Breaking News
Home / ರಾಜಕೀಯ (page 359)

ರಾಜಕೀಯ

ಕಾಂಗ್ರೆಸ್​ ಕಾರ್ಯಕರ್ತೆಯ ಅವಹೇಳನ ಆರೋಪ; ಸೂಲಿಬೆಲೆ ವಿರುದ್ಧ ಎಫ್​ಐಆರ್​

ಶಿವಮೊಗ್ಗ : ಸಾಮಾಜಿಕ ಜಾಲತಾಣದಲ್ಲಿ ಚಿಂತಕ ಚಕ್ರವರ್ತಿ ಸೂಲಿಬೆಲೆ ಅವರು ಅವಹೇಳನಕಾರಿ ಕಾಮೆಂಟ್ ಮಾಡಿದ್ದಾರೆ ಎಂದು ಕೆಪಿಸಿಸಿ ಸಾಮಾಜಿಕ ಜಾಲತಾಣದ ಉಪಾಧ್ಯಕ್ಷೆ ಸೌಗಂಧಿಕ ರಘುನಾಥ್ ಅವರು ಆರೋಪಿಸಿ ದೂರು ನೀಡಿದ್ದರು. ಈ ದೂರಿನ ಮೇರೆಗೆ ಸೂಲಿಬೆಲೆ ವಿರುದ್ಧ ವಿನೋಬಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದೆ ತಿಂಗಳ 23 ರಂದು ಚಂದ್ರಯಾನ -3 ಯಶಸ್ವಿಗೆ ಪೂಜೆ ಮಾಡಿಸಿ ಫೋಟೋ ಹಾಕಿ ಎಂದು ಪೋಸ್ಟ್ ಹಾಕಿದ್ದ ಸೂಲಿಬೆಲೆ ಪೋಸ್ಟ್​ಗೆ ಸೌಗಂಧಿಕ ರಘುನಾಥ್ …

Read More »

ಯಾದಗಿರಿ: ಕಲುಷಿತ ನೀರು ಸೇವಿಸಿ ಮಕ್ಕಳು ಸೇರಿ 24 ಜನರು ಅಸ್ವಸ್ಥ

ಯಾದಗಿರಿ: ಕಲುಷಿತ ನೀರು ಸೇವಿಸಿ 22 ಮಕ್ಕಳು, ಇಬ್ಬರು ವಯಸ್ಕರು ಅಸ್ವಸ್ಥಗೊಂಡಿರುವ ಘಟನೆ ಜಿಲ್ಲೆಯ ಸುರಪುರ ತಾಲೂಕಿನ ಚಿಕ್ಕನಹಳ್ಳಿ ಗ್ರಾಮದಲ್ಲಿ ಇಂದು ನಡೆದಿದೆ. ಅಸ್ವಸ್ಥರನ್ನು ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಗ್ರಾಮಸ್ಥರಾದ ಯಲ್ಲಪ್ಪ ಛಲುವಾದಿ ಮಾತನಾಡಿ, “ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಯ ಎದುರಿನ ಕೈ ಪಂಪ್ (ಕೊಳವೆಬಾವಿ) ನೀರನ್ನು ಬಿಸಿಯೂಟ ಸೇವಿಸಿದ ಬಳಿಕ ಮಕ್ಕಳು ತಟ್ಟೆ ತೊಳೆಯಲು ಮತ್ತು ಕುಡಿಯಲು ಬಳಸಿದ್ದಾರೆ. ಇದರಿಂದಾಗಿ ಅಸ್ವಸ್ಥಗೊಂಡಿರುವ ಅನುಮಾನವಿದೆ” ಎಂದು ಶಂಕೆ ವ್ಯಕ್ತಪಡಿಸಿದರು. …

Read More »

ಇಂಡೋನೇಷ್ಯಾದ ಬಾಲಿ, ಜಾವಾ ದ್ವೀಪಗಳಲ್ಲಿ ಪ್ರಬಲ ಭೂಕಂಪ: ಯಾವುದೇ ಸಾವು- ನೋವುಗಳು ವರದಿಯಾಗಿಲ್ಲ

ಡೆನ್‌ಪಾಸರ್ (ಇಂಡೋನೇಷ್ಯಾ): ಇಂಡೋನೇಷ್ಯಾದ ರೆಸಾರ್ಟ್ ದ್ವೀಪವಾದ ಬಾಲಿ ಮತ್ತು ದೇಶದ ಇತರ ಭಾಗಗಳಲ್ಲಿ ಮಂಗಳವಾರ ಪ್ರಬಲ ಭೂಕಂಪ ಸಂಭವಿಸಿದೆ. ಭೂಮಿ ಕಂಪಿಸಿದ್ದರಿಂದ ಜನರು ಭಯಭೀತರಾಗಿದ್ದಾರೆ. ಆದರೆ, ಸದ್ಯ ಯಾವುದೇ ಸಾವುನೋವಿನ ಕುರಿತು ವರದಿಯಾಗಿಲ್ಲ. 513.5 ಕಿಲೋಮೀಟರ್ ಆಳದಲ್ಲಿ 7.1 ತೀವ್ರತೆಯ ಭೂಕಂಪ ಸಂಭಸಿದೆ. ಬಾಲಿಯ ಪಕ್ಕದಲ್ಲಿರುವ ಲೊಂಬಾಕ್ ದ್ವೀಪದ ಕರಾವಳಿಯ ಸಮೀಪವಿರುವ ಸಣ್ಣ ದ್ವೀಪವಾದ ಗಿಲಿ ಏರ್‌ನಿಂದ ಈಶಾನ್ಯಕ್ಕೆ 181 ಕಿಲೋಮೀಟರ್ ದೂರದಲ್ಲಿ ಭೂಕಂಪನದ ಪಾಯಿಂಟ್​ ಇದೆ ಎಂದು ಅಮೆರಿಕದ ಜಿಯೋಲಾಜಿಕಲ್ …

Read More »

ಸಚಿವ ಜಮೀರ್ ಅಹಮದ್ ಖಾನ್ ಮದರಸಾಗಳಲ್ಲಿ ಮುಖ್ಯವಾಗಿ ಕನ್ನಡ ಕಲಿಸಬೇಕೆಂದು ನಿರ್ದೇಶನ ನೀಡಿದ್ದಾರೆ.

ಬೆಂಗಳೂರು: ಮದರಸಾಗಳಲ್ಲಿ ಕಡ್ಡಾಯವಾಗಿ ಕನ್ನಡ ಕಲಿಸುವಂತೆ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಜಮೀರ್ ಅಹಮದ್ ಖಾನ್ ಸೂಚನೆ ನೀಡಿದ್ದಾರೆ. ಅಲ್ಪಸಂಖ್ಯಾತರ ಕಲ್ಯಾಣ ನಿರ್ದೇಶನಾಲಯ ಸಭಾಂಗಣದಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಪ್ರಗತಿ ಪರಿಶೀಲನೆ ಸಭೆಯಲ್ಲಿ ಪಾಲ್ಗೊಂಡು ಸಚಿವರು ಮಾತನಾಡಿದರು. ಮದರಸಾಗಳಲ್ಲಿ ಪ್ರಮುಖವಾಗಿ ಕನ್ನಡ ಕಡ್ಡಾಯವಾಗಿ ಕಲಿಸಲೇಬೇಕು. ಉಳಿದಂತೆ ಇಂಗ್ಲಿಷ್ ಸೇರಿ ಇತರ ಭಾಷೆ ಕಲಿಸಲು ಕ್ರಮ ಕೈಗೊಳ್ಳಿ ಎಂದು ನಿರ್ದೇಶನ ನೀಡಿದರು. ರಾಜ್ಯದಲ್ಲಿ 1265 ವಕ್ಫ್ ಮಂಡಳಿಯಲ್ಲಿ ನೋಂದಣಿಯಾದ ಮದರಸಾಗಳಿದ್ದು, ಆ ಪೈಕಿ 100 …

Read More »

ರಾಜ್ಯದಲ್ಲಿ ಬರದ ಛಾಯೆ ಕರುನಾಡಿಗೆ ಬರದ ತೂಗುಗತ್ತಿ: ವಿದ್ಯುತ್ ಬಳಕೆ ಗಣನೀಯ ಏರಿಕೆ, ಉತ್ಪಾದನೆ ಕುಸಿತ

ಬೆಂಗಳೂರು: ರಾಜ್ಯದಲ್ಲಿ ಬರದ ಛಾಯೆ ಗಾಢವಾಗಿದ್ದು, ಒಂದೆಡೆ ಜಲಾಶಯಗಳ ನೀರಿನ ಮಟ್ಟ ಇಳಿಕೆಯಾಗಿದೆ. ವಿದ್ಯುತ್ ಉತ್ಪಾದನೆ ಕುಸಿತ ಕಂಡಿದೆ. ಇನ್ನೊಂದೆಡೆ ರಾಜ್ಯದ ವಿದ್ಯುತ್ ಬಳಕೆ ತಾರಕ್ಕೇರಿರುವುದು ಇಂಧನ ಇಲಾಖೆಗೆ ತಲೆ ನೋವಾಗಿ ಪರಿಣಮಿಸಿದೆ. ರಾಜ್ಯದಲ್ಲಿ ಬರದ ಕರಿ ನೆರಳು ದಟ್ಟವಾಗಿ ವ್ಯಾಪಿಸಿದೆ. ಮುಂಗಾರು ಮಳೆ ಕೈ ಕೊಟ್ಟಿದೆ. ವಾಡಿಕೆಯಂತೆ ಜುಲೈ ಹಾಗೂ ಆಗಸ್ಟ್​ನಲ್ಲಿ ರಾಜ್ಯದಲ್ಲಿ ಹೆಚ್ಚು ಮಳೆಯಾಗುತ್ತೆ. ಆದರೆ, ಈ ಬಾರಿ ವಾಡಿಕೆ ಮಳೆಯೂ ಕೈಕೊಟ್ಟಿದೆ. ಹೀಗಾಗಿ ರಾಜ್ಯದ ಸುಮಾರು 130ಕ್ಕೂ …

Read More »

ಆಗಸದಲ್ಲಿ ನಿಂತ ಮಗುವಿನ ಉಸಿರು.. ಬೆಂಗಳೂರು – ದೆಹಲಿ ವಿಮಾನ ತುರ್ತು ಭೂಸ್ಪರ್ಶ.. ಕಂದಮ್ಮನ ಪಾಲಿಗೆ ದೇವರಾದ ವೈದ್ಯರು..

ವೈದ್ಯಕೀಯ ತುರ್ತು ಪರಿಸ್ಥಿತಿಯಿಂದಾಗಿ ಬೆಂಗಳೂರು ನವದೆಹಲಿ ವಿಮಾನವನ್ನು ಭಾನುವಾರ ತಡರಾತ್ರಿ ನಾಗಪುರ ವಿಮಾನ ನಿಲ್ದಾಣದಲ್ಲಿ ಎಮರ್ಜೆನ್ಸಿ ಲ್ಯಾಂಡಿಂಗ್​​ ಮಾಡಲಾಗಿದೆ ಎಂದು ವಿಮಾನ ನಿಲ್ದಾಣದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ನಾಗಪುರ, ಮಹಾರಾಷ್ಟ್ರ: ವೈದ್ಯಕೀಯ ತುರ್ತು ಪರಿಸ್ಥಿತಿಯಿಂದಾಗಿ ಬೆಂಗಳೂರಿನಿಂದ ನವದೆಹಲಿಗೆ ತೆರಳಬೇಕಿದ್ದ ವಿಸ್ತಾರಾ ವಿಮಾನವನ್ನು ನಾಗಪುರನಲ್ಲಿ ಎಮೆರ್ಜೆನ್ಸಿ ಲ್ಯಾಂಡಿಂಗ್​ ಮಾಡಲಾಗಿತ್ತು. ವಿಮಾನದಲ್ಲಿ 14 ತಿಂಗಳ ಮಗುವಿನ ಹೃದಯ ಸಮಸ್ಯೆ ಇದ್ದು, ಆಕೆಯ ಆರೋಗ್ಯ ಹಠಾತ್ ಹದಗೆಟ್ಟ ಕಾರಣ ವಿಮಾನದಲ್ಲಿದ್ದ ವೈದ್ಯರು ತಕ್ಷಣವೇ ಮಗುವನ್ನು ಆಸ್ಪತ್ರೆಗೆ ಕರೆದೊಯ್ಯುಬೇಕಾಗಿದೆ …

Read More »

ಹೆತ್ತ ಅಮ್ಮನನ್ನೇ ಕೊಂದನಾ ಕುಡುಕ ಮಗ?

ಶಿವಮೊಗ್ಗ: ತಾಯಿಯನ್ನು ಕಣ್ಣಿಗೆ ಕಾಣುವ ದೇವರು ಎಂದು ಕರೆಯುತ್ತಾರೆ. ಆದರೆ, ಇಂತಹ ದೇವರನ್ನೇ ಹೆತ್ತ ಮಗನೊಬ್ಬ ಕೊಂದಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ. ಭದ್ರಾವತಿ ಪಟ್ಟಣದ ಹೊಸಮನೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಮಾವಿನಕೆರೆ ಕಾಲೋನಿ ‌ನಿವಾಸಿ ಸುಲೋಚನಮ್ಮ ಮೃತರು. ಆಕೆಯ ಮಗ ಸಂತೋಷ್​ ಕೊಲೆ ಆರೋಪಿ. ಕುಡಿದ ಮತ್ತಿನಲ್ಲಿ ಭಾನುವಾರ ರಾತ್ರಿ ಸಂತೋಷ್​ ತನ್ನ ತಾಯಿಯನ್ನು ಬಡಿಗೆಯಿಂದ ತಲೆಗೆ ಹೊಡೆದು ಹತ್ಯೆ ಮಾಡಿದ್ದಾನೆ. ಬಳಿಕ ತೋಟದಲ್ಲಿ ಮಲಗಿ …

Read More »

ಕಾರವಾರ: ಮೀನುಗಾರರ ಬಲೆಗೆ ಬಿದ್ದ 48 ಸೆ.ಮೀ ಉದ್ದ, 1.2 ಕೆಜಿ ತೂಕದ ಬಂಗುಡೆ!

ಕಾರವಾರ : ಭಾರತದಲ್ಲಿ ಇದುವರೆಗೆ ಪತ್ತೆಯಾದ ಬಂಗುಡೆ ಮೀನುಗಳಲ್ಲಿ ಅತಿ ದೊಡ್ಡದು ಹಾಗೂ ಉದ್ದವಿರುವ ಬಂಗುಡೆ ಮೀನೊಂದು ಕಾರವಾರದ ಅರಬ್ಬಿ ಸಮುದ್ರದಲ್ಲಿ ಮೀನುಗಾರರ ಬಲೆಗೆ ಬಿದ್ದಿದೆ. ನೋಡಲು ಜನರು ಮುಗಿಬಿದ್ದರು. ಆಳ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿದ್ದ ಆನಂದು ರಾಮಾ ಹರಿಕಂತ್ರ ಅವರಿಗೆ ಸೇರಿದ, ಎಂ.ಐ. ಇಂಜಿನ್​ ಹೊಂದಿದ ಪಾತಿ ದೋಣಿಯ ಬೀಡು ಬಲೆಗೆ ಮೀನು ಬಿದ್ದಿದೆ. ಈ ಬಂಗುಡೆ 48 ಸೆಂ.ಮೀ ಉದ್ದವಿದ್ದು, ಸುಮಾರು 12 ಸೆಂ.ಮೀ ಅಗಲವಿದೆ. 1.2 ಕೆ.ಜಿ …

Read More »

ಕೋವಿಡ್ ಅಕ್ರಮ ತನಿಖೆಗೆ ಆಯೋಗ ರಚನೆ ಹಿಂದೆ ದುರುದ್ದೇಶವಿದೆ: ಸುಧಾಕರ್ ಕಿಡಿ

ಬೆಂಗಳೂರು: ಕೋವಿಡ್ ವೇಳೆ ಔಷಧ ಸಾಮಗ್ರಿಗಳ ಖರೀದಿಯಲ್ಲಿ ಅವ್ಯವಹಾರ ತನಿಖೆಗೆ ನಿವೃತ್ತ ನ್ಯಾಯಾಧೀಶರ ನೇತೃತ್ವದ ತನಿಖಾ ಆಯೋಗ ರಚನೆ ರಾಜಕೀಯ ಪ್ರೇರಿತವಾಗಿದೆ. ಈ ತನಿಖೆಗೆ ಆದೇಶ ನೀಡಿರುವುದರ ಹಿಂದೆ ದುರುದ್ದೇಶ ಇದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಇಲಾಖೆಯ ಮಾಜಿ ಸಚಿವ ಡಾ. ಕೆ.ಸುಧಾಕರ್ ಆರೋಪಿಸಿದ್ದಾರೆ. ಸದಾಶಿವನಗರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕೋವಿಡ್ ನಿರ್ವಹಣೆ ವೇಳೆ ನಡೆದಿರುವ ಔಷಧ, ಪರಿಕರ ಇತ್ಯಾದಿ ಖರೀದಿ, ಆಮ್ಲಜನಕ ಕೊರತೆಯಿಂದ ಸಂಭವಿಸಿದ ಸಾವಿನ ಕುರಿತು …

Read More »

ರಾಜ್ಯದೆಲ್ಲೆಡೆ ಟೊಮೆಟೊ ದರಗಳಲ್ಲಿ ಗಣನೀಯ ಪ್ರಮಾಣದ ಇಳಿಕೆ ಕಂಡು ಬಂದಿದೆ.

ಬೆಂಗಳೂರು : ಸುಮಾರು ಒಂದೂವರೆ, ಎರಡು ತಿಂಗಳ ಕಾಲ ಕೆ.ಜಿಗೆ 100 ರಿಂದ 150 ರೂಪಾಯಿಯಿದ್ದ ಟೊಮೆಟೊ ಬೆಲೆ ಇದೀಗ 20 ರೂ.ಗೆ ಕುಸಿದಿದೆ. ನಗರದ ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದಲ್ಲಿ ಬೆಳೆ ಬರುತ್ತಿದ್ದು, ದರ ಇಳಿಕೆಯಾಗಿದೆ ಎಂದು ವರ್ತಕರು ತಿಳಿಸಿದ್ದಾರೆ.   ಆಂಧ್ರಪ್ರದೇಶದ ಮಾರುಕಟ್ಟೆಯಿಂದ ಯಥೇಚ್ಛವಾಗಿ ಟೊಮೆಟೊ ಪೂರೈಕೆಯಾಗುತ್ತಿದೆ. ಬೆಂಗಳೂರು ರಾಮನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರದಿಂದ ಬರುವ ಟೊಮೆಟೊ ಪ್ರಮಾಣವೂ ಹೆಚ್ಚಾಗಿದೆ. ಎಪಿಎಂಸಿ ಮಾರುಕಟ್ಟೆಯಲ್ಲಿ 15 ಕೆ.ಜಿ ನಾಟಿ ಟೊಮೆಟೊ ಬಾಕ್ಸ್ …

Read More »