Breaking News
Home / ರಾಜಕೀಯ (page 857)

ರಾಜಕೀಯ

ಪ್ಲ್ಯಾಸ್ಟಿಕ್ ಚೀಲದಲ್ಲಿ‌ ನವಜಾತ ಶಿಶು ಮರಕ್ಕೆ ನೇತು ಹಾಕಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.

ಬೆಳಗಾವಿ: ಕಳೆದ ಒಂದು ವಾರದ ಹಿಂದೆ ಪ್ಲಾಸ್ಟಿಕ್‌ ಕವರ್​​ನಲ್ಲಿ ಸಿಕ್ಕಿದ್ದ ನವಜಾತ ಶಿಶುವನ್ನು ಮರಕ್ಕೆ ನೇತು ಹಾಕಿದ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ಪೋಕ್ಸೋ ಪ್ರಕರಣದಡಿ ಒಬ್ಬ ಆರೋಪಿಯನ್ನ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ. ಬೆಳಗಾವಿ ಜಿಲ್ಲೆಯ ಖಾನಾಪೂರ ತಾಲೂಕಿನ ನೆರಸಾ – ಗೌಳಿವಾಡ ಗ್ರಾಮದ ಮಲ್ಲು ಪಿಂಗಳೆ (19) ಬಂಧಿತ ಆರೋಪಿಯಾಗಿದ್ದಾನೆ. ಪ್ರಕರಣದ ಹಿನ್ನೆಲೆ ನೋಡುವುದಾದರೆ, ಕಳೆದ ಆರು ದಿನಗಳ ಹಿಂದೆ (ಆ.25ರಂದು) ಪ್ಲ್ಯಾಸ್ಟಿಕ್ ಚೀಲದಲ್ಲಿ‌ ನವಜಾತ ಶಿಶುವನ್ನು ಮರಕ್ಕೆ ನೇತು ಹಾಕಲಾಗಿತ್ತು.‌ …

Read More »

ಜಾರಕಿಹೊಳಿ ಬ್ರದರ್ಸ ಬಿಟ್ಟು ಯಮಕನಮರಡಿಯಲ್ಲಿ ಕಾರ್ಯಕ್ರಮ ಮಾಡಿದ್ದು ತಪ್ಪು: ಸಂಜಯ್ ಪಾಟೀಲ್

ನಿಗಮ ಮಂಡಳಿ ಅಧ್ಯಕ್ಷರಾದ ಹಿನ್ನೆಲೆ ಮಾರುತಿ ಅಷ್ಟಗಿ ಅವರಿಗೆ ಯಮಕನಮರಡಿಯಲ್ಲಿ ಅವರ ಕಾರ್ಯಕರ್ತರು ಅಭಿನಂದನಾ ಸಮಾರಂಭ ಮಾಡಿದ್ದರು. ಅದಕ್ಕೆ ನಾವು ಪಕ್ಷದ ಶಿಷ್ಟಾಚಾರ ಹಾಕಲು ಬರುವುದಿಲ್ಲ. ಆದರೆ ಜಾರಕಿಹೊಳಿ ಬ್ರದರ್ಸ ಬಿಟ್ಟು ಕಾರ್ಯಕ್ರಮ ಮಾಡಿದ್ದು ತಪ್ಪು ಎನ್ನುವ ಮೂಲಕ ತಮ್ಮದೇ ಪಕ್ಷದ ಮುಖಂಡರ ವಿರುದ್ಧ ಬೆಳಗಾವಿ ಗ್ರಾಮೀಣ ಬಿಜೆಪಿ ಜಿಲ್ಲಾಧ್ಯಕ್ಷ ಸಂಜಯ್ ಪಾಟೀಲ್ ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ. ಎಂ.ಕೆ.ಹುಬ್ಬಳ್ಳಿಯಲ್ಲಿ ಕಿತ್ತೂರು ಶಾಸಕ ಮಹಾಂತೇಶ ದೊಡ್ಡಗೌಡರ ಹುಟ್ಟು ಹಬ್ಬದ ಕಾರ್ಯಕ್ರಮದಲ್ಲಿ …

Read More »

ಮುರಘಾ ಶ್ರೀ ಬಂಧನ ಕಾಯ್ದೆ ಪ್ರಕಾರ ಸರ್ಕಾರ ಏನು ಕ್ರಮ ತಗೆದುಕೊಳ್ಳಬೇಕೋ ತಗೆದುಕೊಳ್ಳುತ್ತಿದ್ದಾರೆ: ಪ್ರಭಾಕರ್ ಕೋರೆ

ಮುರಘಾ ಶ್ರೀಗಳ ಬಂಧನ ಈಗ ಸರಕಾರದ ಮುಂದಿದೆ. ಸರಕಾರ ಕಾಯ್ದೆ ಪ್ರಕಾರ ಏನು ಕ್ರಮ ಕೈಗೊಳ್ಳಬೇಕೋ ತೆಗೆದುಕೊಳ್ಳುತ್ತೆ. ತಪ್ಪು ಮಾಡಿದವರ ಮೇಲೆ ಕ್ರಮ ಆಗೇ ಆಗುತ್ತೆ ಎಂದು ಕೆಎಲ್‍ಇ ಕಾರ್ಯಾಧ್ಯಕ್ಷರಾದ ಡಾ. ಪ್ರಭಾಕರ್ ಕೋರೆ ಹೇಳಿದ್ದಾರೆ. ಪೆÇೀಕ್ಸೋ ಪ್ರಕರಣದಲ್ಲಿ ಮುರುಘಾ ಶ್ರೀಗಳ ಬಂಧನ ವಿಚಾರ ಕುರಿತಂತೆ ಎಂಕೆ ಹುಬ್ಬಳ್ಳಿ ಪಟ್ಟಣದಲ್ಲಿ ಮೊದಲು ಪ್ರತಿಕ್ರಿಯಿಸಲು ಕೆಎಲ್‍ಇ ಕಾರ್ಯಾಧ್ಯಕ್ಷರಾದ ಡಾ. ಪ್ರಭಾಕರ್ ಕೋರೆ ನಿರಾಕರಿಸಿದ್ದರು. ಮಹಾಂತೇಶ ಕವಟಗಿಮಠ ಪ್ರತಿಕ್ರಿಯಿಸುತ್ತಾರೆ ಎಂದು ಕವಟಗಿಮಠರತ್ತ ಬೊಟ್ಟು …

Read More »

ಮಂಗಳೂರಿನಲ್ಲಿಂದು ‘ನಮೋ’ ಹವಾ: ಪ್ರಧಾನಿ ಮೋದಿಯವರ ಕಾರ್ಯಕ್ರಮದ ಸಂಪೂರ್ಣ ವಿವರ ಹೀಗಿದೆ.

ಮಂಗಳೂರು: ಪ್ರಧಾನಿ ನರೇಂದ್ರ ಮೋದಿ ಇಂದು ಮಂಗಳೂರು ಭೇಟಿ ನೀಡಲಿದ್ದಾರೆ. ಕೊಚ್ಚಿನ್​ನಿಂದ ವಿಶೇಷ ವಿಮಾನದ ಮೂಲಕ ಪ್ರಧಾನಿ ಮಧ್ಯಾಹ್ನ 12.55ರ ಸುಮಾರಿಗೆ ಮಂಗಳೂರು ವಿಮಾನ ನಿಲ್ದಾಣ ತಲುಪಲಿದ್ದಾರೆ. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ರಾಜ್ಯ, ಕೇಂದ್ರ ಸಚಿವರು ಪ್ರಧಾನಿ ಮೋದಿಯವರನ್ನು ಸ್ವಾಗತಿಸಲಿದ್ದಾರೆ.   ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮಧ್ಯಾಹ್ನ 1.20ಕ್ಕೆ ಸೇನಾ ಹೆಲಿಕಾಪ್ಟರ್ ಮೂಲಕ ಪ್ರಧಾನಿ ಮೋದಿ ಪಣಂಬೂರುನಲ್ಲಿರುವ ಎನ್​.ಎಂ.ಪಿ.ಎ ಹೆಲಿಪ್ಯಾಡ್​ಗೆ ಬರಲಿದ್ದಾರೆ. ಮಧ್ಯಾಹ್ನ 1.30 ಗಂಟೆಗೆ …

Read More »

ಶಿಕ್ಷಕರ ಅರ್ಹತಾ ಪರೀಕ್ಷೆಗೆ ಅರ್ಜಿ ಆಹ್ವಾನ

ಬೆಂಗಳೂರು: ಸಾರ್ವಜನಿಕ ಶಿಕ್ಷಣ ಇಲಾಖೆಯು 2022ನೇ ಸಾಲಿನ ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆಗೆ (ಟಿಇಟಿ) ಅರ್ಜಿ ಆಹ್ವಾನಿಸಿದ್ದು, ಅರ್ಹ ಅಭ್ಯರ್ಥಿಗಳು ಸೆ.30ರ ವರೆಗೆ ಅರ್ಜಿ ಸಲ್ಲಿಸಬಹುದು. ಇಲಾಖೆಯ ವೆಬ್‌ಸೈಟ್‌ schooleducation.kar.nic.in ನಲ್ಲಿ ಆನ್‌ಲೈನ್‌ ಮೂಲಕ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.   ಪರೀಕ್ಷಾ ದಿನಾಂಕದ ಬಗ್ಗೆ ಇಲಾಖೆ ಯಾವುದೇ ಮಾಹಿತಿ ನೀಡಿಲ್ಲ. ಶೀಘ್ರದಲ್ಲಿಯೇ ದಿನಾಂಕ ಪ್ರಕಟಿಸುವುದಾಗಿ ತಿಳಿಸಿದೆ. ಆದರೆ, ಶಾಲಾ ಶಿಕ್ಷಣ ಮತು ಸಾಕ್ಷರತಾ ಸಚಿವ ಬಿ.ಸಿ. ನಾಗೇಶ್‌ ಅವರು ಇತ್ತೀಚೆಗೆ …

Read More »

ಮುರುಘಾ ಶ್ರೀ ಬಂಧನ – ನಿರಂತರ ಹೋರಾಟಕ್ಕಿದು ಸಣ್ಣ ಜಯವಷ್ಟೇ : ಪರಶುರಾಂ

ಮೈಸೂರು : ಪ್ರೌಢಶಾಲಾ ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ಕಿರುಕುಳ ಆರೋಪಕ್ಕೆ ಸಂಬಂಧಪಟ್ಟಂತೆ ಚಿತ್ರದುರ್ಗ ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರನ್ನು ಬಂಧಿಸಿರುವ ವಿಚಾರಕ್ಕೆ ಸಂಬಂಧಪಟ್ಟಂತೆ ಒಡನಾಡಿ ಸಂಸ್ಥೆಯ ಸಂಚಾಲಕರಾದ ಪರಶುರಾಂ ಅವರು ತಮ್ಮ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.   ಇಲ್ಲಿ ಇಬ್ಬರು ವಿದ್ಯಾರ್ಥಿನಿಯರಷ್ಟೇ ಲೈಂಗಿಕ ಕಿರುಕುಳಕ್ಕೆ ಒಳಗಾಗಿಲ್ಲ, ಬದಲಾಗಿ ಆ ಮಠದ ವಸತಿ ನಿಲಯದಲ್ಲಿನ ಹಲವಾರು ವಿದ್ಯಾರ್ಥಿನಿಯರು ಈ ಕಿರುಕುಳಕ್ಕೆ ಒಳಗಾಗಿದ್ದಾರೆ ಅವರು ಸಾಕಷ್ಟು ನೊಂದಿದ್ದಾರೆ. ಪ್ರಕರಣವು ಮತ್ತಷ್ಟು ಸಮಗ್ರ ತನಿಖೆಗೆ ಒಳಪಡಬೇಕು. …

Read More »

ಸಾಮಾನ್ಯ ಶಿಕ್ಷಕರಾಗಿದ್ದ ಬಸವರಾಜ ಹೊರಟ್ಟಿ ವಿಶ್ವ ದಾಖಲೆ

ವಿಧಾನ ಪರಿಷತ್ ಒಂದೇ ಕ್ಷೇತ್ರದಿಂದ ಸತತ ಎಂಟು ಬಾರಿ ಜಯಗಳಿಸುವ ಮೂಲಕ ಬಸವರಾಜ ಹೊರಟ್ಟಿ ಐತಿಹಾಸಿಕ ದಾಖಲೆ ಬರೆದಿದ್ದು, ಅವರ ಸಾಧನೆ ಲಂಡನ್ ನ ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್ ದಾಖಲೆಗೆ ಸೇರ್ಪಡೆಯಾಗಿದೆ. ಸಾಮಾನ್ಯ ಶಿಕ್ಷಕರಾಗಿದ್ದ ಬಸವರಾಜ ಹೊರಟ್ಟಿ ಅವರು ವಿಧಾನ ಪರಿಷತ್ ಸದಸ್ಯರಾಗಿ, ಶಿಕ್ಷಣ ಸಚಿವರಾಗಿ, ಎರಡು ಬಾರಿ ವಿಧಾನ ಪರಿಷತ್ ಸಭಾಪತಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಕಳೆದ 5 ದಶಕಗಳಿಂದ ಶೈಕ್ಷಣಿಕ ಹಾಗೂ ಸಾರ್ವಜನಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿರುವ ಬಸವರಾಜ …

Read More »

‘ವರ್ಷಗಳಿಂದ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಅವನು ಮುರುಘಾ ಅಲ್ಲ ಮೃಗ’: ಒಡನಾಡಿ ಸಂಸ್ಥೆ ಮುಖ್ಯಸ್ಥ ಪರಶು ಆಕ್ರೋಶ

ಚಿತ್ರದುರ್ಗ ಸೆಪ್ಟೆಂಬರ್ 1: ‘ಹಲವು ವರ್ಷಗಳಿಂದ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಅವನು ಮುರುಘಾ ಅಲ್ಲ ಮೃಗ’ ಎಂದು ಒಡನಾಡಿ ಸಂಸ್ಥೆ ಮುಖ್ಯಸ್ಥ ಪರಶು ಆಕ್ರೋಶ ಹೊರಹಾಕಿದ್ದಾರೆ. ಫೋಕ್ಸೋ ಪ್ರಕರಣದಲ್ಲಿ ಚಿತ್ರದುರ್ಗದ ಮುರುಘಾ ಮಠದ ಶಿವಮೂರ್ತಿ ಶ್ರೀಗಳನ್ನು ಬಂಧಿಸಲಾಗಿದ್ದು ಅಜ್ಞಾತ ಸ್ಥಳದಲ್ಲಿ ಇರಿಸಲಾಗಿದೆ ಎಂದು ಹೇಳಲಾಗುತ್ತಿದೆ. ಇನ್ನೂ ಈ ಅತ್ಯಾಚಾರದ ಆರೋಪದ ಮೇಲೆ ಒಟ್ಟು ಐವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಈಗಾಗಲೇ ಇಬ್ಬರ ಬಂಧನವಾಗಿದೆ. ಮೊದಲನೇ ಆರೋಪಿ ಮಠದ …

Read More »

ಡಾ. ಅಂಬೇಡ್ಕರ್ ರೂಪದ ಗಣೇಶ ಮೂರ್ತಿಗೆ ವಿರೋಧ

(ಕೊಪ್ಪಳ ಜಿಲ್ಲೆ): ಗಂಗಾವತಿಯ ಅಂಬೇಡ್ಕರ್ ನಗರದಲ್ಲಿ ವಿನಾಯಕ ಸ್ನೇಹವೃಂದ ಯುವಕ ಮಂಡಳಿ ಪ್ರತಿಷ್ಠಾಪಿಸಿರುವ ಡಾ. ಅಂಬೇಡ್ಕರ್ ರೂಪದ ಗಣೇಶ ಮೂರ್ತಿಗೆ ದಲಿತ ಒಕ್ಕೂಟಗಳು ವಿರೋಧ ವ್ಯಕ್ತಪಡಿಸಿವೆ. ಸಂಘಟಕರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಗುರುವಾರ ಪೊಲೀಸ್ ಠಾಣೆ ಮೆಟ್ಟಿಲೇರಿವೆ.   ‘ಅಂಬೇಡ್ಕರ್ ಅವರ ರೂಪ ಹೋಲುವ ಗಣೇಶ ಮೂರ್ತಿ ಪ್ರತಿಷ್ಠಾಪಿಸಿದ್ದು ಸರಿಯಲ್ಲ. ಇದರಿಂದ ಅವರ ಘನತೆಗೆ ಧಕ್ಕೆ ಉಂಟಾಗಿದೆ. ಮೂರ್ತಿಯನ್ನು ಕೊನೆಯದಾಗಿ ನೀರಿಗೆ ವಿಸರ್ಜನೆ ಮಾಡಲಾಗುತ್ತದೆ. ಇದು ಸಂವಿಧಾನ ಶಿಲ್ಪಿಗೆ ಮಾಡಿದ …

Read More »

ಹಣಕ್ಕಾಗಿ ಸರ್ಕಾರಿ ನೌಕರಳ ಅಪಹರಣ: ನಾಲ್ವರ ಬಂಧನ

ವಿಜಯಪುರ: ಹಣದ ಆಸೆಗಾಗಿ ಸರ್ಕಾರಿ ಉದ್ಯೋಗಿನಿಯನ್ನು ಅಪಹರಣ ಮಾಡಿ 5 ಲಕ್ಷ ರೂ. ಗೆ ಬೇಡಿಕೆ ಇಟ್ಟಿದ್ದ ಪ್ರಕರಣದಲ್ಲಿ ಜಿಲ್ಲೆಯ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸಾಗರ ಜುಮ್ಮನಗೋಳ, ಶಿವಾಜಿ ಉಪ್ಪಾರ, ಆಕಾಶ ವೀರಕರ, ಆದರ್ಶ ಕೊಟ್ಯಾಳ ಬಂಧಿತ ಆರೋಪಿಗಳು. ಇಂಡಿ ಪಟ್ಟಣದಲ್ಲಿ ಸರ್ಕಾರಿ ಇಲಾಖೆಯಲ್ಲಿ ಕೆಲಸ ಮಾಡುವ ವಿಜಯಪುರ ನಗರ ನಿವಾಸಿ ಲಕ್ಷ್ಮೀ ಜಗದೀಶ ಸೊನ್ನದ ಎಂಬ ನೌಕರಳು ಅಪಹರಣಕ್ಕೊಳಗಾದವರು. ಆ.22 ರಂದು ಕೆಲಸ ಮುಗಿಸಿ ವಿಜಯಪುರ ನಗರಕ್ಕೆ …

Read More »