Breaking News
Home / ರಾಜಕೀಯ (page 852)

ರಾಜಕೀಯ

ಸಾಗುವಳಿ ಹಕ್ಕು ನೀಡುವಂತೆ ಆಗ್ರಹಿಸಿ ಬೆಳಗಾವಿಯಲ್ಲಿ ರೈತರ ಪ್ರತಿಭಟನೆ

ಜಮೀನಿಗೆ ಸಾಗುವಳಿ ಹಕ್ಕು ನೀಡುವಂತೆ ಆಗ್ರಹಿಸಿ ಚನ್ನಮ್ಮನ ಕಿತ್ತೂರು ತಾಲೂಕಿನ ಒಂಬತ್ತು ಗ್ರಾಮಗಳ ರೈತರು “ಬೆಳಗಾವಿ ಚಲೋ” ಹೆಸರಿನಲ್ಲಿ ಬೃಹತ್ ಟ್ರ್ಯಾಕ್ಟರ್ ರ್ಯಾಲಿ ನಡೆಸಿದರು. ಹಕ್ಕು ಪತ್ರ ನೀಡದಿದ್ರೆ ದನ, ಕರು, ಹೆಂಡತಿ ಮಕ್ಕಳನ್ನು ಕಟ್ಟಿಕೊಂಡು ಡಿಸಿ ಕಚೇರಿ ಮುಂದೆ ನಿರಂತರ ಪ್ರತಿಭಟನೆ ನಡೆಸುತ್ತೇವೆ ಎಂದು ರೈತರು ಎಚ್ಚರಿಕೆ ನೀಡಿದರು, ಗುರುವಾರ ಕಿತ್ತೂರಿನಲ್ಲಿರುವ ರಾಣಿ ಚನ್ನಮ್ಮಾಜಿ ವೃತ್ತದ ಮುಂಭಾಗದಲ್ಲಿ ಕೆಲಕಾಲ ಧರಣಿ ನಡೆಸಿದ ರೈತರು ಹಾಗೂ ರೈತ ಮುಖಂಡರು ರಾಜ್ಯ …

Read More »

ಕನ್ನಡ ಹಿರಿಯ ನಟಿ ಲೀಲಾವತಿ’ಗೆ ಅನಾರೋಗ್ಯ: ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರ ಭೇಟಿ, ಆರೋಗ್ಯ ವಿಚಾರಣೆ

ಬೆಂಗಳೂರು: ಕನ್ನಡದ ಹಿರಿಯ ನಟಿ ಲೀಲಾವತಿ ( Actress Leelavathi ) ಅವರು ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಹೀಗಾಗಿ ಅವರ ನಿವಾಸಕ್ಕೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರು ಭೇಟಿ ಮಾಡಿ, ಆರೋಗ್ಯ ವಿಚಾರಿಸಿದರು.   ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿರುವಂತ ಕನ್ನಡದ ಹಿರಿಯ ನಟಿ ಲೀಲಾವತಿ ಹಾಸಿಗೆ ಹಿಡಿದಿದ್ದಾರೆ. ನೆಲಮಂಗಲದ ಬಳಿಯ ಅವರ ತೋಟದ ಮನೆಯಲ್ಲಿಯೇ ವೈದ್ಯರ ಸಲಹೆ ಮೇರೆಗೆ ಚಿಕಿತ್ಸೆಯನ್ನು ನಟಿ ಲೀಲಾವತಿಗೆ ನೀಡಲಾಗುತ್ತಿದೆ.   ಈ ವಿಷಯ …

Read More »

ಸರ್ಕಾರದ ಸೌಲಭ್ಯ ಸದುಪಯೋಗ ಪಡಿಸಿಕೊಳ್ಳಿ: ವಿಧಾನ ಪರಿಷತ್ ಸದಸ್ಯ ಲಖನ್ ಜಾಕಿರಹೊಳಿ

ಗೋಕಾಕ: ” ಬಡ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಸರ್ಕಾರ ಅನೇಕ ಸೌಲಭ್ಯಗಳನ್ನು ಕಲ್ಪಿಸಿದ್ದು, ಇದರ ಸದುಪಯೋಗ ಪಡೆದುಕೊಂಡು ಜೀವನ ಯಶಸ್ಸು ಕಾಣಬೇಕು” ಎಂದು ವಿಧಾನ ಪರಿಷತ್ ಸದಸ್ಯ ಲಖನ್ ಜಾಕಿರಹೊಳಿ ಅವರು ಹೇಳಿದರು.   ನಗರದ ಗೃಹ ಕಚೇರಿಯಲ್ಲಿ ವಿಧಾನ ಪರಿಷತ್ ಸದಸ್ಯ ಲಖನ್ ಜಾಕಿರಹೊಳಿ ಅವರು ಕಟ್ಟಡ ಕಾರ್ಮಿಕ ಬಡಮಕ್ಕಳಿಗೆ ಸಹಾಯಧನ ಚೆಕ್‌ ವಿತರಿಸಿ, ಮಾತನಾಡಿದ ಅವರು,   ಕೂಲಿ ಕಾರ್ಮಿಕರ ಮಕ್ಕಳು ಇನ್ನು ಹೆಚ್ಚಿನ ಉನ್ನತ ಮಟ್ಟದಲ್ಲಿ ವಿದ್ಯಾಭ್ಯಾಸ …

Read More »

ಮಹಾಲಕ್ಷ್ಮೀಗೆ ರವೀಂದರ್​ ನೀಡಿರುವ ದುಬಾರಿ ಉಡುಗೊರೆಗಳ ಬಗ್ಗೆ ತಿಳಿದ್ರೆ ಹುಬ್ಬೇರಿಸ್ತೀರಾ! ಇಲ್ಲಿದೆ ಮಾಹಿತಿ.

ಚೆನ್ನೈ: ಧಾರಾವಾಹಿ ನಟಿ ವಿ.ಜೆ. ಮಹಾಲಕ್ಷ್ಮೀ ಮತ್ತು ತಮಿಳು ನಿರ್ಮಾಪಕ ರವೀಂದರ್​ ತಮ್ಮ ಪ್ರೇಮ ವಿವಾಹದಿಂದಲೇ ಇತ್ತೀಚೆಗೆ ಭಾರಿ ಸುದ್ದಿಯಾದರು. ಅಲ್ಲದೆ, ಕಳೆದ ದಿನಗಳಿಂದ ಈ ಜೋಡಿ ಟ್ರೆಂಡಿಂಗ್​ನಲ್ಲಿದೆ. ಅದಕ್ಕೆ ಕಾರಣ ನಟಿ ಮತ್ತು ನಿರ್ಮಾಪಕ ನಡುವಿನ ವ್ಯತ್ಯಾಸ. ಅದೇನೆಂದರೆ, ಮಹಾಲಕ್ಷ್ಮೀ ಸೌಂದರ್ಯವತಿಯಾಗಿದ್ದು, ಆಕೆ ಮದುವೆ ಆಗಿರುವ ರವೀಂದರ್​ ದಡೂತಿ ಮನುಷ್ಯ. ಹೀಗಾಗಿ ಇಬ್ಬರ ಮದುವೆ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿ ಸಿಕ್ಕಾಪಟ್ಟೆ ಟ್ರೋಲ್​ ಸಹ ಆಯಿತು. ಮಹಾಲಕ್ಷ್ಮೀ ಮತ್ತು …

Read More »

ಹುಬ್ಬಳ್ಳಿಯಲ್ಲಿ ತೇವಾಂಶ:ಆರಂಭವಾಗದ ಭಾರತ-ನ್ಯೂಜಿಲೆಂಡ್‌ ಟೆಸ್ಟ್ ಕ್ರಿಕೆಟ್ ಪಂದ್ಯ

ಹುಬ್ಬಳ್ಳಿ: ಇಲ್ಲಿನ ರಾಜನಗರದ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ಗುರುವಾರ ಭಾರತ ‘ಎ’ ಹಾಗೂ ನ್ಯೂಜಿಲೆಂಡ್‌ ‘ಎ’ ತಂಡಗಳ ನಡುವಣ ನಾಲ್ಕು ದಿನಗಳ ‘ಟೆಸ್ಟ್’ ಕ್ರಿಕೆಟ್ ಪಂದ್ಯವು ಮಧ್ಯಾಹ 12 ಗಂಟೆಯಾದರೂ ಆರಂಭಗೊಂಡಿಲ್ಲ.   ಬೆಳಿಗ್ಗೆ 9.30ಕ್ಕೆ ಆರಂಭವಾಗಬೇಕಿದ್ದ ಪಂದ್ಯವನ್ನು ಮೈದಾನದಲ್ಲಿ ತೇವಾಂಶ ಹೆಚ್ಚಿದ್ದ ಕಾರಣ 10.30ಕ್ಕೆ ಆರಂಭಿಸುವುದಾಗಿ ಅಂಪೈರ್‌ಗಳು ಹಾಗೂ ಪಂದ್ಯದ ರೆಫರಿ ಪ್ರಕಟಿಸಿದರು. ಆದರೆ, ಬೆಳಿಗ್ಗೆ 10.30ರ ವೇಳೆಗೆ ಮತ್ತೆ ಕ್ರೀಡಾಂಗಣ ಪರಿಶೀಲಿಸಿದ ಅವರು, ಮಧ್ಯಾಹ್ನದ ಬಳಿಕ ಪಂದ್ಯ ನಡೆಯಲಿದೆ ಎಂದು …

Read More »

ಉಮೇಶ ಕತ್ತಿ ನಿವಾಸಕ್ಕೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ*

*ಗೋಕಾಕ:* ಅರಣ್ಯ ಹಾಗೂ ಆಹಾರ ಸಚಿವರಾಗಿದ್ದ ಉಮೇಶ ಕತ್ತಿ ಅವರ ನಿಧನದ ಹಿನ್ನೆಲೆಯಲ್ಲಿ ಕೆಎಂಎಫ್ ಅಧ್ಯಕ್ಷ ಮತ್ತು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಕತ್ತಿಯವರ ಬೆಲ್ಲದ ಬಾಗೇವಾಡಿ ನಿವಾಸಕ್ಕೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಗುರುವಾರದಂದು ಹುಕ್ಕೇರಿ ತಾಲೂಕಿನ ಬೆಲ್ಲದ ಬಾಗೇವಾಡಿ ಗ್ರಾಮದಲ್ಲಿರುವ ನಿವಾಸದಲ್ಲಿ ದಿ.ಉಮೇಶ ಕತ್ತಿ ಅವರ ಭಾವಚಿತ್ರಕ್ಕೆ ನಮನ ಸಲ್ಲಿಸಿದ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಮೃತ ಉಮೇಶ ಕತ್ತಿ ಸಹೋದರ ರಮೇಶ ಕತ್ತಿ, …

Read More »

ಕುಡಿದ ಮತ್ತಿನಲ್ಲಿ ಸ್ನೇಹಿತನಿಗೆ ಕತ್ತರಿಯಿಂದ ಚುಚ್ಚಿ, ಬಳಿಕ ಭಯಗೊಂಡು ಕಿಡಕಿಯಿಂದ ಹಾರಿದ ವ್ಯಕ್ತಿ.

ಬೆಂಗಳೂರು: ಸ್ನೇಹಿತನಿಗೆ ಕತ್ತರಿಯಿಂದ ಹೊಟ್ಟೆಗೆ ಚುಚ್ಚಿ ನಂತರ ಹೆದರಿಕೆಯಿಂದ ಎರಡನೇ‌ ಮಹಡಿಯ ಬಾಲ್ಕನಿಯ ಕಿಟಕಿಯಿಂದ ಹಾರಿ ಗಾಯಗೊಂಡಿರುವ ಘಟನೆ ಬೇಗೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಿನ್ನೆ ರಾತ್ರಿ ನಡೆದಿರುವುದು ಬೆಳಕಿಗೆ ಬಂದಿದೆ. ನಾಗಾಲ್ಯಾಂಡ್ ಮೂಲದ ಹೇಕಾ ಹಲ್ಲೆಗೊಳಗಾದ ಯುವಕ. ಅವರ ರೂಮ್ ಮೇಟ್ ಆಗಿರುವ ರೋಹಿತ್ ಹಲ್ಲೆ ನಡೆಸಿ ಬಳಿಕ ಭಯದಿಂದ ಮೂರನೇ ಮಹಡಿಯಿಂದ ಬಿದ್ದು ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ. ರೋಹಿತ್ ಹಾಗೂ ಹೇಕಾ ಸೇರಿದಂತೆ ಐವರು ಸ್ನೇಹಿತರು ಒಂದೇ ಅಪಾರ್ಟ್​ಮೆಂಟ್​ನಲ್ಲಿ …

Read More »

ಪ್ರಯಾಣಿಕನ ಎದೆಗೆ ಒದ್ದು ಬಸ್ಸಿನಿಂದ ಹೊರಹಾಕಿದ ಕೆಎಸ್ಸಾರ್ಟಿಸಿ ಕಂಡಕ್ಟರ್!- ವಿಡಿಯೋ

ಸುಳ್ಯ(ದಕ್ಷಿಣ ಕನ್ನಡ): ಕೆಎಸ್​​​​ಆರ್​​ಟಿಸಿ ಬಸ್​​​ ನಿರ್ವಾಹಕನೋರ್ವ ಪ್ರಯಾಣಿಕನ ಎದೆಗೆ ಕಾಲಿನಿಂದ ಒದ್ದು, ರಸ್ತೆಗೆ ತಳ್ಳಿರುವ ಅಮಾನವೀಯ ಘಟನೆ ಪುತ್ತೂರು ತಾಲೂಕಿನ ಈಶ್ವರಮಂಗಲದಲ್ಲಿ ನಿನ್ನೆ ನಡೆದಿದೆ. ಈಶ್ವರಮಂಗಲ ಪೇಟೆಯ ಜಂಕ್ಷನ್​​​ನಲ್ಲಿ ಘಟನೆ ನಡೆದಿದೆ. ಪ್ರಯಾಣಿಕನ ಜೊತೆ ಅನುಚಿತ ವರ್ತನೆ ತೋರಿದ ವ್ಯಕ್ತಿಯನ್ನು ಕೆಎ 21 ಎಫ್ 0002 ಬಸ್‌ ನಂಬರ್‌ನ ನಿರ್ವಾಹಕ ಸುಬ್ಬರಾಜ್ ರೈ ಎಂದು ಗುರುತಿಸಲಾಗಿದೆ. ಮೇಲ್ನೋಟಕ್ಕೆ ಈ ಪ್ರಯಾಣಿಕ ಪಾನಮತ್ತನಂತೆ ಕಂಡು ಬರುತ್ತಿದ್ದಾನೆ. ಬಸ್ ಹತ್ತುವಾಗಲೇ ನಿರ್ವಾಹಕ ಪ್ರಯಾಣಿಕನನ್ನು ತಡೆದು …

Read More »

ಅರವಿಂದ ಲಿಂಬಾವಳಿ ಜನಪ್ರತಿನಿಧಿ ಆಗಲು ನಾಲಾಯಕ್: ಸಿದ್ದರಾಮಯ್ಯ

ಅರವಿಂದ ಲಿಂಬಾವಳಿ ಜನಪ್ರತಿನಿಧಿ ಆಗಲು ನಾಲಾಯಕ್ ಇನ್ನು ಮಹಿಳೆಗೆ ಶಾಸಕ ಅರವಿಂದ ಲಿಂಬಾವಳಿ ನಿಂದನೆ ಆರೋಪಕ್ಕೆ ಸಂಬಂಧಿಸಿ ಸಿದ್ದರಾಮಯ್ಯ ಮಾತನಾಡಿದ್ದು, ಅರವಿಂದ ಲಿಂಬಾವಳಿ ಜನಪ್ರತಿನಿಧಿ ಆಗಲು ನಾಲಾಯಕ್. ಮಹಿಳೆ ರಾಜಕಾಲುವೆ ಒತ್ತುವರಿ ಮಾಡಿದ್ದರೆ ಕ್ರಮ ಕೈಗೊಳ್ಳಿ. ಕಷ್ಟ-ಸುಖ ಹೇಳಿಕೊಳ್ಳಲು ಬಂದಾಗ ಕೆಟ್ಟದಾಗಿ ಬೈಯ್ಯೋದಾ?ಆಯಮ್ಮನಿಗೆ ರೇಪ್​ ಮಾಡಿದ್ದೀವಾ ಎಂದರೆ ಏನು ಅರ್ಥ? ತಾಳ್ಮೆಯಿಂದ ಮಹಿಳೆಯ ಕಷ್ಟ-ಸುಖ ಕೇಳಬೇಕು ಅಲ್ಲವೇ? ಲಿಂಬಾವಳಿ ಶಾಸಕರಾಗಲಿ ಲಾಯಕ್ಕಾ, ನಾಲಾಯಕ್ಕಾ ಹೇಳಿ? ಎಂದು ಹಾಸನ ಜಿಲ್ಲೆ ಗೊಲ್ಲರಹೊಸಳ್ಳಿಯಲ್ಲಿ …

Read More »

ಲಂಚ ಕೊಟ್ಟಿದ್ದಕ್ಕೆ ಯಾರಾದರೂ ರಶೀದಿ ಕೊಡ್ತಾರೇನ್ರಿ? ಬಿಜೆಪಿ ನಾಯಕರಿಗೆ ಸಿದ್ದರಾಮಯ್ಯ ಟಾಂಗ್

ಹಾಸನ: ಭ್ರಷ್ಟಾಚಾರ ಆರೋಪಕ್ಕೆ ಸಾಕ್ಷ್ಯ ನೀಡಲಿ ಎಂಬ ಬಿಜೆಪಿ ನಾಯಕರ(BJP Leaders) ಹೇಳಿಕೆ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯೆ ನೀಡಿದ ಮಾಜಿ ಸಿಎಂ ಸಿದ್ದರಾಮಯ್ಯ(Siddaramaiah), ಲಂಚ ಕೊಟ್ಟಿದ್ದಕ್ಕೆ ಯಾರಾದರೂ ರಶೀದಿ ಕೊಡ್ತಾರೇನ್ರಿ? ಎಂದು ಟಾಂಗ್ ಕೊಟ್ಟಿದ್ದಾರೆ. ಭ್ರಷ್ಟಾಚಾರ ಆರೋಪದ ಬಗ್ಗೆ ತನಿಖೆ ಮಾಡಲಿ ಸತ್ಯ ಗೊತ್ತಾಗುತ್ತೆ. ನ್ಯಾಯಾಂಗ ತನಿಖೆಯಾದ್ರೆ ದಾಖಲೆ ಕೊಡುವುದಾಗಿ ಕೆಂಪಣ್ಣ ಹೇಳಿದ್ದಾರೆ. ಆರೋಪ ಸಾಬೀತಾಗದಿದ್ದರೆ ಯಾವುದೇ ಶಿಕ್ಷೆಗೆ ಸಿದ್ಧ ಎಂದಿದ್ದಾರೆ. ನೀವು ಪ್ರಾಮಾಣಿಕರಾಗಿದ್ದರೆ ತನಿಖೆ ಬಗ್ಗೆ ಭಯ ಯಾಕೆ? …

Read More »