ಬೆಂಗಳೂರು: ನಗರದ ಅಪಾರ್ಟ್‌ಮೆಂಟ್ ಸಮುಚ್ಚಯವೊಂದರಲ್ಲಿ ಡ್ರಗ್ಸ್ ಪಾರ್ಟಿ ಆಯೋಜಿಸಿ ಉದ್ಯಮಿಗಳಿಬ್ಬರು ಸಿಕ್ಕಿಬಿದ್ದ ಪ್ರಕರಣದಲ್ಲಿ ಭಾಗಿಯಾದ ಆರೋಪದಡಿ ಬಿಗ್‌ಬಾಸ್ ರಿಯಾಲಿಟಿ ಶೋ ಸ್ಪರ್ಧಿ ಮಸ್ತಾನ್ ಚಂದ್ರ ಮನೆ ಮೇಲೆ ಪೊಲೀಸರು ಶುಕ್ರವಾರ ದಾಳಿ ಮಾಡಿದ್ದಾರೆ. ಬಾಣಸವಾಡಿ ಉಪವಿಭಾಗದ ಎಸಿಪಿ ನಿಂಗಪ್ಪ ಸಕ್ರಿ ಅವರ ನೇತೃತ್ವದಲ್ಲಿ ಈ ದಾಳಿ ನಡೆದಿದೆ. ಸಂಜಯನಗರದಲ್ಲಿರುವ ಮನೆಯಲ್ಲಿ ಪರಿಶೀಲನೆ ನಡೆಸಿದ ಬಳಿಕ ಮಸ್ತಾನ್ ಅವರನ್ನು ವಶಕ್ಕೆ ಪಡೆದ ಪೊಲೀಸರು, ಠಾಣೆಗೆ ಕರೆದೊಯ್ದಿದ್ದಾರೆ. ಇತ್ತೀಚೆಗಷ್ಟೇ ಪ್ರಕರಣದಲ್ಲಿ ನೈಜೀರಿಯಾ ಪ್ರಜೆಯೊಬ್ಬನನ್ನು …
Read More »ರಮೇಶ್ ಜಾರಕಿಹೊಳಿಯವರಿಂದ ತೆರವಾದ ಸ್ಥಾನವನ್ನ ಅವರ ಕುಟುಂಬಸ್ಥರಿಗೆ ಕೊಡಬೇಕು,: ಮಹೇಶ್ ಕುಮಟಳ್ಳಿ
ಬೆಂಗಳೂರು : ರಮೇಶ್ ಜಾರಕಿಹೊಳಿ ದೈವ ಭಕ್ತರು, ಆದ್ರೆ ಯಾಕೆ ಹೀಗೆ ಆಗಿದೆ ಗೊತ್ತಾಗ್ತಿಲ್ಲ ಎಂದು ಶಾಸಕ ಮಹೇಶ್ ಕುಮಟಳ್ಳಿ ಹೇಳಿಕೆ ನೀಡಿದ್ದಾರೆ. ವಿಡಿಯೋದಲ್ಲಿನ ದೃಶ್ಯಾವಳಿಗಳನ್ನ ನೋಡಿದ್ರೆ ಎಲ್ಲೂ ಬಲತ್ಕಾರದ ರೀತಿ ಗೊತ್ತಾಗ್ತಿಲ್ಲ. ಇದು ಪ್ರೀ ಪ್ಲಾನ್ ಅನ್ನೋದು ಗೊತ್ತಾಗ್ತಿದೆ. ಸಿಡಿ ಫೇಕ್ ಆಗಿರಲಿ ಅಥವಾ ಅವರಿಬ್ಬರು ಪ್ರಬುದ್ಧರಿದ್ದು ನಡೆದಿದ್ದೇ ಇರಲಿ, ಅದು ಸ್ವಯಂ ಪ್ರೇರಣೆ ಅನ್ನೋದನ್ನ ನಾವೂ ಗಮನಿಸಿದ್ದೇವೆ. ಹೀಗಾಗಿ ಇದು ಹನಿಟ್ರ್ಯಾಪ್ ಎಂದು ಹೇಳಿದ್ದಾರೆ. ಇನ್ನು ರಮೇಶ್ …
Read More »ಪೆಟ್ರೋಲ್-ಡೀಸೆಲ್‌ನಿಂದ ರಾಜ್ಯಕ್ಕೆ ₹12,342 ಕೋಟಿ ತೆರಿಗೆ
ಬೆಂಗಳೂರು: ‘ಡೀಸೆಲ್ ಮತ್ತು ಪೆಟ್ರೋಲ್‌ನಿಂದ ರಾಜ್ಯ ಸರ್ಕಾರಕ್ಕೆ 2020-21ನೇ ಸಾಲಿನಲ್ಲಿ ಜನವರಿ ಅಂತ್ಯಕ್ಕೆ ₹12,432 ಕೋಟಿ ತೆರಿಗೆ ಬಂದಿದೆ’ ಎಂದು ರಾಜ್ಯ ಸರ್ಕಾರ ಹೇಳಿದೆ. ವಿಧಾನಪರಿಷತ್ತಿನಲ್ಲಿ ಕಾಂಗ್ರೆಸ್‌ನ ಪ್ರಕಾಶ್ ರಾಠೋಡ್ ಪ್ರಶ್ನೆ ಕೇಳಿದ್ದರು. ‘ದಕ್ಷಿಣದ ರಾಜ್ಯಗಳಿಗೆ ಹೋಲಿಸಿದಾಗ ಕೇರಳ ಬಿಟ್ಟು ಪೆಟ್ರೋಲ್, ಡೀಸೆಲ್ ಬೆಲೆ ನಮ್ಮ ರಾಜ್ಯದಲ್ಲಿಯೇ ಕಡಿಮೆ ಇದೆ. ಆದರೆ, ಈ ಮೂಲದಿಂದ ಕೇಂದ್ರ ಸರ್ಕಾರಕ್ಕೆ ಎಷ್ಟು ತೆರಿಗೆ ಬಂದಿದೆ ಎಂಬ ಮಾಹಿತಿ ಇಲ್ಲ’ ಎಂದು ಸಭಾ ನಾಯಕ …
Read More »ಅಣ್ಣನ ಸಿಡಿ ಬಗ್ಗೆ ಮೌನ ಮುರಿದ ಸಹೋದರ ಲಖನ್ ಜಾರಕಿಹೊಳಿ ಹೇಳಿದ್ದೇನು?
ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಕೋರ್ಟ್ ಆಚೆಗೆ ಸರಿ -ತಪ್ಪುಗಳ ವಾದ ಪ್ರತಿವಾದ ನಡೆದಿದ್ದು, ವಿರೋಧ ಪಕ್ಷಗಳಿಂದ ಸಿಡಿ ಪ್ರಕರಣಕ್ಕೆ ವಿರೋಧ ವ್ಯಕ್ತವಾದರೆ, ರಮೇಶ್ ಬೆಂಬಲಿಗರು ಇದು ನಕಲಿ ಎಂದು ರಸ್ತೆಗಿಳಿದಿದ್ದಾರೆ. ಇದೆಲ್ಲಾ ಒಂದು ತೂಕವಾದರೆ ರಮೇಶ್ ಜಾರಕಿಹೊಳಿ ಸಹೋದರರು ರಮೇಶ್ ಬೆನ್ನಿಗೆ ನಿಂತಿದ್ದಾರೆ ಎನ್ನುವುದು ವಿಶೇಷ. ರಮೇಶಣ್ಣ ಇದರಿಂದ ಗೆದ್ದು ಬರುತ್ತಾರೆ ಇದು ರಾಜಕೀಯ ಷಡ್ಯಂತ್ರ. ರಮೇಶ್ರನ್ನು ರಾಜಕೀಯವಾಗಿ ಮುಗಿಸಲು ಈ …
Read More »ಪಂಚಮಸಾಲಿ ಮೀಸಲಾತಿ ಹೋರಾಟ : ಸಮಾಜದ ಶಾಸಕರು ಸದನದ ಬಾವಿಗಿಳಿದು ಹೋರಾಟ ಮಾಡುವಂತೆ ಸ್ವಾಮೀಜಿ ಕರೆ
ಬೆಂಗಳೂರು : ಪಂಚಮಸಾಲಿ ಸಮಾಜಕ್ಕೆ 2 ಎ ಮೀಸಲಾತಿ ಹೋರಾಟಕ್ಕೆ ಸಂಬಂಧಿಸಿದಂತೆ ಸಮಾಜದ ಶಾಸಕರು ಸದನದ ಬಾವಿಗಿಳಿದು ಹೋರಾಟ ಮಾಡುವಂತೆ ಪಂಚಮಸಾಲಿ ಕೂಡಲಸಂಗಮ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಸ್ವಾಮೀಜಿಗಳು, ಪಂಚಮಸಾಲಿ ಸಮಾಜದ 2 ಎ ಮೀಸಲಾತಿ ಸಂಬಂಧಿಸಿದಂತೆ ಬಿಜೆಪಿ ಶಾಸಕ ಯತ್ನಾಳ್ ಗೆ ಸಮಾಜದ 22 ಶಾಸಕಕರು ಬೆಂಬಲ ನೀಡಬೇಕು. ಇಲ್ಲದಿದ್ದರೆ ನಾಳೆ ಸಮಾಜದ 22 ಶಾಸಕರನ್ನು ಜನರು ನಿರ್ಲಕ್ಷ್ಯ ಮಾಡುತ್ತಾರೆ. …
Read More »ಬಹಳ ದಿನಗಳ ನಂತರ ಸಿದ್ದರಾಮಯ್ಯ ನಿವಾಸಕ್ಕೆ ಭೇಟಿ ನೀಡಿದ ಸಿ.ಎಂ. ಇಬ್ರಾಹಿಂ!
ಬೆಂಗಳೂರು: ಬಹಳ ದಿನಗಳ ನಂತರ ಮಾಜಿ ಸಚಿವ ಸಿ.ಎಂ ಇಬ್ರಾಹಿಂ ಅವರು ವಿಪಕ್ಷ ನಾಯಕ, ಮಾಜಿ ಸಿಎಂ ಸಿದ್ದರಾಮಯ್ಯ ನಿವಾಸಕ್ಕೆ ಭೇಟಿ ನೀಡಿದರು. ಕಾಂಗ್ರೆಸ್ ನಲ್ಲಿರುವ ಸಿ ಎಂ ಇಬ್ರಾಹಿಂ ಅವರು ಜೆಡಿಎಸ್ ಸೇರಲಿದ್ದಾರೆ ಎಂಬ ಸುದ್ದಿಯ ಬೆನ್ನಲ್ಲೇ ಸಿದ್ದರಾಮಯ್ಯ ಭೇಟಿ ಕುತೂಹಲ ಮೂಡಿಸಿದೆ. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಿ.ಎಂ ಇಬ್ರಾಹಿಂ, ಇಂದು ಶುಭ ಶುಕ್ರವಾರ, ಎಲ್ಲವೂ ಒಳ್ಳೆಯದಾಗುತ್ತದೆ ಎಂದರು. ಜೆಡಿಎಸ್ ಗೆ ಸೇರುವ ವಿಚಾರವಾಗಿ ಮಾತನಾಡಿದ ಅವರು, ಅದು …
Read More »ರಮೇಶ್ ಜಾರಕಿಹೊಳಿ ಪರ ಪ್ರತಿಭಟನೆ : ಬೆಂಕಿಯಲ್ಲಿ ಬಿದ್ದ ಅಭಿಮಾನಿ
ಬೆಳಗಾವಿ : ರಾಮೇಶ್ ಜಾರಕಿಹೊಳಿ ಪರವಾಗಿ ಅಭಿಮಾನಿಗಳು ಟೈರ್ ಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ವ್ಯಕ್ತಿಯೋರ್ವ ಬೆಂಕಿಯಲ್ಲಿ ಬಿದ್ದು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಇಲ್ಲಿನ ಬಸವೇಶ್ವರ ವೃತ್ತದಲ್ಲಿ ನಡೆದಿದೆ. ಗೋಕಾಕ್ ನಗರದ ಬಸವೇಶ್ವರ ವೃತ್ತದಲ್ಲಿ ರಮೇಶ ಜಾರಕಿಹೊಳಿ ಬೆಂಬಲಿಸಿ ಪ್ರತಿಭಟನೆ ನಡೆಸಲಾಯಿತು. ಈ ವೇಳೆ ರಾಮೇಶ್ ಪರ ಅಭಿಮಾನಿಗಳು ಟೈರ್ ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆಗ ಪ್ರತಿಭಟನಾಕಾರನೋರ್ವ ಬೆಂಕಿಯಲ್ಲಿಯೇ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ್ದಾನೆ. …
Read More »ಸೆಲೆಬ್ರಿಟಿಗಳಿಗೆ ಡ್ರಗ್ ಪೂರೈಸುತ್ತಿದ್ದ ಆರೋಪ: ಮಸ್ತಾನ್ ಚಂದ್ರ ಸೇರಿದಂತೆ ನೈಜೀರಿಯಾ ಮೂಲದ ಪ್ರಜೆ ಬಂಧನ
ಬೆಂಗಳೂರು: ಸೆಲೆಬ್ರಿಟಿಗಳಿಗೆ ಮಾದಕ ವಸ್ತು ಪೂರೈಸುತ್ತಿದ್ದ ಆರೋಪದ ಮೇಲೆ ಮಸ್ತಾನ್ ಚಂದ್ರ ನೈಜೀರಿಯಾ ಮೂಲದ ವ್ಯಕ್ತಿಯನ್ನು ನಗರ ಅಪರಾಧ ವಿಭಾಗದ ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರಿನ ಗೋವಿಂದಪುರ ಬಳಿಯ ಆತನ ನಿವಾಸದಿಂದ ಮಸ್ತಾನ್ ಚಂದ್ರನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈತ ಖಾಸಗಿ ವಾಹಿನಿಯ ರಿಯಾಲಿಟಿ ಶೋನಲ್ಲಿ ಸ್ಪರ್ಧಿಯಾಗಿದ್ದು, ಕೆಲ ಕನ್ನಡ ಸಿನೆಮಾಗಳಲ್ಲಿ ಕೂಡ ನಟಿಸಿದ್ದ ಎಂದು ತಿಳಿದುಬಂದಿದೆ. ಈ ಮೂಲಕ ಅಕ್ರಮವಾಗಿ ಮಾದಕ ವಸ್ತುಗಳ ಸಂಗ್ರಹ, ಮಾರಾಟ, ಕಳ್ಳಸಾಗಣೆ, ಸೇವನೆ …
Read More »ಬಿಗ್ ಬಾಸ್ʼ ಖ್ಯಾತಿಯ ಮಸ್ತಾನ್ ಪೊಲೀಸ್ ವಶಕ್ಕೆ
ಬೆಂಗಳೂರು: ಸ್ಯಾಂಡಲ್ ವುಡ್ ಸೆಲೆಬ್ರಿಟಿಗಳಿಗೆ ಡ್ರಗ್ ಪೂರೈಕೆ ಮಾಡುತ್ತಿದ್ದ ʼಬಿಗ್ ಬಾಸ್ʼ ಖ್ಯಾತಿಯ ಮಸ್ತಾನ್ ಚಂದ್ರ ನಿವಾಸದ ಮೇಲೆ ದಾಳಿ ನಡೆಸಿರುವ ಪೊಲೀಸರು ಮಸ್ತಾನ್ ನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಡ್ರಗ್ಸ್ ಪ್ರಕರಣ ಸಂಬಂಧ ಬಂಧನಕ್ಕೀಡಾಗಿದ್ದ ನೈಜಿರಿಯನ್ ಪ್ರಜೆ ವಿಚಾರಣೆ ವೇಳೆ ಮಸ್ತಾನ್ ಹೆಸರು ಬಾಯ್ಬಿಟ್ಟಿದ್ದ. ಈ ಹಿನ್ನೆಲೆಯಲ್ಲಿ ಇಂದು ಮುಂಜಾನೆ ಬಾಣಸವಾಡಿ ಎಸಿಪಿ ಸಕ್ರಿ ನೇತೃತ್ವದಲ್ಲಿ ಮಸ್ತಾನ್ ನಿವಾಸದ ಮೇಲೆ ದಾಳಿ ನಡೆಸಲಾಗಿತ್ತು. ಪ್ರಮುಖ ಡ್ರಗ್ ಪೆಡ್ಲರ್ ಗಳ ಜೊತೆ …
Read More »ಮಾಜಿ ಸಿಎಂ ಸಿದ್ದರಾಮಯ್ಯ ಕಾಲಿಗೆ ಬಿದ್ದು ಆಶೀರ್ವಾದ ಪಡೆದ ಡಿಕೆಶಿ
ಬೆಂಗಳೂರು : ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾಲಿಗೆ ಬಿದ್ದು ಆಶೀರ್ವಾದ ಪಡೆದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರ ಫೋಟೋ ಒಂದು ಸಖತ್ ವೈರಲ್ ಆಗಿದೆ. ನಿನ್ನೆ ಕೆಪಿಸಿಸಿ ಕಚೇರಿಯಲ್ಲಿ ಜನಧ್ವನಿ ಜಾಥಾ ಆರಂಭಕ್ಕೂ ಮೊದಲು ಹಿರಿಯ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ, ರಹೆಮಾನ್ ಖಾನ್ ಅವರ ಕಾಲು ಹಿಡಿದು ಡಿಕೆಶಿ ಆಶೀರ್ವಾದ ಪಡೆದಿದ್ದರು. ಇದರಲ್ಲಿ ಡಿಕೆಶಿ ಸಿದ್ದರಾಮಯ್ಯ ಕಾಲಿಗೆ ನಮಸ್ಕರಿಸಿದ್ದು, …
Read More »
Laxmi News 24×7