Breaking News
Home / ರಾಜ್ಯ (page 31)

ರಾಜ್ಯ

ಬಸ್ ನಿಲ್ದಾಣದಲ್ಲಿ ನೇಣಿಗೆ ಶರಣಾದ ರೈತ

ವಿಜಯಪುರ : ಸಾಲಬಾಧೆಯಿಂದ ಮನನೊಂದು ರೈತರೊಬ್ಬರು ಬಸ್ ನಿಲ್ದಾಣದಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಬಸವನಬಾಗೇವಾಡಿ ತಾಲೂಕಿನ ಹೂವಿನಹಿಪ್ಪರಗಿ ಬಸ್ ನಿಲ್ದಾಣದಲ್ಲಿ ನಡೆದಿದೆ. ನೇಣಿಗೆ ಶರಣಾದ ರೈತರನ್ನು ಭೀಮಪ್ಪ ಡೋಣೂರ (76) ಎಂದು ಗುರುತಿಸಲಾಗಿದೆ.ಬಸವನಬಾಗೇಬಾಡಿ ತಾಲೂಕಿನ ಹುಣಸ್ಯಾಳ ಗ್ರಾಮದ ರೈತ ಭೀಮಪ್ಪ ಹೂವಿನಹಿಪ್ಪರಗಿ ಬಸ್ ನಿಲ್ದಾಣದ ಆವರಣದಲ್ಲಿ ಕಬ್ಜಿಣದ ಸರಳಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಖಾಸಗಿಯಾಗಿ ಲಕ್ಷಾಂತರ ರೂ. ಸಾಲ ಮಾಡಿಕೊಂಡಿದ್ದ ಭೀಮಪ್ಪ ಸಾಲ ಮರುಪಾವತಿ ಮಾಡಲಾಗದೇ ನೊಂದಿದ್ದ. …

Read More »

ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ಎದುರಲ್ಲೇ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ

ಬೆಂಗಳೂರು : ನ್ಯಾಯಾಲಯದ ವಿಚಾರಣೆ ವೇಳೆ ಅನಾಮಿಕ ವ್ಯಕ್ತಿಯೊಬ್ಬ ಬ್ಲೇಡ್ ನಿಂದ ಕೈ ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಹೈಕೋರ್ಟ್‌ನ ಹಾಲ್‌ ಸಂಖ್ಯೆ 1ರಲ್ಲಿ ನಡೆದಿದೆ.‌ ಮುಖ್ಯ ನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ಮತ್ತು ನ್ಯಾ.ಎಚ್.ಬಿ.ಪ್ರಭಾಕರ್ ಶಾಸ್ತ್ರಿ ಅವರ ಪೀಠದ ಮುಂದೆ ಪ್ರಕರಣವೊಂದರ ವಿಚಾರಣೆ ನಡೆಯುತ್ತಿತ್ತು.ಈ ವೇಳೆ ಅಲ್ಲಿಗೆ ಆಗಮಿಸಿದ ವ್ಯಕ್ತಿ ಕೈ ಕೊಯ್ದುಕೊಂಡಿದ್ದಾರೆ. ಕೂಡಲೇ ವ್ಯಕ್ತಿಯನ್ನು ವೈದ್ಯರ ಬಳಿಗೆ ಕರೆದೊಯ್ಯಲು ಪೊಲೀಸರಿಗೆ ಪೀಠ ಸೂಚಿಸಿತು. ಪೊಲೀಸರು ವ್ಯಕ್ತಿಯನ್ನು ಆಸ್ಪತ್ರೆಗೆ ಕರೆದೊಯ್ದರು. ಇದೇ …

Read More »

ದಾಖಲೆಯಿಲ್ಲದೇ ಸಾಗಿಸುತ್ತಿದ್ದ 14 ಲಕ್ಷಕ್ಕೂ ಅಧಿಕ ಹಣ ಜಪ್ತಿ

ಬೆಳಗಾವಿ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಚುನಾವಣಾ ಅಕ್ರಮಗಳನ್ನು ತಡೆಯುವ ನಿಟ್ಟಿನಲ್ಲಿ ಅಧಿಕಾರಿಗಳು ಹೈಅಲರ್ಟ್ ಆಗಿದ್ದು, ರಾಜ್ಯದ ವಿವಿಧ ಚೆಕ್ ಪೋಸ್ಟ್ ಗಳಲ್ಲಿ ವಾಹನ ತಪಾಸಣೆ ನಡೆಸಿದ್ದಾರೆ. ಈ ವೇಳೆ ದಾಖಲೆಗಳಿಲ್ಲದೇ ಸಾಗಿಸುತ್ತಿದ್ದ ಅಪಾರ ಪ್ರಮಾಣದ ಹಣ, ಮದ್ಯ ಚಿನ್ನಾಭರಣಗಳನ್ನು ವಶಕ್ಕೆ ಪಡೆಯುತ್ತಿದ್ದಾರೆ. ಗಡಿ ಜಿಲ್ಲೆ ಬೆಳಗಾವಿಯ ವಿವಿಧೆಡೆಗಳಲ್ಲಿ ಚುನವಣಾಧಿಕಾರಿಗಳು ಲಕ್ಷ ಲಕ್ಷ ಹಣ ಸೀಜ್ ಮಾಡಿದ್ದಾರೆ. ಗೋಕಾಕ್ ತಾಲೂಕಿನ ಘಟಪ್ರಭಾ ಚೆಕ್ ಪೋಸ್ಟ್ ನಲ್ಲಿ ಚುನಾವಾಣಾಧಿಕಾರಿಗಳು ದಾಖಲೆ ಇಲ್ಲದೆ ಸಾಗಿಸುತ್ತಿದ್ದ 1.70 …

Read More »

ಬಾದಾಮಿ: ₹5.55 ಲಕ್ಷ ನಗದು ಜಪ್ತಿ

ಬಾದಾಮಿ: ಸಮೀಪದ ಜಾಲಿಹಾಳ ಗ್ರಾಮದ ಚೆಕ್‌ಪೋಸ್ಟ್‌ನಲ್ಲಿ ದಾಖಲೆ ಇಲ್ಲದೇ ಸಾಗಿಸುತ್ತಿದ್ದ ₹5.55 ಲಕ್ಷ ನಗದನ್ನು ಬುಧವಾರ ಜಪ್ತಿ ಮಾಡಲಾಗಿದೆ ಎಂದು ಪಿ.ಎಸ್.ಐ. ವಿಠ್ಠಲ ನಾಯಕ ತಿಳಿಸಿದ್ದಾರೆ. ಗದಗದಿಂದ ಬೇಲೂರು ಗ್ರಾಮದ ಕಡೆಗೆ ಖಾಸಗಿ ವಾಹನದಲ್ಲಿ ಸಾಗಿಸುತ್ತಿದ್ದಾಗ ಚೆಕ್‌ಪೋಸ್ಟ್ ಅಧಿಕಾರಿಗಳು ಪತ್ತೆ ಮಾಡಿ ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿದಿದೆ. ಮಹಾಂತೇಶ ಹರದೊಳ್ಳಿ ,ಮುದಕಪ್ಪ ಖಾನಾಪೂರ, ಮುದಕಪ್ಪ ಕಬಾಡದ, ಅರ್ಜುನ ಪವಾರ, ಮತ್ತು ಮಂಜು ಉಪ್ಪಾರ ಪೋಲಿಸ್ ಸಿಬ್ಬಂದಿ ಇದ್ದರು.

Read More »

ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ದಿಂಗಾಲೇಶ್ವರ ಶ್ರೀಗಳಿಗೆ ಭಕ್ತರ ಒತ್ತಾಯ

ಧಾರವಾಡ: ಲೋಕಸಭಾ ಚುನಾವಣೆಗೆ ಫಕೀರ ದಿಂಗಾಲೇಶ್ವರ ಸ್ವಾಮೀಜಿ ಸ್ಪರ್ಧೆ ಮಾಡಬೇಕೋ ಅಥವಾ ಬೇಡವೋ ಎಂಬ ವಿಚಾರವಾಗಿ ಧಾರವಾಡದ ಸೇವಾಲಯಲ್ಲಿ ದಿಂಗಾಲೇಶ್ವರ ಸ್ವಾಮೀಜಿ ಭಕ್ತರ ಸಭೆ ಕರೆದಿದ್ದರು. ಸ್ವಾಮೀಜಿಗಳು ಸೇವಾಲಯಕ್ಕೆ ಬರುತ್ತಿದ್ದಂತೆ ಭಕ್ತಗಣ ಹೂವಿನ ಹಾಸಿಗೆ ಮೇಲೆ ಅವರನ್ನು ಬರಮಾಡಿಕೊಂಡರು. ನಾನು ಒಂದು ಗುರಿ ಇಟ್ಟುಕೊಂಡಿದ್ದು, ಆ ಗುರಿ ಮುಟ್ಟುವ ತನಕ ಕೊರಳಲ್ಲಿ ಮಾಲೆ ಹಾಕಿಕೊಳ್ಳುವುದಿಲ್ಲ ಎಂದು ಭಕ್ತರಿಗೆ ಇದೇ ಸಂದರ್ಭದಲ್ಲಿ ತಿಳಿಸಿದರು. ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಭಕ್ತರೊಂದಿಗೆ ಮಾತುಕತೆ …

Read More »

ಸುಮಲತಾಗೆ ಕೃತಜ್ಞತೆ ಸಲ್ಲಿಸಿ ದ ಹೆಚ್​ಡಿಕೆ

ಮಂಡ್ಯ: ಕ್ಷೇತ್ರ ಬಿಟ್ಟುಕೊಟ್ಟ ಸಂಸದೆ ಸುಮಲತಾ ಅಂಬರೀಶ್ (Sumalatha Ambareesh) ಅವರಿಗೆ ಮೈತ್ರಿ ಅಭ್ಯರ್ಥಿ ಹೆಚ್​ಡಿ ಕುಮಾರಸ್ವಾಮಿ (Former CM HD Kumaraswamy) ಕೃತಜ್ಞತೆ ಸಲ್ಲಿಸಿದ್ದಾರೆ. ಮಂಡ್ಯದ ಪಾಂಡವಪುರದ ಕ್ಯಾತನಹಳ್ಳಿಯಲ್ಲಿರುವ ರೈತ ನಾಯಕ ದಿವಂಗತ ಕೆಎಸ್​​ ಪುಟ್ಟಣ್ಣಯ್ಯ (KS Puttannaiah) ಸಮಾಧಿಗೆ ಪುಷ್ಪ ನಮನ ಸಲ್ಲಿಸಿದರು.ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಹೆಚ್​ಡಿ ಕುಮಾರಸ್ವಾಮಿ, ನಾಮಪತ್ರ ಸಲ್ಲಿಕೆಗೂ ಮೊದಲು ಹಿರಿಯ ಹೋರಾಟಗಾರರಿಗೆ ಪುಷ್ಷ ನಮನ ಸಲ್ಲಿಸುತ್ತಿದ್ದೇನೆ. ನಾಳೆ ಬೆಳಗ್ಗೆ ದೇವಸ್ಥಾನಕ್ಕೆ ಪೂಜೆ …

Read More »

ಕೈ’ ಅಭ್ಯರ್ಥಿ ಸಂಯುಕ್ತಾಗೆ ಶಾಸಕ ವಿಜಯಾನಂದ ಕಾಶಪ್ಪನವರ್ ಬೆಂಬಲ​; ಸಭೆಗೆ ವೀಣಾ ಗೈರು!

ಬಾಗಲಕೋಟೆ: ಲೋಕಸಭಾ ಚುನಾವಣೆಗೆ ಇನ್ನೇನು ಕೆಲವೇ ದಿನಗಳಷ್ಟೇ ಬಾಕಿ ಉಳಿದಿದ್ದು, ತಮ್ಮ ಕ್ಷೇತ್ರಗಳಿಂದ ಎದುರಾಳಿಗೆ ಭರ್ಜರಿ ಪೈಪೋಟಿ ಕೊಡಲು ಪಕ್ಷಗಳಲ್ಲಿ ಸಕಲ ತಯಾರಿ ನಡೆಯುತ್ತಿದೆ. ಆದರೆ, ಬಾಗಲಕೋಟೆ ಲೋಕಸಭೆ ಕ್ಷೇತ್ರದ ಕಾಂಗ್ರೆಸ್​ ಅಭ್ಯರ್ಥಿ ವಿಚಾರದಲ್ಲಿ ಮಾತ್ರ ಅಸಮಾಧಾನ ಮುಗಿಯದ ಕಥೆಯಾಗಿತ್ತು.ಕೈ ಟಿಕೆಟ್ ಪಡೆದು ಚುನಾವಣೆ ಅಖಾಡಕ್ಕೆ ದುಮುಕಿದ ಸಚಿವ ಶಿವಾನಂದ ಪಾಟೀಲ್ ಪುತ್ರಿ ಸಂಯುಕ್ತಾ ವಿರುದ್ಧ ಟಿಕೆಟ್ ವಂಚಿತೆ ವೀಣಾ ಕಾಶಪ್ಪನವರ್​ ತೀವ್ರ ಅಸಮಾಧಾನ ಹೊರಹಾಕಿದ್ದರು.     ಕಳೆದ ಹಲವು …

Read More »

ಯೋಧ’ ಸಿನಿಮಾ ಸೋಲಿಗೆ ಒಟಿಟಿ ಕಾರಣ ಎಂದ ರಾಶಿ ಖನ್ನಾ

ಒಬ್ಬರಿಗೆ ಸಿನಿಮಾ ಇಷ್ಟ ಆದರೆ, ಇನ್ನೂ ಕೆಲವರಿಗೆ ಸಿನಿಮಾ ಇಷ್ಟ ಆಗುವುದಿಲ್ಲ. ಇದು ಅವರವರಿಗೆ ಬಿಟ್ಟ ಆಯ್ಕೆ. ಅದೇ ರೀತಿ ‘ಯೋಧ’ ಚಿತ್ರವನ್ನು ಒಂದಷ್ಟು ಮಂದಿ ಇಷ್ಟಪಟ್ಟರೆ, ಇನ್ನೂ ಕೆಲವರು ಇಷ್ಟಪಟ್ಟಿಲ್ಲ. ಸಿನಿಮಾ ಮೊದಲ ದಿನ ಗಳಿಕೆ ಮಾಡಿದ್ದು ಕೇವಲ 4 ಕೋಟಿ ರೂಪಾಯಿ. ಇತ್ತೀಚೆಗೆ ರಿಲೀಸ್ ಆದ ಸಿದ್ದಾರ್ಥ್ ಮಲ್ಹೋತ್ರ (Sidharth Malhotra) ಹಾಗೂ ರಾಶಿ ಖನ್ನಾ ನಟನೆಯ ‘ಯೋಧ’ ಸಿನಿಮಾ ಸಾಧಾರಣ ಹಿಟ್ ಎನಿಸಿಕೊಂಡಿದೆ. ಈ ಚಿತ್ರ ಅಂದುಕೊಂಡ ರೀತಿಯಲ್ಲಿ …

Read More »

ನನಗೆ ಆಗದವರು ದ್ವೇಷದಿಂದ ನನ್ನ ಹೇಳಿಕೆಯನ್ನು ತಿರುಚಿದ್ದಾರೆ: ಶಿವಶಂಕರಪ್ಪ

ದಾವಣಗೆರೆ : ಸಂಸದ ಜಿಎಂ ಸಿದ್ದೇಶ್ವರ ಅವರ ಪತ್ನಿ ಗಾಯತ್ರಿ ಸಿದ್ದೇಶ್ವರ ಅಡುಗೆ ಮಾಡಲಿಕ್ಕೆ ಲಾಯಕ್ಕು ಎಂದು ಹೇಳಿಕೆ ನೀಡಿದ್ದ ಕಾಂಗ್ರೆಸ್ ಶಾಸಕ ಶಾಮನವರು ಶಿವಶಂಕರಪ್ಪ ಅವರು ಇದೀಗ ಚುನಾವಣೆ ಆಯೋಗಕ್ಕೆ ಪತ್ರ ಬರೆಯುವ ಮೂಲಕ ಸ್ಪಷ್ಟನೆ ನೀಡಿದ್ದು, ನನಗೆ ಆಗದವರು ದ್ವೇಷದಿಂದ ಹೇಳಿಕೆಗಳನ್ನು ತಿರುವು ಸೃಷ್ಟಿಸಿದ್ದಾರೆ ಎಂದು ಪತ್ರದಲ್ಲಿ ಆರೋಪಿಸಿದ್ದಾರೆ ಎಂದು ತಿಳಿದುಬಂದಿದೆ.

Read More »

ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ನಿಶ್ಚಿತ – ಜಿ.ಟಿ.ಡಿ.

ರಾಜ್ಯದಲ್ಲಿ ಕೆಲವೇ ದಿನಗಳಲ್ಲಿ ಮುಖ್ಯಮಂತ್ರಿಗಳ ಬದಲಾವಣೆ ಆಗಲಿದೆ ಎಂಬುದು ಜಗಜ್ಜಾಹೀರಾಗಿರುವ ವಿಚಾರ. ಇದರಲ್ಲಿ ಎರಡು ಅನುಮಾನವಿಲ್ಲ. ಹೀಗಾಗಿಯೇ ಸಿಎಂ ಸಿದ್ಧರಾಮಯ್ಯ ಆತಂಕಕ್ಕೊಳಗಾಗಿದ್ದಾರೆ‌. ಪ್ರಚಾರದ ವೇದಿಕೆಯಲ್ಲಿ ನನಗೆ ವರುಣಾ ವಿಧಾನಸಭಾ ಕ್ಷೇತ್ರದಿಂದ 60 ಸಾವಿರ ಲೀಡ್ ಕೊಡಬೇಕು. ಆಗ ಮಾತ್ರ ನಾನು ಗಟ್ಟಿಯಾಗಿ ನಿಲ್ಲಬಹುದು‌ ಎಂದಿದ್ದಾರೆ ಎಂದು ಜೆಡಿಎಸ್‌‌ನ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಶಾಸಕ ಜಿ.ಟಿ. ದೇವೇಗೌಡ ತಿಳಿಸಿದ್ದಾರೆ.

Read More »