Home / ರಾಜ್ಯ (page 1751)

ರಾಜ್ಯ

ಲಸಿಕೆ ದಾಸ್ತಾನು ಇಲ್ಲದಿದ್ದರೂ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡುವ ಕಾರ್ಯಕ್ರಮಕ್ಕೆ ಇಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಚಾಲನೆ

ಬೆಂಗಳೂರು: ಲಸಿಕೆ ದಾಸ್ತಾನು ಇಲ್ಲದಿದ್ದರೂ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡುವ ಕಾರ್ಯಕ್ರಮಕ್ಕೆ ಇಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಚಾಲನೆ ನೀಡಿದ್ದು, ಮೇ ಮೂರನೇ ವಾರದವರೆಗೆ ಲಸಿಕೆ ಸಿಗುವುದಿಲ್ಲ ಎಂದು ಇದೇ ವೇಳೆ ಸ್ಪಷ್ಟಪಡಿಸಿದ್ದಾರೆ. ಲಸಿಕೆ ಸ್ಟಾಕ್ ಇಲ್ಲದಿದ್ದ ಮೇಲೆ ಕಾರ್ಯಕ್ರಮಕ್ಕೆ ಯಾಕೆ ಚಾಲನೆ ನೀಡಬೇಕಿತ್ತು ಎಂಬುದು ಹಲವರ ಪ್ರಶ್ನೆಯಾಗಿದೆ. ಶಿವಾಜಿನಗರದ ಅಟಲ್ ಬಿಹಾರಿ ವಾಜಪೇಯಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಯಲ್ಲಿ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡುವ ಅಭಿಯಾನಕ್ಕೆ …

Read More »

ನಾಳೆ ಬೆಳಗಾವಿ ಲೋಕಸಭಾ ಉಪ ಚುನಾವಣೆ ರಿಸಲ್ಟ್ ಇಂದು ಕೂವಿಡ ಲಸಿಕೆ ಸ್ವೀಕರಿಸಿದ ಸತೀಶ್ ಜಾರಕಿಹೊಳಿ

ಗೋಕಾಕ: ಗೋಕಾಕ ತಾಲೂಕಾ ಆಸ್ಪತ್ರೆಯಲ್ಲಿ ಸತೀಶ್ ಜಾರಕಿಹೊಳಿ ಲಸಿಕೆ ಸ್ವಿಕರಣೆ     ನಗರದ ಗೋಕಾಕ ತಾಲೂಕ ಆಸ್ಪತೆಯಲ್ಲಿ ಸತೀಶ್ ಜಾರಕಿಹೊಳಿ ಅವರು ಇಂದು ಲಸಿಕೆ ಸ್ವೀಕರಣೆ ಮಾಡಿದ್ದಾರೆ ಎಲ್ಲ ಕಡೆ ಇದೊಂದು ಕಾಯಿಲೆ ಹಬ್ಬುತ್ತಿದ್ದು ಜನರಿಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಸತೀಶ್ ಜಾರಕಿಹೊಳಿ ಅವರು ಇಂದು ಕೋವಿಡ ಮೊದಲನೆ ಲಸಿಕೆ ಸ್ವೀಕರಿಸಿದ್ದಾರೆ..ಈ ಸಮಯದಲ್ಲಿ   *ಹೆಚ್ಚಿನ ಸುದ್ದಿಗಾಗಿ ಲಕ್ಷ್ಮಿ ನ್ಯೂಸ್ ಚಾನಲ್ ಅನ್ನ subscribe ಹಾಗೂ ಕ್ಷಣ ಕ್ಷಣದ …

Read More »

ಮಣಿಪಾಲ್ ತೆಕ್ಕೆಗೆ ಸೇರಿದ ಕೊಲಂಬಿಯಾ ಏಷ್ಯಾ

ನವದೆಹಲಿ: ಕೊಲಂಬಿಯಾ ಏಷ್ಯಾ ಹಾಸ್ಪಿಟಲ್ಸ್‌ ಸಮೂಹದ ಭಾರತದಲ್ಲಿನ ಆಸ್ಪತ್ರೆಗಳನ್ನು ಸ್ವಾಧೀನಕ್ಕೆ ತೆಗೆದುಕೊಳ್ಳುವ ಪ್ರಕ್ರಿಯೆ ಪೂರ್ಣಗೊಂಡಿದೆ ಎಂದು ಆರೋಗ್ಯಸೇವಾ ವಲಯದ ಪ್ರಮುಖ ಕಂಪನಿಯಾದ ‘ಮಣಿಪಾಲ್ ಹಾಸ್ಪಿಟಲ್ಸ್‌’ ಶುಕ್ರವಾರ ತಿಳಿಸಿದೆ. ಕೊಲಂಬಿಯಾ ಏಷ್ಯಾ ಹಾಸ್ಪಿಟಲ್ಸ್‌ನ ಶೇಕಡ 100ರಷ್ಟು ಷೇರುಗಳನ್ನು ಮಣಿಪಾಲ್ ಹಾಸ್ಪಿಟಲ್ಸ್‌ ಖರೀದಿಸಿದೆ. ಈ ಖರೀದಿಯೊಂದಿಗೆ ಮಣಿಪಾಲ್ ಹಾಸ್ಪಿಟಲ್ಸ್ ಸಮೂಹವು ಭಾರತದ ಎರಡನೆಯ ಅತಿದೊಡ್ಡ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಗಳ ಸಮೂಹವಾಗಿ ಹೊರಹೊಮ್ಮಿದೆ ಎಂದು ಕಂಪನಿಯು ಪ್ರಕಟಣೆಯಲ್ಲಿ ತಿಳಿಸಿದೆ. ‘ಆರೋಗ್ಯಸೇವಾ ವಲಯದ ಈ ಎರಡು ಸಂಸ್ಥೆಗಳು …

Read More »

’18 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದ ಮೇ 1ರಿಂದ ಕೋವಿಡ್‌ ಲಸಿಕೆ ಪೂರೈಕೆಯಾಗದಿದ್ದರೆ ನನ್ನ ವೈಯಕ್ತಿಕ ಹಣ ನೀಡಿ ಪ್ರತಿಯೊಬ್ಬರಿಗೂ ಲಸಿಕೆ ಹಾಕಿಸುತ್ತೇನೆ’: ಯತ್ನಾಳ

ವಿಜಯಪುರ: ’18 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದ ಮೇ 1ರಿಂದ ಕೋವಿಡ್‌ ಲಸಿಕೆ ಪೂರೈಕೆಯಾಗದಿದ್ದರೆ ನನ್ನ ವೈಯಕ್ತಿಕ ಹಣ ನೀಡಿ ಪ್ರತಿಯೊಬ್ಬರಿಗೂ ಲಸಿಕೆ ಹಾಕಿಸುತ್ತೇನೆ’ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಭರವಸೆ ನೀಡಿದರು. ಶ್ರೀ ಸಿದ್ಧೇಶ್ವರ ಸಂಸ್ಥೆ, ಜೈನ್ ಫೌಂಡೇಶನ್ ಹಾಗೂ ಸಿದ್ಧಸಿರಿ ಸೌಹಾರ್ದ ಸಹಕಾರಿ ಸಂಘದ ಸಹಭಾಗಿತ್ವದಲ್ಲಿ ನಗರದ ಸೊಲ್ಲಾಪುರ ರಸ್ತೆಯ ಜೈನ್ ಕಾಲೇಜಿನಲ್ಲಿ ತೆರೆಯಲಾದ ಆಕ್ಷಿಜನ್ ಹಾಗೂ ಸಾಮಾನ್ಯ ಬೆಡ್‍ (100)ಗಳನ್ನು ಹೊಂದಿದ ಕೋವಿಡ್ ಆರೈಕೆ ಕೇಂದ್ರಕ್ಕೆ …

Read More »

ಸಚಿವರೇ ಕಮಿಷನ್ ತಿಂದಿದ್ದು ಸಾಕು, ಖಾಸಗಿ ಆಸ್ಪತ್ರೆಗಳಿಗೆ ಬಾಕಿ ಕೊಡಿ, ಜನರ ಕಷ್ಟ ನೋಡಿ – ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್

ಬೆಂಗಳೂರು : ‘ಸಚಿವರೇ ಕಮಿಷನ್ ಲೆಕ್ಕ ಹಾಕಿಕೊಂಡು ಕೂತಿದ್ದೀರಾ? ಕಮಿಷನ್ ಹೊಡೆದಿದ್ದು ಸಾಕು. ಹಿಂದೆ ತಿಂದಿದ್ದು ಸಾಕು, ಮುಂದೆ ತಿನ್ನೋದು ಸಾಕು. ಆದಷ್ಟು ಬೇಗ ಖಾಸಗಿ ಆಸ್ಪತ್ರೆಗಳಿಗೆ ಬಾಕಿ ಹಣ ಪಾವತಿಸಿ. ಜನರ ಕಷ್ಟದ ಬಗ್ಗೆ ಗಮನ ಹರಿಸಿ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಅವರು ಶಿವಕುಮಾರ್ ಆಗ್ರಹಿಸಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಶಿವಕುಮಾರ್ ಅವರು, ‘ಕೇಂದ್ರ ಸರ್ಕಾರು 18 ರಿಂದ 45 ವರ್ಷದವರು ಕೊರೋನಾ ಲಸಿಕೆ …

Read More »

ಶ್ರೀ ಕ್ಷೇತ್ರ ಮಂತ್ರಾಲಯದ ಪೀಠಾಧಿಪತಿಗಳ ಆಪ್ತ ಕೋವಿಡ್ ಗೆ ಬಲಿ

ಮಂತ್ರಾಲಯ – ಶ್ರೀ ಕ್ಷೇತ್ರ ಮಂತ್ರಾಲಯದ ಪೀಠಾಧಿಪತಿಗಳ ಆಪ್ತ ಕಾರ್ಯದರ್ಶಿ ಎಸ್.ಎನ್. ಸುಯಮೀಂದ್ರ ಆಚಾರ್  ಅವರು ದೆಹಲಿಯಲ್ಲಿ ಇಂದು ಸಾಯಂಕಾಲ 6 ಗಂಟೆಗೆ ಕೋವಿಡ್ ಗೆ ಬಲಿಯಾಗಿದ್ದಾರೆ. ಅವರಿಗೆ 49 ವರ್ಷ ವಯಸ್ಸಾಗಿತ್ತು. ವಾರದ ಹಿಂದೆ ಅವರನ್ನು ದೆಹಲಿಯಲ್ಲಿ ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ ಉಪಚಾರ ಫಲಿಸದೆ ಕೊನೆಯುಸಿರೆಳೆದರು.   ಮಂತ್ರಾಲಯ ಕ್ಷೇತ್ರ ಅಭಿವೃದ್ಧಿಗೆ ಸುಯಮೀಂದ್ರ ಆಚಾರ್  ಸೇವೆ ಅನನ್ಯ.

Read More »

ಜಿಲ್ಲಾ ಕೋವಿಡ್ ವಾರ್ ರೂಮ್‌ಗೆ ಭೇಟಿ ನೀಡಿದ ಜಿಲ್ಲಾಧಿಕಾರಿ ಹರೀಶ್ ಕುಮಾರ, ಎಲ್ಲಾ ವಿವರ ಮುಂದಿನ 24 ಗಂಟೆಯಲ್ಲಿ ಮೊಬೈಲ್ ನಲ್ಲಿ ಲಭ್ಯ

 ಬೆಳಗಾವಿ –  ಜಿಲ್ಲಾ ಕೋವಿಡ್ ವಾರ್ ರೂಮ್‌ಗೆ ಭೇಟಿ ನೀಡಿದ ಜಿಲ್ಲಾಧಿಕಾರಿ ಹರೀಶ್ ಕುಮಾರ, ಸಮಾಲೋಚಕರೊಂದಿಗೆ ಹಾಗೂ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಚರ್ಚಿಸಿ ಸುಸಜ್ಜಿತ ಜಿಲ್ಲಾ ಮಟ್ಟದ ಕೋವಿಡ್ ವಾರ್ ರೂಮ್‌ನ ಸೇವೆಯು 24×7 ಕಾರ್ಯನಿರ್ವಹಿಸುವಂತೆ ತಿಳಿಸಿದರು. ಎಲ್ಲಾ ತಾಲ್ಲೂಕು ಮಟ್ಟದಲ್ಲಿ ಸ್ಥಾಪಿಸಿರುವ ತಾಲ್ಲೂಕಾ ಕೋವಿಡ್ ವಾರ್ ರೂಮ್‌ಗಳಿಂದ ಪ್ರತಿದಿನ ಕೋವಿಡ್-19 ಸೋಂಕಿತರ ಹಾಗೂ ಪ್ರಾಥಮಿಕ/ದ್ವಿತೀಯ ಸಂಪರ್ಕಿತರ ಸಂಪೂರ್ಣ ವಿವರ, ಕೋವಿಡ್ ಕೇರ್ ಸೆಂಟರ್‌ಗಳಲ್ಲಿರುವ ಬೆಡ್‌ಗಳ ವಿವರ, ವೆಂಟಿಲೇಟರ್‌ ಹೊಂದಿರುವ ಬೆಡ್‌ಗಳ …

Read More »

ರಮೇಶ್ ಜಾರಕಿಹೊಳಿ ಅವರ ಹುಟ್ಟು ಹಬ್ಬಕ್ಕೆ ಶುಭ ಕೋರಿದ ಸೊಹೈಲ್ ಜಮಾದಾರ ಹಾಗೂ ಬಳಗ..

ಗೋಕಾಕ: ಮೆ ಒಂದು ಇಂದು ಎಲ್ಲರಿಗೂ ಕಾರ್ಮಿಕ ದಿನಾಚರಣೆ ಆದ್ರೆ ಇಂದು ಗೋಕಾಕ ನಲ್ಲಿ ಹಾಗೂ ಸಾಹುಕಾರರ ಅಭಿಮಾನಿ ಗಳಿಗೆ ಒಂದು ವಿಶೇಷ ವಾದ ದಿನ ಹೌದು ಇಂದು ಮಾಜಿ ಸಚಿವರು ಹಾಗೂ ಗೋಕಾಕ ಶಾಸಕರಾದ ಶ್ರೀ ರಮೇಶ್ ಜಾರಕಿಹೊಳಿ ಅವರ ಹುಟ್ಟು ಹಬ್ಬ ಇಂದು ಅವರ್ ಸಾವಿರಾರು ಅಭಿಮಾನಿಗಳು ಅವರಿಗೆ ಶುಭ ಹಾರೈಕೆ ಕೋರುವ ದಿನ . ಕಾರ್ಮಿಕರ ದಿನಾ ಚರಣೆ ಯಂದೆ ಶ್ರೀ ರಮೇಶ್ ಜಾರಕಿಹೊಳಿ ಅವರ …

Read More »

ಪಶ್ಚಿಮ ಬಂಗಾಳ ಪೀಪಲ್ಸ್ ಪಲ್ಸ್ ಎಕ್ಸಿಟ್ ಪೋಲ್: ಬಿಜೆಪಿ ದಿಗ್ವಿಜಯ

ಕೋಲ್ಕತ್ತಾ, ಏಪ್ರಿಲ್ 29: ಪಶ್ಚಿಮ ಬಂಗಾಳದ ಎಂಟು ಹಂತಗಳ ಸುದೀರ್ಘ ಅಸೆಂಬ್ಲಿ ಚುನಾವಣೆ ಇಂದು ಮುಕ್ತಾಯಗೊಂಡಿದೆ. ಚುನಾವಣಾ ಆಯೋಗದ ಆದೇಶದಂತೆ, ಮತದಾನ ಮುಗಿದ ನಂತರವಷ್ಟೇ ಮತಗಟ್ಟೆ ಸಮೀಕ್ಷೆಯನ್ನು ಪ್ರಕಟಿಸಬಹುದಾಗಿದೆ. ವಿವಿಧ ವಾಹಿನಿಗಳು ಜಂಟಿಯಾಗಿ ಪಶ್ಚಿಮ ಬಂಗಾಳದಲ್ಲಿ ವಿಜಯ ಸಾಧ್ಯತೆ ಯಾರಿಗೆ ಎನ್ನುವುದರ ಬಗ್ಗೆ ಫಲಿತಾಂಶವನ್ನು ನೀಡುತ್ತಿದೆ. ಕೆಲವು ವಾಹಿನಿಗಳು ಮಮತಾ ಬ್ಯಾನರ್ಜಿ ಮತ್ತೆ ಅಧಿಕಾರಕ್ಕೇರುತ್ತಾರೆ ಎಂದಿವೆ. ಇನ್ನು ಕೆಲವು ವಾಹಿನಿಗಳು ಅತಂತ್ರ ಫಲಿತಾಂಶ ಬರಲಿದೆ ಎನ್ನುವ ವರದಿಯನ್ನು ಪ್ರಕಟಿಸುತ್ತಿದೆ. ಒಟ್ಟು …

Read More »

8 ಕೋಟಿ ವಲಸೆ ಕಾರ್ಮಿಕರಿಗೆ ಊಟ, ಸಾರಿಗೆ ವ್ಯವಸ್ಥೆಗಾಗಿ ಮನವಿ

ಕೋವಿಡ್ 19 ಕಾರಣದಿಂದ ವಲಸೆ ಮತ್ತು ಅಪಾಯದಲ್ಲಿ ಸಿಲುಕಿಕೊಂಡಿರುವ ಕಾರ್ಮಿಕರಿಗೆ ಪಡಿತರ ಮತ್ತು ಆಹಾರ ಭದ್ರತೆಯ ಜೊತೆಗೆ ಕನಿಷ್ಠ ದರದಲ್ಲಿ ತವರಿಗೆ ಮರಳಲು ಅನುಕೂಲ ಕಲ್ಪಿಸುವಂತೆ ಸರ್ಕಾರಗಳಿಗೆ ನಿರ್ದೇಶನ ನೀಡಬೇಕು ಎಂದು ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಹಾಕಲಾಗಿದೆ. ಸಾಮಾಜಿಕ ಕಾರ್ಯಕರ್ತರಾದ ಹರ್ಷ್‌ ಮಂದರ್‌, ಅಂಜಲಿ ಭಾರದ್ವಾಜ್‌ ಮತ್ತು ಜಗದೀಪ್‌ ಚೊಕ್ಕರ್‌ ಅವರು ಸುಪ್ರೀಂ ಕೋರ್ಟ್‌ಗೆ ತುರ್ತು ಮನವಿ ಸಲ್ಲಿಸಿದ್ದಾರೆ. ಪ್ರಸಕ್ತ ವರ್ಷದಲ್ಲಿ ರಾಜ್ಯ ಸರ್ಕಾರಗಳು ವಿಕೇಂದ್ರೀಕೃತ ರೀತಿಯಲ್ಲಿ ಲಾಕ್‌ಡೌನ್‌ ಮತ್ತು ಕರ್ಫ್ಯೂ …

Read More »