Breaking News
Home / ಜಿಲ್ಲೆ (page 910)

ಜಿಲ್ಲೆ

ಸರಿಯಾದ ಸಮಯಕ್ಕೆ ಊಟ, ನಿದ್ರೆ, ಬಿಸಿ ನೀರು ಸೇವನೆ ಸೇರಿದಂತೆ ಉತ್ತಮ ದಿನಚರಿ ಅಳವಡಿಸಿಕೊಂಡರೆ ಕರೊನಾದಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳಬಹುದು ಮತ್ತು ಸೋಂಕಿತರು ಬೇಗ ಗುಣ ಹೊಂದಬಹುದು..

ಹುಬ್ಬಳ್ಳಿ: ಸರಿಯಾದ ಸಮಯಕ್ಕೆ ಊಟ, ನಿದ್ರೆ, ಬಿಸಿ ನೀರು ಸೇವನೆ ಸೇರಿದಂತೆ ಉತ್ತಮ ದಿನಚರಿ ಅಳವಡಿಸಿಕೊಂಡರೆ ಕರೊನಾದಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳಬಹುದು ಮತ್ತು ಸೋಂಕಿತರು ಬೇಗ ಗುಣ ಹೊಂದಬಹುದು.. ಇದು ಕರೊನಾ ಗೆದ್ದು ಬಂದ ಇಲ್ಲಿನ ಘಂಟಿಕೇರಿ ಪೊಲೀಸ್ ಠಾಣೆಯ ಇನ್ಸ್​ಪೆಕ್ಟರ್ ಮಹಾಂತೇಶ ಹೊಳಿ ಅವರ ಅನುಭವದ ಮಾತು. ಜು. 15ರಂದು ಸೋಂಕು ಪತ್ತೆಯಾಗಿ ಧಾರವಾಡದ ಬಿ.ಡಿ. ಜತ್ತಿ ಆಸ್ಪತ್ರೆಗೆ ದಾಖಲಾಗಿದ್ದ ಅವರು ಬುಧವಾರ ಬಿಡುಗಡೆಯಾಗಿದ್ದಾರೆ. 24 ಗಂಟೆ ಕರೊನಾ …

Read More »

ಜಿಲ್ಲೆಯಲ್ಲಿ ಹೊಸದಾಗಿ 219 ಜನರಿಗೆ ಬುಧವಾರ ಕೋವಿಡ್‌ 19 ದೃಢಪಟ್ಟಿದ್ದು, ಇದುವರೆಗೆ ಸೋಂಕಿತರಾದವರ ಸಂಖ್ಯೆ 1,315ಕ್ಕೆ ತಲುಪಿದೆ.

ಬೆಳಗಾವಿ: ಜಿಲ್ಲೆಯಲ್ಲಿ ಹೊಸದಾಗಿ 219 ಜನರಿಗೆ ಬುಧವಾರ ಕೋವಿಡ್‌ 19 ದೃಢಪಟ್ಟಿದ್ದು, ಇದುವರೆಗೆ ಸೋಂಕಿತರಾದವರ ಸಂಖ್ಯೆ 1,315ಕ್ಕೆ ತಲುಪಿದೆ. ಆಸ್ಪತ್ರೆ, ಅಗ್ನಿ ಶಾಮಕದಳ, ಲೋಕೋಪಯೋಗಿ ಇಲಾಖೆ ಹಾಗೂ ಅಬಕಾರಿ ಇಲಾಖೆಯ ಸಿಬ್ಬಂದಿಯೂ ಇದರಲ್ಲಿ ಸೇರಿದ್ದಾರೆ. ಸಾಂಬ್ರಾದಲ್ಲಿರುವ ಏರ್‌ಮನ್‌ ತರಬೇತಿ ಶಾಲೆಯ ಸಿಬ್ಬಂದಿಯಲ್ಲೂ ಸೋಂಕು ಕಾಣಿಸಿಕೊಂಡಿದೆ. ಈ ದಿನ ಯಾರೊಬ್ಬರೂ ಗುಣಮುಖರಾಗಿ ಬಿಡುಗಡೆಯಾಗಿಲ್ಲ. ಅಲ್ಲದೇ, ಯಾವುದೇ ಸಾವು ಸಂಭವಿಸಿಲ್ಲ. 830 ಪ್ರಕರಣಗಳು ಸಕ್ರಿಯವಾಗಿದ್ದು, ಇವುಗಳಲ್ಲಿ 9 ಜನರಿಗೆ ಜಿಲ್ಲಾಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. …

Read More »

ರಕ್ಷಣೆಗೆ ಆಗ್ರಹಿಸಿ ಬಿಮ್ಸ್‌ ಸಿಬ್ಬಂದಿ ಪ್ರತಿಭಟನೆ

ಬೆಳಗಾವಿ: ಇಲ್ಲಿನ ಬಿಮ್ಸ್‌ ಆಸ್ಪತ್ರೆಯಲ್ಲಿ ಬುಧವಾರ ರಾತ್ರಿ ಗುಂಪೊಂದು ಕಲ್ಲುತೂರಾಟ ನಡೆಸಿದ್ದನ್ನು ಖಂಡಿಸಿ ಮತ್ತು ತಮಗೆ ರಕ್ಷಣೆ ಒದಗಿಸುವಂತೆ ಆಗ್ರಹಿಸಿ ವೈದ್ಯಕೀಯ ಸಿಬ್ಬಂದಿ ಗುರುವಾರ ಪ್ರತಿಭಟಿಸಿದರು. ಬೆಳಿಗ್ಗೆಯೇ ಬಿಮ್ಸ್‌ ಕಾಲೇಜಿನ ಆವರಣದಲ್ಲಿ ಜಮಾಯಿಸಿದ ಅವರು, ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಸ್ಥಳಕ್ಕೆ ಬಂದ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಮಾತನಾಡಿ, ‘ಯಾವುದಾದರೂ ವ್ಯಕ್ತಿಗೆ ಕೊರೊನಾ ಬಂದಿದೆ ಎಂದಾಕ್ಷಣ ಜನರು ದೂರ ಹೋಗುತ್ತಿರುವ ಸಂದರ್ಭವಿದು. ಆದರೆ, ವೈದ್ಯರು ಹಾಗೂ ವೈದ್ಯಕೀಯ …

Read More »

ಸುವರ್ಣ ವಿಧಾನಸೌಧಕ್ಕೆ ರಾಜ್ಯಮಟ್ಟದ ಕಚೇರಿ ಸ್ಥಳಾಂತರಿಸಿ: ಭಾರತೀಯ ಕೃಷಿಕ ಸಮಾಜ

ಬೆಳಗಾವಿ: ಸುವರ್ಣ ವಿಧಾನಸೌಧಕ್ಕೆ ರಾಜ್ಯ ಹಾಗೂ ಜಿಲ್ಲಾ ಮಟ್ಟದ ಕಚೇರಿಗಳನ್ನು ಸ್ಥಳಾಂತರಿಸಬೇಕು ಎನ್ನುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಭಾರತೀಯ ಕೃಷಿಕ ಸಮಾಜ (ಸಂಯುಕ್ತ) ಸಂಘಟನೆ ನೇತೃತ್ವದಲ್ಲಿ ರೈತರು ಮತ್ತು ಮುಖಂಡರು ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು. ವ್ಯಾಪಕ ಪ್ರತಿರೋಧ ನಡೆಯೂ ರಾಜ್ಯ ಸರ್ಕಾರವು ಭೂಸುಧಾರಣಾ ತಿದ್ದುಪಡಿ ಕಾಯ್ದೆಯನ್ನು ಜಾರಿಗೊಳಿಸುತ್ತಿರುವುದು ರೈತರ ಮರಣ ಶಾಸನ ಬರೆದಂತಾಗಿದೆ. ಕೂಡಲೇ ಈ ಕಾಯ್ದೆಯನ್ನು ಹಿಂಪಡೆಯಬೇಕು. ಕೊರೊನಾ ವೈರಸ್‌ …

Read More »

ಕೊಪ್ಪಳದಲ್ಲಿ ನಾಪತ್ತೆಯಾಗಿದ್ದ ಬಾಲಕ ಹಳ್ಳದಲ್ಲಿ ಶವವಾಗಿ ಪತ್ತೆ ; ಮುಗಿಲು ಮುಟ್ಟಿದ ಹೆತ್ತವರ ಆಕ್ರಂದನ

ಕೊಪ್ಪಳ(ಜುಲೈ.23): ಕಾಣೆಯಾಗಿದ್ದ ಬಾಲಕನೊಬ್ಬ ಹಳ್ಳದಲ್ಲಿ ಶವವಾಗಿ ಪತ್ತೆಯಾಗಿದ್ದಾನೆ. ಈ ದುರಂತ ಘಟನೆ ನಡೆದಿದ್ದು ಕೊಪ್ಪಳದ ತಾಲೂಕಿನ ಹಲಗೇರಿ ಹಳ್ಳದಲ್ಲಿ. ಆಡಿ ಬೆಳೆಯುವ ವಯಸ್ಸಿನ 4ನೇ ತರಗತಿಯಲ್ಲಿ ಓದುತ್ತಿದ್ದ ಆ ಬಾಲಕ ಮಂಜುನಾಥ ಬುರ್ಲಿ ಬದುಕಿನ ಬಗ್ಗೆ, ಹೆತ್ತವರು ಅಗಾಧ ಕನಸು ಕಂಡಿದ್ದರು. ಕೆಲ ದಿನಗಳ ಹಿಂದೆ ಇದ್ದಕ್ಕಿದ್ದಂತೆ ಕಾಣೆಯಾಗಿದ್ದ ಈ ಬಾಲಕ ಬುಧವಾರ ಶವವಾಗಿ ಪತ್ತೆಯಾಗಿದ್ದಾನೆ. ಮಗನ ಶವವನ್ನು ಕಂಡು ಹೆತ್ತವರ ಆಕ್ರಂದನ ಮುಗಿಲು ಮುಟ್ಟಿದೆ. ಚಿಕ್ಕವಯಸ್ಸಿನ ಮಗನನ್ನು ಕಳೆದುಕೊಂಡ ತಾಯಿಯ ಸಂಕಟ …

Read More »

ಬೈಕ್ ಡಿಕ್ಕಿ – ಕರ್ತವ್ಯಕ್ಕೆ ತೆರಳುತ್ತಿದ್ದ ಎಎಸ್‍ಐ ಸಾವು

ಕೋಲಾರ: ಎರಡು ಬೈಕ್‍ಗಳ ನಡುವೆ ನಡೆದ ಅಪಘಾತದಲ್ಲಿ ಕರ್ತವ್ಯಕ್ಕೆ ತೆರಳುತ್ತಿದ್ದ ಎಎಸ್‍ಐ ಸಾವನ್ನಪ್ಪಿರುವ ಘಟನೆ ಕೋಲಾರದಲ್ಲಿ ನಡೆದಿದೆ. ಶ್ರೀನಿವಾಸಪುರ ಪೊಲೀಸ್ ಠಾಣೆಯ ಎಎಸ್‍ಐ ಮಂಜುನಾಥ್ (52) ಮೃತಪಟ್ಟವರು. ಜಿಲ್ಲೆಯ ಶ್ರೀನಿವಾಸಪುರ ತಾಲೂಕು ಶಿವಪುರ ಗ್ರಾಮದ ಬಳಿ ಕಳೆದ ರಾತ್ರಿ ಈ ಘಟನೆ ನಡೆದಿದ್ದು, ಕರ್ತವ್ಯಕ್ಕೆ ತೆರಳುವ ವೇಳೆ ಎದುರಿಗೆ ಬಂದ ಬೈಕ್ ಡಿಕ್ಕಿಯಾಗಿ ಸ್ಥಳದಲ್ಲೇ ಎಎಸ್‍ಐ ಸಾವನ್ನಪ್ಪಿದ್ದಾರೆ.ಬುಧವಾರ ರಾತ್ರಿ ಕೋಲಾರದಿಂದ ಶ್ರೀನಿವಾಸಪುರಕ್ಕೆ ಕರ್ತವ್ಯಕ್ಕೆ ತೆರಳುವ ಮಾರ್ಗ ಮಧ್ಯೆ ಈ ಘಟನೆ …

Read More »

ಡಿಸೆಂಬರ್ 31ರವರೆಗೆ ವರ್ಕ್ ಫ್ರಂ ಹೋಂ……

ನವದೆಹಲಿ: ಡಿಸೆಂಬರ್ 31ರವರೆಗೆ ವರ್ಕ್ ಫ್ರಂ ಹೋಂ ಮುಂದುವರಿಸುವಂತೆ ಖಾಸಗಿ ಕಂಪನಿಗಳಿಗೆ ಸರ್ಕಾರ ತಿಳಿಸಿದೆ. ದೇಶದಲ್ಲಿ ಕೊರೊನಾ ಆರ್ಭಟ ಹೆಚ್ಚಳವಾಗ್ತಿದ್ದಂತೆ ಸರ್ಕಾರದ ಸಲಹೆ ಮೇರೆಗೆ ಖಾಸಗಿ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಮನೆಯಿಂದ ಕೆಲಸ ಮಾಡುವಂತೆ ತಿಳಿಸಿದ್ದವು. ಐಟಿ ಕಂಪನಿಗಳ ಶೇ.85 ರಷ್ಟು ಉದ್ಯೋಗಿಗಳು ಸದ್ಯ ಮನೆಯಿಂದ ಕೆಲಸ ಮಾಡುತ್ತಿದ್ದಾರೆ.ದೇಶವು ಅನ್‍ಲಾಕ್ ಆಗಿದ್ದರೂ ಕೊರೊನಾ ಆತಂಕ ಮಾತ್ರ ಕಡಿಮೆಯಾಗಿಲ್ಲ. ಸರ್ಕಾರ ಜನದಟ್ಟಣೆ ತಡೆಯುವ ಉದ್ದೇಶದಿಂದ ಐಟಿ, ಬಿಪಿಓ ಸೇರಿದಂತೆ ಖಾಸಗಿ ಕಂಪನಿಗಳು …

Read More »

ಸಂಕಷ್ಟದಲ್ಲಿ ಐಟಿಬಿಟಿ ಕಂಪೆನಿಗಳು, ಬಿಬಿಎಂಪಿಗೆ 2 ಸಾವಿರ ಕೋಟಿ ತೆರಿಗೆ ನಷ್ಟದ ಆತಂಕ..!

ಬೆಂಗಳೂರು, ಜು.22- ಲಾಕ್‍ಡೌನ್‍ನಿಂದ ಐಟಿಬಿಟಿ ಕಂಪೆನಿಗಳು ತೀವ್ರವಾಗಿ ಕಂಗೆಟ್ಟಿದ್ದು, ಇದರಿಂದ ಬಿಬಿಎಂಪಿಗೆ ಬರೋಬ್ಬರಿ 2 ಸಾವಿರ ಕೋಟಿ ರೂ.ಗಳಷ್ಟು ತೆರಿಗೆ ನಷ್ಟವಾಗುವ ಆತಂಕ ಎದುರಾಗಿದೆ. ಮೊದಲ ಲಾಕ್‍ಡೌನ್ ಹಾಗೂ ರಾಜ್ಯಸರ್ಕಾರದಿಂದ ಮತ್ತೊಂದು ಸುತ್ತಿನ ಲಾಕ್‍ಡೌನ್ ಜಾರಿಗೊಳಿಸಿದ ಪರಿಣಾಮ ಐಟಿಬಿಟಿ ಕಂಪೆನಿಗಳು, ವಾಣಿಜ್ಯ ಮಳಿಗೆಗಳು, ಕೈಗಾರಿಕಾ ಕ್ಷೇತ್ರ ಕಂಗೆಟ್ಟು ಹೋಗಿವೆ. ಕಳೆದ ಮಾರ್ಚ್‍ನಿಂದ ಎಲ್ಲ ವಹಿವಾಟುಗಳು ಬಂದ್ ಆಗಿರುವ ಹಿನ್ನೆಲೆಯಲ್ಲಿ 2020-21ನೆ ಸಾಲಿನ ವಾಣಿಜ್ಯ ತೆರಿಗೆ ಮನ್ನಾ ಮಾಡಬೇಕೆಂದು ಐಟಿಬಿಟಿ ಕಂಪೆನಿಗಳು, …

Read More »

ದರೋಡೆ ಕಥೆಕಟ್ಟಿ 7.5 ಲಕ್ಷ ಹಣ ಲಪಾಟಿಯಿಸಿದ್ದ ಆಸಾಮಿಗಳು ಅರೆಸ್ಟ್..!

ತುಮಕೂರು, ಜು.23- ಪೊಲೀಸರಿಗೆ ಕಥೆ ಕಟ್ಟಿ ಹಣ ದರೋಡೆ ಅಗಿದೆ ಎಂದು ಕಥೆ ಕಟ್ಟಿ 7.53 ಲಕ್ಷ ರೂ.ಗಳನ್ನು ಲಪಾಟಿಯಿಸಿದ್ದ ಕೋಟಕ್ ಮಹೇಂದ್ರ ಬ್ಯಾಂಕ್‍ನ ರಿಕವರಿ ಎಕ್ಸಿಕ್ಯುಟಿವ್ ಸೇರಿ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ನಟರಾಜು.ಸಿ (31), 2) ಅಶೋ.ಬಿ.ಹೆಚ್ (32) ಬಂಧಿತ ಆರೋಪಿಗಳು.ಜು.15ರಂದು ರಾತ್ರಿ 10.30ರ ಸಮಯದಲ್ಲಿ ಶಿರಾ ತಾಲ್ಲೂಕಿನ ಚಿಕ್ಕದಾಸರಹಳ್ಳಿಯವನಾದ ಕೋಟಕ್ ಮಹೇಂದ್ರ ಬ್ಯಾಂಕಿನ ರಿಕವರಿ ಎಕ್ಸಿಕ್ಯುಟೀವ್ ನಟರಾಜು.ಸಿ ಎಂಬಾತ ದರೋಡೆ ಕಥೆ ಕಟ್ಟಿ ಪೊಲೀಸರಿಗೆ ದೂರು ನೀಡಿದ್ದನು.ಅಂದು …

Read More »

: ಜನ ಯಾರನ್ನು ನಂಬಬೇಕೋ? ಯಾವುದನ್ನು ನಂಬಬೇಕೋ ಗೊತ್ತಾಗುತ್ತಿಲ್ಲ……/ಕೊರೋನಾ ಸಾವು ಮುಚ್ಚಿಡಲಾಗುತ್ತಿದ್ಯಾ?

ಬೆಂಗಳೂರು: ಜನ ಯಾರನ್ನು ನಂಬಬೇಕೋ? ಯಾವುದನ್ನು ನಂಬಬೇಕೋ ಗೊತ್ತಾಗುತ್ತಿಲ್ಲ. ಕೊರೊನಾ ಸಂಬಂಧ ವೈದ್ಯಕೀಯ ವಸ್ತು, ಔಷಧಿಗಳ ಖರೀದಿಯಲ್ಲಿ ಭಾರೀ ಗೋಲ್‍ಮಾಲ್ ನಡೆದಿದೆ ಎಂಬ ಆರೋಪ ಕೇಳಿಬಂದಿತ್ತು. ಇದೀಗ ಆರೋಗ್ಯ ಇಲಾಖೆ ನೀಡುವ ಕೊರೋನಾ ಹೆಲ್ತ್ ಬುಲೆಟಿನ್‍ನಲ್ಲಿ ನಿತ್ಯ ನೀಡುವ ಅಂಕಿ ಸಂಖ್ಯೆಯನ್ನೂ ಅನುಮಾನದಿಂದ ನೋಡುವ ಸಂದರ್ಭ ಎದುರಾಗಿದೆ. ಯಾಕೆಂದರೆ ಕೊರೋನಾ ಸಾವು ನೋವುಗಳ ಲೆಕ್ಕವನ್ನು ಮುಚ್ಚಿಟ್ಟಿರೋದು ಕೂಡ ಇದೀಗ ಜಗಜ್ಜಾಹೀರಾಗಿದೆ. ಯಾವುದೋ ಕಾರಣಕ್ಕೆ, ಎಂದೋ ಸತ್ತವರನ್ನು ಕೊರೋನಾ ಸಾವಿನ ಪಟ್ಟಿಗೆ …

Read More »