Breaking News

ಜಿಲ್ಲೆ

ಇಬ್ಬರು ಮಹಿಳಾ ಐಎಎಸ್ ಅಧಿಕಾರಿಗಳನ್ನೂ ಎತ್ತಂಗಡಿ ಮಾಡಿದ ರಾಜ್ಯ ಸರಕಾರ

ಬೆಂಗಳೂರು – ಕಳೆದ ಕೆಲವು ದಿನಗಳಿಂದ ತೀವ್ರ ವಿವಾದಕ್ಕೆ ಕಾರಣರಾಗಿದ್ದ ಇಬ್ಬರು ಮಹಿಳಾ ಐಎಎಸ್ ಅಧಿಕಾರಿಗಳನ್ನೂ ರಾಜ್ಯ ಸರಕಾರ ಎತ್ತಂಗಡಿ ಮಾಡಿದೆ. ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಹಾಗೂ ಪಾಲಿಕೆ ಆಯುಕ್ತೆ ಶಿಲ್ಪಾ ನಾಗ್ ಇಬ್ಬರನ್ನು ಶನಿವಾರ ರಾತ್ರಿ ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ. ರೋಹಿಣಿ ಸಿಂಧೂರಿ ಅವರನ್ನು ಧರ್ಮದತ್ತಿ ಇಲಾಖೆಯ ಆಯುಕ್ತರನ್ನಾಗಿ ವರ್ಗಾಯಿಸಲಾಗಿದ್ದು ಅವರ ಜಾಗಕ್ಕೆ ಗೌತಮ್ ಬಗಾದಿ ಅವರನ್ನು ಹಾಕಲಾಗಿದೆ. ಶಿಲ್ಪಾ ನಾಗ್ ಅವರನ್ನು ಗ್ರಾಮೀಣಾಭಿವೃದ್ಧಿ ಮತ್ತು …

Read More »

ಬೆಳಗಾವಿ | ವರ್ತುಲ ರಸ್ತೆ: ರಾಜ್ಯ ಸರ್ಕಾರದಿಂದ ₹ 140 ಕೋಟಿ

ಬೆಳಗಾವಿ: ರಾಷ್ಟ್ರೀಯ ಹೆದ್ದಾರಿ 4ಎನಲ್ಲಿನ ಝಾಡಶಹಾಪುರ ಗ್ರಾಮದಿಂದ ರಾಷ್ಟ್ರೀಯ ಹೆದ್ದಾರಿ 4ರಲ್ಲಿನ ಬೆನ್ನಾಳಿ ಗ್ರಾಮದವರೆಗೆ ನಿರ್ಮಿಸಲಿರುವ ನಾಲ್ಕು ಪಥಗಳ ರಿಂಗ್‌ (ವರ್ತುಲ) ರಸ್ತೆ ಕಾಮಗಾರಿಯನ್ನು ಆದ್ಯತೆ ಮೇರೆಗೆ ಕೈಗೊಳ್ಳುವ ನಿಟ್ಟಿನಲ್ಲಿ ಕ್ರಮ ವಹಿಸುವಂತೆ ರಾಜ್ಯದ ಲೋಕೋಪಯೋಗಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ)ದ ಅಧ್ಯಕ್ಷ ಡಾ.ಸುಖ್‌ಬಿರ್ ಸಿಂಗ್ ಸಂಧು ಅವರಿಗೆ ತಿಳಿಸಿದ್ದಾರೆ. ಈ ಬಗ್ಗೆ ಶುಕ್ರವಾರ ಪತ್ರ ಬರೆದಿರುವ ಅವರು, ‘ಸಮಗ್ರ ಯೋಜನಾ ವರದಿ ಅಂತಿಮ …

Read More »

ಜನ ಸಾಮಾನ್ಯರಿಗೆ ಶಾಕಿಂಗ್ ನ್ಯೂಸ್: ಪೆಟ್ರೋಲ್ 100 ರೂ., ಅಡುಗೆ ಎಣ್ಣೆ 200 ರೂ., ಗ್ಯಾಸ್ ಸೇರಿ ಅಗತ್ಯ ವಸ್ತುಗಳೆಲ್ಲಾ ದುಬಾರಿ

ಬೆಂಗಳೂರು: ಕೊರೋನಾ ಸಂಕಷ್ಟದ ಹೊತ್ತಲ್ಲೇ ಜನಸಾಮಾನ್ಯರಿಗೆ ಗಾಯದ ಮೇಲೆ ಬರೆ ಎಳೆದಂತೆ ಅಗತ್ಯವಸ್ತುಗಳ ಬೆಲೆ ಏರಿಕೆಯಾಗಿರುವುದು ನುಂಗಲಾರದ ತುತ್ತಾಗಿದೆ. ಪೆಟ್ರೋಲ್ ದರ 100 ರೂಪಾಯಿ ಸನಿಹಕ್ಕೆ ಬಂದಿದ್ದರೆ, ಅಡುಗೆ ಎಣ್ಣೆ 200 ರೂ. ಗಡಿಯತ್ತ ದಾಪುಗಾಲಿಟ್ಟಿದೆ. ಇನ್ನು ಬೇಳೆ ಬೆಲೆಯೂ ದುಬಾರಿಯಾಗಿದೆ. ಕೊರೋನಾ ಕಾರಣದಿಂದ ಕುಟುಂಬಗಳ ಆದಾಯದಲ್ಲಿ ಭಾರಿ ಕುಸಿತವಾಗಿದೆ. ಆದರೆ, ಇದೇ ವೇಳೆ ಅಗತ್ಯ ವಸ್ತುಗಳ ಬೆಲೆಏರಿಕೆ ಮಾತ್ರ ಏರುಗತಿಯಲ್ಲೇ ಸಾಗುತ್ತಿದೆ. ಉತ್ಪಾದನೆ ವೆಚ್ಚ ಕಡಿಮೆಯಾಗಿದ್ದರೂ ಇಂಧನ ದರ …

Read More »

ಬೈಕ್ ನಲ್ಲಿ ಬಂದು ಮಹಿಳೆಯರ ಹಿಂಭಾಗ ಸ್ಪರ್ಶಿಸಿ ಪರಾರಿಯಾಗ್ತಿದ್ದ ಕೀಚಕ; ಸೈಕೊ ಅರುಣ್ ಪೊಲೀಸರ ಬಲೆಗೆ

ಬೆಂಗಳೂರು: ಬೈಕ್ ನಲ್ಲಿ ಬಂದು ಮಹಿಳೆಯರ ಹಿಂಭಾಗ ಸ್ಪರ್ಶಿಸಿ ಅಸಭ್ಯವಾಗಿ ವರ್ತಿಸಿ ಪರಾರಿಯಾಗುತ್ತಿದ್ದ ಸೈಕೋನೋರ್ವನನ್ನು ಬೆಂಗಳೂರು ಕೋರಮಂಗಲ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಕೆಜಿಎಫ್ ರಾಬರ್ಟ್ ಪೇಟೆಯ ಸೈಕೋ ಅರುಣ್ ಕುಮಾರ್ ಎಂದು ಗುರುತಿಸಲಾಗಿದೆ. ರಾತ್ರಿ ವೇಳೆ ಬೈಕ್ ನಲ್ಲಿ ಅಡ್ಡಾಡುತ್ತಾ ಮಹಿಳೆಯರ ಮೈಕೈ ಮುಟ್ಟಿ ಅಸಭ್ಯವಾಗಿ ವರ್ತಿಸುತ್ತಿದ್ದ. ಈ ಬಗ್ಗೆ ಹಲವು ಯುವತಿಯರು ಪೊಲೀಸರಿಗೆ ದೂರು ನೀಡಿದ್ದರು. ಆದರೆ ಅರುಣ್ ಈವರೆಗೂ ಪೊಲೀಸರ ಕೈಗೆ ಸಿಕ್ಕಿರಲಿಲ್ಲ. ಮೇ 31ರ …

Read More »

ರಾಜಧಾನಿ ಬೆಂಗಳೂರಿನಲ್ಲಿ ಇದೇ ಮೊದಲ ಬಾರಿಗೆ ಪೆಟ್ರೋಲ್ ದರ ಶತಕ ಬಾರಿಸಿದೆ.

ಬೆಂಗಳೂರು: ರಾಜ್ಯದಲ್ಲಿ ಪೆಟ್ರೋಲ್ ಡಿಸೆಲ್ ದರ ಗಗನಮುಖಿಯಾಗಿದ್ದು, ರಾಜಧಾನಿ ಬೆಂಗಳೂರಿನಲ್ಲಿ ಇದೇ ಮೊದಲ ಬಾರಿಗೆ ಪೆಟ್ರೋಲ್ ದರ ಶತಕ ಬಾರಿಸಿದೆ. ಬೆಂಗಳೂರಿನಲ್ಲಿ ಲೀಟರ್ ಪೆಟ್ರೋಲ್ ದರ ಬರೋಬ್ಬರಿ 98ರೂಪಾಯಿ 19 ಪೈಸೆಯಾಗಿದೆ. ಲೀಟರ್ ಡೀಸೆಲ್ ದರ 90 ರೂಪಾಯಿ 84 ಪೈಯಾಗಿದೆ. ಕೊರೊನಾ ಲಾಕ್ ಡೌನ್ ನಿಂದ ಜನ ಸಾಮಾನ್ಯರ ಬದುಕು ದುಸ್ಥರವಾಗಿದ್ದು, ಈ ನಡುವೆ ತೈಲ ಬೆಲೆಯಲ್ಲಿ ಭಾರಿ ಏರಿಕೆಯಾಗಿರುವುದು ಜನರ ಜೇಬಿಗೆ ಕತ್ತರಿ ಬಿದ್ದಂತಾಗಿದೆ. ಮುಂಬೈ ಮಹಾನಗರದಲ್ಲಿ …

Read More »

ಶಾಸಕರ ನಿಧಿಯಿಂದ ನೀಡಲಾದ ಎರಡು ರಕ್ಷಾ ಕವಚ ವಾಹನಗಳನ್ನು ಲೋಕಾರ್ಪಣೆಗೊಳಿಸಿದ ಜಡಿ ಸಿದ್ದೇಶ್ವರ ಮಠದ ಪೀಠಾಧಿಪತಿ

  ಮೂಡಲಗಿ: ಕೊರೋನಾ ಸೋಂಕಿತರ ನೇರವಿನ ಹಸ್ತ ಹಾಗೂ ಅಮೂಲ್ಯ ಜೀವ ಉಳಿಸುವ ಸಂದರ್ಭದಲ್ಲಿ ಅವಶ್ಯಕವಾಗಿ ಅಂಬ್ಯುಲೆನ್ಸ್‍ಗಳ ಅಗತ್ಯವಿದೆ. ಅರಭಾಂವಿ ಕ್ಷೇತ್ರದ ಶಾಸಕರ ನಿಧಿಯಿಂದ ನೀಡಿರುವ ತುರ್ತು ಸೇವೆ ಸೋಂಕಿತರಿಗೆ ಸಹಕಾರಿಯಾಗುವದು. ಶಾಸಕ ಹಾಗೂ ಕಹಾಮ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿಯವರ ಕಾರ್ಯ ಶ್ಲಾಘನೀಯವಾಗಿದೆ ಎಂದು ಸುಣಧೋಳಿ ಜಡಿಸಿದ್ಧೇಶ್ವರ ಮಠದ ಪೀಠಾಧಿಕಾರಿಗಳಾದ ಶ್ರೀ ಅಭಿನವ ಶಿವಾನಂದ ಸ್ವಾಮೀಜಿ ಹೇಳಿದರು.     ಅವರು ಶುಕ್ರವಾರ ಪಟ್ಟಣದ ಮೇಲ್ದರ್ಜೆಗೇರಿಸಿದ ಸಮುದಾಯ ಆರೋಗ್ಯ ಕೇಂದ್ರದಲ್ಲಿ …

Read More »

ಪ್ರಜಾಪ್ರಭುತ್ವದ ಮೂರು ಮಂಗಗಳು ನಾಚುವಂತೆ ಸರ್ಕಾರ ವರ್ತಿಸುತ್ತಿದೆ’

ಬೆಂಗಳೂರು: ಮೈಸೂರಿನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಹಾಗೂ ಪಾಲಿಕೆ ಮೇಯರ್​ ಶಿಲ್ಪಾ ನಾಗ್​ ನಡುವಿನ ಜಟಾಪಟಿ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಮಾಜಿ ಸಿಎಂ ಹೆಚ್​.ಡಿ. ಕುಮಾರಸ್ವಾಮಿ ಸರ್ಕಾರ ಪ್ರಜಾಪ್ರಭುತ್ವದ ಮೂರು ಮಂಗಗಳು ನಾಚುವಂತೆ ವರ್ತಿಸುತ್ತಿದೆ ಎಂದು ವ್ಯಂಗ್ಯವಾಡಿದ್ದಾರೆ. ಹೆಚ್​.ಡಿ.ಕುಮಾರಸ್ವಾಮಿ ಟ್ವೀಟ್​ಗಳು.. ಸಾಂಸ್ಕೃತಿಕ ನಗರಿ ಮೈಸೂರಿನ ಜಿಲ್ಲಾಧಿಕಾರಿ ಹಾಗೂ ಅಲ್ಲಿನ ಪಾಲಿಕೆ ಆಯುಕ್ತರ ನಡುವೆ ನಡೆಸುತ್ತಿರುವ ಹಾದಿ- ಬೀದಿ ಜಗಳ ನೋಡಿದರೆ, ರಾಜ್ಯದಲ್ಲಿ ಸರಕಾರ ಅಸ್ಥಿತ್ವದಲ್ಲಿದಿಯೋ ಇಲ್ಲವೋ ಎಂಬ ಅನುಮಾನ ಸಾರ್ವಜನಿಕ …

Read More »

ಪೈಲಟ್ ತರಬೇತಿ ಕೇಂದ್ರ: 2 ಸಂಸ್ಥೆಗಳಿಗೆ ಒಪ್ಪಿಗೆ -ಮಂಗಲಾ ಅಂಗಡಿ

ಬೆಳಗಾವಿ: ‘ವಿಮಾನ ಹಾರಾಟ ಕ್ಷೇತ್ರದಲ್ಲಿ ಅಗತ್ಯ ತರಬೇತಿ ನೀಡುವ ಸಂಸ್ಥೆ ಅಥವಾ ಕೇಂದ್ರವನ್ನು (‍ಪೈಲಟ್ ತರಬೇತಿ ಕೇಂದ್ರ) ನಗರದ ಸಮೀಪದಲ್ಲಿ ಪ್ರಾರಂಭಿಸಲು 2 ಖಾಸಗಿ ತರಬೇತಿ ಸಂಸ್ಥೆಗಳಿಗೆ ಕೇಂದ್ರ ವಿಮಾನಯಾನ ಸಚಿವಾಲಯವು ಇತ್ತೀಚೆಗೆ ಒಪ್ಪಿಗೆ ಸೂಚಿಸಿದೆ’ ಎಂದು ಸಂಸದೆ ಮಂಗಲಾ ಸುರೇಶ ಅಂಗಡಿ ತಿಳಿಸಿದ್ದಾರೆ. ಈ ಬಗ್ಗೆ ಶುಕ್ರವಾರ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ‘ಆಯ್ಕೆಯಾದ ಈ ಎರಡು ಸಂಸ್ಥೆಗಳಿಗೆ ತಲಾ 5ಸಾವಿರ ಚ.ಮೀ. ಅಳತೆಯಂತೆ ಒಟ್ಟು 10ಸಾವಿರ ಚ.ಮೀ. …

Read More »

ಮುಂಗಾರು ಆಗಮನ : ರಾಜ್ಯದ ಹಲವು ಜಿಲ್ಲೆಗಳಲ್ಲಿ ‘ರೆಡ್‌ ಅಲರ್ಟ್‌’ ಘೋಷಣೆ

ಬೆಂಗಳೂರು: ರಾಜ್ಯಕ್ಕೆ ನೈರುತ್ಯ ಮುಂಗಾರು ಪ್ರವೇಶಿಸಿರುವುದರಿಂದ ರಾಜ್ಯದಲ್ಲಿ ಇಂದಿನಿಂದ ಬಹುತೇಕ ಜಿಲ್ಲೆಗಳಲ್ಲಿ ಎರಡು ದಿನ ಭಾರಿ ಮಳೆಯಾಗುವ ಸಾಧ್ಯತೆ ಇದೇ ಅಂತ ರಾಜ್ಯ ಹವಾಮಾನ ಇಲಾಖೆ ತಿಳಿಸಿದೆ. ಕರಾವಳಿ ಜಿಲ್ಲೆ, ದಕ್ಷಿಣ ಒಳನಾಡು ಪ್ರವೇಶಿಸಿರುವ ಮುಂಗಾರು, ಉತ್ತರ ಒಳನಾಡಿಗೆ ಶನಿವಾರ ಪ್ರವೇಶಸಲಿದ್ದು, ಈ ನಿಟ್ಟಿನಲ್ಲಿ ಕರಾವಳಿ ಜಿಲ್ಲೆಗಳಲ್ಲಿ ಶನಿವಾರ ‘ರೆಡ್‌ ಅಲರ್ಟ್‌’ ಘೋಷಿಸಲಾಗಿದೆ. ಬೆಂಗಳೂರಿನಲ್ಲಿ ಮುಂದಿನ ಎರಡು ದಿನಗಳವರೆಗೆ ಮಳೆಯಾಗುವ ಹೆಚ್ಚಿನ ಸಾಧ್ಯತೆ ಇದೆ ಎಂದರು. ಧಾರವಾಡ, ಹಾವೇರಿ, ಬಿಜಾಪುರ …

Read More »

ಪಿಯುಸಿ ಪರೀಕ್ಷೆಯನ್ನು ರದ್ದು ಮಾಡುವುದಾದರೆ, ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ಯಾಕೆ ನಡೆಸಬೇಕು?

ಬೆಳಗಾವಿ: ಪಿಯುಸಿ ಪರೀಕ್ಷೆಯನ್ನು ರದ್ದು ಮಾಡುವುದಾದರೆ, ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ಯಾಕೆ ನಡೆಸಬೇಕು?ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಸರ್ಕಾರವನ್ನು ಪ್ರಶ್ನಿಸಿದ್ದಾರೆ. ಪಿಯುಸಿ ಹಾಗೂ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ವಯಸ್ಸಿನ ಅಂತರ ಎರಡು ವರ್ಷವಷ್ಟೇ. ಪಿಯುಸಿ ಪರೀಕ್ಷೆಗಳನ್ನು ರದ್ದುಪಡಿಸಲಾಗುವುದು ಎಂದು ಈಗಾಗಲೇ ಸರ್ಕಾರ ತಿಳಿಸಿದೆ. ಅಂದ ಮೇಲೆ ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನೂ ರದ್ದುಪಡಿಸಬೇಕು ಎಂದು ಒತ್ತಾಯಿಸಿದರು. ಕೇಂದ್ರ ಸರ್ಕಾರವು ಸಿಬಿಎಸ್ಇ ವಿದ್ಯಾರ್ಥಿಗಳ ಪರೀಕ್ಷೆಯನ್ನು ರದ್ದುಪಡಿಸಿದೆ. ಕೇಂದ್ರದಿಂದ ಒಂದು ನಿರ್ಧಾರ ರಾಜ್ಯದಿಂದ ಒಂದು ನಿರ್ಧಾರ ಸರಿಯಲ್ಲ. …

Read More »