Home / ರಾಜಕೀಯ / ಪ್ರಧಾನಿ ಮೋದಿ ಜನ್ಮದಿನಕ್ಕೆಂದೇ ಸಿದ್ಧವಾಯ್ತು ’56 ಇಂಚಿನ ಮೋದಿ ಜಿ’ ಥಾಲಿ.

ಪ್ರಧಾನಿ ಮೋದಿ ಜನ್ಮದಿನಕ್ಕೆಂದೇ ಸಿದ್ಧವಾಯ್ತು ’56 ಇಂಚಿನ ಮೋದಿ ಜಿ’ ಥಾಲಿ.

Spread the love

ದೆಹಲಿ : ಸೆಪ್ಟೆಂಬರ್ 17 ರಂದು(ನಾಳೆ) ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನ. ಈ ವಿಶೇಷ ಸಂದರ್ಭದಲ್ಲಿ ದೆಹಲಿ ಮೂಲದ ರೆಸ್ಟೋರೆಂಟ್‌ನಲ್ಲಿ ವಿಶೇಷ ಥಾಲಿ(ವಿವಿಧ ಬಗೆರ ಆಹಾರಗಳನ್ನು ಒಳಗೊಂಡಿರುವ ಊಟ)ನ್ನು ನೀಡಲಿದೆ. ಅದರ ಹೆಸರು ʻ56 ಇಂಚಿನ ಮೋದಿಜಿʼ.

Image

 

ದೆಹಲಿಯ ಕನ್ನಾಟ್ ಪ್ಲೇಸ್‌ನಲ್ಲಿರುವ ARDOR 2.1 ರೆಸ್ಟೊರೆಂಟ್ ಸುಮಾರು 56 ಬಗೆಯ ಆಹಾರಗಳನ್ನು ಹೊಂದಿರುವ ದೊಡ್ಡ ಗಾತ್ರದ ಥಾಲಿಯನ್ನು ನೀಡಲು ನಿರ್ಧರಿಸಿದೆ.

ರೆಸ್ಟೋರೆಂಟ್ ಮಾಲೀಕ ಸುಮಿತ್ ಕಲ್ರಾ ಮಾತನಾಡಿ, ನಾನು ಪ್ರಧಾನಿ ಮೋದಿಯನ್ನು ಗೌರವಿಸುತ್ತೇನೆ. ಅವರು ನಮ್ಮ ದೇಶದ ಹೆಮ್ಮೆ. ಅವರ ಹುಟ್ಟುಹಬ್ಬದಂದು ಅವರಿಗೆ ಏನಾದರೂ ವಿಶೇಷವಾದದ್ದನ್ನು ನೀಡಬೇಕೆಂದು ಬಯಸಿದ್ದರಿಂದ ನಾವು ಈ ಥಾಲಿಯನ್ನು ಸಿದ್ಧಪಡಿಸಿದ್ದೇವೆ.

ಗ್ರಾಹಕರು ಸಸ್ಯಾಹಾರಿ ಮತ್ತು ಮಾಂಸಾಹಾರಿ ಆಯ್ಕೆಗಳನ್ನು ಹೊಂದಿರುತ್ತಾರೆ. ಇದು 56 ವಸ್ತುಗಳನ್ನು ಒಳಗೊಂಡಿದೆ. ಪ್ರಧಾನಿಯವರೇ ಇಲ್ಲಿಗೆ ಬಂದು ಊಟ ಮಾಡಬೇಕು ಎಂದು ನಾವು ಬಯಸಿದ್ದರೂ, ಭದ್ರತಾ ಕಾರಣಗಳಿಂದ ಅದು ಸಾಧ್ಯವಾಗಲಿಲ್ಲ. ಆದರೆ, ಅವರ ಅಭಿಮಾನಿಗಳು ಇಲ್ಲಿಗೆ ಬಂದು ಊಟ ಸವಿಯಬಹುದು ಎಂದಿದ್ದಾರೆ.

ಈ ವಿಶೇಷ ಥಾಲಿಯು ಗ್ರಾಹಕರಿಗೆ ಬಹುಮಾನಗಳನ್ನು ಗೆಲ್ಲುವ ಅವಕಾಶವನ್ನು ಒದಗಿಸುತ್ತದೆ. ‘ಹೌದು, ನಾವು ಈ ಥಾಲಿಯೊಂದಿಗೆ ಕೆಲವು ಬಹುಮಾನಗಳನ್ನು ನೀಡಲು ನಿರ್ಧರಿಸಿದ್ದೇವೆ. ದಂಪತಿಗಳಲ್ಲಿ ಯಾರಾದರೂ ಈ ಥಾಲಿಯನ್ನು 40 ನಿಮಿಷಗಳಲ್ಲಿ ಮುಗಿಸಿದರೆ, ನಾವು ಅವರಿಗೆ 8.5 ಲಕ್ಷ ರೂಪಾಯಿಗಳನ್ನು ನೀಡುತ್ತೇವೆ ಎಂದಿದ್ದಾರೆ.


Spread the love

About Laxminews 24x7

Check Also

ಬಂಧನ್‌ ಬ್ಯಾಂಕ್‌ನಲ್ಲಿದೆ ಉದ್ಯೋಗಾವಕಾಶ; ದ್ವಿತೀಯು ಪಿಯು ಪಾಸಾದವರೂ ಅಪ್ಲೈ ಮಾಡಿ

Spread the love ಬೆಂಗಳೂರು: ಬ್ಯಾಂಕ್‌ ಉದ್ಯೋಗಕ್ಕಾಗಿ(Bank Job) ಹುಡುಕಾಟ ನಡೆಸುತ್ತಿದ್ದೀರಾ? ಹಾಗಾದರೆ ಇಲ್ಲಿದೆ ಗೋಲ್ಡನ್‌ ಚಾನ್ಸ್‌. ಭಾರತದ ಪ್ರಮುಖ ಖಾಸಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ