Breaking News
Home / ರಾಜ್ಯ (page 1766)

ರಾಜ್ಯ

ರೈತರಿಗೆ ಸಿಹಿ ಸುದ್ದಿ; ಬೀದರ್ ಸಕ್ಕರೆ ಕಾರ್ಖಾನೆಗೆ ನೂತನ ಅಧ್ಯಕ್ಷರ ನೇಮಕ

ಬೀದರ್, ಏಪ್ರಿಲ್ 21; ಕಳೆದ ಎರಡು ವರ್ಷಗಳಿಂದ ಸ್ಥಗಿತಗೊಂಡಿದ್ದ ಹುಮನಾಬಾದ್ ತಾಲೂಕಿನ ಹಳ್ಳಿಖೇಡ್ (ಬಿ) ಸಮೀಪ ಇರುವ ಬೀದರ್ ಸಹಕಾರ ಸಕ್ಕರೆ ಕಾರ್ಖಾನೆಗೆ ನೂತನ ಅಧ್ಯಕ್ಷರಾಗಿ ಸುಭಾಷ್ ಕಲ್ಲೂರ್ ಅವಿರೋಧ ಆಯ್ಕೆಯಾಗಿದ್ದಾರೆ. ಬುಧವಾರ ಕಾರ್ಖಾನೆ ಸಭಾಂಗಣದಲ್ಲಿ ನಡೆದ ಆಡಳಿತ ಮಂಡಳಿ ಸಭೆಯಲ್ಲಿ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ನಡೆಯಿತು. ಸುಭಾಷ್ ಕಲ್ಲೂರ್ ಅಧ್ಯಕ್ಷರಾಗಿ, ಶೈಲೇಂದ್ರ ಬೆಲ್ದಾಳೆ ಉಪಾಧ್ಯಕ್ಷರಾಗಿ ಆಯ್ಕೆಯಾದರು. 300 ಕೋಟಿ ರೂ.ಗೂ ಅಧಿಕ ನಷ್ಟದಲ್ಲಿರುವ ಕಾರ್ಖಾನೆ ಆಡಳಿತ ಮಂಡಳಿಗೆ ಇತ್ತೀಚೆಗೆ …

Read More »

ಒಂದೇ ದಿನ 301 ಸೊಂಕಿತರು ಪತ್ತೆಯಾಗಿದ್ದು ಖಾನಾಪೂರ ತಾಲ್ಲೂಕಿನಲ್ಲಿ 144 ಜನರಿಗೆ ಸೊಂಕು

ಬೆಳಗಾವಿ- ಬೆಳಗಾವಿ ಜಿಲ್ಲೆಯಲ್ಲಿ ಇವತ್ತು ಒಂದೇ ದಿನ 301 ಸೊಂಕಿತರು ಪತ್ತೆಯಾಗಿದ್ದು ಖಾನಾಪೂರ ತಾಲ್ಲೂಕಿನಲ್ಲಿ 144 ಜನರಿಗೆ ಸೊಂಕು ತಗಲಿದೆ. ಬೆಳಗಾವಿ ಜಿಲ್ಲೆಯಲ್ಲಿ ಮಹಾಮಾರಿ ಕೊರೋನಾ ಅಟ್ಟಹಾಸ ಮುಂದುವರೆದಿದ್ದು ಬೆಳಗಾವಿ ಜಿಲ್ಲೆಯ ಪಾಲಿಗೆ ಇವತ್ತು ಭೀತಿ ಹುಟ್ಟಿಸುವ ಶಾಕಿಂಗ್ ನ್ಯುಸ್ ಹೊರಬಿದ್ದಿದೆ.

Read More »

ಮದುವೆ ಮಾಡು.. ಕೋವಿಡ್‌ ನೋಡು..

ಧಾರವಾಡ: ತುಂಬಿ ತುಳುಕುತ್ತಿರುವ ಬಟ್ಟೆ ಅಂಗಡಿ, ಕೊಂಡ ಸಾಮಗ್ರಿಗಳನ್ನು ಕಟ್ಟಿಡಲುಆಗದ ಭಾಂಡೆ ಅಂಗಡಿ, ಒಂಟಿ ಕಾಲಿನಲ್ಲಿ ನಿಂತುಬಂಗಾರ ಕೊಳ್ಳುತ್ತಿರುವವರಿಗೆ ಕುಳಿತುಕೊಳ್ಳಿಎಂದು ಹೇಳಲಾರದ ಸ್ಥಿತಿಯಲ್ಲಿರುವಅಕ್ಕಸಾಲಿಗರು, ಇನ್ನು ಹೋಟೆಲ್‌ಗ‌ಳಲ್ಲಿ ಸರತಿ ಸಾಲು. ಕೋವಿಡ್ ಮಹಾಮಾರಿಗೆ ಹೆದರಿ ಎಲ್ಲರೂ ಬಿಲ ಸೇರುತ್ತಾರೆ ಎಂದುಕೊಂಡರೆ ಜಿಲ್ಲೆಯಲ್ಲಿ ಮಾತ್ರ ಕೋವಿಡ್ ಜನರು ಕ್ಯಾರೇ ಎನ್ನದೆ ಎಲ್ಲರೂ ಮದುವೆ ಸಂಭ್ರಮದಲ್ಲಿ ಮುಳುಗಿಹೋಗಿದ್ದು, ಜವಳಿ ಸಾಲಿನಲ್ಲಿ ಝಳ ಝಳಝಳಪಿಸುವ ಬಟ್ಟೆ ಹಾಕಿಕೊಂಡು ಆರಾಮಾಗಿ ಓಡಾಡುತ್ತಿದ್ದಾರೆ. ಹೌದು…, ಕಳೆದ ವರ್ಷವೂ ಮಕ್ಕಳು, …

Read More »

ಧೋನಿ ತಂದೆ-ತಾಯಿಗೆ ಕರೊನಾ ಸೋಂಕು! ಆಸ್ಪತ್ರೆಗೆ ದೌಡಾಯಿಸಿದ ದಂಪತಿ

ರಾಂಚಿ: ಭಾರತೀಯ ಕ್ರಿಕೆಟ್​ ತಂಡದ ಮಾಜಿ ನಾಯಕ ಎಂಎಸ್​ ಧೋನಿ ಅವರ ತಂದೆ ತಾಯಿಗೆ ಕರೊನಾ ಸೋಂಕು ದೃಢವಾಗಿದೆ. ವರದಿ ಬಂದ ತಕ್ಷಣ ದಂಪತಿ ರಾಂಚಿಯ ಪ್ಲಸ್​ ಆಸ್ಪತ್ರೆಗೆ ತೆರಳಿ ವೈದ್ಯರ ಸಲಹೆ ಪಡೆದಿರುವುದಾಗಿ ತಿಳಿಸಲಾಗಿದೆ. ಧೋನಿಯವರ ತಂದೆ ಪಾನ್​ ಸಿಂಗ್​ ಹಾಗೂ ತಾಯಿ ದೇವಕಿ ದೇವಿ ಅವರ ಆರೋಗ್ಯ ಸ್ಥಿರವಾಗಿದೆ. ಕರೊನಾ ದೃಢವಾಗಿದೆ ಹಾಗೂ ಅವರಲ್ಲಿ ಯಾವುದೇ ಗಂಭೀರ ಸಮಸ್ಯೆ ಕಾಣಿಸಿಕೊಂಡಿಲ್ಲ. ಆಕ್ಸಿಜನ್​ ಲೆವೆಲ್​ ಉತ್ತಮವಾಗಿದೆ ಮತ್ತು ಶ್ವಾಸಕೋಶಗಳು …

Read More »

ಕೋವಿಡ್ ಆರ್ಭಟ : ತಮ್ಮ ಮನೆಗೆ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಿದ ಸಿದ್ದರಾಮಯ್ಯ!

ಬೆಂಗಳೂರು : ಕೋವಿಡ್ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿ, ವಿಪಕ್ಷ ನಾಯಕ ಸಿದ್ದರಾಮಯ್ಯ ತಮ್ಮ ಮನೆಗೆ ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಿದ್ದಾರೆ. ಈ ಬಗ್ಗೆ ಬೆಂಗಳೂರಿನ ತಮ್ಮ ನಿವಾಸದ ಬಾಗಿಲಿಗೆ ಬೋರ್ಡ್ ಒಂದನ್ನು ಹಾಕಿದ್ದಾರೆ. ಕೋವಿಡ್ ಮೊದಲ ಅಲೆಯಲ್ಲಿ ಸಿದ್ದರಾಮಯ್ಯನವರಿಗೆ ಸೋಂಕು ತಗುಲಿತ್ತು. ಇದರಿಂದ ಎಚ್ಚೆತ್ತುಕೊಂಡಿರುವ ಅವರು ಸದ್ಯ ಎಲ್ಲಿಗೆ ಹೋದರು ಮಾಸ್ಕ್ ಧರಿಸಿ, ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುತ್ತಿದ್ದಾರೆ. ಅಲ್ಲದೆ ಕೋವಿಡ್ ಸೋಂಕಿನ ಬಗ್ಗೆ ತುಂಬಾ ಜಾಗೃತರಾಗಿದ್ದಾರೆ. ರಾಜ್ಯದಲ್ಲಿ ನಿನ್ನೆ 21,794 …

Read More »

ಹೈಕೋರ್ಟ್‌ ಆದೇಶದ ಹಿನ್ನೆಲೆ: ʼಸಾರಿಗೆ ನೌಕರʼರ ಮುಷ್ಕರಕ್ಕೆ ತಾತ್ಕಾಲಿಕ ಬ್ರೇಕ್..!

ಬೆಂಗಳೂರು: 6ನೇ ವೇತನ ಆಯೋಗದ ಜಾರಿಗಾಗಿ ಪಟ್ಟು ಹಿಡಿದ ಕುಳಿತಿದ್ದ ಸಾರಿಗೆ ನೌಕಕರ ಮುಷ್ಕರಕ್ಕೆ ತಾತ್ಕಾಲಿಕ ಬ್ರೇಕ್‌ ಬಿದ್ದು, ಸೇವೆ ಹಾಜರಾಗುವುದಾಗಿ ಸಾರಿಗೆ ನೌಕರರ ಸಂಘದ ಗೌರವಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್‌ ಹೇಳಿದ್ದಾರೆ. ‌ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೋಡಿಹಳ್ಳಿ ಚಂದ್ರಶೇಖರ್‌, ‘ಸಾರಿಗೆ ನೌಕರರ ಮುಷ್ಕರವನ್ನ ತಾತ್ಕಾಲಿಕವಾಗಿ ಹಿಂಪಡೆಯುತ್ತೇವೆ. ಹೈಕೋರ್ಟ್‌ ಆದೇಶದ ಹಿನ್ನೆಲೆಯಲ್ಲಿ ಸೇವೆಗೆ ಹಾಜರಾಗ್ತೇವೆ’ ಎಂದು ಸ್ಪಷ್ಟಪಡಿಸಿದ್ದಾರೆ. ಇನ್ನು ‘ನ್ಯಾಯಮೂರ್ತಿಗಳ ಹೇಳಿಕೆವನ್ನ ನಾವು ಗೌರವಿಸುತ್ತೇವೆ. ಈ ಪರಿಸ್ಥಿತಿಯಲ್ಲಿ ಪ್ರತಿಭಟನೆ ಮಾಡುವುದು ಸರಿಯಲ್ಲ. …

Read More »

ಟಂಟಂಗೆ ಲಾರಿ ಡಿಕ್ಕಿ: 5 ಕೂಲಿ ಕಾರ್ಮಿಕರು ಸಾವು

ಟಂಟಂ ಆಟೋಗೆ ಕಾಂಕ್ರಿಟ್ ಮಿಕ್ಸರ್ ಲಾರಿ ಡಿಕ್ಕಿ ಹೊಡೆದ ಪರಿಣಾಮ ಐವರು ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ಯಾದಗಿರಿಯಲ್ಲಿ ಸಂಭವಿಸಿದೆ. ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಕೊಳೂರು ಎಂ ಗ್ರಾಮದ ಬಳಿ ರಾಜ್ಯ ಹೆದ್ದಾರಿಯಲ್ಲಿ ಬುಧವಾರ ಬೆಳಿಗ್ಗೆ ಈ ದುರ್ಘಟನೆ ಸಂಭವಿಸಿದ್ದು, ಐವರು ಕೂಲಿ ಕಾರ್ಮಿಕರು ಸ್ಥಳದಲ್ಲಿಯೇ ಮೃತಪಟ್ಟರೆ ಮೂವರಿಗೆ ಗಂಭೀರ ಗಾಯಗಳಾಗಿವೆ. ವಡಗೇರ ತಾಲೂಕಿನ ಮುನಮುಟಗಿ ಗ್ರಾಮಸ್ಥರಾದ ಅಯ್ಯಮ್ಮ (60) ಶರಣಮ್ಮ (40) ಕಾಸೀಂಬೀ (40) ಭೀಮಬಾಯಿ (40) …

Read More »

ನಾಸಿಕ್ ನಲ್ಲಿ ಆಕ್ಸಿಜನ್ ಸಿಲಿಂಡರ್ ಸೋರಿಕೆ : 22 ಮಂದಿ ಸಾವು

ಮಹಾರಾಷ್ಟ್ರ : ಮಹಾರಾಷ್ಟ್ರದ ನಾಸಿಕ್ ನಲ್ಲಿ ಕೋವಿಡ್ -19 ರೋಗಿಗಳಿಗೆ ಸಿವಿಕ್ ಆಸ್ಪತ್ರೆಯಲ್ಲಿ ಆಮ್ಲಜನಕದ ಪೂರೈಕೆಯಲ್ಲಿ ವ್ಯತ್ಯಾಸದಿಂದಾಗಿ 22 ರೋಗಿಗಳು ಬುಧವಾರ (ಏಪ್ರಿಲ್ 21) ಸಾವನ್ನಪ್ಪಿದ್ದಾರೆ ಎಂಬ ವರದಿಯಾಗಿದೆ.   ಜಾಕಿರ್ ಹುಸೇನ್ ಪುರಸಭೆಯ ಆಸ್ಪತ್ರೆಯಲ್ಲಿ ಆಮ್ಲಜನಕದ ಪೂರೈಕೆಯಲ್ಲಿ ವ್ಯತ್ಯಾಸದಿಂದಾಗಿ 22 ಜನರು ಸಾವನ್ನಪ್ಪಿದ್ದಾರೆ. ರೋಗಿಗಳು ವೆಂಟಿಲೇಟರ್‌ ಗಳಲ್ಲಿದ್ದರು ಮತ್ತು ಆಮ್ಲಜನಕದ ಪೂರೈಕೆಯಾಗುತ್ತಿದ್ದರೂ, ಆಮ್ಲಜನಕ ಪೂರೈಕೆ ತೊಟ್ಟಿಯಲ್ಲಿ ಸೋರಿಕೆಯ ಕಾರಣದಿಂದ ಈ ಅವಘಡ ಸಂಭವಿಸಿದೆ ಎಂದು ಸುದ್ದಿ ಸಂಸ್ಥೆ ಪಿಟಿಐ …

Read More »

ಸೆಕೆಯಿಂದ ಪಾರಾಗೋಕೆ ಹೊಸ ಪ್ಲಾನ್​ ಕಂಡು ಹಿಡಿದ ಗ್ರಾಮಸ್ಥರು..!

ಬೇಸಿಗೆ ಕಾಲ ಶುರುವಾಗಿರೋದ್ರಿಂದ ಸೂರ್ಯನ ಶಾಖದಿಂದ ತಪ್ಪಿಸಿಕೊಳ್ಳೋಕೆ ಜನರು ಇನ್ನಿಲ್ಲದ ಹರಸಾಹಸ ಪಡ್ತಿದ್ದಾರೆ. ಫ್ಯಾನ್​, ಎಸಿಗಳು ಮನೆಯಲ್ಲಿ ಇರುವಾಗ, ಕಟ್ಟಡದಲ್ಲಿ ಇರುವಾಗ ಬಳಕೆ ಮಾಡಬಹುದು. ಆದರೆ ಮನೆಯಿಂದ ಹೊರಗಿದ್ದಾಗ ಸೆಖೆಯಿಂದ ಪಾರಾಗೋಕೆ ಏನು ಮಾಡೋದು..? ಎಂಬ ಯೋಚನೆ ಅನೇಕರಲ್ಲಿ ಇರಬಹುದು. ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆದ ಈ ವಿಡಿಯೋದಲ್ಲಿ ಗ್ರಾಮಸ್ಥನೊಬ್ಬ ಕತ್ತೆಯ ಸಹಾಯದಿಂದ ಸೆಕೆಯಿಂದ ಪಾರಾಗಿದ್ದಾನೆ. 54 ಸೆಕೆಂಡ್​ಗಳ ಈ ವಿಡಿಯೋದಲ್ಲಿ, ಮರುಭೂಮಿ ಪ್ರದೇಶದಲ್ಲಿ ಮಂಚದ ಮೇಲೆ ಜನರು ಕೂತಿರೋದನ್ನ …

Read More »

ಆಕ್ಸಿಜನ್ ಕೊರತೆ ನೀಗಿಸಲು ಟಾಟಾ ಸಹಾಯ ಹಸ್ತ ! 24 ಕ್ರಯೋಜೆನಿಕ್ ಕಂಟೇನರ್​ಗಳ ಆಮದು

ನವದೆಹಲಿ : ಭಾರತದಲ್ಲಿ ಉಂಟಾಗುತ್ತಿರುವ ಆಕ್ಸಿಜನ್ ಕೊರತೆಯನ್ನು ಕಡಿಮೆ ಮಾಡಲು ದ್ರವರೂಪದ ಆಕ್ಸಿಜನ್​​ಅನ್ನು ಸಾಗಣೆ ಮಾಡುವುದಕ್ಕಾಗಿ 24 ಕ್ರಯೋಜೆನಿಕ್ ಕಂಟೇನರ್​ಗಳನ್ನು ಆಮದು ಮಾಡುವುದಾಗಿ ಟಾಟಾ ಕಂಪೆನಿಗಳ ಗುಂಪು ಪ್ರಕಟಿಸಿದೆ. ಕರೊನಾ ವಿರುದ್ಧದ ಹೋರಾಟದಲ್ಲಿ ಇಡೀ ದೇಶ ಒಂದಾಗಿ ನಿಲ್ಲಬೇಕು ಎಂದು ನಿನ್ನೆ ಪ್ರಧಾನಿ ಮೋದಿ ಮಾಡಿದ ಮನವಿಗೆ ಸ್ಪಂದಿಸಿ, ಈ ಘೋಷಣೆ ಮಾಡಿದೆ. ನಿನ್ನೆ ರಾತ್ರಿ ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, ಕರೊನಾ ರೋಗಿಗಳಿಗೆ ಉಂಟಾಗುತ್ತಿರುವ ಆಕ್ಸಿಜನ್ …

Read More »