Breaking News
Home / ಜಿಲ್ಲೆ (page 916)

ಜಿಲ್ಲೆ

ಕೊರೊನಾ ಆತಂಕ- ಮಗುವಿಗೆ ಹಾಲುಣಿಸುವ ಮುನ್ನ ತಾಯಂದಿರು ತೆಗೆದುಕೊಳ್ಳಬೇಕಾದ ಕ್ರಮಗಳು

ಬೆಂಗಳೂರು: ಕೊರೊನಾ ಆತಂಕ ಮಾತ್ರ ಕಡಿಮೆ ಆಗುತ್ತಲೇ ಇಲ್ಲ. ಪಕ್ಕದ ಬೀದಿಯಲ್ಲಿ ಬಂತು, ಮನೆಯ ಹಿಂದೆಯ ನಿವಾಸಿಗೆ ಸೋಂಕು ತಗುಲಿತು ಎಂಬ ವಿಷಯಗಳನ್ನು ನೀವು ಕೇಳಿರುತ್ತೀರಿ. ಕೊರೊನಾ ಭಯ ಬೇಡ ಮುಂಜಾಗ್ರತೆ ಇರಲಿ ಎಂದು ತಜ್ಞರು ಸೇರಿದಂತೆ ಸರ್ಕಾರ ಸಲಹೆಗಳನ್ನು ನೀಡುತ್ತಾ ಬಂದಿದೆ. ಆರೋಗ್ಯ ಇಲಾಖೆ ಸಹ ಕೊರೊನಾಗೆ ಸಂಬಂಧಿಸಿದ ಮಾಹಿತಿಯನ್ನು ಸಾರ್ವಜನಿಕರು ನೀಡುವ ಪ್ರಯತ್ನವನ್ನು ಮಾಡುತ್ತಿದೆ. ಮನೆಯಲ್ಲಿ ಮಕ್ಕಳು ಮತ್ತು ಹಿರಿಯರು ಇದ್ರೆ ಹೆಚ್ಚು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವುದು …

Read More »

ಹಿಂದೂ ಸಂಪ್ರದಾಯದಂತೆ ಪತಿಗೆ ಪತ್ನಿ ಪಾದಪೂಜೆ………..

ಬೆಂಗಳೂರು: ಭೀಮನ ಅಮಸ್ಯೆ ದಂಪತಿಗೆ ಪವಿತ್ರ ದಿನವಾಗಿದ್ದು, ಹಿಂದೂ ಸಂಪ್ರದಾಯದಂತೆ ಪತಿಗೆ ಪತ್ನಿ ಪಾದಪೂಜೆ ಮಾಡುತ್ತಾರೆ. ಈ ಕ್ಷಣಗಳನ್ನು ನೆನಪಿರಲಿ ಪ್ರೇಮ್ ಹಂಚಿಕೊಂಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿ, ಪತ್ನಿಯ ಪಾದ ಪೂಜೆಯಿಂದ ಜಾಕ್‍ಪಾಟ್ ಹೊಡಿಯಲಿದೆ ಎಂದು ಬರೆದಿದ್ದಾರೆ. ಈ ಕುರಿತು ಇನ್‍ಸ್ಟಾಗ್ರಾಮ್‍ನಲ್ಲಿ ಪೋಸ್ಟ್ ಮಾಡಿ ಸುಂದರ ಕ್ಷಣಗಳನ್ನು ಪ್ರೇಮ್ ಹಂಚಿಕೊಂಡಿದ್ದಾರೆ. ಇದಕ್ಕೆ ಸಾಲುಗಳನ್ನು ಬರೆದಿರುವ ಅವರು, ನಿನ್ನ ಪ್ರೀತ್ಸಿದ್ಮೇಲೆ ಆಯಸ್ಸು ಜಾಸ್ತಿ ಆಯಿತು. ಮದುವೆ ಆದ್ಮೇಲೆ ಅದೃಷ್ಟ ಕುಲಾಯಿಸ್ತು. …

Read More »

S.D.M.&K.I.M.S. ಫುಲ್ ಖಾಸಗಿ ಆಸ್ಪತ್ರೆಗಳಿಗೆ ಶೆಟ್ಟರ್ ಮನವಿ

ಧಾರವಾಡ: ಜಿಲ್ಲೆಯಲ್ಲಿ ಲಾಕ್‍ಡೌನ್ ಮುಂದುವರಿಸುವ ಬಗ್ಗೆ ಗಮನಿಸಬೇಕಿದೆ. ಜಿಲ್ಲೆಯಲ್ಲಿ ಇನ್ನೂ 24ರ ವರೆಗೆ ಲಾಕ್‍ಡೌನ್ ಇದೆ. ಗುರುವಾರ ಕ್ಯಾಬಿನೆಟ್ ಸಭೆ ಇದೆ ಅಲ್ಲಿಯೂ ಚರ್ಚಿಸುತ್ತೇವೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ತಿಳಿಸಿದರು. ಜಿಲ್ಲೆಯಲ್ಲಿ ಕೊರೊನಾ ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಅಧಿಕಾರಿಗಳ ಹಾಗೂ ಶಾಸಕರ ಸಭೆ ನಡೆಸಿದರು. ಸಭೆಯ ನಂತರ ಮಾತನಾಡಿದ ಅವರು, …

Read More »

ಗೂಗ್ಲಿ ಸಿನಿಮಾ ತೆರೆಕಂಡ ನಿನ್ನೆಗೆ 7 ವರ್ಷವಾಗಿದೆ. ಈ ಸಮಯದಲ್ಲಿ ಚಿತ್ರತಂಡ ಸಿನಿಮಾದ ಯಶಸ್ಸನ್ನು ನೆನಪಿಸಿಕೊಂಡಿದೆ.

ಬೆಂಗಳೂರು: ಪವನ್ ಒಡೆಯರ್ ನಿರ್ದೇಶನ, ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬ್ಲಾಕ್ ಬಸ್ಟರ್ ಚಿತ್ರ ಗೂಗ್ಲಿ ಸಿನಿಮಾ ತೆರೆಕಂಡ ನಿನ್ನೆಗೆ 7 ವರ್ಷವಾಗಿದೆ. ಈ ಸಮಯದಲ್ಲಿ ಚಿತ್ರತಂಡ ಸಿನಿಮಾದ ಯಶಸ್ಸನ್ನು ನೆನಪಿಸಿಕೊಂಡಿದೆ. 2013ರ ಜುಲೈ 19ರಂದು ಗೂಗ್ಲಿ ಸಿನಿಮಾ ತೆರೆಕಂಡಿತ್ತು. ಯಶ್ ನಾಯಕನಾಗಿ, ಕೃತಿ ಕರಬಂಧ ನಾಯಕಿಯಾಗಿ ಮಿಂಚಿದ್ದರು. ಲವ್, ಕಾಲೇಜ್ ಲೈಫ್, ಸಕ್ಸಸ್ ಹೀಗೆ ಎಲ್ಲ ಅಂಶಗಳನ್ನು ಒಳಗೊಂಡಿದ್ದ ಸಿನಿಮಾ ಅಂದು ಕಾಲೇಜು ಯುವಕ-ಯುವತಿಯರಿಗೆ ಬಹಳ ಇಷ್ಟ ಆಗಿತ್ತು. …

Read More »

ಮೈ-ಕೈ ಕೆಸರಿನ ಫೋಟೋದ ಬಳಿಕ ಟ್ರ್ಯಾಕ್ಟರ್ ಏರಿದ ಸಲ್ಲು ಭಾಯ್

ಮುಂಬೈ: ಮೈ-ಕೈ ಕೆಸರು ತುಂಬಿಕೊಂಡ ಫೋಟೋ ಭಾರೀ ಚರ್ಚೆಗೆ ಗುರಿಯಾದ ಬಳಿಕ ಇದೀಗ ಬಾಲಿವುಡ್ ಭಾಯ್‍ಜಾನ್ ಸಲ್ಮಾನ್ ಖಾನ್ ಕೃಷಿ ಮಾಡುತ್ತಿರುವ ವಿಡಿಯೋವೊಂದನ್ನು ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ್ದು, ಇದೀಗ ಈ ವಿಡಿಯೋ ಸಖತ್ ವೈರಲ್ ಆಗುತ್ತಿದೆ. ಹೌದು. ಕೊರೊನಾ ವೈರಸ್ ಎಂಬ ಚೀನಿ ಕಾಯಿಲೆ ನಮ್ಮ ದೇಶಕ್ಕೆ ಕಾಲಿಟ್ಟ ಬಳಿಕ ಅದು ಹರಡುವುದನ್ನು ತಡೆಗಟ್ಟುವ ಸಲುವಾಗಿ ದೇಶಾದ್ಯಂತ ಲಾಕ್‍ಡೌನ್ ಹೇರಲಾಯಿತು. ಪರಿಣಾಮ ಹಲವು ಮಂದಿ ಕೃಷಿಯತ್ತ ಮುಖಮಾಡಿದ್ದಾರೆ. ಅಂತೆಯೇ …

Read More »

ಜಮೀನಿನಲ್ಲಿ ಕೆಲಸ ಮಾಡ್ತಿದ್ದಾಗ ಸಿಡಿಲು ಬಡಿದು ರೈತ ಸಾವು

ಗದಗ: ಜಮೀನಿನಲ್ಲಿ ಬಿತ್ತನೆ ಕಾರ್ಯ ಮಾಡುತ್ತಿದ್ದ ವೇಳೆ ಸಿಡಿಲು ಬಡಿದು ರೈತ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ರೋಣ ತಾಲೂಕಿನ ಯಾವಗಲ್ ಗ್ರಾಮದಲ್ಲಿ ನಡೆದಿದೆ. 34 ವರ್ಷದ ಕೃಷ್ಣಪ್ಪ ಭಜಮ್ಮನವರ್ ಮೃತ ದುರ್ದೈವಿ ರೈತ. ನಾಲ್ಕು ಜನ ಸೇರಿಕೊಂಡು ಜಮೀನಿನಲ್ಲಿ ಮೆಣಸಿನ ಬೀಜ ಬಿತ್ತನೆ ಮಾಡ್ತಿದ್ದರು. ಮಳೆ ಬಂದ ಹಿನ್ನೆಲೆಯಲ್ಲಿ ಇತರೆ 3 ಬೇರೆ ಮರದಡಿ ನಿಂತುಕೊಂಡಿದ್ದಾರೆ. ಆದರೆ ಕೃಷ್ಣಪ್ಪ ಒಬ್ಬನೇ ಒಂದು ಮರದಡಿ ಮೊಬೈಲ್ ನಲ್ಲಿ ಮಾತನಾಡುತ್ತಾ ನಿಂತಿದ್ದರು. ಈ …

Read More »

ಬೆಳಗಾವಿ – ಜಿಲ್ಲೆಯಲ್ಲಿ ಇಂದು ಒಟ್ಟೂ 60 ಜನರಿಗೆ ಕೊರೋನಾ ಸೋಂಕು

ಬೆಳಗಾವಿ – ಜಿಲ್ಲೆಯಲ್ಲಿ ಇಂದು ಒಟ್ಟೂ 60 ಜನರಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ಬೆಳಗಾವಿ ನಗರದಲ್ಲಿ 35, ಚಿಕ್ಕೋಡಿಯಲ್ಲಿ 9, ಅಥಣಿ 15, ಸಂಕೇಶ್ವರದಲ್ಲಿ 1 ಪ್ರಕರಣ ದೃಢಪಟ್ಟಿದೆ. ಚಿಕ್ಕೋಡಿಯಲ್ಲಿ ಒಂದು ವರ್ಷ ಹಾಗೂ 8 ವರ್ಷದ ಗಂಡು ಮಕ್ಕಳಲ್ಲಿ ಸಹ ಕೊರೋನಾ ಸೋಂಕು ಪತ್ತೆಯಾಗಿದೆ. ಬೆಳಗಾವಿಯಲ್ಲಿ ಸಾವಿನ ಸಂಖ್ಯೆ 26 ಆಗಿದ್ದು, ಒಟ್ಟೂ ಸೋಂಕಿತರ ಸಂಖ್ಯೆ 618. ಇನ್ನೂ 2079 ಜನರ ಗಂಟಲು ದ್ರವದ ವರದಿ ಬರಬೇಕಿದೆ.

Read More »

ದ್ರೋಣ ಅಂತಾ ಕಾಗೆ ಹಾರಸಿರೋ ಪ್ರತಾಪ ನನ್ನ ಪೊಲೀಸರು ಬಂಧಿಸಿದ್ದಾರೆ..

ಬೆಂಗಳೂರು(ಜು.20): ಕ್ವಾರಂಟೈನ್ ನಿಯಮ ಉಲ್ಲಂಘಿಸಿ ತಲೆಮರೆಸಿಕೊಂಡಿದ್ದ ಡ್ರೋನ್ ಪ್ರತಾಪ್​ ಈಗ ಬೆಂಗಳೂರು ಪೊಲೀಸರ ಬಲೆಗೆ ಸಿಕ್ಕಿಬಿದ್ದಿದ್ದಾನೆ. ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಸಿಕ್ಕಿಬಿದ್ದ ಡ್ರೋನ್​​ ಪ್ರತಾಪ್​​​​​ನನ್ನು ವಶಕ್ಕೆ ಪಡೆದ ಪೊಲೀಸರು ಈಗ ಬೆಂಗಳೂರು ಕರೆ ತಂದಿದ್ದಾರೆ. ಡ್ರೋನ್ ಪ್ರತಾಪ್ ಜುಲೈ 15ರಂದು ಹೈದರಾಬಾದ್​ನಿಂದ ಬೆಂಗಳೂರಿಗೆ ಬಂದಿದ್ದ. ತಲಘಟ್ಟಪುರದ ಅಪಾರ್ಟ್ಮೆಂಟ್​ವೊಂದರಲ್ಲಿ ಈತ ಕ್ವಾರಂಟೈನ್ ಆಗಿದ್ದ. ಆತನ ಕೈಗೆ ಬಿಬಿಎಂಪಿಯಿಂದ ಕ್ವಾರಂಟೈನ್ ಸ್ಟಿಕರ್ ಕೂಡ ಅಂಟಿಸಲಾಗಿತ್ತು. ಆದರೆ, ಅದಾಗಿ ಎರಡೇ ದಿನಕ್ಕೆ ಈತ ಖಾಸಗಿ …

Read More »

ತಮ್ಮ‌ ತಮ್ಮ‌ ಮನೆಯಲ್ಲಿಯೇ ಬಸವ ಪಂಚಮಿ ಆಚರಿಸುವಂತೆ ಮಾನವ ಬಂಧುತ್ವ ವೇದಿಕೆ ಸಂಸ್ಥಾಪಕ ಸತೀಶ‌ ಜಾರಕಿಹೊಳಿ ಅವರು ಕರೆ ನೀಡಿದ್ದಾರೆ.

ಬೆಳಗಾವಿ: ಜು. 25 ರಂದು‌ ತಮ್ಮ‌ ತಮ್ಮ‌ ಮನೆಯಲ್ಲಿಯೇ ಬಸವ ಪಂಚಮಿ ಆಚರಿಸುವಂತೆ ಮಾನವ ಬಂಧುತ್ವ ವೇದಿಕೆ ಸಂಸ್ಥಾಪಕ ಸತೀಶ‌ ಜಾರಕಿಹೊಳಿ ಅವರು ಕರೆ ನೀಡಿದ್ದಾರೆ. ರಾಜ್ಯದಲ್ಲಿ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಪ್ರತಿ ವರ್ಷದಂತೆ ಈ ಭಾರೀ ಸಾರ್ವಜನಿಕ ಕಾರ್ಯಕ್ರಮ ಆಯೋಜನೆ ಬದಲು ತಮ್ಮ‌ ತಮ್ಮ ಮನೆಗಳಲ್ಲಿಯೇ ಬಸವ ಪಂಚಮಿ‌ ಆಚರಿಸುವಂತೆ ಅಭಿಮಾನಿಗಳಿಗೆ, ಸ್ವಾಮೀಜಿಗಳಿಕೆ ಹಾಗೂ ಮಾನವ ಬಂಧುತ್ವ ವೇದಿಕೆ ಕಾರ್ಯಕರ್ತರಿಗೆ ಸತೀಶ ಜಾರಕಿಹೊಳಿ ಅವರು ಮನವಿ …

Read More »

ರೈತರೊಬ್ಬರಿಂದ ಆರು ಸಾವಿರ ರೂಪಾಯಿ ಗಳ ಲಂಚ ಪಡೆಯುತ್ತಿದ್ದ ವೇಳೆ ಗಂಗಾವತಿ ತಹಸೀಲ್ದಾರಎಸಿಬಿ‌‌ ಬಲೆಗೆ

ಕೊಪ್ಪಳ:  ಜಮೀನಿನ ಖಾತಾ ಉತಾರ ಬದಲಾವಣೆಗೆ ಸಂಬಂಧಿಸಿದಂತೆ ರೈತರೊಬ್ಬರಿಂದ ಆರು ಸಾವಿರ ರೂಪಾಯಿ ಗಳ ಲಂಚ ಪಡೆಯುತ್ತಿದ್ದ ವೇಳೆ ಗಂಗಾವತಿ ತಹಸೀಲ್ದಾರ, ಮತ್ತು ಭೂಮಿ ಕೇಂದ್ರದ ತಹಸೀಲ್ದಾರ್  ‌ ಎಸಿಬಿ‌‌ ಬಲೆಗೆ ಬಿದಿದ್ದಾರೆ. ಎಸಿಬಿ‌ ಡಿಎಸ್ಪಿ ರುದ್ರೇಶ್ ಉಜ್ಜನಕೊಪ್ಪ ಅವರ ನೇತೃತ್ವದಲ್ಲಿ ನಡೆದ ದಾಳಿಯಲ್ಲಿ  ಗಂಗಾವತಿ ತಹಸೀಲ್ದಾರ ಎಲ್.ಡಿ.ಚಂದ್ರಕಾಂತ ಹಾಗೂ ಭೂಮಿ ಕೇಂದ್ರದ ಶಿರಸ್ತೆದಾರ ಶರಣಪ್ಪ ಅವರು ವಡ್ಡರಹಟ್ಟಿಯ ಸುಂದರರಾಜ ಎಂಬ ರೈತರಿಂದ ಜಮೀನಿನ ಖಾತಾ ಬದಲಾವಣೆಗೆ ರೂ.6  ಸಾವಿರ …

Read More »