Breaking News
Home / ರಾಷ್ಟ್ರೀಯ (page 670)

ರಾಷ್ಟ್ರೀಯ

ಸಿಎಂ ಬದಲಾದರೆ ಪಕ್ಷಕ್ಕೆ ದೊಡ್ಡ ಹೊಡೆತ ಬೀಳುತ್ತದೆ: ರಂಭಾಪುರಿ ಶ್ರೀ

ರಾಯಚೂರು: ರಾಜಕೀಯದಲ್ಲಿ ಸಂಘರ್ಷ ಇರುವುದು ಸಹಜ, ಯಾರು ಏನೇ ಹೇಳಲಿ ನಮಗೆ ಆತ್ಮವಿಶ್ವಾಸವಿದೆ. ಇರುವಂತ ಅವಧಿವರೆಗೆ ಯಡಿಯೂರಪ್ಪನವರೇ ಸಿಎಂ ಆಗಿ ಇರುತ್ತಾರೆ. ಆಕಸ್ಮಿಕವಾಗಿ ಸಿಎಂ ಬದಲಾವಣೆ ಮಾಡಿದ್ರೆ ಬಿಜೆಪಿ ಪಕ್ಷದ ಮೇಲೆ ಬಹುದೊಡ್ಡ ಹೊಡೆತ ಬೀಳುವುದು ಅಂತ ಬಾಳೆಹೊನ್ನೂರು ರಂಭಾಪುರಿ ಪೀಠದ ಜಗದ್ಗುರು ಡಾ.ವೀರಸೋಮೇಶ್ವರ ಭಾಗವತ್ಪಾದರು ಹೇಳಿದ್ದಾರೆ. ರಾಯಚೂರಿನಲ್ಲಿ ಮಾತನಾಡಿ ರಾಜ್ಯದಲ್ಲಿ ಸಿಎಂ ಬದಲಾವಣೆ ವಿಚಾರವಾಗಿ ಶ್ರೀಗಳು ತಮ್ಮ ಸ್ಪಷ್ಟನೆ ನೀಡಿದರು. ಯಡಿಯೂರಪ್ಪ ಇಳಿ ವಯಸ್ಸಿನಲ್ಲಿಯೂ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. …

Read More »

ಗೊಂದಲದಲ್ಲಿರುವ ಬಿಜೆಪಿ ಸರ್ಕಾರ ಬಹಳ ದಿನ ಉಳಿಯುವುದಿಲ್ಲ: ಎನ್.ಎಸ್.ಬೋಸರಾಜು

ರಾಯಚೂರು: ಬಿಜೆಪಿ ಪಕ್ಷದಲ್ಲಿ ಕಳೆದ ಒಂದು ವರ್ಷದಿಂದ ಬಹಳ ಗೊಂದಲಗಳಿವೆ. ಪಕ್ಷದ ಗೊಂದಲಗಳಿಂದ ಸರ್ಕಾರ ಅಭಿವೃದ್ಧಿ ಕೆಲಸಗಳನ್ನೂ ಮಾಡುತ್ತಿಲ್ಲ. ಗೊಂದಲದಲ್ಲಿರುವ ಪಕ್ಷದ ಸರ್ಕಾರ ಬಹಳ ದಿನ ಉಳಿಯುವುದಿಲ್ಲ ಅಂತ ವಿಧಾನ ಪರಿಷತ್ ಮಾಜಿ ಸದಸ್ಯ ಎನ್.ಎಸ್.ಬೋಸರಾಜು ಹೇಳಿದ್ದಾರೆ. ರಾಯಚೂರಿನಲ್ಲಿ ಮಾತನಾಡಿದ ಅವರು, ಆಡಳಿತ ಚುಕ್ಕಾಣಿ ಹಿಡಿದ ಪಕ್ಷ ಸ್ಥಿರ ಸರ್ಕಾರ ಕೊಡಬೇಕು. ಬಿಜೆಪಿ ರಾಜ್ಯಾಧ್ಯಕ್ಷರ ಮಾತುಗಳನ್ನ ನೋಡಿದರೆ ಪಕ್ಷದಲ್ಲಿ ಸರಿಯಿಲ್ಲ ಅನ್ನೋದು ಸ್ಪಷ್ಟವಾಗಿ ಕಾಣುತ್ತಿದೆ. ರಾಜ್ಯದ ಜನ ಸಂಕಷ್ಟದಲ್ಲಿದ್ದಾರೆ. ಪಕ್ಷದ …

Read More »

ಕುಟುಂಬದಲ್ಲಿ ಆದ ಗೊಂದಲ ಬಗೆಹರಿದಿದೆ: ಮೇಘಾ ಶೆಟ್ಟಿ

ಬೆಂಗಳೂರು: ಸ್ಯಾಂಡಲ್‍ವುಡ್‍ನ ಕಿರುತೆರೆ ನಟಿ ಮೇಘಾ ಶೆಟ್ಟಿ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಜೊತೆ ಜೊತೆಯಲಿ ಧಾರಾವಾಹಿಯಿಂದ ಹೊರ ಬಂದಿದ್ದಾರೆ ಎನ್ನುವ ಸುದ್ದಿ ಹರಿದಾಡಿತ್ತು. ಈಗ ಮೇಘಾ ಶೆಟ್ಟಿ ಸ್ಪಷ್ಟನೆ ನೀಡಿದ್ದಾರೆ ನಾನು ಧಾರಾವಾಹಿಯಲ್ಲಿ ನಟಿಸುತ್ತಿಲ್ಲ ಎನ್ನುವ ಸುದ್ದಿ ನಾಲ್ಕೈದು ದಿನಗಳಿಂದ ಹರಿದಾಡಿತ್ತು. ಕುಟುಂಬ ಎಂದಾಗ ಗೊಂದಲ ಸಹಜವಾಗಿರುತ್ತದೆ. ಈಗ ಗೊಂದಲ ಬಗೆಹರಿದಿದೆ. ಜೊತೆ ಜೊತೆಯಲಿ ಧಾರಾವಾಹಿ ಮುಗಿಯುವ ತನಕ ಅನು ಸಿರಿಮನೆ ಪಾತ್ರವನ್ನು ನಾನೇ ಮಾಡುತ್ತೇನೆ. ಈ ಗೊಂದಲದಿಂದ ವೀಕ್ಷಕರಲ್ಲಿ …

Read More »

ಬೆಳಗಾವಿಯಲ್ಲಿ ಸ್ಮಾರ್ಟ್ ಸಿಟಿ ಯೋಜನೆಯ ಕಾಮಗಾರಿ ಅವೈಜ್ಞಾನಿಕ: ಸತೀಶ ಜಾರಕಿಹೊಳಿ

ಬೆಳಗಾವಿ: ಮುಖ್ಯಮಂತ್ರಿ ಹುದ್ದೆಯಿಂದ ಒಬ್ಬರು ಕೆಳಗಿಳಿಯುತ್ತಾರೆ; ಮತ್ತೊಬ್ಬರು ಆ ಹುದ್ದೆಗೇರುತ್ತಾರೆ. ಆದರೆ, ಕೆಳಗಿಳಿಯುವವರಿಂದ ಯಾವ ವಾಣಿ (ಸಂದೇಶ) ಹೊರಬರುತ್ತದೆ ಎಂದು ಕಾಯುತ್ತಿದ್ದೇವೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದರು. ನಗರದ ಕಾಂಗ್ರೆಸ್ ಭವನದಲ್ಲಿ ಪತ್ರಕರ್ತರೊಂದಿಗೆ ಸೋಮವಾರ ಮಾತನಾಡಿದ ಅವರು, ಮುಖ್ಯಮಂತ್ರಿ ಬದಲಾವಣೆಯಿಂದ ಕಾಂಗ್ರೆಸ್‌ಗೆ ಯಾವ ಲಾಭವೂ ಇಲ್ಲ; ನಷ್ಟವೂ ಇಲ್ಲ. ಮುಖ್ಯಮಂತ್ರಿ ಬದಲಾದರೂ ಸರ್ಕಾರ ಅವರದ್ದೇ ಇರುತ್ತದೆ. ನಾವು ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದೇವೆ ಎಂದರು. ಮಧ್ಯಂತರ ಚುನಾವಣೆ ಬಂದರೂ …

Read More »

KSRTC ಬಸ್ ಅಪಘಾತ : ಚಾಲಕ ಸಾವು, 15 ಜನರಿಗೆ ಗಾಯ

ಮಂಗಳೂರು: ಬೆಂಗಳೂರಿನಿಂದ ಕೇರಳದ ಕಣ್ಣೂರು ಜಿಲ್ಲೆಯ ಮಂಕುಟ್ಟಂಗೆ ಪ್ರಯಾಣಿಸುತ್ತಿದ್ದ ಬಸ್ ಮತ್ತೊಂದು ಬಸ್ʼಗೆ ಡಿಕ್ಕಿ ಹೊಡೆದಿದೆ. ಈ ಪರಿಣಾಮ ಚಾಲಕ ಮೃತಪಟ್ಟಿದ್ದು, ಸುಮಾರು 15 ಪ್ರಯಾಣಿಕರು ಗಾಯಗೊಂಡಿದ್ದಾರೆ. ಬಸ್ ಚಾಲಕ, ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆಯ ವೋಲ್ವೋ ಉದ್ಯೋಗಿಯಾಗಿದ್ದಾರೆ.   ಕೇರಳ-ಕರ್ನಾಟಕ ಗಡಿ ಬಳಿ ಮುಂಜಾನೆ ವಾಹನದ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದಿತ್ತು. ‘ಈ ಘಟನೆ ಸುಮಾರು 4.45ಕ್ಕೆ ಸಂಭವಿಸಿದೆ. ಪೆರುಂಬಾಡಿ ಚೆಕ್ ಪಾಯಿಂಟ್ ದಾಟಿ ಮರಕ್ಕೆ ಡಿಕ್ಕಿ …

Read More »

ಅಧಿಕಾರ ಹೋದರೆ ಒಂದು ಗೂಟ ಹೋಯ್ತು ಅಂದುಕೊಳ್ತೀನಿ. ನಾನು ಯಾವತ್ತೂ ಗೂಟಕ್ಕೆ ಅಂಟಿಕೊಂಡು ಕುಳಿತಿಲ್ಲ: ಈಶ್ವರಪ್ಪ,

ಶಿವಮೊಗ್ಗ: ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಆಡಿಯೋ ವೈರಲ್ ವಿಚಾರವಾಗಿ ಮಾತನಾಡಿದ ಸಚಿವ ಕೆ.ಎಸ್.ಈಶ್ವರಪ್ಪ, ನಳೀನ್ ಕುಮಾರ್ ವಿರುದ್ಧ ವ್ಯವಸ್ಥಿತ ಸಂಚು ನಡೆದಿದೆ, ಅವರನ್ನು ಬಲಿಪಶು ಮಾಡಲು ಹೊರಟಂತಿದೆ ಎಂದು ಹೇಳಿದ್ದಾರೆ. ಶಿವಮೊಗ್ಗದಲ್ಲಿ ಮಾತನಾಡಿದ ಸಚಿವರು, ಒಂದುವೇಳೆ ನನ್ನ ವಿರುದ್ಧ ಸಂಚು ನಡೆದರೂ ನಾನು ತಲೆ ಕೆಡಿಸಿಕೊಳ್ಳಲ್ಲ, ಅಧಿಕಾರ ಹೋದರೆ ಒಂದು ಗೂಟ ಹೋಯ್ತು ಅಂದುಕೊಳ್ತೀನಿ. ನಾನು ಯಾವತ್ತೂ ಗೂಟಕ್ಕೆ ಅಂಟಿಕೊಂಡು ಕುಳಿತಿಲ್ಲ ಎಂದು ಅಸಮಾಧಾನ ಹೊಸಹಾಕಿದರು. ಇದೇ …

Read More »

ದೆಹಲಿಗೆ ಹೋಗಿ 2000 ಕೋಟಿ ಕೊಡುತ್ತೇವೆ ನಮ್ಮನ್ನು ಸಿಎಂ ಮಾಡಿ ಎಂದಿದ್ದಾರೆ: ಯತ್ನಾಳ್ ಹೊಸ ಬಾಂಬ್ …!

ವಿಜಯಪುರ: ಸಿಎಂ ಬಿ.ಎಸ್.ಯಡಿಯೂರಪ್ಪ ಹಾಗೂ ಪುತ್ರರಾದ ಬಿ.ವೈ ವಿಜಯೇಂದ್ರ, ರಾಘವೇಂದ್ರ ದೆಹಲಿ ಭೇಟಿ ವಿಚಾರದ ಬೆನ್ನಲ್ಲೇ ಪ್ರತಿಕ್ರಿಯಿಸಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ದೆಹಲಿಗೆ ಹೋಗಿ 2000 ಕೋಟಿ ಕೊಡುತ್ತೇವೆ ನಮ್ಮನ್ನು ಸಿಎಂ ಮಾಡಿ ಎಂದಿದ್ದಾರೆ ಎಂದು ಹೊಸ ಹೇಳಿಕೆ ನೀಡಿದ್ದಾರೆ. ವಿಜಯಪುರದಲ್ಲಿ ಮಾತನಾಡಿದ ಯತ್ನಾಳ್, ಯಾರ್ಯಾರೋ ದೆಹಲಿಗೆ ಹೋಗುತ್ತಾರೆ ಬೇರೆ ಬೇರೆ ರೀತಿಯ ಆಮಿಷಗಳನ್ನು ಒಡ್ಡಿ ಸಿಎಂ ಮಾಡಿ ಎನ್ನುತ್ತಾರೆ. 2000 ಕೋಟಿ ಕೊಡ್ತೀವಿ ನಮ್ಮನ್ನು ಸಿಎಂ ಮಾಡಿ …

Read More »

ಜಾತ್ರೆ ಬಿಟ್ಟು ಎಲ್ಲ ಧಾರ್ಮಿಕ ಚಟುವಟಿಕೆಗಳಿಗೆ ಅವಕಾಶ

ಬೆಂಗಳೂರು : ನಾಳೆಗೆ ಮೂರನೇ ಹಂತದ ಅಲ್ ಲಾಕ್ ಅವಧಿ ಮುಗಿಯಲಿದ್ದು, ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ರಾಜ್ಯದಲ್ಲಿ ಇನ್ನಷ್ಟು ಲಾಕ್ ಡೌನ್ ಸಡಿಲಿಕೆಗೆ ನಿರ್ಧರಿಸಿದ್ದಾರೆ. ಮುಖ್ಯವಾಗಿ ಎಲ್ಲಾ ದೇವಾಲಯಗಳಲ್ಲಿ ಭಕ್ತರು ಸೇವೆ ಸಲ್ಲಿಸಲು ಸರ್ಕಾರ ಅವಕಾಶ ಮಾಡಿಕೊಟ್ಟಿದೆ. ಈ ಹಿಂದೆ ಅನ್ ಲಾಕ್ 3.0 ನಲ್ಲಿ ದೇವಾಲಯಗಳನ್ನು ಓಪನ್ ಮಾಡಿದ್ರೂ, ಜನರಿಗೆ ದೇವರ ದರ್ಶನಕ್ಕೆ ಮಾತ್ರ ಅವಕಾಶ ಮಾಡಿಕೊಡಲಾಗಿತ್ತು. ಇದನ್ನು ಹೊರೆತುಪಡಿಸಿದರೆ ಪ್ರಸಾದ, ತೀರ್ಥ, ವಿಶೇಷ ಪೂಜೆ, ಸೇವೆಗಳಿಗೆ ನಿಷೇಧ …

Read More »

ಸಂಸತ್ ಮುಂಗಾರು ಅಧಿವೇಶನ; ಚರ್ಚೆಗೆ ಸರ್ವಪಕ್ಷಗಳು ಅಣಿ

ನವದೆಹಲಿ, ಜುಲೈ 19: ಇಂದಿನಿಂದ ಸಂಸತ್ತಿನ ಮುಂಗಾರು ಅಧಿವೇಶನ ಆರಂಭವಾಗಲಿದ್ದು, ಸದ್ಯಕ್ಕೆ ದೇಶದಲ್ಲಿನ ಸಮಸ್ಯೆಗಳಾದ ಇಂಧನ ಬೆಲೆ ಏರಿಕೆ, ಕೊರೊನಾ ನಿರ್ವಹಣೆ, ರೈತರ ಪ್ರತಿಭಟನೆ, ಲಸಿಕೆಯ ಕೊರತೆಯಂಥ ವಿಚಾರಗಳನ್ನು ಚರ್ಚೆ ಮಾಡುವ ಸಾಧ್ಯತೆಯಿದೆ. ಜುಲೈ 19ರಿಂದ 17ನೇ ಲೋಕಸಭೆಯ ಮುಂಗಾರು ಅಧಿವೇಶನ ಆರಂಭಗೊಳ್ಳಲಿದ್ದು, ಆಗಸ್ಟ್‌ 13ರಂದು ಮುಕ್ತಾಯವಾಗಲಿದೆ. ಅಸ್ಸಾಂ, ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳ, ಪುದುಚೇರಿಯಲ್ಲಿ ವಿಧಾನಸಭೆ ಚುನಾವಣೆ ನಡೆದ ನಂತರ ನಡೆಸಲಾಗುತ್ತಿರುವ ಮೊದಲ ಮುಂಗಾರು ಅಧಿವೇಶನ ಇದಾಗಿದೆ. ಕಳೆದ …

Read More »

ಆಗಸ್ಟ್‌ ಮೊದಲ ವಾರದಲ್ಲಿ ರಾಜ್ಯ ವಿಧಾನ ಮಂಡಲದ ಚಳಿಗಾಲದ ಅಧಿವೇಶನ?

ಬೆಂಗಳೂರು : ರಾಜ್ಯ ವಿಧಾನ ಮಂಡಲದ ಚಳಿಗಾಲದ ಅಧಿವೇಶನವನ್ನು ಆಗಸ್ಟ್‌ ಮೊದಲ ವಾರದಲ್ಲಿ ನಡೆಸಲು ಸರಕಾರ ಚಿಂತನೆ ನಡೆಸಿದೆ. ಈ ಕುರಿತು ಸಿಎಂ ಯಡಿಯೂರಪ್ಪ ತಮ್ಮ ಆಪ್ತ ಸಚಿವರ ಜತೆಗೆ ಸಮಾಲೋಚನೆ ನಡೆಸಿದ್ದು, ಚಳಿಗಾಲದ ಅಧಿವೇಶನವನ್ನು ಬೆಂಗಳೂರಿನಲ್ಲಿಯೇ ನಡೆಸಲು ತೀರ್ಮಾನಿಸಿದ್ದಾರೆ ಎಂದು ತಿಳಿದು ಬಂದಿದೆ. ಕಳೆದ ಎರಡು ವರ್ಷಗಳಿಂದ ಬೆಳಗಾವಿ ಸುವರ್ಣ ಸೌಧದಲ್ಲಿ ಅಧಿವೇಶನವನ್ನೇ ನಡೆಸಿಲ್ಲ. ಹೀಗಾಗಿ ಈ ಬಾರಿ ಚಳಿಗಾಲದ ಅಧಿವೇಶನವನ್ನು ಬೆಳಗಾವಿಯಲ್ಲಿ ನಡೆಸುವ ಮೂಲಕ ಉತ್ತರ ಕರ್ನಾಟಕ …

Read More »