Breaking News

ರಾಜ್ಯ

ಬೆಂಗಳೂರಿನ `IISC’ ಮೆದುಳು ಸಂಶೋಧನಾ ಕೇಂದ್ರ ಉದ್ಘಾಟಿಸಿದ ಪ್ರಧಾನಿ ಮೋದಿ

ಬೆಂಗಳೂರು : ಪ್ರಧಾನಿ ನರೇಂದ್ರ ಮೋದಿ ಅವರು ಇಂದಿನಿಂದ ಎರಡು ದಿನ ಕರ್ನಾಟಕ ಪ್ರವಾಸ ಕೈಗೊಂಡಿದ್ದು, ಇಂದು ಬೆಂಗಳೂರಿಗೆ ಆಗಮಿಸಿದ್ದು, ಪ್ರಧಾನಿ ಮೋದಿ ಅವರು IISc ನ ಮೆದುಳು ಸಂಶೋಧನಾ ಕೇಂದ್ರ (CBR) ಉದ್ಘಾಟಸಿದ್ದಾರೆ. ಇಂದು ಬೆಂಗಳೂರಿನ ಯಲಹಂಕ ವಾಯುನೆಲೆಗೆ ಬಂದಿಳಿದ ಪ್ರಧಾನಿ ನರೇಂದ್ರ ಮೋದಿ ಅವರು ಬೆಂಗಳೂರಿನ IISc ನ ಮೆದುಳು ಸಂಶೋಧನಾ ಕೇಂದ್ರ (CBR) ಉದ್ಘಾಟಸಿದ್ದಾರೆ ಮತ್ತು ಬಾಗ್ಚಿ ಪಾರ್ಥಸಾರಥಿ ಮಲ್ಟಿಸ್ಪೆಶಾಲಿಟಿ ಆಸ್ಪತ್ರೆಗೆ ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಪ್ರಧಾನಿ …

Read More »

ರೇವಣಸಿದ್ಧೇಶ್ವರ ಗವೀಮಠದ ಮಹಿಮೆ ಅಪಾರವಾದದ್ದು- ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ*

    ಮೂಡಲಗಿ* ಮೂಡಲಗಿಯ ಮೂಲ ದೇವರೆಂದೇ ಭಕ್ತರಿಂದ ಕರೆಸಿಕೊಳ್ಳುವ ರೇವಣಸಿದ್ಧ ಗವಿಮಠದ ಮಹಿಮೆ ಅಪಾರವಾದುದ್ದು. ಮಠದ ಭಕ್ತ ವೃಂದದವರ ಆಶಯದಂತೆ ಮುಖ್ಯ ರಸ್ತೆಯಿಂದ ಗವಿಮಠದವರೆಗೆ ರಸ್ತೆಯನ್ನು ಅಭಿವೃದ್ಧಿ ಪಡಿಸಲಾಗಿದೆ ಎಂದು ಕೆಎಂಎಫ್ ಅಧ್ಯಕ್ಷ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು. ಪಟ್ಟಣದ ಹೊರವಲಯದಲ್ಲಿರುವ ರೇವಣಸಿದ್ಧೇಶ್ವರ ಗವಿ ಮಠಕ್ಕೆ ಭೇಟಿ ನೀಡಿ ಮಾತನಾಡಿದ ಅವರು, ಗವಿಮಠವು ಇಲ್ಲಿಯ ಆರಾಧ್ಯದೈವವಾಗಿರುವ ಶಿವಬೋಧರಂಗ ಮಠದಂತೆಯೇ ಪ್ರಸಿದ್ಧಿಯಾಗಿದೆ. ಸಿದ್ಧ ಸಂಸ್ಥಾನಮಠದ ಮೂಲ ಪೀಠಾಧಿಪತಿಗಳು ಮೂಡಲಗಿಯಲ್ಲಿ …

Read More »

ಗೌಂಡವಾಡ ಗ್ರಾಮದ ಯುವಕನ ಅಂತ್ಯಕ್ರಿಯೆ ಕುಟುಂಬಸ್ಥರ ಆಕ್ರಂದನ

ದೇವಸ್ಥಾನ ಜಾಗ ವಿಚಾರದಲ್ಲಿ ನಡೆದ ಗಲಾಟೆಯಲ್ಲಿ ಹತ್ಯೆಯಾಗಿದ್ದ ಬೆಳಗಾವಿ ತಾಲೂಕಿನ ಗೌಂಡವಾಡ ಗ್ರಾಮದ ಯುವಕನ ಅಂತ್ಯಕ್ರಿಯೆ ಕುಟುಂಬಸ್ಥರ ಆಕ್ರಂದನದ ನಡುವೆ ಸ್ವಗ್ರಾಮದಲ್ಲಿ ನೆರವೇರಿದೆ. ಹೌದು ಗೌಂಡವಾಡ ಗ್ರಾಮದ ಕಾಲಭೈರವನಾಥ್ ದೇವಸ್ಥಾನದ ಜಾಗದ ವಿಚಾರದಲ್ಲಿ ನಡೆದ ಗಲಾಟೆಯಲ್ಲಿ ಶನಿವಾರ ರಾತ್ರಿ ಸತೀಶ ಪಾಟೀಲ್ ಹತ್ಯೆಯಾಗಿದ್ದರು. ಇದರಿಂದ ಇಡೀ ಗ್ರಾಮದಲ್ಲಿ ರೋಷಾಗ್ನಿ ಜ್ವಾಲೆ ಹೊತ್ತಿಕೊಂಡು ಉದ್ರಿಕ್ತಗೊಂಡ ಗ್ರಾಮಸ್ಥರಿಂದ ಸಾಕಷ್ಟು ವಾಹನಗಳಿಗೆ ಬೆಂಕಿ ಇಡಲಾಗಿತ್ತು. ಘಟನೆಯಿಂದ ಇಡೀ ಗೌಂಡವಾಡ ಗ್ರಾಮದಲ್ಲಿ ಬಿಗುವಿನ ವಾತಾವರಣವೇ ನಿರ್ಮಾಣವಾಗಿತ್ತು. …

Read More »

ಪಥ್ ಯೋಜನೆ ವಿರೋಧಿಸಿ ಖಾನಾಪುರ ಬಂದ್ ವಾಪಾಸ್ ಪಡೆಯಲಾಗಿದೆ.: ಅಂಜಲಿ ನಿಂಬಾಳ್ಕರ್

ಬೆಳಗಾವಿ: ಜಿಲ್ಲೆಯ ಖಾನಾಪುರ ತಾಲೂಕಿನಲ್ಲಿ ಕೇಂದ್ರ ಸರ್ಕಾರದ ಅಗ್ನಿಪಥ್ ಯೋಜನೆ ವಿರೋಧಿಸಿ ಬಂದ್ ಗೆ ಕರೆ ನೀಡಲಾಗಿತ್ತು. ಆದ್ರೇ ಖಾನಾಪುರ ತಾಲೂಕಿನ ಸಂತೆ ಕೂಡ ಇದ್ದು ಸಾರ್ವಜನಿಕರಿಗೆ ತೊಂದರೆ ಉಂಟಾಗುವ ಹಿನ್ನಲೆಯಲ್ಲಿ,  ಖಾನಾಪುರ ಬಂದ್ ವಾಪಾಸ್ ಪಡೆಯಲಾಗಿದೆ.    ಈ ಬಗ್ಗೆ ಸುದ್ದಿಗಾರರಿಗೆ ಖಾನಾಪುರದಲ್ಲಿ ಮಾಹಿತಿ ನೀಡಿದಂತ ಶಾಸಕ ಅಂಜಲಿ ನಿಂಬಾಳ್ಕರ್, ಅಗ್ನಿಪಥ್ ಯೋಜನೆ ವಿರೋಧಿಸಿ  ಖಾನಾಪುರ ಬಂದ್ ಗೆ ಕರೆ ನೀಡಲಾಗಿತ್ತು. ಖಾನಾಪುರ ಸಂತೆ ಇರೋ ಕಾರಣ, ಸಾರ್ವಜನಿಕರಿಗೆ …

Read More »

ಅಗ್ನಿಪಥ ಯೋಜನೆ ಬಗ್ಗೆ ಇಂಚು ಇಂಚು ಮಾಹಿತಿ ನೀಡಿದ ಭಾರತೀಯ ಸೇನೆ!

ಅಗ್ನಿಪಥ ಯೋಜನೆಗೆ ಸಂಬಂಧಿಸಿದಂತೆ ಇಂದು ಭಾರತೀಯ ಮೂರು ಸೇನೆಗಳ ಜಂಟಿ ಸುದ್ದಿಗೋಷ್ಠಿ ನಡೆಸಿ ಸಂಪೂರ್ಣ ಮಾಹಿತಿ ನೀಡಿವೆ. ಅಲ್ಲದೆ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಅಗ್ನಿಪಥ ಯೋಜನೆಗೆ ಸಂಬಂಧಿಸಿದಂತೆ ಮೂರು ಸೇನಾ ಮುಖ್ಯಸ್ಥರ ಜೊತೆ ಚರ್ಚೆ ನಡೆಸಿದರು. ಅದರ ನಂತರ ಇದೀಗ ಸೇನಾ ಅಧಿಕಾರಿಗಳು ಯೋಜನೆಗೆ ಸಂಬಂಧಿಸಿದ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ಪ್ರತಿ ವರ್ಷ ಸುಮಾರು 17,600 ಸಿಬ್ಬಂದಿ ಅಕಾಲಿಕ ನಿವೃತ್ತಿ ಹೊಂದುತ್ತಾರೆ, ಇದು ಕೂಡ ಅಗ್ನಿಪಥ್ ಯೋಜನೆಯಡಿ ಮಾತ್ರವಲ್ಲ …

Read More »

ಮೋದಿ ಓಡಾಡುವ ರಸ್ತೆಗಳ ಕಾಲೇಜಿಗೆ ರಜೆ

ಬೆಂಗಳೂರಿನಲ್ಲಿ ಮೋದಿ ಓಡಾಡುವ ರಸ್ತೆಗಳ ಕಾಲೇಜಿಗೆ ರಜೆ ಘೋಷಿಸಲಾಗಿದೆ. ಬೆಂಗಳೂರು ವಿವಿ ಸಂಯೋಜನೆಗೆ ಒಳಪಟ್ಟ ವಿವಿ ವ್ಯಾಪ್ತಿಯ ಒಟ್ಟು 64 ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ.ಬೆಂಗಳೂರು: ನಾಳೆ ಬೆಂಗಳೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ(Narendra Modi) ಕಾರ್ಯಕ್ರಮ ಹಿನ್ನೆಲೆ ಬೆಂಗಳೂರು ವಿಶ್ವವಿದ್ಯಾಲಯಕ್ಕೆ(Bangalore University) ಸ್ಥಳೀಯ ರಜೆ ಘೋಷಣೆ ಮಾಡಿ ಬೆಂಗಳೂರು ವಿವಿ ಸುತ್ತೋಲೆ ಕಳಿಸಿದೆ. ವಿವಿ ಆವರಣದಲ್ಲಿರುವ ಅಂಬೇಡ್ಕರ್ ಸ್ಕೂಲ್ ಎಕನಾಮಿಕ್ಸ್ ಉದ್ಘಾಟನೆ ಹಿನ್ನೆಲೆ ಬೋಧಕ, ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳಿಗೆ ರಜೆ …

Read More »

ಬಾಗಲಕೋಟೆ ಜಿಲ್ಲಾಧಿಕಾರಿಗೆ ಕ್ಲಾಸ್​ ತೆಗೆದುಕೊಂಡ ಮಾಜಿ ಸಿಎಂ

ಬಾಗಲಕೋಟೆ: ಜೂನ್ 21 ರಂದು ಪಟ್ಟದಕಲ್ಲಿನಲ್ಲಿ ನಡೆಯುವ ಯೋಗ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯಲ್ಲಿ ಕೇಳದೇ ಹೆಸರು ಹಾಕಿದ್ದಕ್ಕೆ ಗರಂ ಆಗಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಾಗಲಕೋಟೆ ಡಿಸಿ ಸುನೀಲಕುಮಾರ ಅವರಿಗೆ ಕರೆ ಮಾಡಿ ತರಾಟೆಗೆ ತೆಗೆದುಕೊಂಡರು. ಕರೆ ಮಾಡಿದ ಮಾಜಿ ಸಿಎಂ ಸಿದ್ದರಾಮಯ್ಯ, ನಿನಗೆ ಶಿಷ್ಟಾಚಾರ ಅಂದ್ರೆ ಏನು ಎಂಬುದು ಗೊತ್ತಿಲ್ವಾ? ನೀನು ಮೊದಲು ಶಿಷ್ಟಾಚಾರವನ್ನು ಪಾಲಿಸಬೇಕು. ಅವನ್ಯಾರೋ ಸಚಿವ ಬರ್ತಾನೆ ಅಂತಾ ನೀನು ಆಮಂತ್ರಣ ಪತ್ರಿಕೆ ಮಾಡಿ ಕಳುಹಿಸಿಬಿಟ್ಟರೆ …

Read More »

ಹೆಚ್ಚುವರಿಯಾಗಿ 5,000 ಅತಿಥಿ ಶಿಕ್ಷಕರನ್ನು ನೇಮಕ ಮಾಡಲು ಅನುಮತಿ ಸರ್ಕಾರ ಆದೇಶ

  ಬೆಂಗಳೂರು : 2022-2023ನೇ ಶೈಕ್ಷಣಿಕ ಸಾಲಿಗೆ ರಾಜ್ಯದ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ಅತಿಥಿ ಶಿಕ್ಷಕರನ್ನು ನೇಮಿಸಲು ಸರ್ಕಾರ ಆದೇಶಿಸಿದೆ. ಖಾಲಿ ಇರುವ ಬೋಧಕ ಹುದ್ದೆಗಳಿಗೆ ಎದುರಾಗಿ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಹೆಚ್ಚುವರಿಯಾಗಿ 5,000 ಅತಿಥಿ ಶಿಕ್ಷಕರನ್ನು ನೇಮಕ ಮಾಡಲು ಅನುಮತಿ ನೀಡಲಾಗಿದೆ. ಈಗಾಗಲೇ 2022-23ನೇ ಶೈಕ್ಷಣಿಕ ಸಾಲಿಗೆ ಶೈಕ್ಷಣಿಕ ಹಿತದೃಷ್ಟಿಯಿಂದ ಮತ್ತು ಉತ್ತಮ ಗುಣಮಟ್ಟದ ಶೈಕ್ಷಣಿಕ ಬಲವರ್ಧನೆಯ ಸಲುವಾಗಿ ಸಾರ್ವಜನಿಕ ಶಿಕ್ಷಣ ಇಲಾಖೆ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ 22,000 …

Read More »

ಹಾವೇರಿ: ವಿಷಕಾರಿ ಹಾವುಗಳಿಂದ ಕೂಲಿ ಕಾರ್ಮಿಕರನ್ನು ರಕ್ಷಿಸುತ್ತಿರುವ ಶ್ವಾನ!

ಹಾವೇರಿ: ಹಾವು-ಮುಂಗುಸಿ ಸೆಣಸು ಸಹಜ. ಇಲ್ಲೊಂದು ಶ್ವಾನ ಹಾವುಗಳೊಂದಿಗೆ ಹೋರಾಡಿ ಕೂಲಿ ಕಾರ್ವಿುಕರನ್ನು ರಕ್ಷಿಸುತ್ತಿದೆ. ಹಾವೇರಿ ತಾಲೂಕಿನ ಅಕ್ಕೂರು ಗ್ರಾಮದಲ್ಲಿ ದಯಾನಂದ ಕಲಕೋಟಿ ಎಂಬವರು ಸಾಕಿದ ‘ಸುಹಾನಿ’ ಎಂಬ ಶ್ವಾನ ಇಲ್ಲಿಯವರೆಗೆ 28 ಹಾವುಗಳೊಂದಿಗೆ ಗುದ್ದಾಡಿ ಎಲ್ಲವನ್ನೂ ಕೊಂದು ಹಾಕಿ ಜನರನ್ನು ರಕ್ಷಣೆ ಮಾಡುತ್ತಿದೆ. ದಯಾನಂದ ಕಲಕೋಟಿ 20 ಎಕರೆ ಜಮೀನಿನಲ್ಲಿ ಸಾವಯುವ ಕೃಷಿ ಮಾಡಿಕೊಂಡು ಬಂದಿದ್ದಾರೆ. 7 ಎಕರೆ ಜಮೀನಿಲ್ಲಿ ತಾಳೆ ಮರ ಹಾಕಿದ್ದಾರೆ. ತಾಳೆ ಮರದಲ್ಲಿ ಎಣ್ಣೆಯ ಅಂಶವಿರುವುದರಿಂದ …

Read More »

ಮದುವೆಯಾದ ಮೂರೇ ತಿಂಗಳಿಗೆ ಹೆಂಡತಿ ಆತ್ಮಹತ್ಯೆ: ಬಾಮೈದುನರಿಂದಲೆ ಕೊಲೆಯಾದ ನಟ ಸತೀಶ್ಮ

ಸ್ಯಾಂಡಲ್‌ವುಡ್ ಯುವ ನಟ ಸತೀಶ್ ವಜ್ರ ಅವರನ್ನು ಚಾಕುವಿನಿಂದ ಇರಿದು ಬರ್ಬರ ಹತ್ಯೆ ಮಾಡಿರುವ ಘಟನೆಗೆ ಇದೀಗ ಹೊಸ ಟ್ವಿಸ್ಟ್ ಸಿಕ್ಕಿದೆ. ಸತೀಶ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರ ಬಂಧನವಾಗಿದ್ದು, ಸತೀಶ್ ಬಾಮೈದುನರೆ ಕೊಲೆ ಮಾಡಿದ್ದಾರೆ ಎನ್ನಲಾಗಿದೆ.   ಕೆಲವೊಂದು ಶಾರ್ಟ್ ಮೂವಿಯಲ್ಲಿ ಕೆಲಸ ಮಾಡಿದ್ದ ಸತೀಶ್ `ಲಗೋರಿ’ ಎಂಬ ಸಿನಿಮಾದಲ್ಲಿ ನಾಯಕನಾಗಿ ಬಣ್ಣ ಹಚ್ಚಿದ್ದರು. ಸತೀಶ್ ವಜ್ರ, ಅವರನ್ನು ಮನೆಯಲ್ಲಿಯೇ ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಶುಕ್ರವಾರ …

Read More »