Breaking News
Home / ರಾಜಕೀಯ (page 380)

ರಾಜಕೀಯ

ರಾಜ್ಯದ 9 ಜಿಲ್ಲೆಯ 14 ಅಧಿಕಾರಿಗಳ ಮೇಲೆ ಲೋಕಾಯುಕ್ತ ದಾಳಿ: ಯಾರ ಮನೆಯಲ್ಲಿ ಎಷ್ಟು ಆಸ್ತಿ ಪತ್ತೆ?

ಬೆಂಗಳೂರು: ಅಕ್ರಮ ಆಸ್ತಿ ಸಂಪಾದನೆ ಅಪಾದನೆ ಹಿನ್ನೆಲೆ ಗುರುವಾರ ರಾಜ್ಯದ 9 ಜಿಲ್ಲೆಯ 14 ಸರ್ಕಾರಿ ಅಧಿಕಾರಿಗಳ ನಿವಾಸ ಮತ್ತು ಕಚೇರಿ ಸೇರಿ 45ಕ್ಕೂ ಹೆಚ್ಚು ಕಡೆಗಳಲ್ಲಿ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ದಾಖಲೆಗಳು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಅಧಿಕಾರಿಗಳು ಅಪಾರ ಪ್ರಮಾಣದ ನಗದು ಹಾಗೂ ಆಸ್ತಿ-ಪಾಸ್ತಿ ಪತ್ತೆಯಾಗಿದೆ. ಬೆಂಗಳೂರು, ತುಮಕೂರು, ಮೈಸೂರು, ಕೊಡಗು, ದಾವಣಗೆರೆ, ಚಿತ್ರದುರ್ಗ,ಧಾರವಾಡ, ಬೀದರ್, ಕೊಪ್ಪಳದಲ್ಲಿ ಏಕಕಾಲದಲ್ಲಿ ದಾಳಿ ನಡೆಸಿ ಪರಿಶೀಲನೆ ನಡೆಸಿದರು. 45ಕ್ಕೂ ಹೆಚ್ಚು …

Read More »

ಯಾರೂ ಬಿಜೆಪಿ ಬಿಡುವುದಿಲ್ಲ: ಬೊಮ್ಮಾಯಿ

ಬೆಂಗಳೂರು: ಕಾವೇರಿ ‌ನೀರು ಉಳಿಸಿಕೊಳ್ಳಲು ರೈತರು ಸುಪ್ರೀಂ ಕೊರ್ಟ್ ಗೆ ಹೋಗುವುದಾದರೆ ನೀವೇಕೆ ಅಧಿಕಾರದಲ್ಲಿದ್ದೀರಿ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಡಿಸಿಎಂ ಡಿ.ಕೆ. ಶಿವಕುಮಾರ್ ಅವರನ್ನು ಪ್ರಶ್ನಿಸಿದ್ದಾರೆ. ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಿನ್ನೆ ಡಿಸಿಎಂ ಡಿಕೆ‌ ಶಿವಕುಮಾರ್ ಅವರು ಬೀಗದ ಕೈ ನಮ್ಮ ಕಡೆ ಇಲ್ಲ ಅಂತ ಹೇಳಿದ್ದಾರೆ. ನಮ್ಮ ರಾಜ್ಯದ ಹಕ್ಕಿದೆ ಡ್ಯಾಮ್ ನಮ್ಮಲಿದೆ ನಮ್ಮ ಹಕ್ಕನ ಇವರು ಬಿಟ್ಟು ಕೊಡುತ್ತಿದ್ದಾರೆ. ಇದರ ಬಗ್ಗೆ ಅವರಿಗೆ …

Read More »

ನಿನ್ನೆ ಸಂಜೆ ಗ್ಯಾಸ್ ಲೀಕ್ 18 ಗಂಟೆ ನಂತರ ಆ ರಸ್ತೆ ಮೂಲಕ ವಾಹನ ಸಂಚಾರ ಪುನರಾರಂಭವಾಗಿದೆ.

ಧಾರವಾಡ ಹೈಕೋರ್ಟ್‌ ಪೀಠದ ಎದುರಿಗೆ ಇರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿನ್ನೆ ಸಂಜೆ ಗ್ಯಾಸ್ ಲೀಕ್ ಆಗಿದ್ದ ವಾಹನವನ್ನು ಅಗ್ನಿಶಾಮಕ ದಳ ಹಾಗೂ ಪೊಲೀಸರು ಯಶಸ್ವಿಯಾಗಿ ತೆರವುಗೊಳಿಸಿದ್ದು, 18 ಗಂಟೆ ನಂತರ ಆ ರಸ್ತೆ ಮೂಲಕ ವಾಹನ ಸಂಚಾರ ಪುನರಾರಂಭವಾಗಿದೆ. ಗ್ಯಾಸ್ ಸಿಲಿಂಡರ್ ವಾಹನ ಬ್ರಿಡ್ಜ್ ದಾಟುತ್ತಿದ್ದ ವೇಳೆ ಬ್ರಿಡ್ಜ್‌ಗೆ ತಾಗಿ ಗ್ಯಾಸ್ ಲೀಕ್ ಆಗಿತ್ತು. ಕೂಡಲೇ ಅಗ್ನಿಶಾಮಕ ದಳದವರು ಸ್ಥಳಕ್ಕೆ ಧಾವಿಸಿ ಆ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ನಿಷೇಧ ಹೇರಿದ್ದರು. …

Read More »

ಕಸ ವಿಲೇವಾರಿಗೆ ಸಹಕರಿಸಲು ಸಾರ್ವಜನಿಕರಿಗೆ ಪಾಲಿಕೆ ಆಯುಕ್ತ ಅಶೋಕ ದುಡಗುಂಟೆ ಮನವಿ

ಬೆಳಗಾವಿ,  ಸಾರ್ವಜನಿಕರು ತಮ್ಮಲ್ಲಿ ಉತ್ಪತ್ತಿಯಾಗುವ ದೈನಂದಿನ ತ್ಯಾಜ್ಯವನ್ನು ಹಸಿ ಕಸ, ಒಣ ಕಸ & ಅಪಾಯಕಾರಿ ತ್ಯಾಜ್ಯವೆಂದು ಬೇರ್ಪಡಿಸಿ ಕಸ ಸಂಗ್ರಹಣಕಾರರಿಗೆ ನೀಡುವುದರೊಂದಿಗೆ ಬೆಳಗಾವಿ ನಗರವನ್ನು ಸ್ವಚ್ಛ ನಗರವನ್ನಾಗಿಸುವಲ್ಲಿ ಹಾಗೂ ಘನತ್ಯಾಜ್ಯ ವಸ್ತು ವಿಲೇವಾರಿ ನಿಯಮ 2016 ನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲು ಸಹಕರಿಸಬೇಕು ಎಂದು ಪಾಲಿಕೆ ಆಯುಕ್ತರಾದ ಅಶೋಕ ದುಡಗುಂಟಿ ಅವರು ತಿಳಿಸಿದ್ದಾರೆ. ಮಹಾನಗರ ಪಾಲಿಕೆ ವತಿಯಿಂದ ಮನೆ-ಮನೆ ಕಸ ಸಂಗ್ರಹಣೆ ಕುರಿತು ವಾರ್ಡವಾರು ಅವಶ್ಯಕತೆಯನುಸಾರ ಬೆಳಿಗ್ಗೆ ರಹವಾಸಿ ಪ್ರದೇಶಗಳಲ್ಲಿ …

Read More »

ಎರಡು ಇಲೇಕ್ಟಿಕಲ್ ಅಂಗಡಿ ಕಳ್ಳತನ ಪ್ರಕರಣ ವರದಿ ಆರೋಪಿತನ ಬಂಧನ

ಮುರಗೋಡ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಇತ್ತಿಚೆಗೆ ಎರಡು ಇಲೇಕ್ಟಿಕಲ್ ಅಂಗಡಿ ಕಳ್ಳತನ ಪ್ರಕರಣ ವರದಿಯಾಗಿದ್ದು, ಈ ಬಗ್ಗೆ ಮುರಗೋಡ ಪೋಲಿಸರು ತನಿಖೆ ಕೈಗೊಂಡು ಪ್ರಕರಣವನ್ನು ಬೇದಿಸಿ, ಕಳ್ಳತನ ಮಾಡಿದವರನ್ನು ಬಂದಿಸಿ ಅವರಿಂದ ಇಲೇಕ್ಟಿಕಲ್ ಅಂಗಡಿ ಕಳ್ಳತನಕ್ಕೆ ಸಂಬಂದ ಪಟ್ಟ 45,000/- ರೂಪಾಯಿ ಕೃತ್ಯಕ್ಕೆ ಉಪಯೋಗಿಸಿದ ಅಷ್ಟೇ ಗೂಡ್ಡ ಗಾಡಿಯನ್ನು ಹಿರೋ ಸ್ಟೇಂಡದ ಮೋಟಾರ ಸೈಕಲ ಸೆಂಟ್ರೋ ಕಂಪನಿಯ ಮೋಟಾರ ಸೈಕಲ ಮತ್ತು ಕಳ್ಳತನ ಮಾಡಿದ ಮೈಂಡಿಂಗ್ ವಾಯರ್ 10 ಬಂಡಲ್‌ಗಳನ್ನು …

Read More »

ವೀರಯೋಧರ ಬಗ್ಗೆ ಹೆಮ್ಮೆ ಪಡೋಣ- ಶಾಸಕ ಬಾಲಚಂದ್ರ ಜಾರಕಿಹೊಳಿ

ರಾಜಾಪೂರ ಗ್ರಾಮದಲ್ಲಿ ನಮ್ಮ ನೆಲ, ನಮ್ಮ ದೇಶ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಶಾಸಕ ಬಾಲಚಂದ್ರ ಜಾರಕಿಹೊಳಿ ಮೂಡಲಗಿ: ನಮ್ಮ ರಾಷ್ಟ್ರದ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರಕ್ಕಾಗಿ ಹುತಾತ್ಮರಾದ ವೀರಯೋಧರನ್ನು ಗೌರವಿಸಲು ಇಡೀ ರಾಷ್ಟ್ರಾಧ್ಯಂತ ನಮ್ಮ ನೆಲ, ನಮ್ಮ ದೇಶ ಅಭಿಯಾನಕ್ಕೆ ಕರೆ ನೀಡಿದ್ದು, ಪ್ರತಿಯೊಬ್ಬ ಭಾರತೀಯನು ನಮ್ಮ ಯೋಧರ ಬಗ್ಗೆ ಅಭಿಮಾನ ಮತ್ತು ಗೌರವವನ್ನು ಹೊಂದಬೇಕೆಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು. ತಾಲೂಕಿನ ರಾಜಾಪೂರ ಗ್ರಾಮದ …

Read More »

ಟಿಕ್​ಟಾಕ್​ ಬ್ಯಾನ್​ ಮಾಡಿದ ನ್ಯೂಯಾರ್ಕ್ ಆಡಳಿತ.. ಕಾರಣ ಏನು ಗೊತ್ತೇ?

ನ್ಯೂಯಾರ್ಕ್ ( ಅಮೆರಿಕ): ಸರ್ಕಾರಿ ಸ್ವಾಮ್ಯದ ಸಾಧನಗಳಲ್ಲಿ ಟಿಕ್‌ಟಾಕ್ ಅನ್ನು ಬ್ಯಾನ್​ ಮಾಡಿ ನ್ಯೂಯಾರ್ಕ್​ ಆಡಳಿತ ಆದೇಶಿಸಿದೆ. ಭದ್ರತಾ ಕಾಳಜಿಯ ಕಾರಣದಿಂದಾಗಿ ಅಲ್ಲಿನ ಸ್ಥಳೀಯ ಆಡಳಿತ ಟಿಕ್​ಟಾಕ್ ನಿಷೇಧಿಸಿದೆ. ಈ ಕಿರು ವಿಡಿಯೋ ಅಪ್ಲಿಕೇಶನ್‌ ಪ್ರವೇಶ ನಿರ್ಬಂಧಿಸಿರುವ 24 ರಾಜ್ಯಗಳ ಪಟ್ಟಿಗೆ ಈಗ ನ್ಯೂಯಾರ್ಕ್​ ರಾಜ್ಯ ಸಹ ಸೇರಿಕೊಂಡಿದೆ ಎಂದು ಅಮೆರಿಕ ಪ್ರಮುಖ ಪತ್ರಿಕೆ ವರದಿ ಮಾಡಿದೆ. ಚೀನಾದ ಕಂಪನಿ ಬೈಟ್‌ಡ್ಯಾನ್ಸ್ ಒಡೆತನದ ಈ ಟಿಕ್​ಟಾಕ್ ಅಪ್ಲಿಕೇಶನ್​, ಬಳಕೆದಾರರ ಡೇಟಾಗೆ ಬೀಜಿಂಗ್ …

Read More »

ಬಾಣಂತಿ ಆರೋಗ್ಯ ವಿಚಾರಿಸಲು ಹೋದ ಸಮುದಾಯ ಆರೋಗ್ಯಾಧಿಕಾರಿ ಮೇಲೆ ನಾಯಿ ದಾಳಿ: ಗಂಭೀರ ಗಾಯ

ಕೊಡಗು : ಬಾಣಂತಿ ಆರೋಗ್ಯ ವಿಚಾರಿಸಲು ಹೋದ ಆರೋಗ್ಯ ಇಲಾಖೆ ಸಿಬ್ಬಂದಿ ಮೇಲೆ ನಾಯಿಯೊಂದು ದಾಳಿ ಮಾಡಿ ಗಂಭೀರವಾಗಿ ಗಾಯಗೊಳಿಸಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ. ವಿರಾಜಪೇಟೆ ತಾಲೂಕಿನ ಪಾರಾಣೆ ಗ್ರಾಮದಲ್ಲಿ ಸಮುದಾಯ ಆರೋಗ್ಯ ಅಧಿಕಾರಿ ಕೆ‌ ಕೆ ಭವ್ಯಾ ಮೇಲೆ ಸಾಕು ನಾಯಿಯೊಂದು ದಾಳಿ ಮಾಡಿದೆ. ಇತ್ತೀಚೆಗೆ ಹೆರಿಗೆ ಆಗಿದ್ದ ತಾಯಿ ಮತ್ತು ಮಗುವಿನ ಆರೋಗ್ಯ ವಿಚಾರಿಸಲು ಪಾರಾಣೆ ಗ್ರಾಮದ ಮಾಚಯ್ಯ ಎಂಬುವರ ಮನೆಗೆ ತೆರಳಿದ್ದ ಸಮುದಾಯ ಆರೋಗ್ಯ ಸಿಬ್ಬಂದಿ, ಔಷಧ …

Read More »

ಬಾಗಲಕೋಟೆಯಲ್ಲಿ ಎರಡು ದಿನಗಳ‌ ಹಿಂದೆ ರಾತ್ರೋರಾತ್ರಿ ಪ್ರತಿಷ್ಠಾಪಿಸಿದ್ದ ಶಿವಾಜಿ ಮೂರ್ತಿಯನ್ನು ಪೊಲೀಸರು ತೆರವುಗೊಳಿಸಿದ್ದಾರೆ.

ಬಾಗಲಕೋಟೆ: ನಗರದ ಸೋನಾರ ಬಡಾವಣೆಯಲ್ಲಿ ಕಳೆದ ಎರಡು ದಿನಗಳ‌ ಹಿಂದೆ ರಾತ್ರೋರಾತ್ರಿ ಪ್ರತಿಷ್ಠಾಪಿಸಿದ್ದ ಶಿವಾಜಿ ಮೂರ್ತಿಯನ್ನು ಪೊಲೀಸರು ಸೂಕ್ತ ಭದ್ರತೆ ನಡುವೆ ತೆರವುಗೊಳಿಸಿದ್ದಾರೆ. ಈ ಮೂರ್ತಿಯನ್ನು ಪ್ರತಿಷ್ಠಾಪನೆ ಕಾರಣ ತೀವ್ರ ವಿವಾದಕ್ಕೆ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ಮೂರ್ತಿ ತೆರವುಗೊಳಿಸುವ ಮಾಹಿತಿ ಹರಡುತ್ತಿದ್ದಂತೆ ಕೆಲ ಸಂಘಟನೆ ಹಾಗೂ ಕೆಲವು ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಸ್ಥಳದಲ್ಲಿ ಜಮಾವಣೆಗೊಂಡು ಪ್ರತಿಭಟನೆ ನಡೆಸಿದರು. ಈ ವೇಳೆ, ಸ್ಥಳಕ್ಕಾಗಮಿಸಿದ ಪೊಲೀಸ್ ವರಿಷ್ಠಾಧಿಕಾರಿ ಜಯಪ್ರಕಾಶ್ ಪ್ರತಿಭಟನಾನಿರತರನ್ನು ಮನವೊಲಿಸುವ ಪ್ರಯತ್ನ …

Read More »

ತೆಲುಗಿನ ‘ಬಾಯ್ಸ್ ಹಾಸ್ಟೆಲ್’: ರಮ್ಯಾ ಪಾತ್ರಕ್ಕೆ ರಶ್ಮಿ ಗೌತಮ್

ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಎಂಬ ಕನ್ನಡ ಚಿತ್ರ ತೆಲುಗಿನಲ್ಲಿ ‘ಬಾಯ್ಸ್ ಹಾಸ್ಟೆಲ್’ ಶೀರ್ಷಿಕೆಯಡಿ ತೆರೆ ಕಾಣುತ್ತಿದ್ದು, ರಮ್ಯಾ ಪಾತ್ರದಲ್ಲಿ ರಶ್ಮಿ ಗೌತಮ್ ನಟಿಸುತ್ತಿದ್ದಾರೆ. ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಅನ್ನೋದು ಕನ್ನಡದ ಸೂಪರ್​ ಹಿಟ್​ ಸಿನಿಮಾ. 2022 ರಲ್ಲಿ ಕಾಂತಾರ, ಕೆಜಿಎಫ್​ 2 ಮೂಲಕ ಇಡೀ ಭಾರತೀಯ ಚಿತ್ರರಂಗವೇ ಸ್ಯಾಂಡಲ್​ವುಡ್​ನತ್ತ ತಿರುಗಿ ನೋಡುವಂತಾಯ್ತು. 2023ರ ಸಿನಿಮಾಗಳ ಮೇಲೆ ಎಲ್ಲರ ಕಣ್ಣು ನೆಟ್ಟಿತ್ತು. ಆದ್ರೆ ಕೆಜಿಎಫ್​ 2, ಕಾಂತಾರದಷ್ಟು ಸದ್ದು ಮಾಡದೇ ಇದ್ದರೂ …

Read More »