Breaking News
Home / ರಾಜಕೀಯ (page 1138)

ರಾಜಕೀಯ

6 ದಿನಗಳಲ್ಲಿ ಸುಮಾರು 6,000 ರಷ್ಯನ್ನರ ಹತ್ಯೆ’ : ಉಕ್ರೇನ್ ಅಧ್ಯಕ್ಷ ಝೆಲೆನ್‌ಸ್ಕಿ

ಕೇವ್‌ : ಇಂದಿಗೆ ಉಕ್ರೇನ್ ಮೇಲೆ ರಷ್ಯಾ ದಾಳಿ ನಡೆಸಿ ಏಳನೇ ದಿನಗಳಾಗಿವೆ. ಈ ನಡುವೆ ಉಕ್ರೇನ್‌ ಅಧ್ಯಕ್ಷ ವೊಲೊಡಿಮೈರ್ ಝೆಲೆನ್ಸ್ಕಿ(Volodymyr Zelenskyy) ಬುಧವಾರ, ‘6 ದಿನಗಳಲ್ಲಿ ಸುಮಾರು 6,000 ರಷ್ಯನ್ನರು’ ಸಾವನ್ನಪ್ಪಿದ್ದಾರೆ ಎಂದು ಹೇಳಿದ್ದಾರೆ. ಇನ್ನು ಕಳೆದ ಕೆಲವು ದಿನಗಳಿಂದ ತೀವ್ರ ಶೆಲ್ ದಾಳಿಯಲ್ಲಿರುವ ಉಕ್ರೇನ್ʼನ ಎರಡನೇ ಅತಿದೊಡ್ಡ ನಗರ ಖಾರ್ಕಿವ್ʼನಲ್ಲಿ ರಷ್ಯಾದ ವಾಯುಗಾಮಿ ಪಡೆಗಳು ಬಂದಿಳಿದಿರುವಂತೆಯೇ ಝೆಲೆನ್ಸ್ಕಿ ಹೇಳಿದ್ದಾರೆ. ಇನ್ನು ಕಳೆದ ಕೆಲವು ದಿನಗಳಿಂದ ತೀವ್ರ ಶೆಲ್ …

Read More »

‘3ನೇ ಮಹಾಯುದ್ಧ’ ಫಿಕ್ಸ್, ‘ಉಕ್ರೇನ್’ ಮೇಲೆ ‘ಅಣು ಬಾಂಬ್’ ಹಾಕಲು ರಷ್ಯಾ ತಯಾರಿ

ರಷ್ಯಾ: ದಿನೇ ದಿನೇ ರಷ್ಯಾ ಹಾಗೂ ಉಕ್ರೇನ್ ನಡುವಿನ ಯುದ್ಧ ತಾರಕಕ್ಕೇರುತ್ತಿದೆ. ಇಂದು 7ನೇ ದಿನಕ್ಕೆ ಕಾಲಿಟ್ಟಿರುವ ಯುದ್ಧದ ನಡುವೆಯೂ 3ನೇ ಮಹಾಯುದ್ಧ ಫಿಕ್ಸ್ ಎಂದು ಹೇಳಲಾಗುತ್ತಿದೆ. ಒಂದು ವೇಳೆ ಮೂರನೇ ಮಹಾಯುದ್ಧ ನಡೆದ್ರೇ, ಪರಮಾಣು ಬಾಂಬ್ ಸ್ಪೋಟ ಕೂಡ ಆಗಲಿದೆ ಎಂಬ ಮಾಹಿತಿ ಹೊರ ಬಿದ್ದಿದೆ.ಈ ಬಗ್ಗೆ ರಷ್ಯಾದ ವಿದೇಶಾಂಗ ಸಚಿವ ಸರ್ಜಿ ಲಾವ್ರೋವ್ ಅವರು ಸ್ಪೋಟಕ ಮಾಹಿತಿ ಬಿಚ್ಚಿಟ್ಟಿದ್ದು, ಮೂರನೇ ಮಹಾಯುದ್ಧ ನಡೆದರೆ, ಅದು ಪರಮಾಣು ಶಸ್ತ್ರಾಸ್ತ್ರಗಳನ್ನು …

Read More »

ಭಾರತದ ಧ್ವಜ ಹಿಡಿದು ಪ್ರಾಣ ಉಳಿಸಿಕೊಂಡ ಪಾಕಿಸ್ತಾನದ ವಿದ್ಯಾರ್ಥಿಗಳು! ಅನುಭವ ಇಲ್ಲಿದೆ ಕೇಳಿ.

ನವದೆಹಲಿ: ಇಡೀ ವಿಶ್ವದಲ್ಲಿ ಭಾರತದ ಮಹಿಮೆ ಮತ್ತೊಮ್ಮೆ ಪ್ರಚಾರಕ್ಕೆ ಬಂದಿದೆ. ಭಾರತದ ಮಣ್ಣಿನಲ್ಲಿ ಜೀವಿಸಿ, ಭಾರತದ ಅನ್ನವನ್ನು ಉಂಡು ಭಾರತದ ಬೆನ್ನಿಗೆ ಚೂರಿ ಹಾಕುವಲ್ಲಿ ಕೆಲವು ಭಾರತೀಯರು ಎನಿಸಿಕೊಂಡವರೇ ಒಂದೆಡೆ ಅಪಪ್ರಚಾರದಲ್ಲಿ ತೊಡಗಿಕೊಂಡರೆ, ಶತ್ರರಾಷ್ಟ್ರ ಎನಿಸಿಕೊಂಡಿರುವ ಪಾಕಿಸ್ತಾನಿಗಳು ತಮ್ಮ ಪ್ರಾಣವನ್ನು ಉಳಿಸಿಕೊಳ್ಳಲು ಹೇಗೆ ಭಾರತದ ಧ್ವಜವನ್ನು ಬಳಕೆ ಮಾಡಿಕೊಂಡರು ಎನ್ನುವುದನ್ನು ಈ ವಿದ್ಯಾರ್ಥಿಗಳ ಬಾಯಲ್ಲಿಯೇ ಕೇಳಿದರೆ ಒಳ್ಳೆಯದು. ಯೂಕ್ರೇನ್​ನಲ್ಲಿ ಸಿಲುಕಿರುವ ಅಸಂಖ್ಯ ಭಾರತೀಯರ ವಾಪಸಿಗೆ ಭಾರತ ಸರ್ಕಾರ ಇನ್ನಿಲ್ಲದ ಶ್ರಮ …

Read More »

ರಷ್ಯಾ ದಾಳಿಗೆ ಸಾವನ್ನಪ್ಪಿದ ನವೀನ್ ಕುಟುಂಬಕ್ಕೆ ಪರಿಹಾರ ನೀಡುತ್ತೇವೆ ಮೃತದೇಹವನ್ನು ಭಾರತಕ್ಕೆ ತರಲು ಕಷ್ಟ

ಬೆಂಗಳೂರು : ರಷ್ಯಾ ನಡೆಸಿದ ದಾಳಿಗೆ ಉಕ್ರೇನ್ ನಲ್ಲಿ ಕನ್ನಡಿಗ ವಿದ್ಯಾರ್ಥಿ ನವೀನ್ ಮೃತಪಟ್ಟಿದ್ದು, ನವೀನ್ ಕುಟುಂಬಕ್ಕೆ ಪರಿಹಾರ ನೀಡುತ್ತೇವೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಮೃತದೇಹವನ್ನು ಭಾರತಕ್ಕೆ ತರಲು ಪ್ರಯತ್ನಿಸುತ್ತೇವೆ. ಯುದ್ಧ ನಡೆಯುತ್ತಿರುವ ಹಿನ್ನೆಲೆ ಸ್ವಲ್ಪ ಕಷ್ಟವಾಗುತ್ತಿದೆ ಅಂತ ಬೊಮ್ಮಾಯಿ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನವೀನ್ ಮೃತದೇಹ ಹೋಲುವ ಕೆಲ ಫೋಟೋ ಬಂದಿದೆ. ನವೀನ್ ಸ್ನೇಹಿತರು ಫೋಟೋಗಳನ್ನು ಕಳುಹಿಸಿದ್ದಾರೆ. ಈ ಬಗ್ಗೆ ಭಾರತದ ರಾಯಭಾರ ಕಚೇರಿ ಜತೆ …

Read More »

ಕರ್ನಾಟಕದ ವಿದ್ಯಾರ್ಥಿ ನವೀನ್​(21) ಸಾವನ್ನಪ್ಪಿದ್ದು, ಘಟನೆಯ ಸೂಕ್ತ ತನಿಖೆ ನಡೆಸಲು ರಷ್ಯಾ ಮುಂದಾಗಿದೆ.

ನವದೆಹಲಿ: ಉಕ್ರೇನ್​​ನ ಖಾರ್ಕಿವ್​​ ಮೇಲೆ ರಷ್ಯಾ ನಡೆಸಿರುವ ಶೆಲ್ ದಾಳಿಯಲ್ಲಿ ಕರ್ನಾಟಕದ ವಿದ್ಯಾರ್ಥಿ ನವೀನ್​(21) ಸಾವನ್ನಪ್ಪಿದ್ದು, ಘಟನೆಯ ಸೂಕ್ತ ತನಿಖೆ ನಡೆಸಲು ರಷ್ಯಾ ಮುಂದಾಗಿದೆ. ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಭಾರತದಲ್ಲಿರುವ ರಷ್ಯಾ ರಾಯಭಾರಿ ಡೇನಿಸ್​​ ಅಲಿಪೋವ್​​, ಭಾರತೀಯ ವಿದ್ಯಾರ್ಥಿ ನವೀನ್ ಶೇಖರಪ್ಪ ಗ್ಯಾನಗೌಡರ್ ಸಾವಿಗೆ ಸಂತಾಪ ಸೂಚಿಸಿದರು. ತೀವ್ರ ಸಂಘರ್ಷದ ಸಂದರ್ಭದಲ್ಲಿ ಉಕ್ರೇನ್​​ನಲ್ಲಿರುವ ಭಾರತೀಯರ ಸುರಕ್ಷತೆಯನ್ನು ಖಚಿತಪಡಿಸಲು ಮತ್ತು ನಡೆದು ಹೋಗಿರುವ ದುರದೃಷ್ಟಕರ ಘಟನೆಯ ಬಗ್ಗೆ ಸರಿಯಾದ ತನಿಖೆ …

Read More »

ಉಕ್ರೇನ್‍ನಲ್ಲಿರುವ ಮಗಳಿಂದ ವಾಯ್ಸ್ ಮೆಸೇಜ್- ಪೋಷಕರಲ್ಲಿ ಆತಂಕ

ಬಾಗಲಕೋಟೆ: ರಷ್ಯಾದಾಳಿಯ ಬೆನ್ನಲ್ಲೆ ಇಡೀ ಉಕ್ರೇನ್ ದೇಶ ಸ್ಮಶಾನದಂತೆ ಆವರಿಸಿದೆ. ಇತ್ತ ವ್ಯಾಸಂಗಕ್ಕಾಗಿ ಉಕ್ರೇನ್‍ಗೆ ತೆರಳಿದ ಭಾರತೀಯ ಮೂಲದ ವಿದ್ಯಾರ್ಥಿಗಳ ಪೋಷಕರಲ್ಲಿ ಆತಂಕ ಮನೆ ಮಾಡಿದೆ. ಬಾಗಲಕೋಟೆ ಜಿಲ್ಲೆಯಿಂದ ಸುಮಾರು 23 ವಿದ್ಯಾರ್ಥಿಗಳು ರಕ್ಷಣೆಗಾಗಿ ಪರದಾಟ ನಡೆಸುತ್ತಿದ್ದಾರೆ. ಬಾಗಲಕೋಟೆ ನಿವಾಸಿಯಾಗಿರುವ ಅಪೂರ್ವ ಕದಾಂಪುರ ಪ್ರಥಮ ವರ್ಷದ ಎಂ.ಬಿಬಿಎಸ್ ವ್ಯಾಸಂಗ ಮಾಡುತ್ತಿದ್ದಾರೆ. ಅವರ ಫೋನ್ ಸಂಪರ್ಕ ಬಂದ್ ಆಗಿದೆ. ಅಲ್ಲದೇ ಅಪೂರ್ವ ಅವರ ಪೋಷಕರಿಗೆ ಕಳುಹಿಸಿದ ವಾಯ್ಸ್ ಮೆಸೇಜ್ ಪೋಷಕರಲ್ಲಿ ಆತಂಕ …

Read More »

ಖತರ್ನಾಕ್ ಬೈಕ್ ಕಳ್ಳ ಪೊಲೀಸ್ ಖೆಡ್ಡಾಗೆ!

ಬೆಂಗಳೂರು: ಮೂರು ಜಿಲ್ಲೆಗಳಲ್ಲಿ ಬೈಕ್ ಕಳ್ಳತನ ಮಾಡಿ ಎಸ್ಕೇಪ್ ಆಗ್ತಾ ಇದ್ದ ಖತರ್ನಾಕ್ ಬೈಕ್ ಕಳ್ಳನನ್ನು, ಬೆಂಗಳೂರು ಹೊರವಲಯ ನೆಲಮಂಗಲ ಟೌನ್ ಪೊಲೀಸರು ಬಂಧಿಸಿದ್ದಾರೆ. ಕೆ.ಆರ್.ಪೇಟೆ ತಾಲೂಕಿನ ಕಿಕ್ಕೇರಿಯ ನಿವಾಸಿ ಡಿ.ಎಸ್.ಸುನೀಲ್ ಬಂಧಿತ ಆರೋಪಿ. ಬೆಂಗಳೂರು, ಹಾಸನ, ಮೈಸೂರು ಜಿಲ್ಲೆಗಳಲ್ಲಿ ಬೈಕ್ ಕಳ್ಳತನ ಮಾಡುತ್ತಿದ್ದ. ಬಂಧಿತ ಆರೋಪಿಯಿಂದ 11 ಬೈಕ್‍ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.ನೆಲಮಂಗಲ ಟೌನ್ ಪೊಲೀಸ್ ಇನ್ಸ್‌ಪೆಕ್ಟರ್ ಕುಮಾರ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಕಳ್ಳನನ್ನು ಬಂಧಿಸಿದ್ದು ಪರಪ್ಪನ ಅಗ್ರಹಾರಕ್ಕೆ ಕಳುಹಿಸಿದ್ದಾರೆ.

Read More »

ನನ್ನ ತಮ್ಮನಿಗೆ ಬಹಳಷ್ಟು ಕನಸುಗಳಿದ್ದವು: ನವೀನ್ ಸಹೋದರ

ಹಾವೇರಿ: ನನ್ನ ತಮ್ಮನಿಗೆ ಬಹಳಷ್ಟು ಕನಸುಗಳಿದ್ದವು. ಆತನ ಜೊತೆಗೆ ಹೋದವರು ಎಲ್ಲರೂ ವಾಪಸ್ ಜೀವಂತವಾಗಿ ಬರುತ್ತಿದ್ದಾರೆ. ಆದರೆ ನನ್ನ ತಮ್ಮ ಬರಲೇ ಇಲ್ಲ ಎಮದು ಮೃತ ನವೀನ್ ಸಹೋದರ ಹರ್ಷ ಭಾವುಕರಾದರು. ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಒಂದು ಕಡೆ ಅಪ್ಪ ಅಮ್ಮನನ್ನು ಸಮಾಧಾನ ಮಾಡಬೇಕು. ಮನೆಯಲ್ಲಿ ನಾನೇ ಹಿರಿಯ ಮಗ ಅವರ ಮುಂದೆ ನಾನು ಅತ್ತರೆ ನನಗೆ ನೋವು ತಡೆಯಲು ಆಗುತ್ತಿಲ್ಲ ಎಂದು ಗದ್ಗದಿತರಾದರು.  ರಷ್ಯಾ-ಉಕ್ರೇನ್ ನಡುವಿನ ಯುದ್ಧದ …

Read More »

ಭಾರತೀಯ ವಿದ್ಯಾರ್ಥಿಗಳು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ: ಸತೀಶ್ ಜಾರಕಿಹೊಳಿ

ಉಕ್ರೇನ್ ನಲ್ಲಿರುವ ಭಾರತೀಯ ವಿದ್ಯಾರ್ಥಿಗಳು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ್ ಜಾರಕಿಹೊಳಿ ಹೇಳಿದರು. ಗೋಕಾಕ ಪಟ್ಟಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರ ಮಾಧ್ಯಮಕ್ಕೆ ಹೇಳಿಕೆಗಳನ್ನು ನೀಡಲು ಅಷ್ಟೇ ಆದ್ಯತೆ ನೀಡುತ್ತಿದೆ. ಅಲ್ಲಿ ನಮ್ಮ ಭಾರತೀಯ ವಿದ್ಯಾರ್ಥಿಗಳು ಊಟಕ್ಕೂ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ವಿಷಯದಲ್ಲಿ ಪ್ರಚಾರ ಪಡೆಯುವುದು ಸರಿಯಲ್ಲ ಎಂದರು. ಕೇಂದ್ರ ಸರ್ಕಾರದ ವಿಳಂಬ ನೀತಿಯಿಂದ ಹಾವೇರಿ ಜಿಲ್ಲೆಯ …

Read More »

ಎಳೇಬೈಲ್‍ನಲ್ಲಿ ದೇವಸ್ಥಾನ ಜೀರ್ಣೋದ್ಧಾರಕ್ಕೆ 5 ಲಕ್ಷ ರೂ. ಶಾಸಕರ ನಿಧಿ

ಜೀರ್ಣೋದ್ಧಾರದ ಸಲುವಾಗಿ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಅವರ ಶಾಸಕರ ನಿಧಿಯ ವತಿಯಿಂದ 5 ಲಕ್ಷ ರೂ. ನೀಡಲಾಗಿದೆ. ಮೊದಲ ಕಂತಿನಲ್ಲಿ 2.77 ಲಕ್ಷ ರೂ,ಗಳ ಚೆಕ್ ನ್ನು ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ದೇವಸ್ಥಾನದ ಕಮೀಟಿಯವರಿಗೆ ಮಂಗಳವಾರ ಹಸ್ತಾಂತರಿಸಿದರು. ಈ ಸಮಯದಲ್ಲಿ ಗ್ರಾಮದ ಹಿರಿಯರು, ದೇವಸ್ಥಾನದ ಕಮೀಟಿಯವರು, ಮನೋಹರ್ ಬೆಳಗಾಂವ್ಕರ್, ಮೃಣಾಲ ಹೆಬ್ಬಾಳಕರ್, ಮಹೇಶ ಪಾಟೀಲ, ಗ್ರಾಮ ಪಂಚಾಯತಿಯ ಅಧ್ಯಕ್ಷರು, ಉಪಾಧ್ಯಕ್ಷರು ಉಪಸ್ಥಿತರಿದ್ದರು.

Read More »