Home / ರಾಜಕೀಯ (page 1162)

ರಾಜಕೀಯ

ವಿದ್ಯಾರ್ಥಿನಿ ಮೇಲೆ ನಾಲ್ವರು ಕಾಮುಕರಿಂದ ಸಾಮೂಹಿಕ ಅತ್ಯಾಚಾರ

ಕೋಲಾರ : ಕೋಲಾರದಲ್ಲಿ ಘೋರ ದುರಂತವೊಂದು ಸಂಭವಿಸಿದ್ದು, 9 ನೇ ತರಗತಿ ವಿದ್ಯಾರ್ಥಿನಿ ಮೇಲೆ ನಾಲ್ವರು ಕಾಮುಕರು ಸಾಮೂಹಿಕ ಅತ್ಯಾಚಾರ ನಡೆಸಿರುವ ಘಟನೆ ನಡೆದಿದೆ. ಕೋಲಾರದಲ್ಲಿ 9 ನೇ ತರಗತಿ ವಿದ್ಯಾರ್ಥಿನಿಯನ್ನು ಅಪಹರಿಸಿ ನಾಲ್ವರು ಕಾಮುಕರು ಅತ್ಯಾಚಾರ ಎಸಗಿದ್ದು, ಸದ್ಯ ನಾಲ್ವರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.ಕಾಮಸಮುದ್ರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Read More »

ಇಂದು ಕೂಡ ಮುಂದುವರಿಯಲಿದೆ ಕಾಂಗ್ರೆಸ್‌ ನ ಅಹೋರಾತ್ರಿ ಧರಣಿ: ಡಿ.ಕೆ.ಶಿವಕುಮಾರ್‌ ತಿಳಿಸಿದ್ದಾರೆ.

ಸಚಿವ ಕೆ.ಎಸ್.‌ ಈಶ್ವರಪ್ಪ ಅವರ ರಾಜೀನಾಮೆಗೆ ಆಗ್ರಹಿಸಿ ವಿಧಾನಸೌಧದಲ್ಲಿ ಕಾಂಗ್ರೆಸ್‌ ನಾಯಕರ ಅಹೋರಾತ್ರಿ ಧರಣಿ ಮೂರನೇ ದಿನಕ್ಕೆ ಕಾಲಿಟ್ಟಿದೆ. ಗುರುವಾರದಿಂದ ಪ್ರಾರಂಭವಾದ ಈ ಧರಣಿ ಇಂದು ಕೂಡ ಮುಂದುವರಿಯಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ತಿಳಿಸಿದ್ದಾರೆ.   ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಶ್ವರಪ್ಪ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿ ಸೋಮವಾರ ರಾಜ್ಯಾದ್ಯಂತ ಎಲ್ಲಾ ತಾಲೂಕುಗಳಲ್ಲಿ ಪಕ್ಷದ ಕಾರ್ಯಕರ್ತರು ಪ್ರತಿಭಟನೆ ನಡೆಸಲಿದ್ದಾರೆ ಎಂದರು. ಕಾಂಗ್ರೆಸ್‌ ನ …

Read More »

ಒಂದೇ ಒಂದು ಫೋಟೋಶೂಟ್‍ನಿಂದ ಬದಲಾದ ಕಾರ್ಮಿಕನ ಜೀವನ: ಛಾಯಾಗ್ರಾಹಕನ ಜೀವ ಉಳಿಸಿದ್ದ ಮಮ್ಮಿಕ್ಕ..!

ರಾತ್ರಿ, ಬೆಳಗಾಗೋದ್ರೊಳಗೆ ದಿನಗೂಲಿ ಕಾರ್ಮಿಕನಾಗಿದ್ದ ಕೇರಳದ ಮಮ್ಮಿಕ್ಕ ಮನೆ ಮಾತಾದ ಕಥೆ ನಿಮಗೆಲ್ಲರಿಗೂ ತಿಳಿದಿದೆ. ಕಡು ಬಡತನದಲ್ಲಿ ಜೀವನ ಸಾಗಿಸುತ್ತಿದ್ದ 60ರ ಹರೆಯದ ಈತನಿಗೆ ಒಮ್ಮೆಲೇ ಅದೃಷ್ಟ ಲಕ್ಷ್ಮೀ ಒಲಿದಿರುವುದು ನಿಜಕ್ಕೂ ಸಂತೋಷದ ವಿಷಯ. ನೀವು ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿದ್ದರೆ, ಮಮ್ಮಿಕ್ಕ ಅವರ ಲೇಟೆಸ್ಟ್ ಫೋಟೋಗಳ್ನು ಬಹುಶಃ ನೋಡಿರುತ್ತೀರಿ. ಅಂತರ್ಜಾಲದಲ್ಲಿ ಹೊಸ ಸೆನ್ಸೇಷನ್ ಸೃಷ್ಟಿಸಿದ್ದಾರೆ ಈ ಮಮ್ಮಿಕ್ಕ. ಛಾಯಾಗ್ರಾಹಕ ಅದ್ಯಾವ ಸಮಯದಲ್ಲಿ ಫೋಟೋ ಕ್ಲಿಕ್ಕಿಸಿದ್ರೋ ಗೊತ್ತಿಲ್ಲ, ಚಂಡಮಾರುತದಂತೆ ಫೋಟೋ ವೈರಲ್ …

Read More »

ಬೆಂಗಳೂರು ರಸ್ತೆಗೆ ‘ಪವರ್ ಸ್ಟಾರ್’ ಪುನೀತ್ ರಾಜಕುಮಾರ್ ಹೆಸರು

ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ನಮ್ಮನಗಲಿದ್ರು ಅವರ ನಗು, ಅವರ ಒಳ್ಳೆಯತನ ಅವರು ಕನ್ನಡ ಸಿನಿ‌ ಲೋಕಕ್ಕೆ ನೀಡಿರುವ ಕೊಡುಗೆ ಎಂದೆಂದಿಗೂ ಜೀವಂತ. ಪುನೀತ್ ಕಾಲವಾದ ಮೇಲೆ ಪ್ರತಿ ಜಿಲ್ಲೆಯಲ್ಲೂ, ಪ್ರತಿ ತಾಲೂಕಿನಲ್ಲೂ ಒಂದು ರಸ್ತೆಗಾದರೂ ಅವರ ಹೆಸರನ್ನಿಟ್ಟು ಮರುನಾಮಕರಣ ಮಾಡಲಾಗ್ತಿದೆ.‌ ಪುನೀತ್ ಅವರ ಬೆಂಗಳೂರಿನ ಅಭಿಮಾನಿಗಳು ಸಹ ಇದೇ ಬಯಕೆ ವ್ಯಕ್ತಪಡಿಸಿದ್ದರು. ಬೆಂಗಳೂರಿನ ಪ್ರತಿಷ್ಟಿತ ರಸ್ತೆಯೊಂದಕ್ಕೆ ಪುನೀತ್ ಹೆಸರನ್ನ ಮರುನಾಮಕರಣ ಮಾಡಲು ಮನವಿ ಮಾಡಿದ್ದರು. ಈ ಕಾರ್ಯಕ್ಕೆ ಬಿಬಿಎಂಪಿ …

Read More »

ಮುಂಬೈನಲ್ಲಿ ಐಷಾರಾಮಿ ಫ್ಲಾಟ್ ಖರೀದಿಸಿದ ನಟಿ ಕಾಜೋಲ್​​..! ಈ ಬಂಗಲೆಯ ಬೆಲೆ ಎಷ್ಟು ಗೊತ್ತಾ.?

ಬಾಲಿವುಡ್​ ನಟಿ ಕಾಜೋಲ್​​ ಮುಂಬೈನಲ್ಲಿರುವ ತನ್ನ ಆಸ್ತಿಯ ಲಿಸ್ಟ್​ಗೆ ಮತ್ತೊಂದು ಅದ್ಧೂರಿ ಫ್ಲಾಟ್​ಗಳನ್ನು ಸೇರ್ಪಡೆ ಮಾಡಿದ್ದಾರೆ. ಜುಹುದಲ್ಲಿರುವ ಶಿವಶಕ್ತಿ ಬಂಗಲೆಯ ಮಾಲೀಕೆಯಾಗಿರುವ ಕಾಜೋಲ್​ ಇದೀಗ ಇದೇ ಬಂಗಲೆಯ ಸಮೀಪದಲ್ಲಿಯೇ ಮತ್ತೆರಡು ಫ್ಲಾಟ್​ಗಳನ್ನು ಖರೀದಿ ಮಾಡಿದ್ದಾರೆ.   ಈ ಅದ್ದೂರಿ ಅಪಾರ್ಟ್​ಮೆಂಟ್​ಗಳನ್ನು ಖರೀದಿಸಲು ನಟಿ ಕಾಜೋಲ್​ 11.95 ಕೋಟಿ ರೂಪಾಯಿಗಳನ್ನು ವ್ಯಯಿಸಿದ್ದಾರೆ ಎನ್ನಲಾಗಿದೆ. ಈ ಫ್ಲಾಟ್​ಗಳು ಕಟ್ಟಡದ 10ನೇ ಮಹಡಿಯಲ್ಲಿದೆ ಎನ್ನಲಾಗಿದೆ. ನಟಿ ಕಾಜಲ್​ ಈ ಬಗ್ಗೆ ಯಾವುದೇ ಖಚಿತ ಮಾಹಿತಿಯನ್ನು …

Read More »

ನಾವು ನಿಮ್ಮ ಅಪ್ಪ – ಬಿಜೆಪಿ ಬೆದರಿಕೆಗೆ ಶಿವಸೇನೆ ತಿರುಗೇಟು

ಮುಂಬೈ: ಠಾಕ್ರೆ ಕುಟುಂಬ ಮತ್ತು ಮಹಾರಾಷ್ಟ್ರ ಸರ್ಕಾರಕ್ಕೆ ಬೆದರಿಕೆ ಹಾಕಿರುವ ಬಿಜೆಪಿ ನಾಯಕ ಮತ್ತು ಕೇಂದ್ರ ಸಚಿವ ನಾರಾಯಣ ರಾಣೆಗೆ ಶಿವಸೇನೆ ಸಂಸದ ಸಂಜಯ್‌ ರಾವತ್‌ ತಿರುಗೇಟು ನೀಡಿದ್ದಾರೆ. ಬೆದರಿಕೆ ಒಡ್ಡುವುದನ್ನು ನಿಲ್ಲಿಸಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನೀವು ಕೇಂದ್ರ ಸಚಿವರಾಗಿರಬಹುದು ಆದರೆ ಇದು ಮಹಾರಾಷ್ಟ್ರ. ಈ ವಿಚಾರವನ್ನು ಮರೆಯಬೇಡಿ. ನಾವು ನಿಮ್ಮ ತಂದೆ. ಇದರ ಅರ್ಥವೇನೆಂದು ನಿಮಗೆ ಚೆನ್ನಾಗಿ ತಿಳಿದಿದೆ ಎಂದು ರಾವತ್‌ ವಾಗ್ದಾಳಿ ನಡೆಸಿದ್ದಾರೆ. ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್‌ …

Read More »

ಬಿಜೆಪಿ ಮನೆಗೆ ಸೊಸೆಯಾಗಿ ಬಂದು ಬಾಗಿಲಿಗೆ ಮೊಳೆ ಹೊಡೆದು ಮನೆಯ ಮಗಳಾಗಿದ್ದೇವೆ. ಹೀಗಾಗಿ ಮತ್ತೆ ಸಹಕರಿಸುವ ಪ್ರಶ್ನೆ ಇಲ್ಲ

ಗದಗ: ಕಾಂಗ್ರೆಸ್‍ನವರೇ ಬಿಜೆಪಿಗೆ ಬರುತ್ತಿದ್ದಾರೆ ಎನ್ನುವ ಮೂಲಕ ಬಿಜೆಪಿ ಶಾಸಕರು ಕಾಂಗ್ರೆಸ್‍ಗೆ ಸೇರುತ್ತಾರೆ ಎಂಬ ಕೈ ನಾಯಕರ ಹೇಳಿಕೆಗೆ ಸಚಿವ ಬಿ.ಸಿ.ಪಾಟೀಲ್ ತಿರುಗೇಟು ನೀಡಿದರು. ನಗರದ ಪರಿಸರ ಲೇಔಟ್‍ನಲ್ಲಿ ನಿರ್ಮಾಣವಾಗುತ್ತಿರುವ ಬಿಜೆಪಿ ಕಚೇರಿ ನೂತನ ಕಟ್ಟಡ ಕಾಮಗಾರಿ ವೀಕ್ಷಿಸಿ, ನಂತರ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ನಾವ್ಯಾಕೆ ಅಲ್ಲಿಗೆ ಹೋಗೋಣ. ಬಿಜೆಪಿ ಮನೆಗೆ ಸೊಸೆಯಾಗಿ ಬಂದು ಬಾಗಿಲಿಗೆ ಮೊಳೆ ಹೊಡೆದು ಮನೆಯ ಮಗಳಾಗಿದ್ದೇವೆ. ಹೀಗಾಗಿ ಮತ್ತೆ ಸಹಕರಿಸುವ ಪ್ರಶ್ನೆ ಇಲ್ಲ ಎಂದರು. …

Read More »

ರಾಷ್ಟ್ರಧ್ವಜಕ್ಕೆ ಗೌರವ ಕೊಡೋದನ್ನ ಇವ್ರಿಂದ ನಾನು ಕಲಿಯಬೇಕಾ – ಹೆಚ್‍ಡಿಕೆ

ರಾಮನಗರ: ರಾಷ್ಟ್ರಧ್ವಜಕ್ಕೆ ಗೌರವ ಕೊಡುವುದನ್ನು ಇವರಿಂದ ನಾನು ಕಲಿಯಬೇಕಾ ಎಂದು ಪ್ರಶ್ನಿಸುವ ಮೂಲಕ ವಿರೋಧ ಪಕ್ಷದ ನಾಯಕ ಸಿದ್ದರಾಮ್ಯರಿಗೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಟಾಂಗ್ ನೀಡಿದ್ದಾರೆ. ಚನ್ನಪಟ್ಟಣದ ತಗಚಗೆರೆ ಗ್ರಾಮದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಷ್ಟ್ರಧ್ವಜಕ್ಕೆ ಗೌರವ ಕೊಡುವುದನ್ನು ಇವರಿಂದ ನಾನು ಕಲಿಯಬೇಕಾ? ಶ್ರೀನಗರದಲ್ಲಿ ಬಾವುಟ ಹಾರಿಸಲು ಹೋಗಿ 12 ಜನರನ್ನು ಸಾಯಿಸಿದ್ದರು. ಬಿಜೆಪಿಯವರ ಕೈಯಲ್ಲಿ ಉಗಿಸಿಕೊಳ್ಳುತ್ತಿದ್ದರು. ಆಗ ರಾಷ್ಟ್ರಧ್ವಜ ಕಾಣಲಿಲ್ವ. ರಾಜ್ಯದ ಜನರ ಬಗ್ಗೆ ನಾವು ಎಲ್ಲಿ ಚರ್ಚೆ …

Read More »

ಹೊರಟ್ಟಿ ಬಿಜೆಪಿ ಸೇರುವ ಬಗ್ಗೆ ಸುಳಿವು ಕೊಟ್ಟ ಕೇಂದ್ರ ಸಚಿವ

ಹುಬ್ಬಳ್ಳಿ: ಬಿಜೆಪಿ ಪ್ಲ್ಯಾನ್‍ಗೆ ಜೆಡಿಎಸ್‍ನ ಮತ್ತೊಂದು ವಿಕೆಟ್ ಪತನವಾಗುತ್ತಾ? ಹಿರಿಯ ರಾಜಕಾರಣಿಯನ್ನು ತರಲು ಬಿಜೆಪಿ ಕಸರತ್ತು ನಡೆಸಿದೆಯಾ ಎನ್ನುವ ಪ್ರಶ್ನೆಗಳು ಸದ್ಯ ಕುತೂಹಲಕ್ಕೆ ಕಾರಣವಾಗಿದೆ. ಪರಿಷತ್ ಸಭಾಪತಿ, ಜೆಡಿಎಸ್ ಹಿರಿಯ ನಾಯಕ ಬಸವರಾಜ ಹೊರಟ್ಟಿಯವರನ್ನು ಬಿಜೆಪಿಗೆ ಕರೆತರಲು ತರೆಮರೆಯಲ್ಲಿ ಬಿಜೆಪಿ ನಾಯಕರು ಕಸರತ್ತು ನಡೆಸಿರುವ ಬಗ್ಗೆ ಅನುಮಾನ ಮೂಡುತ್ತಿದೆ. ಖುದ್ದು ಕೇಂದ್ರ ಸಚಿವರು ಹೊರಟ್ಟಿ ಬಿಜೆಪಿ ಸೇರುವ ಬಗ್ಗೆ ಸುಳಿವು ನೀಡಿದ್ದಾರೆ.  ಹುಬ್ಬಳ್ಳಿಯಲ್ಲಿ ಮಾಧ್ಯಮಗಳಿಗೆ ಈ ಬಗ್ಗೆ ಸುಳಿವು ಬಿಟ್ಟು ಕೊಟ್ಟಿರುವ …

Read More »

ಕೇಸರಿ ಶಾಲು, ಹಿಜಬ್ ಧರಿಸಿ ಬರೋದು ಸರಿಯಲ್ಲ, ಇದ್ರಿಂದ ಶಾಲೆಗಳಲ್ಲಿ ಧರ್ಮದ ಸಮಸ್ಯೆ ಆಗುತ್ತೆ: ಜೋಶಿ

ಧಾರವಾಡ: ಶಾಲೆಗಳಿಗೆ ಕೇಸರಿ ಶಾಲು ಅಥವಾ ಹಿಜಬ್ ಹಾಕಿಕೊಂಡು ಬರುವುದು ಸರಿಯಲ್ಲ. ಇದರಿಂದ ಶಾಲೆಗಳಲ್ಲಿ ಧರ್ಮದ ಸಮಸ್ಯೆ ಆಗುತ್ತದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈಶ್ವರಪ್ಪ ರಾಷ್ಟ್ರ ಧ್ವಜ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು ಎರಡು ನೂರು ವರ್ಷಗಳ ನಂತರ ಕೇಸರಿ ಧ್ವಜ ಬರಹುದು ಎಂದು ಏನೋ ಹೇಳಿಕೆ ಕೊಟ್ಟಿದ್ದಾರೆ. ನನ್ನ ಪ್ರಕಾರ ನಮ್ಮ ರಾಷ್ಟ್ರ ಧ್ವಜ ಎರಡು ನೂರು ವರ್ಷದ ನಂತರ ಒಮ್ಮತದಿಂದ ಒಪ್ಪಿದ್ದೇವೆ. 75 …

Read More »