Breaking News
Home / ರಾಜಕೀಯ (page 842)

ರಾಜಕೀಯ

ಅಕ್ರಮ- ಸಕ್ರಮ ಅವಧಿ ಒಂದು ವರ್ಷ ವಿಸ್ತರಣೆ ಮಾಡಿದ ಸರ್ಕಾರ

ಬೆಂಗಳೂರು: ಸರಕಾರಿ ಭೂಮಿ ಸಾಗುವಳಿಯ ಅಕ್ರಮ- ಸಕ್ರಮ ಅರ್ಜಿ ಸಲ್ಲಿಕೆ ಅವಧಿಯನ್ನು ಮತ್ತೆ ಒಂದು ವರ್ಷಗಳ‌ ಕಾಲ ವಿಸ್ತರಣೆ ಮಾಡುವ ಮಹತ್ವದ ತೀರ್ಮಾನವನ್ನು ರಾಜ್ಯ ಸರಕಾರ ತೆಗೆದುಕೊಂಡಿದೆ. ಇದಕ್ಕೆ ಸಂಬಂಧಪಟ್ಟಂತೆ ಕಂದಾಯ ಇಲಾಖೆ ತಿದ್ದುಪಡಿ ವಿಧೇಯಕವನ್ನು ಶುಕ್ರವಾರ ವಿಧಾನಸಭೆಯಲ್ಲಿ ಅಂಗೀಕರಿಸಲಾಗಿದೆ.   94 ಎ ತಿದ್ದುಪಡಿ ಮೂಲಕ ನಮೂನೆ 57ರಲ್ಲಿ ಅರ್ಜಿ ಸಲ್ಲಿಸಿ ಸರಕಾರಿ ಭೂಮಿಯಲ್ಲಿ ನಡೆಸುತ್ತಿದ್ದ ಅಕ್ರಮ ಸಾಗುವಾಳಿಯನ್ನು ಸಕ್ರಮಗೊಳಿಸಿಕೊಳ್ಳುವುದಕ್ಕೆ ಅವಕಾಶವಿತ್ತು. ಆದರೆ ಈ ಅವಧಿ ಮುಕ್ತಾಯಗೊಂಡ ಹಿನ್ನೆಲೆಯಲ್ಲಿ …

Read More »

ಗಡಿ ವಿವಾದ ಕೆದಕಿದ ಮರಾಠಿ ಚಿತ್ರ “ಬಾಯ್ಸ್ 03” ಬಿಡುಗಡೆಗೆ ಬೆಳಗಾವಿಯಲ್ಲಿ ಬ್ರೇಕ್..

ಗಡಿ ವಿವಾದ ಕೆದಕಿದ ಮರಾಠಿ ಚಿತ್ರ ಬಾಯ್ಸ್ 03 ಬಿಡುಗಡೆಗೆ ಕನ್ನಡ ಸಂಘಟನೆಗಳ ತೀವ್ರ ವಿರೋಧ ವ್ಯಕ್ತವಾದ ಹಿನ್ನಲೆಯಲ್ಲಿ ಈ ಮರಾಠಿ ಚಲನಚಿತ್ರ ಬಿಡುಗಡೆಗೆ ಬೆಳಗಾವಿಯಲ್ಲಿ ಬ್ರೇಕ್ ಹಾಕಲಾಗಿದೆ. ಹೌದು ಮಹಾರಾಷ್ಟ್ರದಲ್ಲಿ ಮರಾಠಿ ಚಲನಚಿತ್ರ “ಬಾಯ್ಸ್ 03” ಚಿತ್ರ ಇವತ್ತು ಬಿಡುಗಡೆಯಾಗಿದೆ. ಈ ಚಿತ್ರವನ್ನು ಬೆಳಗಾವಿ ಮತ್ತು ಕರ್ನಾಟಕ ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಬಿಡುಗಡೆ ಮಾಡಬಾರದು ಎಂದು ಕರ್ನಾಟಕ ರಕ್ಷಣಾ ವೇದಿಕೆ ಆಗ್ರಹಿಸಿತ್ತು. ಅಲ್ಲದೇ ನಗರ ಪೆÇಲೀಸ್ ಆಯುಕ್ತರಿಗೆ ಮನವಿ …

Read More »

ಸಿದ್ಧರಾಮಯ್ಯ ಪ್ರಶ್ನೆಗೆ ತಬ್ಬಿಬ್ಬಾಗಿ ಮುಜುಗರಕ್ಕೊಳಗಾದ ಸಚಿವ ಬಿ.ಸಿ. ಪಾಟೀಲ್

ವಿಧಾನಸಭೆಯಲ್ಲಿ ಕೃಷಿ ಸಚಿವ ಬಿ.ಸಿ. ಪಾಟೀಲ್ ಮುಜುಗರಕ್ಕೆ ಒಳಗಾಗಿದ್ದಾರೆ. ಬೆಳೆ ಹಾನಿ ಪರಿಹಾರದ ಬಗ್ಗೆ ಮಾಹಿತಿ ನೀಡಲು ಹೋದ ಅವರು ಮುಜುಗರಕ್ಕೆ ಒಳಗಾಗಿದ್ದಾರೆ. ಬಾದಾಮಿ ಕ್ಷೇತ್ರದಲ್ಲಿ ಬೆಳೆ ಹಾನಿ ಪರಿಹಾರಕ್ಕೆ ಸಂಬಂಧಿಸಿದಂತೆ ಕ್ಷೇತ್ರದ ಶಾಸಕರಾದ ವಿಪಕ್ಷನಾಯಕ ಸಿದ್ದರಾಮಯ್ಯ ಮಾಹಿತಿ ಕೇಳಿದ್ದಾರೆ. ಮಾಹಿತಿ ಕೊಡಲು ಹೋಗಿ ಕೃಷಿ ಸಚಿವರು ಮುಜುಗರ ಎದುರಿಸಿದ್ದಾರೆ. ಮೊದಲು ನಾಳೆ ಮಾಹಿತಿ ಕೊಡುತ್ತೇನೆ ಎಂದು ಹೇಳಿದ ಬಿ.ಸಿ. ಪಾಟೀಲ್ ಅವರು, ಸ್ವಲ್ಪ ಹೊತ್ತಿನ ನಂತರ ಮಾಹಿತಿ ತಂದು …

Read More »

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಜನ್ಮದಿನ ಸರ್ಕಾರದಿಂದಲೇ ‘ಸ್ಪೂರ್ತಿ ದಿನ’ವಾಗಿ ಆಚರಣೆ

ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಜನ್ಮದಿನವನ್ನು ಸ್ಫೂರ್ತಿ ದಿನ ಎಂದು ಸರ್ಕಾರದ ವತಿಯಿಂದಲೇ ಆಚರಿಸಲಾಗುವುದು. ಈ ಕುರಿತಾಗಿ ಇಂಧನ ಸಚಿವ ಸುನಿಲ್ ಕುಮಾರ್ ಅವರು ಮಾಡಿದ ಮನವಿಗೆ ಸ್ಪಂದಿಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಅಪ್ಪು ಜನ್ಮದಿನವಾದ ಮಾರ್ಚ್ 17 ಇನ್ನು ಮುಂದೆ ಸ್ಪೂರ್ತಿ ದಿನವೆಂದು ಆಚರಿಸಲು ಒಪ್ಪಿಗೆ ಸೂಚಿಸಿದ್ದಾರೆ. ಈ ಮೂಲಕ ಅಪ್ಪು ಜನ್ಮದಿನ ನಾಡಿನ ಲಕ್ಷಾಂತರ ಯುವಕರಿಗೆ ಸ್ಫೂರ್ತಿಯಾಗಲಿದೆ.

Read More »

ಪ್ರಧಾನಿ ಮೋದಿ ಜನ್ಮದಿನಕ್ಕೆಂದೇ ಸಿದ್ಧವಾಯ್ತು ’56 ಇಂಚಿನ ಮೋದಿ ಜಿ’ ಥಾಲಿ.

ದೆಹಲಿ : ಸೆಪ್ಟೆಂಬರ್ 17 ರಂದು(ನಾಳೆ) ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನ. ಈ ವಿಶೇಷ ಸಂದರ್ಭದಲ್ಲಿ ದೆಹಲಿ ಮೂಲದ ರೆಸ್ಟೋರೆಂಟ್‌ನಲ್ಲಿ ವಿಶೇಷ ಥಾಲಿ(ವಿವಿಧ ಬಗೆರ ಆಹಾರಗಳನ್ನು ಒಳಗೊಂಡಿರುವ ಊಟ)ನ್ನು ನೀಡಲಿದೆ. ಅದರ ಹೆಸರು ʻ56 ಇಂಚಿನ ಮೋದಿಜಿʼ.   ದೆಹಲಿಯ ಕನ್ನಾಟ್ ಪ್ಲೇಸ್‌ನಲ್ಲಿರುವ ARDOR 2.1 ರೆಸ್ಟೊರೆಂಟ್ ಸುಮಾರು 56 ಬಗೆಯ ಆಹಾರಗಳನ್ನು ಹೊಂದಿರುವ ದೊಡ್ಡ ಗಾತ್ರದ ಥಾಲಿಯನ್ನು ನೀಡಲು ನಿರ್ಧರಿಸಿದೆ. ರೆಸ್ಟೋರೆಂಟ್ ಮಾಲೀಕ ಸುಮಿತ್ ಕಲ್ರಾ ಮಾತನಾಡಿ, …

Read More »

ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಗುಡ್ ನ್ಯೂಸ್ : ಶೀಘ್ರವೇ ಗ್ರಾ.ಪಂ.ಗಳಲ್ಲಿ ಖಾಲಿ ಇರುವ 326 ಪಿಡಿಒ, 625 SDA, 487 ಕಾರ್ಯದರ್ಶಿ ಹುದ್ದೆಗಳಿಗೆ ನೇಮಕಾತಿ

ಬೆಂಗಳೂರು : ಉದ್ಯೋಗಾಕಾಂಕ್ಷಿಗಳಿಗೆ ಸಿಎಂ ಬಸವರಾಜ ಬೊಮ್ಮಾಯಿ ಭರ್ಜರಿ ಸಿಹಿಸುದ್ದಿ ನೀಡಿದ್ದು, ಶೀಘ್ರವೇ ಗ್ರಾಮಪಂಚಾಯಿತಿಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲಾಗುವುದು ಎಂದು ತಿಳಿಸಿದ್ದಾರೆ.   ವಿಧಾನಪರಿಷತ್ ನಲ್ಲಿ ಈ ಕುರಿತು ಮಾಹಿತಿ ನೀಡಿರುವ ಸಿಎಂ ಬಸವರಾಜ ಬೊಮ್ಮಾಯಿ ಅವರು, ಗ್ರಾಮಪಂಚಾಯಿತಿಗಳಿಗೆ ಸರ್ಕಾರದ 30 ಕ್ಕೂ ಹೆಚ್ಚು ಇಲಾಖೆಗಳ ಕಾರ್ಯಕ್ರಮ, ಯೋಜನೆಗಳನ್ನು ಜಾರಿ ಮಾಡುವ ಜವಾಬ್ದಾರಿಗಳನ್ನು ನೀಡಲಾಗಿದೆ. ಹೀಗಾಗಿ ಕೆಲಸದ ಒತ್ತಡ ಕಡಿಮೆ ಮಾಡಲು 3-4 ತಿಂಗಳಲ್ಲಿ ಪಿಡಿಒ ಸೇರಿದಂತೆ …

Read More »

ಕರೆಂಟ್ ಹೋದಾಗ ಮಶೀನ್‍ಗಳೆಲ್ಲ ಬಂದ್ ಆದವು ಕೆಲವೇ ಕ್ಷಣಗಳಲ್ಲಿ ನನ್ನ ಮಗ ಸತ್ತು ಹೋದ”: ಬಳ್ಳಾರಿ: ವಿಮ್ಸ್​ ತೀವ್ರ ನಿಗಾ ಘಟಕದಲ್ಲಿದ್ದ 8 ವರ್ಷದ ಬಾಲಕ ಸಾವು

ಬಳ್ಳಾರಿ: ವಿಮ್ಸ್ ಆಸ್ಪತ್ರೆಯ ತೀವ್ರ ನಿಗಾ ಘಟಕಕ್ಕೆ ದಾಖಲಾಗಿದ್ದ 8 ವರ್ಷದ ಬಾಲಕ ಬುಧವಾರ ಬೆಳಗ್ಗೆ 10 ಗಂಟೆ ಸುಮಾರಿಗೆ ಮೃತಪಟ್ಟಿರುವುದು ತಡವಾಗಿ ಬೆಳಕಿಗೆ ಬಂದಿದೆ. ಸಿರುಗುಪ್ಪದ ಕೆ.ಮಹೇಶ್ ಹಾಗೂ ಈರಮ್ಮ ದಂಪತಿಯ ಪುತ್ರ ನಿಖಿಲ್ (8) ಮೃತ ಬಾಲಕ. ಡೆಂಗ್ಯೂ ಜ್ವರದಿಂದ ಬಳಲುತ್ತಿದ್ದ ಈತನನ್ನು ಸೆ.11ರಂದು ವಿಮ್ಸ್ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿತ್ತು. ಬುಧವಾರ ಸರಣಿ ಸಾವು ಪ್ರಕರಣ ಹೊರ ಬೀಳುತ್ತಿದ್ದಂತೆಯೇ ಈ ವಿಚಾರ ಗುರುವಾರ ಸಂಜೆಯ ವೇಳೆಗೆ ಬಹಿರಂಗವಾಗಿದೆ. …

Read More »

ಸಿಂಧುತ್ವ ಪ್ರಮಾಣಪತ್ರಕ್ಕೆ ಲಂಚ: ಉಪ ತಹಶೀಲ್ದಾರ್‌ ಬಂಧನ

ಬೆಂಗಳೂರು : ಜಮೀನಿನ ಒಡೆತನಕ್ಕೆ ಸಂಬಂಧಿಸಿದ ಸಿಂಧುತ್ವ ಪ್ರಮಾಣ ಪತ್ರ ನೀಡಲು ₹45,000 ಲಂಚ ಪಡೆಯುತ್ತಿದ್ದ ಬೆಂಗಳೂರು ಉತ್ತರ ತಾಲ್ಲೂಕು ಕಚೇರಿಯ ಉಪ ತಹಶೀಲ್ದಾರ್‌ ಪಿ.ಎಂ. ಶ್ರೀಕಾಂತ್‌ ಅವರನ್ನು ಲೋಕಾಯುಕ್ತ ಪೊಲೀಸರು ಗುರುವಾರ ಬಂಧಿಸಿದ್ದಾರೆ.   ರಘುಶಂಕರ್‌ ಎಬುವವರಯ ಯಶವಂತಪುರ ಹೋಬಳಿ ಕೊಡಿಗೆಹಳ್ಳಿಯಲ್ಲಿ ಹೊಂದಿರುವ ಜಮೀನನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಸ್ವಾಧೀನಪಡಿಸಿಕೊಂಡಿತ್ತು. ಈ ಜಮೀನಿನ ಬಾಬ್ತು ಪರಿಹಾರದ ಮೊತ್ತ ಪಡೆಯಲು ಜಮೀನು ಮಾಲೀಕರು ಸಿಂಧುತ್ವ ಪ್ರಮಾಣಪತ್ರ ಸಲ್ಲಿಸಬೇಕಿತ್ತು. ಇದಕ್ಕಾಗಿ ಸಿಂಧುತ್ವ …

Read More »

ಅಭಯ್ ಪಾಟೀಲ್ ಸುಳ್ಳು ಕೇಸ್‍ನಲ್ಲಿ ನನ್ನ ಸಿಲುಕಿಸಲು ಪ್ರಯತ್ನಿಸುತ್ತಿದ್ದಾರೆ: ಸುಜೀತ್ ಮುಳಗುಂದ ಆರೋಪ

ಬೆಳಗಾವಿ ದಕ್ಷಿಣ ಶಾಸಕ ಅಭಯ್ ಪಾಟೀಲ್ ಖೊಟ್ಟಿ ಪ್ರಕರಣದಲ್ಲಿ ನನ್ನನ್ನು ಸಿಲುಕಿಸುವ ಪ್ರಯತ್ನ ನಡೆಸಿದ್ದಾರೆ. ಹೀಗಾಗಿ ನನಗೆ ಸೂಕ್ತ ರಕ್ಷಣೆ ನೀಡುವಂತೆ ಸಾಮಾಜಿಕ ಕಾರ್ಯಕರ್ತ ಸುಜೀತ್ ಮುಳಗುಂದ ನಗರ ಪೊಲೀಸ್ ಆಯುಕ್ತರಿಗೆ ಪತ್ರ ಬರೆದಿದ್ದಾರೆ. ಹೌದು 2012ರಲ್ಲಿ ಶಾಸಕ ಅಭಯ್ ಪಾಟೀಲ್ ವಿರುದ್ಧ ಕಾನೂನು ಬಾಹಿರವಾಗಿ ಆಸ್ತಿ ಗಳಿಸಿದ ಕುರಿತು ಲೋಕಾಯುಕ್ತ ನ್ಯಾಯಾಲಯದಲ್ಲಿ ಸಾಮಾಜಿಕ ಕಾರ್ಯಕರ್ತ ಸುಜೀತ್ ಮುಳಗುಂದ ದೂರು ನೀಡಿದ್ದಾರೆ. ಇದರಿಂದ ಶಾಸಕ ಅಭಯ್ ಪಾಟೀಲ್ ಸುಮಾರು ಬಾರಿ …

Read More »

‘ಸಚಿವ ಡಾ.ಕೆ ಸುಧಾಕರ್’ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲು

ಬೆಂಗಳೂರು: ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ ಸುಧಾಕರ್ ( Minister Dr K Sudhakar ) ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿರೋದಾಗಿ ತಿಳಿದು ಬಂದಿದೆ.   ಈ ಕುರಿತಂತೆ ಟ್ವಿಟ್ಟರ್ ನಲ್ಲಿ ಮಾಹಿತಿ ಹಂಚಿಕೊಂಡಿರುವಂತ ಅವರು, ಅನಾರೋಗ್ಯ ಹಿನ್ನೆಲೆಯಲ್ಲಿ ವೈದ್ಯರು ಕೆಲ ದಿನಗಳ ವಿಶ್ರಾಂತಿಗೆ ಸೂಚಿಸಿದ್ದಾರೆ. ಈ ಕಾರಣಕ್ಕಾಗಿ ಸದನದ ಕಲಾಪದಲ್ಲಿ ಭಾಗವಹಿಸಲು ಸಾಧ್ಯವಾಗದೇ ಇರುವುದಕ್ಕೆ ವಿಷಾದವಿದೆ. ಆದಷ್ಟು ಶೀಘ್ರದಲ್ಲೇ ಕರ್ತವ್ಯಕ್ಕೆ ಹಾಜರಾಗುತ್ತೇನೆ. ನಿಮ್ಮ ಹಾರೈಕೆ ಇರಲಿ ಎಂದು …

Read More »