯ್‌ ಸತ್ತಿಲ್ಲ ಅವರು ಚಿಕಿತ್ಸೆಗೆ ಸ್ಪಂದಿಸುತ್ತಿಲ್ಲ ಅಂತ ಅವರಿಗೆ ಚಿಕಿತ್ಸೆ ನೀಡುತ್ತಿರುವ ಡಾ.ಅರುಣ್‌ ನಾಯ್ಕ್‌ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಇಂದು ಬೆಳಗ್ಗೆ ಸಂಚಾರಿ ವಿಜಯ್‌ ಸಹೋದರ) ಸಿದ್ದೇಶ್ವರ್‌ ಅವರು ನಮ್ಮ ಅಣ್ಣ (ಸಂಚಾರಿ ವಿಜಯ್‌) ಅವರನ್ನು ಜೀವಂತವಾಗಿ ಇಡುವ ನಿಟ್ಟಿನಲ್ಲಿ ಅವರ ಅಂಗಾಗಳ ದಾನಕ್ಕೆ ಮುಂದಾಗಿದ್ದೇವೆ, ಅವರು ನಮ್ಮೊಂದಿಗೆ ಇಲ್ಲ ಅಂತ ಹೇಳುವುದಕ್ಕೆ ಬೇಸರವಾಗುತ್ತಿದೆ ಅಂತ ಹೇಳಿದ್ದರು.   ಈ ನಡುವೆ ಬೆಂಗಳೂರಿನ ಬನ್ನೇರುಘಟ್ಟದಲ್ಲಿರುವ ಆಪೋಲೋ …

Read More »

ಸರ್ಕಾರದ ಧನಸಹಾಯ ಪಡೆಯಲು ಬ್ರ್ಯಾಡ್ಜ್ ಲೈಸೆನ್ಸ್​​ಗಾಗಿ ಸಾವಿರಾರು ಆಟೋ ಚಾಲಕರ ಪರದಾಟ

ಗದಗ: ಆಟೋ ಚಾಲಕರಿಗೆ ರಾಜ್ಯ ಸರ್ಕಾರ ಘೋಷಣೆ ಮಾಡಿರುವ ಧನಸಹಾಯ ಪಡೆಯಲು ಗದಗನಲ್ಲಿ ಸಾವಿರಾರು ಆಟೋ ಚಾಲಕರು ಪರದಾಟ ನಡೆಸಿದ್ದಾರೆ. ಧನಸಹಾಯ ಪಡೆಯಲು ಸೇವಾ ಸಿಂಧು ಪೋರ್ಟಲ್​ನಲ್ಲಿ ಕೆಲವು ಟೆಕ್ನಿಕಲ್ ಸಮಸ್ಯೆ ಉಂಟಾಗಿದೆ. ಧನಸಹಾಯ ಪಡೆಯಲು ಅರ್ಜಿ ಹಾಕಿದರೆ ಅದು ಬ್ರ್ಯಾಡ್ಜ್ ಲೈಸೆನ್ಸ್ ಕೇಳ್ತಿದೆ. ಇದರಿಂದ ಜಿಲ್ಲಾಧಿಕಾರಿಗಳು ಬ್ರ್ಯಾಡ್ಜ್ ಲೈಸೆನ್ಸ್ ಪಡೆಯಲು ಎರಡು ದಿನಗಳ ಕಾಲ ಮಾತ್ರ ಅವಕಾಶ ಕೊಟ್ಟಿದ್ದರು. ಆದ್ರೆ ಎರಡು ದಿನದಲ್ಲಿ ಕೆಲವೇ ಕೆಲವು ಜನರಿಗೆ ಲೈಸೆನ್ಸ್ …

Read More »

: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನಾಯಕತ್ವ ಬದಲಾವಣೆ ಸುತ್ತ ಸೃಷ್ಟಿಯಾಗಿರುವ ಬಿಕ್ಕಟ್ಟು ಬಗೆಹರಿಸಲು ಮೂರು ದಿನಗಳ ಕಾಲ ರಾಜ್ಯ ಪ್ರವಾಸ ಹಮ್ಮಿಕೊಂಡಿರುವ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ : ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನಾಯಕತ್ವ ಬದಲಾವಣೆ ಸುತ್ತ ಸೃಷ್ಟಿಯಾಗಿರುವ ಬಿಕ್ಕಟ್ಟು ಬಗೆಹರಿಸಲು ಮೂರು ದಿನಗಳ ಕಾಲ ರಾಜ್ಯ ಪ್ರವಾಸ ಹಮ್ಮಿಕೊಂಡಿರುವ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್

ನವದೆಹಲಿ, ಜೂ. 14: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನಾಯಕತ್ವ ಬದಲಾವಣೆ ಸುತ್ತ ಸೃಷ್ಟಿಯಾಗಿರುವ ಬಿಕ್ಕಟ್ಟು ಬಗೆಹರಿಸಲು ಮೂರು ದಿನಗಳ ಕಾಲ ರಾಜ್ಯ ಪ್ರವಾಸ ಹಮ್ಮಿಕೊಂಡಿರುವ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಅವರಿಗೆ ಹೊಸ ರೀತಿಯ ಸಮಸ್ಯೆ ಶುರುವಾಗಿದೆ.‌ ಶಾಸಕಾಂಗ ಪಕ್ಷದ ಸಭೆ ಕರೆಯುವ ವಿಷಯಕ್ಕೆ ಸಂಬಂಧಿಸಿದಂತೆ ಯಡಿಯೂರಪ್ಪ ಪರ ಮತ್ತು ವಿರೋಧಿ ಗುಂಪುಗಳು ಹೇರುತ್ತಿರುವ ಒತ್ತಡದಿಂದ ಹೈಕಮಾಂಡ್ ಪ್ರತಿನಿಧಿ ಅರುಣ್ ಸಿಂಗ್ ಇಕ್ಕಟ್ಟಿಗೆ ಸಿಲುಕಿದ್ದಾರೆ. ಎರಡೂ ಪಾಳೆಯದಿಂದ ದೂರುಗಳ ಸುರಿಮೆಳೆ …

Read More »