Breaking News
Home / ಜಿಲ್ಲೆ / ಕೊಪ್ಪಳ / ರೈತರೊಬ್ಬರಿಂದ ಆರು ಸಾವಿರ ರೂಪಾಯಿ ಗಳ ಲಂಚ ಪಡೆಯುತ್ತಿದ್ದ ವೇಳೆ ಗಂಗಾವತಿ ತಹಸೀಲ್ದಾರಎಸಿಬಿ‌‌ ಬಲೆಗೆ

ರೈತರೊಬ್ಬರಿಂದ ಆರು ಸಾವಿರ ರೂಪಾಯಿ ಗಳ ಲಂಚ ಪಡೆಯುತ್ತಿದ್ದ ವೇಳೆ ಗಂಗಾವತಿ ತಹಸೀಲ್ದಾರಎಸಿಬಿ‌‌ ಬಲೆಗೆ

Spread the love

ಕೊಪ್ಪಳ:  ಜಮೀನಿನ ಖಾತಾ ಉತಾರ ಬದಲಾವಣೆಗೆ ಸಂಬಂಧಿಸಿದಂತೆ ರೈತರೊಬ್ಬರಿಂದ ಆರು ಸಾವಿರ ರೂಪಾಯಿ ಗಳ ಲಂಚ ಪಡೆಯುತ್ತಿದ್ದ ವೇಳೆ ಗಂಗಾವತಿ ತಹಸೀಲ್ದಾರ, ಮತ್ತು ಭೂಮಿ ಕೇಂದ್ರದ ತಹಸೀಲ್ದಾರ್  ‌ ಎಸಿಬಿ‌‌ ಬಲೆಗೆ ಬಿದಿದ್ದಾರೆ.

ಎಸಿಬಿ‌ ಡಿಎಸ್ಪಿ ರುದ್ರೇಶ್ ಉಜ್ಜನಕೊಪ್ಪ ಅವರ ನೇತೃತ್ವದಲ್ಲಿ ನಡೆದ ದಾಳಿಯಲ್ಲಿ  ಗಂಗಾವತಿ ತಹಸೀಲ್ದಾರ ಎಲ್.ಡಿ.ಚಂದ್ರಕಾಂತ ಹಾಗೂ ಭೂಮಿ ಕೇಂದ್ರದ ಶಿರಸ್ತೆದಾರ ಶರಣಪ್ಪ ಅವರು ವಡ್ಡರಹಟ್ಟಿಯ ಸುಂದರರಾಜ ಎಂಬ ರೈತರಿಂದ ಜಮೀನಿನ ಖಾತಾ ಬದಲಾವಣೆಗೆ ರೂ.6  ಸಾವಿರ ಗಳ ಲಂಚಕ್ಕೆ ಬೇಡಿಕೆ ಇಟ್ಟಿದ್ದರು, ರೈತನಿಂದ ಲಂಚ ಸ್ವೀಕರಿಸುವಾಗ ಸಿಕ್ಕುಬಿದಿದ್ದಾರೆ.

ಎಸಿಬಿ ಬಳ್ಳಾರಿ ಎಸ್ಪಿ‌ ಬಿ.ಎಸ್ ನೇಮಗೌಡ ಅವರ ಮಾರ್ಗದರ್ಶನ ನದಲ್ಲಿ ಡಿಎಸ್ಪಿ ಆರ್.ಉಜ್ಜನಕೊಪ್ಪ, ಪೊಲೀಸ್ ಇನ್ಸಪೇಕ್ಟರ್ ಎಸ್.ಎಸ್.ಬೀಳಗಿ,‌ ಗುರುರಾಜ, ಹಾಗೂ ಸಿಬ್ನಂದಿಗಳು ನಡೆಸಿದ ದಾಳಿವೇಳೆ ತಹಸೀಲ್ದಾರ ಹಾಗೂ ಶಿರಸ್ತೆದಾರರು ಬಲೆಗೆ ಒಳಗಾಗಿದ್ದು, ತನಿಖೆ ಮುಂದುವರೆದಿದೆ.

 


Spread the love

About Laxminews 24x7

Check Also

ಆಗಸ್ಟ್​ ತಿಂಗಳೊಳಗೆ ಐದೂ ಗ್ಯಾರಂಟಿ ಯೋಜನೆಗಳನ್ನು ನೂರಕ್ಕೆ ನೂರರಷ್ಟು ಜಾರಿ ಮಾಡುತ್ತೇವೆ ಎಂದು ಸಚಿವ ಶಿವರಾಜ ತಂಗಡಗಿ

Spread the love ಕೊಪ್ಪಳ: ಯುಪಿಎ ಸರ್ಕಾರದ ಅವಧಿಯಲ್ಲಿ ಆಹಾರ ಭದ್ರತೆ ಕಾನೂನು ಜಾರಿಗೆ ತರಲಾಗಿದೆ. ನಾವು ಐದೂ ಗ್ಯಾರಂಟಿಗಳನ್ನು ಯಶಸ್ವಿಯಾಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ