Breaking News
Home / ರಾಜ್ಯ (page 549)

ರಾಜ್ಯ

ಬೆಳಗಾವಿಗೆ ಎಂಟ್ರಿಕೊಟ್ಟಿದ್ದಾರೆಪ್ರಧಾನಿ ನರೇಂದ್ರ ಮೋದಿ

ಬೆಳಗಾವಿ: ವಿಧಾನಸಭಾ ಚುನಾವಣೆಗೆ ಒಂದು ವಾರ ಮಾತ್ರ ಬಾಕಿ ಇದ್ದು, ಬಿಜೆಪಿ ಪರ ಮತ ಬೇಟೆಗೆ ಆಗಮಿಸಿರುವ ಪ್ರಧಾನಿ ನರೇಂದ್ರ ಮೋದಿ ಬೆಳಗಾವಿಗೆ ಎಂಟ್ರಿಕೊಟ್ಟಿದ್ದಾರೆ. ಕೇಸರಿ ಪಾಳಯದ ಅಭ್ಯರ್ಥಿಗಳ ಪರ ಅಬ್ಬರದ ಪ್ರಚಾರ ನಡೆಸಿದ್ದಾರೆ. ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಬೈಲವಾಡ ಕ್ರಾಸ್ ನಲ್ಲಿ ಬಿಜೆಪಿ ಬೃಹತ್ ಸಮಾವೇಶದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಕರ್ನಾಟಕವನ್ನು ದೇಶದಲ್ಲೇ ನಂಬರ್ 1 ರಾಜ್ಯವನ್ನಾಗಿ ಮಾಡುವುದಾಗಿ ಭರವಸೆ ನೀಡಿದರು. ಕಾಂಗ್ರೆಸ್, ಜೆಡಿಎಸ್ ನವರು ಕೇವಲ …

Read More »

ಅನಾರೋಗ್ಯ ಹಿನ್ನೆಲೆ ಕೊನೆಯುಸಿರೆಳೆದ ಖ್ಯಾತ ನಟ

ಚೆನ್ನೈ: ತಮಿಳು ಚಿತ್ರರಂಗದ ಜನಪ್ರಿಯ ಹಾಸ್ಯನಟ ಹಾಗೂ ನಿರ್ದೇಶಕ ಮನೋಬಾಲ (Manobala)ಅವರು ಅನಾರೋಗ್ಯದಿಂದ ಇಂದು ನಿಧನರಾಗಿದ್ದಾರೆ. ಅವರಿಗೆ 69 ವರ್ಷ ವಯಸ್ಸಾಗಿತ್ತು. ನಟ ಮನೋಬಾಲ ಅವರು ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು. ಲಿವರ್​​ ಹಾನಿಯಾಗಿ ಚೆನ್ನೈನ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಕಳೆದ ಕೆಲ ದಿನಗಳಿಂದ ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದರು. ದುರಾದೃಷ್ಟವಶಾತ್​ ಚಿಕಿತ್ಸೆ ಫಲಿಸದೇ ಇಂದು ಇಹಲೋಕ ತ್ಯಜಿಸಿದ್ದಾರೆ. ತಮಿಳು ಚಿತ್ರರಂಗ ಶೋಕಸಾಗರದಲ್ಲಿ ಮುಳುಗಿದೆ. ಕುಟುಂಬಸ್ಥರು, ಚಿತ್ರರಂಗದವರು, ಅಭಿಮಾನಿಗಳು ಸಂತಾಪ ಸೂಚಿಸುತ್ತಿದ್ದಾರೆ. …

Read More »

ಕರ್ನಾಟಕ ಚುನಾವಣೆ 2023: 2018ಕ್ಕೆ ಹೋಲಿಸಿದರೆ ಅಪರಾಧ ಹಿನ್ನೆಲೆ ಹೊಂದಿದ ಅಭ್ಯರ್ಥಿಗಳ ಸಂಖ್ಯೆಯಲ್ಲಿ ಭಾರಿ ಹೆಚ್ಚಳ.. ADR ವರದಿ

ಬೆಂಗಳೂರು : ಈ ಬಾರಿಯ ಕರ್ನಾಟಕ ವಿಧಾನ ಸಭಾ ಚುನಾವಣೆಗೆ ಎಲ್ಲ ಪಕ್ಷಗಳಿಂದ ಅಥವಾ ಪಕ್ಷೇತರರಾಗಿ ಒಟ್ಟು 2615 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಈ ಎಲ್ಲ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವ ಸಮಯದಲ್ಲಿ ಚುನಾವಣಾ ಆಯೋಗಕ್ಕೆ ಸಲ್ಲಿಸಿದ್ದ ಅಫಿಡವಿಟ್​ಗಳನ್ನು ದೆಹಲಿಯ ಅಸೋಸಿಯೇಶನ್ ಆಫ್ ಡೆಮಾಕ್ರಟಿಕ್ ರಿಫಾರ್ಮ್ಸ್​ (ಎಡಿಆರ್) ಸಂಸ್ಥೆಯು ಪರಿಶೀಲನೆಗೆ ಒಳಪಡಿಸಿದೆ. ಅಭ್ಯರ್ಥಿಗಳ ಕ್ರಿಮಿನಲ್ ಹಿನ್ನೆಲೆ, ಹಣಕಾಸು ಹಿನ್ನೆಲೆ, ಅವರ ಶೈಕ್ಷಣಿಕ ಅರ್ಹತೆ ಹೀಗೆ ಹಲವಾರು ಮಾಹಿತಿಗಳನ್ನು ಕ್ರೋಢೀಕರಿಸಿ ಎಡಿಆರ್ ವರದಿಯೊಂದನ್ನು ತಯಾರಿಸಿದೆ. ಈ …

Read More »

ಮೊಬೈಲ್ ಲೈಟ್ ಹಾಕಿಸಿ ನನ್ನ ಸಂದೇಶ ಮನೆಮನೆಗೆ ತಲುಪಿಸಿ ಎಂ‌ದ ಮೋದಿ

ಮಂಗಳೂರು : ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಮೂಡಬಿದಿರೆ ಕ್ಷೇತ್ರದ ಮೂಲ್ಕಿಯಲ್ಲಿ ನಡೆದ ಬಿಜೆಪಿ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಿದ್ದರು. ಈ ವೇಳೆ ಕಾರ್ಯಕರ್ತರಲ್ಲಿ ಮೊಬೈಲ್ ಫ್ಲ್ಯಾಶ್‌‌ ಲೈಟ್ ಹಾಕಿಸಿ ನನ್ನ ಸಂದೇಶ ಮನೆಮನೆಗೆ ಮುಟ್ಟಿಸಿ ಕರೆ ನೀಡಿದ್ದಾರೆ. ನನಗೊಂದು ವೈಯಕ್ತಿಕವಾಗಿ ಸಹಾಯ ಮಾಡುವಿರಾ? ಎಂದು ಜನರನ್ನು ಕೇಳಿದ ಮೋದಿ ಎಲ್ಲರಲ್ಲಿಯೂ ಮೊಬೈಲ್ ಟಾರ್ಚ್ ಬೆಳಗಿಸುವಂತೆ ಕೇಳಿಕೊಂಡರು. ಎಲ್ಲರೂ ಮೊಬೈಲ್ ಟಾರ್ಚ್ ಬೆಳಗಿದ ನಂತರ ಮಾತನಾಡಿದ ಮೋದಿ, ಮನೆಮನೆಗೆ ಹೋಗಿ ದಿಲ್ಲಿಯಿಂದ‌ …

Read More »

ಮಾಜಿ ಅಧಿಕಾರಿ ಬಳಿ 3 ದಿಗ್ಭ್ರಮೆಗೊಳಿಸುವಷ್ಟು ಕಂತೆ-ಕಂತೆ ಹಣ ಪತ್ತೆ: ತಂದೆ – ಮಗ ಅರೆಸ್ಟ್​

ನವದೆಹಲಿ: ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ವಾಪ್ಕಾಸ್‌ನ ಮಾಜಿ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ರಾಜಿಂದರ್ ಕುಮಾರ್ ಗುಪ್ತಾ ಮತ್ತು ಅವರ ಪುತ್ರ ಗೌರವ್​ ಅವರನ್ನು ಕೇಂದ್ರೀಯ ತನಿಖಾ ದಳ (ಸಿಬಿಐ) ಬುಧವಾರ ಬಂಧಿಸಿದೆ.   ಮಂಗಳವಾರ ವಿವಿಧ ಸ್ಥಳದಲ್ಲಿ ನಡೆದ ದಾಳಿ ಸಂದರ್ಭದಲ್ಲಿ 38 ಕೋಟಿ ರೂ.ಗೂ ಹೆಚ್ಚು ನಗದು ಪತ್ತೆಯಾಗಿದ್ದು, ಇದರ ಇಬ್ಬರನ್ನೂ ಅಧಿಕಾರಿಗಳು ಅರೆಸ್ಟ್​ ಮಾಡಿದ್ದಾರೆ.   ವಾಪ್ಕಾಸ್‌ (WAPCOS) ಅನ್ನು ಈ ಹಿಂದೆ ವಾಟರ್ ಅಂಡ್ …

Read More »

ಮನೆಯಿಂದಲೇ ಮತದಾನ‌.. ಶತಾಯುಷಿಗೆ ಕರೆ ಮಾಡಿ ಅಭಿನಂದಿಸಿದ ಕೇಂದ್ರ ಮುಖ್ಯ ಚುನಾವಣಾ ಆಯುಕ್ತ

ಚಿಕ್ಕೋಡಿ (ಬೆಳಗಾವಿ ) : ಕರ್ನಾಟಕ ವಿಧಾನಸಭೆ – 2023 ರ ಸಾರ್ವತ್ರಿಕ ಚುನಾವಣೆ ಮೇ 10 ರಂದು ನಡೆಯಲಿದೆ. ಹೀಗಾಗಿ ಭಾರತ ಚುನಾವಣಾ ಆಯೋಗವು ಇದೇ ಮೊದಲ ಬಾರಿಗೆ ಕರ್ನಾಟಕದಲ್ಲಿ ದಿವ್ಯಾಂಗರು ಮತ್ತು 80 ವರ್ಷ ಮೇಲ್ಪಟ್ಟವರಿಗೆ ಮನೆಯಿಂದಲೇ ಮತದಾನ ಮಾಡುವುದಕ್ಕೆ ಅವಕಾಶ ನೀಡಿದೆ. ಈ ಅವಕಾಶವನ್ನು ಬಳಸಿಕೊಂಡು ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲ್ಲೂಕಿನ ಇಂಗಳಿ ಗ್ರಾಮದ 103 ವರ್ಷ ವಯಸ್ಸಿನ ವೃದ್ಧ ಮಹಾದೇವ ಮಹಾಲಿಂಗ ಮಾಳಿ ಅವರು ಸೋಮವಾರ …

Read More »

ಭ್ರಷ್ಟಾಚಾರದ ಹಣದಿಂದ ಬಿಜೆಪಿ ಸರ್ಕಾರ ರಚನೆಯಾಗಿದೆ: ರಾಹುಲ್​ ಗಾಂಧಿ

ಚಿಕ್ಕಮಗಳೂರು: ಚುನಾವಣೆಗೆ ಇನ್ನು 8 ದಿನ ಬಾಕಿ ಇದ್ದು, ಇಂದು ಬಿಜೆಪಿ ಭದ್ರ ಕೋಟೆಯಲ್ಲಿ ರಾಹುಲ್ ಗಾಂಧಿ ರೋಡ್​ ಶೋ ನಡೆಸಿ ಮತಯಾಚಿಸಿದರು. ನಗರದ ಎಂ ಜಿ ರಸ್ತೆಯಿಂದ ರೋಡ್ ಶೋ ಪ್ರಾರಂಭಿಸಿದ ಅವರು ಕಾಂಗ್ರೆಸ್​ ಅಭ್ಯರ್ಥಿ ಹೆಚ್​ ಡಿ ತಮ್ಮಯ್ಯ ಪರ ಮತಬೇಟೆ ನಡೆಸಿದರು. ಈ ವೇಳೆ ಸಾವಿರಾರು ಕಾರ್ಯಕರ್ತರು, ಅಭಿಮಾನಿಗಳು ರಾಹುಲ್​ ಗಾಂಧಿಗೆ ಅದ್ದೂರಿ ಸ್ವಾಗತ ಕೋರಿದರು. ಈ ವೇಳೆ ಮಾತನಾಡಿದ ರಾಹುಲ್ ಗಾಂಧಿ, ನನ್ನ ಅಜ್ಜಿ ಇಂದಿರಗಾಂಧಿ …

Read More »

ಇಂದು ಎಲ್ಲೆಲ್ಲಿ ನರೇಂದ್ರ ಮೋದಿಮತಬೇಟೆ?

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಗೆ ಭರ್ಜರಿ ಚುನಾವಣಾ ಪ್ರಚಾರ ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿ ಅವರಿಂದು (ಬುಧವಾರ) ಕರಾವಳಿ, ಕಿತ್ತೂರು ಕರ್ನಾಟಕದಲ್ಲಿ ನಡೆಯುವ ಸಾರ್ವಜನಿಕ ಸಭೆಗಳಲ್ಲಿ ಭಾಗವಹಿಸಿ ಪಕ್ಷದ ಅಭ್ಯರ್ಥಿಗಳ ಪರವಾಗಿ ಮತ ಬೇಟೆ ನಡೆಸುವರು.   ಎಲ್ಲೆಲ್ಲಿ?: ಬೆಳಗ್ಗೆ 11 ಗಂಟೆಗೆ ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆಯಲ್ಲಿ ನಡೆಯುವ ಸಾರ್ವಜನಿಕ ಸಭೆಯಲ್ಲಿ ಮೋದಿ ಭಾಗವಹಿಸಲಿದ್ದಾರೆ. ಇದಾದ ನಂತರ ಉತ್ತರ ಕನ್ನಡ ಜಿಲ್ಲೆಗೆ ತೆರಳಿ ಅಂಕೋಲಾದಲ್ಲಿ ಮಧ್ಯಾಹ್ನ 1.15 ಗಂಟೆಗೆ ಜರುಗಲಿರುವ ಸಾರ್ವಜನಿಕ …

Read More »

ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ, ಬಜರಂಗದಳ ಬ್ಯಾನ್ ಆಗಲ್ಲ- ಸಿಎಂ

ಗದಗ: ಬಜರಂಗದಳ ನಿಷೇಧಿಸಬೇಕೆಂದರೆ ಮೊದಲು ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು. ಅವರು ಅಧಿಕಾರಕ್ಕೆ ಬರುವುದಿಲ್ಲ. ಹಾಗಾಗಿ, ಬಜರಂಗದಳ ನಿಷೇಧ ಆಗುವುದಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ವ್ಯಂಗ್ಯವಾಡಿದರು. ಗದಗ ಜಿಲ್ಲೆಯ ಶಿರಹಟ್ಟಿ ಪಟ್ಟಣದಲ್ಲಿ ಮಂಗಳವಾರ ಮಾತನಾಡಿದ ಅವರು, ಬಜರಂಗದಳ ಬ್ಯಾನ್‌ ಮಾಡೋ ಪ್ರಶ್ನೆಯೇ ಇಲ್ಲ. ಹಾಗೆಯೇ ಕಾಂಗ್ರೆಸ್ ಅಧಿಕಾರಕ್ಕೆ ಬರುವುದೂ ಇಲ್ಲ. ಸಾಮಾಜಿಕ, ಧಾರ್ಮಿಕವಾಗಿ ಕೆಲಸ ಮಾಡುವ ಸಂಘ ಅದು. ಪಿಎಫ್​ಐ ದೇಶವಿರೋಧಿ ಕೆಲಸ ಮಾಡಿದೆ. ಭಯೋತ್ಪಾದಕ ‌ಕೆಲಸದಲ್ಲಿ ತೊಡಗಿದೆ. ಅವರ ಮೇಲೆ …

Read More »

ಮಳೆ ಅವಾಂತರದಿಂದಾ ಮೋದಿಯವರ ಬೆಂಗಾವಲು ಹೆಲಿಕಾಪ್ಟರ್ ಕೆಸರು ಗದ್ದೆಯಲ್ಲಿ

ರಾಯಚೂರು: ಮಳೆ ಅವಾಂತರದಿಂದಾಗಿ ಪ್ರಧಾನಿ ನರೇಂದ್ರ ಮೋದಿಯವರ ಬೆಂಗಾವಲು ಹೆಲಿಕಾಪ್ಟರ್ ಕೆಸರು ಗದ್ದೆಯಲ್ಲಿ ಸಿಲುಕಿಕೊಂಡಿರುವ ಘಟನೆ ರಾಯಚೂರು ಜಿಲ್ಲೆಯ ಸಿಂಧನೂರಿನಲ್ಲಿ ನಡೆದಿದೆ ಸಿಂಧನೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಬಿಜೆಪಿ ಅಭ್ಯರ್ಥಿಗಳ ಪರ ಚುನಾವಣಾ ಪ್ರಚಾರಕ್ಕಾಗಿ ಆಗಮಿಸಿದ್ದರು. ಬಿಜೆಪಿ ಬೃಹತ್ ಸಮಾವೇಶವನ್ನುದ್ದೇಶಿಸಿ ಮಾತನಾಡಿ, ಭರ್ಜರಿ ಚುನಾವಣಾ ಪ್ರಚಾರ ಮಾಡಿ, ಕಲಬುರ್ಗಿಯತ್ತ ಪ್ರಧಾನಿ ಮೋದಿ ಸಾಗಿದ್ದಾರೆ. ಇದೇ ವೇಳೆ ಸಿಂಧನೂರಿನಲ್ಲಿ ಭಾರಿ ಮಳೆಯಾಗಿದ್ದು, ಪ್ರಧಾನಿ ಮೋದಿಯವರ ಬೆಂಗಾವಲು ಹೆಲಿಕಾಪ್ಟರ್ ನಿಲ್ಲಿಸಿದ್ದ ಹೊಸಹಳ್ಳಿ ಹೆಲಿಪ್ಯಾಡ್ ಸಂಪೂರ್ಣ …

Read More »