Home / ರಾಜ್ಯ (page 1768)

ರಾಜ್ಯ

ಹಂಪಿ ಸ್ಮಾರಕಗಳ ವೀಕ್ಷಣೆಗೆ ನಿರ್ಬಂಧ!

ಹೊಸಪೇಟೆ: ಕೊರೊನಾ ಪ್ರಕರಣಗಳ ಹೆಚ್ಚಳದ ಹಿನ್ನೆಲೆಯಲ್ಲಿ ಹಂಪಿಯಲ್ಲಿ ಸ್ಮಾರಕಗಳ ವೀಕ್ಷಣೆಗೆ ಮೇ 15ರವರೆಗೆ ಭಾರತೀಯ ಪುರಾತತ್ವ ಇಲಾಖೆ ನಿಷೇ ಧಿಸಿ ಆದೇಶ ಹೊರಡಿಸಿದೆ. ಲಾಕ್‌ಡೌನ್‌ ತೆರವುಗೊಳಿಸಿದ ಬಳಿಕ ಹಂಪಿಗೆ ಬರುವ ಪ್ರವಾಸಿಗರ ಸಂಖ್ಯೆಯಲ್ಲಿ ಭಾರಿ ಏರಿಕೆ ಕಂಡಿತ್ತು. ಈಗ ಕೊರೊನಾ ಪ್ರಕರಣಗಳ ಹೆಚ್ಚಳ ಹಿನ್ನೆಲೆಯಲ್ಲಿ ಭಾರತೀಯ ಪುರಾತತ್ವ ಇಲಾಖೆ ಹಂಪಿ ಸೇರಿದಂತೆ ದೇಶದ ರಾಷ್ಟ್ರೀಯ ಸ್ಮಾರಕಗಳ ವೀಕ್ಷಣೆಗೆ ನಿರ್ಬಂಧ ವಿಧಿ ಸಿ ಆದೇಶಿಸಿದೆ. ಹೀಗಾಗಿ ಹಂಪಿಯಲ್ಲಿ ಸದಾ ಪ್ರವಾಸಿಗರಿಂದ ಲವಲವಿಕೆಯಾಗಿರುತ್ತಿದ್ದ ಸ್ಮಾರಕಗಳು ಈಗ …

Read More »

ರಾಜ್ಯದಲ್ಲಿ ಮೇ 4 ರವರೆಗೆ ನೈಟ್ ಕರ್ಫ್ಯೂ ಜೊತೆಗೆ ವೀಕೆಂಡ್ ಕರ್ಫ್ಯೂ ಜಾರಿ

ಬೆಂಗಳೂರು : ರಾಜ್ಯದಲ್ಲಿ ಶುಕ್ರವಾರ ರಾತ್ರಿ 9 ಗಂಟೆಯಿಂದ ಸೋಮವಾರ ಬೆಳಗ್ಗೆ 6 ಗಂಟೆಯವರೆಗೆ ಮುಂದಿನ ಮೇ 4 ರವರೆಗೆ ವೀಕೆಂಡ್ ಕರ್ಫ್ಯೂ ಘೋಷಣೆ ಮಾಡಿ ಮಂಗಳವಾರ ಸರ್ಕಾರ ಆದೇಶ ಹೊರಡಿಸಿದೆ. ಇದರ ಜೊತೆ ನೈಟ್ ಕರ್ಫ್ಯೂ ಕೂಡ ಜಾರಿಯಲ್ಲಿ ಇರುತ್ತದೆ. ಕೋವಿಡ್ ಹಿನ್ನೆಲೆ ಸರ್ಕಾರ ಹೊಸ ಮಾರ್ಗ ಸೂಚಿ ಪ್ರಕಟ ಮಾಡಿದೆ ನೈಟ್‌ ಕರ್ಫ್ಯೂ ಮಾರ್ಗಸೂಚಿಗಳು – ದೂರದ ಊರುಗಳಿಗೆ ತೆರಳುವ ಬಸ್‌ಗಳು, ರೈಲು ಸೇವೆ, ವಿಮಾನ ಸೇವೆಗಳಿಗೆ …

Read More »

ಮೃತರಿಗೂ ರೇಷನ್‌! ಸಿಂಧನೂರಿನಲ್ಲಿ ಆಹಾರ ಇಲಾಖೆ ಅವಾಂತರ

ಸಿಂಧನೂರು: ಮೃತಪಟ್ಟವರ ಹೆಸರಿನಲ್ಲೂ ಆಹಾರ ಇಲಾಖೆ ಪಡಿತರ ಆಹಾರ ಧಾನ್ಯ ವಿತರಿಸಿದ ಘಟನೆ ಉತ್ತರ ಕರ್ನಾಟಕದ ಸಿಂಧನೂರು ತಾಲೂಕಿನಲ್ಲಿ ನಡೆದಿದೆ. ತಾಲೂಕಿನಲ್ಲಿ 737 ಜನ ಮೃತ ಪಟ್ಟಿದ್ದರೂ ಅವರ ಹೆಸರಿನಲ್ಲಿ ಸತತವಾಗಿ ಆಹಾರ ಧಾನ್ಯ ಹಂಚಿಕೆ ಮಾಡಲಾಗಿದೆ. ಕಾರ್ಡ್‌ ಸಂಖ್ಯೆ, ಪಡಿತರ ಹೆಸರನ್ನು ನಮೂದಿಸಿ ಮೇಲಧಿಕಾರಿಗಳು ತಾಲೂಕು ಕಚೇರಿಗೆ ಪತ್ರ ರವಾನಿಸಿದ ಬೆನ್ನಲ್ಲೇ ಪಡಿತರ “ಲೆಕ್ಕ’ ಸರಿಪಡಿಸಲು ಸಿಬಂದಿ ಕಸರತ್ತು ನಡೆಸಿದ್ದಾರೆ. ಹತ್ತಾರು ಎಕರೆ ಭೂ ಮಾಲಕರಿಗೂ ಆಹಾರ ಧಾನ್ಯ ನೀಡಿರುವ …

Read More »

ರಾಜ್ಯಗಳಿಗೆ ಬೇಕಾಗಿರುವುದು ನೆರವಿನ ಹಸ್ತವೇ ಹೊರತು ಉಪದೇಶದ ಬುರುಡೆ ಮಾತಲ್ಲ”

ನವದೆಹಲಿ: ದೇಶದ ಜನರನ್ನು ಕುರಿತು ಪ್ರಧಾನಿ ಮೋದಿ ಇಂದು ಮಾತನಾಡಿರುವ ಕುರಿತು ವ್ಯಂಗ್ಯವಾಡಿರುವ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಮೋದಿ ಎಂದಿನಂತೆ ತಮ್ಮ ಪ್ರವಚನ ಮಾಡಿದಂತಿದೆ ಎಂದು ಹೇಳಿದ್ದಾರೆ. ದೇಶದ ಜನರಿಗೆ ದೇಶದಲ್ಲಿ ಎದುರಾಗಿರುವ ಆರೋಗ್ಯ ಬಿಕ್ಕಟ್ಟಿನ ಬಗ್ಗೆ ಭರವಸೆ ನೀಡುವ ಬದಲು ಮೋದಿ ಎಂದಿನಂತೆ ತಮ್ಮ ಪ್ರವಚನ ಮಾಡಿದ್ದಾರೆ. ಆದರೆ ಇವರ ಭಾಷಣ ಜನರಲ್ಲಿ ವಿಶ್ವಾಸವನ್ನು ತುಂಬಿಲ್ಲ. ದೇಶ ಇದಕ್ಕಿಂತ ಉತ್ತಮ ಸಂಗತಿಯ ಕುರಿತು ಎದುರು …

Read More »

ಠಾಣೆಗೆ ಮುತ್ತಿಗೆ ಯತ್ನ: ಲಾಠಿ ಪ್ರಹಾರ

ಕೋಲಾರ: ಪ್ರತಿಭಟನೆಗೆ ತಡೆಯೊಡ್ಡಿದ್ದಕ್ಕೆ ಆಕ್ರೋಶಗೊಂಡು ಇಲ್ಲಿನ ಗ್ರಾಮಾಂತರ ಪೊಲೀಸ್ ಠಾಣೆಗೆ ಮಂಗಳವಾರ ಮುತ್ತಿಗೆ ಹಾಕಲು ಮುಂದಾದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್‌ಆರ್‌ಟಿಸಿ) ನೌಕರರನ್ನು ಪೊಲೀಸರು ತಡೆದಿದ್ದರಿಂದ ಪರಸ್ಪರ ವಾಗ್ವಾದ ನಡೆದು ಸ್ಥಳದಲ್ಲಿ ಆತಂಕದ ವಾತಾವರಣ ಸೃಷ್ಟಿಯಾಯಿತು. ಆರನೇ ವೇತನ ಆಯೋಗದ ಶಿಫಾರಸು ಜಾರಿ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ 14 ದಿನದಿಂದ ಹೋರಾಟ ನಡೆಸುತ್ತಿರುವ ಕೆಎಸ್‌ಆರ್‌ಟಿಸಿ ನೌಕರರು ಪೊಲೀಸರ ಪೂರ್ವಾನುಮತಿ ಪಡೆಯದೆ ಇಲ್ಲಿನ ಕೆಎಸ್‌ಆರ್‌ಟಿಸಿ ಡಿಪೊ ಮತ್ತು ಗಲ್‌ಪೇಟೆ …

Read More »

ಲಾಕ್​ಡೌನ್ ಜಾರಿ ಮಾಡಲಾಗುತ್ತಾ ಎಂಬ ಭೀತಿಯಿಂದ ಜನರು ಮದ್ಯ ಖರೀದಿಗೆ ಮುಗಿಬಿದ್ದಿದ್ದಾರೆ.

ಬೆಂಗಳೂರು: ಕೊರೊನಾ ಎರಡನೇ ಅಲೆಯ ತೀವ್ರತೆಯನ್ನು ಕಡಿಮೆ ಮಾಡಲು ರಾಜ್ಯ ಸರ್ಕಾರ ಕಠಿಣ ಕ್ರಮಗಳನ್ನು ಕೈಗೊಳ್ಳಿ ಇಂದಿನ ಸರ್ವ ಪಕ್ಷ ಸಭೆಯಲ್ಲಿ ತೀರ್ಮಾನ ಮಾಡಲಾಗಿದೆ. ಈ ನಡುವೆ ದೆಹಲಿ ಸೇರಿದಂತೆ ಹಲವು ರಾಜ್ಯಗಳಲ್ಲಿ ಲಾಕ್​ಡೌನ್ ಜಾರಿ ಮಾಡಲಾಗಿದ್ದು, ಬೆಂಗಳೂರಿನಲ್ಲೂ ಲಾಕ್​ಡೌನ್ ಜಾರಿ ಮಾಡಲಾಗುತ್ತಾ ಎಂಬ ಭೀತಿಯಿಂದ ಜನರು ಮದ್ಯ ಖರೀದಿಗೆ ಮುಗಿಬಿದ್ದಿದ್ದಾರೆ. ಲಾಕ್​ಡೌನ್ ಮಾಡ್ತಾರೆ ಎಂಬ ಭಾವನೆಯೊಂದಿಗೆ ರಾಜಾಜಿನಗರ 6 ಬ್ಲಾಕ್ ನಲ್ಲಿರೋ ವಿಕ್ಟೋರಿಯಸ್ ವೈನ್ಸ್ ಮುಂದೆ ಜನರು ಸಾಲುಗಟ್ಟಿ …

Read More »

ಪಲ್ಟಿಯಾದ ಲಾರಿಯಲ್ಲಿದ್ದ ಬಿಯರ್‌ಗಾಗಿ ಮುಗಿಬಿದ್ದ ಸ್ಥಳೀಯರು!

ಚಿಕ್ಕಮಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಬಿಯರ್ ಬಾಟ್ಲಿ ತುಂಬಿಕೊಂಡು ಹೋಗುತ್ತಿದ್ದ ಲಾರಿ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿಯಾಗಿ ಪಲ್ಟಿಯಾಗಿರುವ ಘಟನೆ ಜಿಲ್ಲೆಯ ತರೀಕೆರೆ ತಾಲೂಕಿನ ಎಂಸಿಹಳ್ಳಿ ಬಳಿ ನಡೆದಿದೆ. ಲಾರಿ ಪಲ್ಟಿಯಾಗಿ ರಸ್ತೆಗೆ ಬಿದ್ದಾಗ ಬಿಯರ್ ಎಂದು ತಿಳಿಯುತ್ತಿದ್ದಂತೆ ಜನ ಲಾರಿ ಏನಾಗಿದೆ, ಒಳಗಡೆ ಇರೋರು ಏನಾಗಿದ್ದಾರೆ ಅನ್ನೋದನ್ನ ನೋಡಲಿಲ್ಲ. ಮೊದಲು ಮಾಡಿದ್ದೇ ಎದ್ವೋ-ಬಿದ್ವೋ ಅಂತ ಲಾರಿ ಮೇಲೇರಿ ಕೈಗೆ ಸಿಕ್ಕಷ್ಟು ಬಿಯರ್ ಬಾಟ್ಲಿಗಳನ್ನು ಮನೆಗೆ ಹೊತ್ತೊಯ್ದರು. …

Read More »

ಕೊರೊನಾ ಭಯ- ಅಪರಿಚಿತ ಮೃತದೇಹ ಮುಟ್ಟಲು ಸ್ಥಳೀಯರು ಹಿಂದೇಟು

ಹಾವೇರಿ: ಕೊರೊನಾ ಎರಡನೇ ಅಲೆಯ ಭಯ ಹೆಚ್ಚಾಗುತ್ತಿರುವ ಹಿನ್ನೆಲೆ, 50 ವರ್ಷದ ಅಪರಿಚಿತ ವ್ಯಕ್ತಿಯ ಮೃತದೇಹ ಮುಟ್ಟಲು ಸ್ಥಳೀಯರು ಹಿಂದೇಟು ಹಾಕಿದ ಘಟನೆ ನಗರದ ಜಾನುವಾರು ಮಾರುಕಟ್ಟೆಯಲ್ಲಿ ನಡೆದಿದೆ. ಮಾರುಕಟ್ಟೆಯಲ್ಲಿ ಅನಾಥವಾಗಿ ಬಿದ್ದಿದ್ದ ಮೃತದೇಹವನ್ನು ಶವಾಗಾರಕ್ಕೆ ಸಾಗಿಸಲು ಜನ ಹಾಗೂ ವಾಹನಗಳ ಮಾಲೀಕರು ಹಿಂದೇಟು ಹಾಕಿದರು. ಬಳಿಕ ಸಾಮಾಜಿಕ ಕಾರ್ಯಕರ್ತ ಅಬ್ದುಲ್ ಖಾದರ್ ನೆರವಿನಿಂದ ಪೊಲೀಸರು ಮೃತದೇಹವನ್ನು ಶವಾಗಾರಕ್ಕೆ ರವಾನೆ ಮಾಡಿದರು. ಪೊಲೀಸರು ಆಟೋ ಚಾಲಕನ ಮನವೊಲಿಸಿ ಮೃತದೇಹವನ್ನು ಶವಾಗಾರಕ್ಕೆ …

Read More »

ಎಣ್ಣೆ ಅಂಗಡಿ ಬೇಕು, ಬೇಡ- ಪುರುಷರು, ಮಹಿಳೆಯರಿಂದ ಹೋರಾಟ

ಹಾಸನ: ಕೊರೊನಾ ಎರಡನೇ ಅಲೆಯಿಂದ ಜನ ಆಘಾತಕ್ಕೊಳಗಾಗಿದ್ದು, ಎಲ್ಲರನ್ನೂ ಬೆಚ್ಚಿ ಬೀಳಿಸುತ್ತಿದೆ. ಜಿಲ್ಲೆಯಲ್ಲಿ ಸಹ ಪ್ರತಿ ದಿನ ಮುನ್ನೂರಕ್ಕೂ ಹೆಚ್ಚು ಕೊರೊನಾ ಪ್ರಕರಣಗಳು ವರದಿಯಾಗುತ್ತಿವೆ. ಇದರ ಮಧ್ಯೆ ಎಣ್ಣೆ ಅಂಗಡಿಗಾಗಿ ಪುರುಷರು ಹೊರಾಟಕ್ಕಿಳಿದಿದ್ದು, ಇದನ್ನು ವಿರೋಧಿಸಿ ಮಹಿಳೆಯರು ಬೀದಿಗಿಳಿದಿದ್ದಾರೆ. ಎಣ್ಣೆ ಬೇಕು ಎಂಬ ಬ್ಯಾನರ್ ಹಿಡಿದು ಗಾಡೇನಹಳ್ಳಿ, ಹಲಸಿನಹಳ್ಳಿ ಸುತ್ತಮುತ್ತಲ ಪುರುಷರು ಡಿಸಿ ಕಚೇರಿ ಎದುರು ಹೋರಾಟಕ್ಕೆ ಕುಳಿತಿದ್ದಾರೆ. ಒಂದು ದಿನದ ಹಿಂದಷ್ಟೇ ಈ ಭಾಗದ ಒಂದಷ್ಟು ಜನ ಮಹಿಳೆಯರು …

Read More »

ವಿನಯ್ ರಾಜ್ ಕುಮಾರ್ ಹೊಸ ಸಿನಿಮಾಗೆ ನಾಯಕಿಯಾದ ಕಾಜಲ್

ಸ್ಯಾಂಡಲ್ ವುಡ್ ನಟ ವಿಜಯ್ ರಾಜ್ ಕುಮಾರ್ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಅನಂತು ವರ್ಸಸ್ ನುರ್ಸತ್ ಸಿನಿಮಾ ಬಳಿಕ ವಿನಯ್ ರಾಜ್ ಕುಮಾರ್ ಮತ್ತೆ ತೆರೆಮೇಲೆ ಬಂದಿಲ್ಲ. ಇದೀಗ ಹೊಸ ಸಿನಿಮಾ ಮೂಲಕ ಮತ್ತೆ ಸದ್ದು ಮಾಡುತ್ತಿದ್ದಾರೆ. ವಿನಯ್ ರಾಜ್ ಕುಮಾರ್ ಹೊಸ ಸಿನಿಮಾಗೆ ಪೆಪೆ ಎಂದು ಹೆಸರಿಡಲಾಗಿದೆ. ಚಿತ್ರದಲ್ಲಿ ವಿನಯ್ ರಗಡ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಮೊದಲ ಬಾರಿಗೆ ಆಕ್ಷನ್ ಸಿನಿಮಾದಲ್ಲಿ ನಟಿಸುತ್ತಿದ್ದು, ಫಸ್ಟ್ ಲುಕ್‌ನಲ್ಲಿ …

Read More »