Breaking News
Home / ರಾಷ್ಟ್ರೀಯ (page 704)

ರಾಷ್ಟ್ರೀಯ

CD ಕೇಸ್​​; ಪ್ರತ್ಯೇಕ ದಿನಗಳಲ್ಲಿ ವಿಚಾರಣೆಗೆ ಹಾಜರಾಗಲು ನರೇಶ್​, ಶ್ರವಣ್​​ಗೆ SIT ನೋಟಿಸ್​​

ಬೆಂಗಳೂರು: ಸಿ.ಡಿ ಕೇಸ್​ಗೆ ಸಂಬಂಧಿಸಿದಂತೆ ತನಿಖಾಧಿಕಾರಿ ಎಸಿಪಿ ಧರ್ಮೇಂದ್ರ ನೇತೃತ್ವದಲ್ಲಿ ನಿನ್ನೆ ಆರೋಪಿಗಳಾದ ನರೇಶ್​ ಹಾಗೂ ಶ್ರವಣ್ ವಿಚಾರಣೆ ನಡೆದಿದೆ. ಅದರ ಬೆನ್ನಲ್ಲೇ ಆರೋಪಿಗಳಿಗೆ ಮತ್ತೆ ವಿಚಾರಣೆಗೆ ಹಾಜರಾಗಲು ಎಸ್​​ಐಟಿ ನೋಟಿಸ್ ನೀಡಿದೆ. ವಿಶೇಷ ಎಂದರೆ ನಿನ್ನೆ ಒಟ್ಟಿಗೆ ವಿಚಾರಣೆಗೆ ಹಾಜರಾಗಿದ್ದ ಇಬ್ಬರು ಆರೋಪಿಗಳಿಗೆ ನೋಟಿಸ್​ ನೀಡಿರುವ ಪೊಲೀಸರು, ಪ್ರತ್ಯೇಕ ದಿನಗಳಲ್ಲಿ ವಿಚಾರಣೆಗೆ ಕರೆದಿದ್ದಾರೆ. ಜೂನ್ 14ರ ಸೋಮವಾರ 11 ಗಂಟೆಗೆ ಆರೋಪಿ ನರೇಶ್​​ಗೆ ವಿಚಾರಣೆಗೆ ಹಾಜರಾಗುವಂತೆ ಹೇಳಿದ್ದಾರೆ. ಇನ್ನು …

Read More »

ಪರಮೇಶ್ವರ್ ಮನೆಯಲ್ಲಿ ಡಿ.ಕೆ.ಶಿವಕುಮಾರ್ ಉಪಹಾರ: 100 ನಾಟೌಟ್ ಪ್ರತಿಭಟನೆ ಬಗ್ಗೆ ಸಮಾಲೋಚನೆ

ತುಮಕೂರು/ ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ತುಮಕೂರಿನಲ್ಲಿ ಮಾಜಿ ಡಿಸಿಎಂ ಡಾ. ಜಿ. ಪರಮೇಶ್ವರ ಅವರ ನಿವಾಸಕ್ಕೆ ಇಂದು ಭೇಟಿ ನೀಡಿದರು. ರಾಜ್ಯಾದ್ಯಂತ ಜಿಲ್ಲಾ ಪಂಚಾಯಿತಿ ಹಾಗೂ ಹೋಬಳಿ ಮಟ್ಟದಲ್ಲಿ ನಡೆಯುತ್ತಿರುವ ತೈಲ ಬೆಲೆ ಏರಿಕೆ ವಿರುದ್ದದ 100 ನಾಟೌಟ್ ಪ್ರತಿಭಟನೆ ಬಗ್ಗೆ ಜೂಮ್ ವಿಡಿಯೋ ಸಂವಾದದ ಮೂಲಕ ಪರಿಶೀಲನೆ ನಡೆಸಿ, ಸಲಹೆ-ಸೂಚನೆಗಳನ್ನು ನೀಡಿದರು. ಪೆಟ್ರೋಲ್, ಡೀಸೆಲ್ ಬೆಲೆ ನಿರಂತರ ಏರಿಕೆ ಹಿನ್ನೆಲೆಯಲ್ಲಿ ಕೇಂದ್ರ ಸರಕಾರದ ವಿರುದ್ಧ …

Read More »

ಪೊಲೀಸ್ ಸೇವೆಗೆ ತೃತೀಯ ಲಿಂಗಿಗಳನ್ನು ನೇಮಿಸಿಕೊಳ್ಳಲು ಮುಂದಾದ ಒಡಿಶಾ ಸರ್ಕಾರ

ಭುವನೇಶ್ವರ್ : ಪ್ರಮುಖ ನಿರ್ಧಾರವೊಂದರಲ್ಲಿ, ಒಡಿಶಾ ಸರ್ಕಾರ ತೃತೀಯ ಲಿಂಗಿಗಳನ್ನು ಪೊಲೀಸ್ ಸೇವೆಗಳಲ್ಲಿ ನೇಮಕ ಮಾಡಲು ನಿರ್ಧರಿಸಿದೆ . 477 ಪೊಲೀಸ್ ಇನ್ಸ್‌ಪೆಕ್ಟರ್‌ಗಳನ್ನು ಮತ್ತು ಒಡಿಶಾ ಪೊಲೀಸರ 244 ಕಾನ್‌ಸ್ಟೆಬಲ್‌ಗಳನ್ನು (ಸಂವಹನ) ನೇಮಕ ಮಾಡಿಕೊಳ್ಳಿ ಒಪ್ಪಂದದ ಆಧಾರದ ಮೇಲೆ ಸಿಗ್ನಲ್ ಸೇವೆಗೆ ನೇಮಕಮಾಡಿಕೊಳ್ಳಲು ಒಡಿಶಾ ಪೊಲೀಸ್ ನೇಮಕಾತಿ ಮಂಡಳಿ ನಿರ್ಧರಿಸಿದೆ ಎಂದು ಪೊಲೀಸ್ ಮಹಾನಿರ್ದೇಶಕ ಅಭಯ್ ತಿಳಿಸಿದ್ದಾರೆ. ಟ್ರಾನ್ಸ್ಜೆಂಡರ್ ಅಭ್ಯರ್ಥಿಗಳು ಎರಡೂ ವಿಭಾಗಗಳಿಗೆ ಅರ್ಜಿ ಸಲ್ಲಿಸಲು ಅರ್ಹರಾಗಿದ್ದಾರೆ ಎಂದು ಡಿಜಿಪಿ …

Read More »

ಕಚ್ಚಿದ ಹಾವನ್ನು ಹಿಡಿದುಕೊಂಡೇ ಆಸ್ಪತ್ರೆಗೆ ಬಂದ ಭೂಪ

ಬಳ್ಳಾರಿ: ಸಾಮಾನ್ಯವಾಗಿ ಹಾವು ಕಂಡರೆ ಮಾರುದ್ದ ಓಡಿ ಹೋಗುವ ಜನರ ಮಧ್ಯೆ, ತನಗೆ ಕಚ್ಚಿದ ಹಾವನ್ನು ಹಿಡಿದುಕೊಂಡು ಯುವನೋರ್ವ ಆಸ್ಪತ್ರೆಗೆ ಬಂದಿರುವ ಘಟನೆ ಬಳ್ಳಾರಿ ಜಿಲ್ಲೆಯ ಕಂಪ್ಲಿ ತಾಲೂಕಿನ ಉಪ್ಪಾರಳ್ಳಿಯಲ್ಲಿ ನಡೆದಿದೆ. ಇಂದು ಮುಂಜಾನೆ ಮನೆಯಲ್ಲಿ ಮಲಗಿದ್ದ ಸಂದರ್ಭದಲ್ಲಿ ಗ್ರಾಮದ ಯುವಕ ಕಾಡಪ್ಪನ ಕಾಲಿಗೆ ಹಾವು ಕಚ್ಚಿದೆ. ಹಾವು ಕಚ್ಚಿದ ತಕ್ಷಣ ಎಚ್ಚರಗೊಂಡ ಕಾಡಪ್ಪ ಪಕ್ಕದಲ್ಲಿ ಇದ್ದ ಹಾವನ್ನು ನೋಡಿದ್ದಾನೆ. ಕೂಡಲೇ ಆ ಹಾವನ್ನು ತನ್ನ ಕೈಯಲ್ಲಿ ಹಿಡಿದುಕೊಂಡು ಗ್ರಾಮದ …

Read More »

ಬೆಳಗಾವಿ ಪೊಲೀಸರು ನಡೆಸಿ, 18 ಜನರನ್ನು ಬಂಧಿಸಿದ್ದಾರೆ.

ಬೆಳಗಾವಿ : ಇಲ್ಲಿನ ಖಂಜರ ಗಲ್ಲಿಯಲ್ಲಿ ನಿನ್ನೆ ರಾತ್ರಿ ಜೂಜು ಅಡ್ಡೆ ಮೇಲೆ ದಾಳಿ ಬೆಳಗಾವಿ ಪೊಲೀಸರು ನಡೆಸಿ, 18 ಜನರನ್ನು ಬಂಧಿಸಿದ್ದಾರೆ. ಜುಬೆರ ಶಕಿಲ ಸುಬೆದಾರ,  ಆರೀಪ ಜಿಲಾನಿ ಖೊತ್ವಾಲ್ , ಅಯಾಜ್ ಬಾಬು ಖತಿಬ್ , ಅಬ್ದುಲ್ ಸಲಾಮ್ ಮೈಬುಸಾಬ ಬಾಳೆಕುಂದ್ರೀ, ಸೊಹೆಲ್ ಅಕ್ತರ ಮುಲ್ಲಾ, ಷರಿಪ್ ದಸ್ಥಗಿರಸಾಬ ಮುಲ್ಲಾ, ಅಬುತಾಲಿಪ್ ಗೌಸ್ ಶೆಕ್, ಆಸಿಪ್ ಯುಸುಪಖಾನ್ ಸಯ್ಯದ, ಆಯೂಬಖಾನ್ ಕರಿಂಖಾನ ಪಠಾಣ , ವಾಸಿಂ ಆಯೂಬ್ ಸೌದಾಗರ್ …

Read More »

ಅಥಣಿ ಶಾರ್ಟ್ ಸರ್ಕ್ಯೂಟ್‌ನಿಂದ ಮನೆಗೆ ಬೆಂಕಿ : ಗ್ರಾಪಂ. ಸದಸ್ಯ ಸಾವು

ಅಥಣಿ : ಕಾಗವಾಡ ತಾಲೂಕಿನ ಶಿರಗುಪ್ಪಿ ಗ್ರಾಮದಲ್ಲಿ ಶುಕ್ರವಾರ ತಡ ರಾತ್ರಿ ಶಾರ್ಟ್ ಸರ್ಕ್ಯೂಟ್‌ನಿಂದ ಮನೆಗೆ ಬೆಂಕಿ ಹತ್ತಿದ ಪರಿಣಾಮ ಗ್ರಾಪಂ. ಸದಸ್ಯ ಸಾವನ್ನಪ್ಪಿದ ಘಟನೆ ನಡೆದಿದೆ. ಶಿರಗುಪ್ಪಿ ಗ್ರಾಮದ ಸೋಮೇಶ್ ಶಿವಾನಂದ ಪಾಟೀಲ ( 32 ) ಮೃತ ಗ್ರಾಪಂ ಸದಸ್ಯ . ಹಳೆ ಮನೆಯ ದುರಸ್ತಿ ಕಾರ್ಯ ನಡೆದಿದ್ದರಿಂದ ಮನೆಯವರೆಲ್ಲ ಬೇರೆ ಮನೆಯಲ್ಲಿ ಇದ್ದರು . ಇವರು ಮಾತ್ರ ಮನೆಯ ಚಾವಣಿಯ ಮೇಲೆ ಮಲಗಿದ್ದರು . ಏಕಾಏಕಿ …

Read More »

ವೈದ್ಯಕೀಯ ವಸ್ತುಗಳ ಮೇಲಿನ ತೆರಿಗೆ ಕಡಿತ: ನಿರ್ಮಲಾ ಸೀತಾರಾಮನ್

ನವದೆಹಲಿ: ಇಂದು ನಡೆದ ಜಿಎಸ್‌ಟಿ ಕೌನ್ಸಿಲ್ ಸಭೆಯು ಕೋವಿಡ್ -19 ಔಷಧಿಗಳಾದ ರೆಮ್‌ಡೆಸಿವಿರ್ ಮತ್ತು ಆಮ್ಲಜನಕ ಕಾನ್ಸಂಟ್ರೇಟರ್ ಗಳು ಹಾಗೂ ವೈದ್ಯಕೀಯ ಆಮ್ಲಜನಕದ ಸರಕುಗಳ ಮೇಲಿನ ತೆರಿಗೆ ದರವನ್ನು ಕಡಿತಗೊಳಿಸುವ ಕುರಿತು ಚರ್ಚಿಸಲಾಗಿದೆ. Tocilizumab ಹಾಗೂ Amphotericin B ಔಷಧಿಗಳ ಮೇಲೆ ಜಿಎಸ್‌ಟಿಯನ್ನು ಶೇಕಡಾ 5ಕ್ಕೆ ನಿಗದಿಪಡಿಸಿದರೆ ರೆಮ್‌ಡೆಸಿವಿರ್ ಮತ್ತು ಹೆಪಾರಿನ್‌ನಂತಹ ಆಂಟಿ ಕೋಗುಲಂಟ್‌ಗಳ ಮೇಲಿನ ತೆರಿಗೆಯನ್ನು ಶೇಕಡಾ 12 ರಿಂದ 5 ಕ್ಕೆ ಇಳಿಸಲಾಗಿದೆ. ಈ ಕುರಿತು ಮಾತನಾಡಿದ …

Read More »

ಕೋವಿಡ್‌: ಕರ್ನಾಟಕದಲ್ಲಿ 42 ಮಕ್ಕಳು ಅನಾಥ

ಬೆಂಗಳೂರು: ಕೋವಿಡ್‌ ಎರಡನೇ ಅಲೆ ಹಲವು ಕುಟುಂಬಗಳ ಖುಷಿ ಕಸಿದುಕೊಂಡಿದೆ. ಈ ಪಿಡುಗಿನಿಂದಾಗಿ ಪಾಲಕರನ್ನು ಕಳೆದುಕೊಂಡು ಅನಾಥರಾಗುತ್ತಿರುವ ಮಕ್ಕಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಮಕ್ಕಳ ರಕ್ಷಣಾ ನಿರ್ದೇಶನಾಲಯದ ಅಂಕಿ ಅಂಶಗಳ ಪ್ರಕಾರ ರಾಜ್ಯದಲ್ಲಿ ಈವರೆಗೆ ಒಟ್ಟು 42 ಮಂದಿ ಮಕ್ಕಳು ಹೆತ್ತವರನ್ನು ಕಳೆದುಕೊಂಡಿದ್ದಾರೆ. ಇವರ ಬದುಕು ಡೋಲಾಯಮಾನವಾಗಿದೆ. ರಾಯಚೂರಿನಲ್ಲಿ ನಾಲ್ಕು ಮಕ್ಕಳು ತಬ್ಬಲಿಗಳಾಗಿದ್ದಾರೆ. ಬಾಗಲಕೋಟೆ, ಬೀದರ್‌, ಚಿಕ್ಕಬಳ್ಳಾಪುರ, ದಕ್ಷಿಣ ಕನ್ನಡ, ಧಾರವಾಡ, ಕೊಡಗು ಹಾಗೂ ಕೋಲಾರದಲ್ಲಿ ತಲಾ ಮೂವರು, …

Read More »

ಸಾಲುಮರದ ತಿಮ್ಮಕ್ಕ ಪುರಸ್ಕಾರಗಳ ಮ್ಯೂಸಿಯಂಗೆ ಚಿಂತನೆ

XMINEWSಬೆಂಗಳೂರು: ಸಾಲುಮರದ ತಿಮ್ಮಕ್ಕ ಅವರಿಗೆ ಸಿಕ್ಕಿರುವ ಪುರಸ್ಕಾರಗಳ ವಸ್ತು ಸಂಗ್ರಹಾಲಯ (ಮ್ಯೂಸಿಯಂ) ಸ್ಥಾಪಿಸಲು ಸಾಗರೋತ್ತರ ಕನ್ನಡಿಗರ ಒಕ್ಕೂಟ ಮುಂದೆ ಬಂದಿದೆ. ಪರಿಸರ ದಿನಾಚರಣೆ ಅಂಗವಾಗಿ ಸಾಗರೋತ್ತರ ಕನ್ನಡಿಗರು ಆಯೋಜಿಸಿದ್ದ ಆನ್‌ಲೈನ್ ಸಂವಾದ ಕಾರ್ಯಕ್ರಮದಲ್ಲಿ ತಿಮ್ಮಕ್ಕ ಅವರ ಮನವಿ ಮೇರೆಗೆ, ಮ್ಯೂಸಿಯಂ ಸ್ಥಾಪಿಸಲು ಒಕ್ಕೂಟದ ಸದಸ್ಯರು ಮುಂದಿನ ದಿನಗಳಲ್ಲಿ ನಿರ್ಧರಿಸಲಿದ್ದಾರೆ ಎಂದು ಸೌದಿ ಅರೇಬಿಯಾದಲ್ಲಿರುವ ಒಕ್ಕೂಟದ ಕಾರ್ಯದರ್ಶಿ ರವಿ ಮಹಾದೇವ ಭರವಸೆ ನೀಡಿದರು. ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ತಿಮ್ಮಕ್ಕ, ತಮ್ಮ ಪರಿಸರ …

Read More »

ಆರೋಪಿ ನರೇಶ್ ಹಾಗೂ ಶ್ರವಣ್ ಇದೀಗ ಎಸ್ ಐಟಿ ವಿಚಾರಣೆಗೆ ಹಾಜರ

ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಬಹಿರಂಗ ಕೇಸ್ ಗೆ ಸಂಬಂಧಿಸಿದಂತೆ ಕಿಂಗ್ ಪಿನ್ ಗಳೆಂದೇ ಆರೋಪಿಸಲಾಗುತ್ತಿರುವ ನರೇಶ್ ಹಾಗೂ ಶ್ರವಣ್ ಇದೀಗ ಎಸ್ ಐಟಿ ವಿಚಾರಣೆಗೆ ಹಾಜರಾಗಿದ್ದಾರೆ. ಸಿಡಿ ಪ್ರಕರಣ ಬಹಿರಂಗವಾದಾಗಿನಿಂದ ಕಳೆದ 100 ದಿನಗಳಿಂದ ತಲೆ ಮರೆಸಿಕೊಂಡಿದ್ದ ಆರೋಪಿಗಳು ಇದೀಗ ಬೆಂಗಳೂರಿನ ಆಡುಗೋಡಿ ಎಸ್ ಐಟಿ ಟೆಕ್ನಿಕಲ್ ಸೆಲ್ ಗೆ ವಿಚಾರಣೆಗೆ ಹಾಜರಾಗಿದ್ದಾರೆ. ನರೇಶ್ ಹಾಗೂ ಶ್ರವಣ್ ವಿರುದ್ಧ ರಮೇಶ್ ಜಾರಕಿಹೊಳಿ ಹನಿ ಟ್ರ್ಯಾಪ್, ಬ್ಲ್ಯಾಕ್ …

Read More »