Home / ಜಿಲ್ಲೆ (page 1047)

ಜಿಲ್ಲೆ

ಕಾರ್ಮಿಕರು ಆತುರಪಡ್ಬೇಡಿ, ನಿಮ್ಮನ್ನ ಕಳಿಸಿಕೊಡೋದು ನಮ್ಮ ಜವಾಬ್ದಾರಿ: ಸುಧಾಕರ್

ಚಿಕ್ಕಬಳ್ಳಾಪುರ: ಜಿಲ್ಲಾಸ್ಪತ್ರೆಯಲ್ಲಿ ಕೋವಿಡ್-19 ಕೊರೊನಾ ವೈರಸ್ ಪತ್ತೆ ಹಚ್ಚುವ ಪರೀಕ್ಷಾ ಕೇಂದ್ರವನ್ನು ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ ಸುಧಾಕರ್ ಉದ್ಘಾಟನೆ ಮಾಡಿದರು. ಈ ವೇಳೆ ಮಾತನಾಡಿದ ಅವರು, ಪರೀಕ್ಷಾ ಕೇಂದ್ರದಲ್ಲಿ ಎರಡು ಯಂತ್ರಗಳಿದ್ದು, ದಿನದ 24 ಗಂಟೆಯೂ ಈ ಕೇಂದ್ರ ಕಾರ್ಯನಿರ್ವಹಿಸಲಿದ್ದು, ಪ್ರತಿದಿನ 80 ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸುಹುದಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಮಾದರಿಗಳ ಪರೀಕ್ಷೆ ನಡೆಸಲು ಅಗತ್ಯವಾದ ಕ್ರಮಗಳನ್ನ ಕೈಗೊಳ್ಳುವುದಾಗಿ …

Read More »

ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ವೇಳಾಪಟ್ಟಿಯನ್ನು ಸೋಮವಾರ ಬಿಡುಗಡೆ:ಸಚಿವ ಸುರೇಶ್‌ ಕುಮಾರ್‌

ಬೆಂಗಳೂರು: ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ವೇಳಾಪಟ್ಟಿಯನ್ನು ಸೋಮವಾರ ಬಿಡುಗಡೆ ಮಾಡಲಾಗುವುದು ಎಂದು ಶಿಕ್ಷಣ ಸಚಿವ ಸುರೇಶ್‌ ಕುಮಾರ್‌ ತಿಳಿಸಿದ್ದಾರೆ. ದ್ವಿತೀಯ ಪಿಯುಸಿ ಇಂಗ್ಲೀಷ್‌ ಪತ್ರಿಕೆ ಪರೀಕ್ಷೆ ಕುರಿತು ಪದವಿಪೂರ್ವ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದ ಬೆನ್ನಲ್ಲೇ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಕುರಿತು ಮಾಹಿತಿ ನೀಡಿರುವ ಸಚಿವ ಸುರೇಶ್‌ ಕುಮಾರ್‌, 10ನೇ ತರಗತಿ ಪರೀಕ್ಷೆಗಳನ್ನು ಶೀಘ್ರದಲ್ಲಿ ನಡೆಸುವ ಸಲುವಾಗಿ ಶಿಕ್ಷಣ ಇಲಾಖೆಯಲ್ಲಿ ಚರ್ಚೆ ನಡೆಸಲಾಗುತ್ತಿದೆ. ಸೋಮವಾರ ಈ ಕುರಿತು ಮಹತ್ವದ ಚರ್ಚೆ ನಡೆಯಲಿದ್ದು, ಆನಂತರ …

Read More »

ಪರಿಶೀಲಿಸಲು ಬೈಕ್ ತಡೆದಿದ್ದಕ್ಕೆ ಆಂಧ್ರ ಯುವಕರಿಂದ ರಾಜ್ಯ ಪೊಲೀಸರ ಮೇಲೆ ಹಲ್ಲೆ

ಚಿತ್ರದುರ್ಗ: ಕೋವಿಡ್-19 ಸೋಂಕಿನಿಂದ ಜನರನ್ನು ಸಂರಕ್ಷಿಸಲು ಅರೋಗ್ಯ ಇಲಾಖೆ ಸಿಬ್ಬಂದಿ, ಪೊಲೀಸರು ಹಾಗೂ ಆಶಾ ಕಾರ್ಯಕರ್ತೆರು ಹಗಲು ಇರುಳು ಎನ್ನದೇ ಶ್ರಮಿಸುತಿದ್ದಾರೆ. ಆಂಧ್ರದಿಂದ ಬಂದಿದ್ದ ಬೈಕ್ ಸವಾರರನ್ನು ತಡೆದು ಪರಿಶೀಲನೆ ನಡೆಸಿದ ಪರಿಣಾಮ ಕರ್ತವ್ಯನಿರತ ಕೊರೊನಾ ವಾರಿಯರ್ಸ್ ಎನಿಸಿರುವ ಪೊಲೀಸ್ ಪೇದೆ ಮೇಲೆ ಕಿಡಿಗೇಡಿಗಳು ಹಲ್ಲೆ ನಡೆಸಿರುವ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ. ಶುಕ್ರವಾರ ಸಂಜೆ ಚಳ್ಳಕೆರೆ ತಾಲೂಕಿನ ಪಾತಪ್ಪನಗುಡಿ ಚೆಕ್ ಪೋಸ್ಟ್ ಬಳಿ ಪರಶುರಾಂಪುರ ಠಾಣೆಯ ಕರ್ತವ್ಯ ನಿರತ ಪೊಲೀಸ್ …

Read More »

ವಲಸೆ ಕಾರ್ಮಿಕರಿಗೆ ತಮ್ಮ ಗೆಸ್ಟ್ ಹೌಸ್‌ ನಲ್ಲಿ ಕ್ವಾರಂಟೈನ್ ಇಡಲು ಬಿಟ್ಟುಕೊಟ್ಟು ಸ್ವತಃ ತಮ್ಮ ಖರ್ಚಿನಲ್ಲಿ ಊಟ ಉಪಹಾರ ವ್ಯವಸ್ಥೆ ಮಾಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ , ಯಮಕನಮರಡಿ ಶಾಸಕ ಸತೀಶ ಜಾರಕಿಹೊಳಿ

ಯಮಕನಮರಡಿ: ಮಹಾರಾಷ್ಟ್ರದಿಂದ ಬಂದ ರಾಜ್ಯದ ವಲಸೆ ಕಾರ್ಮಿಕರಿಗೆ ತಮ್ಮ ಗೆಸ್ಟ್ ಹೌಸ್‌ ನಲ್ಲಿ ಕ್ವಾರಂಟೈನ್ ಇಡಲು ಬಿಟ್ಟುಕೊಟ್ಟು ಸ್ವತಃ ತಮ್ಮ ಖರ್ಚಿನಲ್ಲಿ ಊಟ ಉಪಹಾರ ವ್ಯವಸ್ಥೆ ಮಾಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ , ಯಮಕನಮರಡಿ ಶಾಸಕ ಸತೀಶ ಜಾರಕಿಹೊಳಿ ಅವರ ಜನಪರ ಕಾರ್ಯ ಜನಪ್ರತಿನಿಧಿಗಳಿಗೆ ಮಾದರಿಯಾಗುವಂತಿದೆ. ಮಹಾರಾಷ್ಟ್ರದಿಂದ ಬಂದ ಸುಮಾರು ಒಂದು ಸಾವಿರ ವಲಸೆ ಕಾರ್ಮಿಕರಿಗೆ ದಡ್ಡಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕ್ವಾರಂಟೈನ್ ಮಾಡಲಾಗಿದೆ. ಶಾಸಕರ ಅಲದಾಳ ಗೆಸ್ಟ್ ಹೌಸ್ ಸೇರಿ …

Read More »

ಮೋದಿ ಸರ್ಕಾರ ಘೋಷಿಸಿರುವ 20 ಲಕ್ಷ ಕೋಟಿ ಕೊರೋನಾ ಪ್ಯಾಕೇಜ್ ಘೋಷಣೆ ಮಾತ್ರ ಇದು ಕೂಡ ಮೋದಿ ಜುಮ್ಲಾ….

ಗೋಕಾಕ: ಮೋದಿ ಸರ್ಕಾರ ಘೋಷಿಸಿರುವ 20 ಲಕ್ಷ ಕೋಟಿ ಕೊರೋನಾ ಪ್ಯಾಕೇಜ್ ದುರುಪಯೋಗವಾಗುವ ಪ್ರಶ್ನೆಯೆ ಉದ್ಭವಿಸುವುದಿಲ್ಲ ಏಕೆಂದರೆ ಅದು ಘೋಷಣೆ ಮಾತ್ರ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ವ್ಯಂಗ್ಯವಾಡಿದ್ದಾರೆ. ಇಂದು ನಗರದಲ್ಲಿ ಮಾತನಾಡಿ 2014 ರಲ್ಲಿ ಘೋಷಣೆಯಂತೆ ಇದು ಕೂಡ ಮೋದಿ ಜುಮ್ಲಾ ಮಾತ್ರ ಎಂದಿರುವ ಅವರು ಜನಸಾಮಾನ್ಯರಿಗೆ ನೆರವಾಗುವ ಯಾವುದೇ ಯೋಜನೆಯಿಲ್ಲ ಎಂದರು. ಈಗಾಗಲೇ ಸರ್ಕಾರದ ಅಂಗಸಂಸ್ಥೆಗಳಿಂದ ಮತ್ತು ವಿವಿಧ ಇಲಾಖೆಗಳಿಂದ ಪರಿಹಾರ ಘೋಷಿಸಲಾಗಿದೆ. ಅವು ಎಲ್ಲವೂ …

Read More »

.‌ಗೋವಾ ಗಡಿಯಿಂದ ಗದಗ ನಗರಕ್ಕೆ ತಲಾ ಒಬ್ಬರಿಗೆ ಬರೋಬ್ಬರಿ 3 ಸಾವಿರ ರೂಪಾಯಿ ದರ ಕಾರ್ಮಿಕರು ಬಸ್ ತಡೆದು ಕಾರ್ಮಿಕರು ಬಸ್ ತಡೆದುಆಕ್ರೋಶ

ಗದಗ: ಲಾಕ್‌ಡೌನ್ ನಿಂದಾಗಿ ಗೋವಾದಲ್ಲಿ ಸಿಲುಕಿರುವ ಕರ್ನಾಟಕದ ಮೂಲದ ಕಾರ್ಮಿಕರು ಪರದಾಡುತ್ತಿದ್ದಾರೆ.‌ ರಾಜ್ಯ ಸರ್ಕಾರ ಕಾರ್ಮಿಕರನ್ನು ರಾಜ್ಯಕ್ಕೆ ಕರೆ ತರಲು ಬಸ್ ವ್ಯಸವ್ತ ಮಾಡಿದೆ. ಆದ್ರೆ ದುಪ್ಪಟ್ಟು ಹಣ ಪಡೆಯುತ್ತಿದೆ‌ ಎಂಬ ಆರೋಪ ಕೇಳಿ ಬಂದಿದೆ‌. ಕೆಎಸ್ಆರ್​ಟಿಸಿ ಸಂಸ್ಥೆ ಪ್ರಯಾಣ ದರವನ್ನು ಏರಿಕೆ ಮಾಡಿ ನಮಗೆ ಮತ್ತಷ್ಟು ಸಂಕಷ್ಟ ತಂದೊಡ್ಡಿದೆ ಅಂತ ಬಸ್ ಮುಂದೆಯೇ ಗೋವಾದಲ್ಲಿ ಕಾರ್ಮಿಕರು ಅಳಲು ತೋಡಿಕೊಂಡಿದ್ದಾರೆ. ಗೋವಾ ಗಡಿಯಿಂದ ಗದಗ ನಗರಕ್ಕೆ ತಲಾ ಒಬ್ಬರಿಗೆ ಬರೋಬ್ಬರಿ …

Read More »

ಕೊಗನೊಳ್ಳಿ ಚೆಕ್ ಪೊಸ್ಟ್ ಗೆ ಭೇಟಿ ನೀಡಿದ ಕೆಪಿಪಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರ ಎದುರು ಕಣ್ಣೀರು ಸುರಿಸಿದ ಮಹಿಳೆ

ನಿಪ್ಪಾಣಿ: ನಿನ್ನೆ ಕೊಗನೊಳ್ಳಿ ಚೆಕ್ ಪೊಸ್ಟ್ ಗೆ ಭೇಟಿ ನೀಡಿದ ಕೆಪಿಪಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರ ಎದುರು ಕಣ್ಣೀರು ಸುರಿಸಿದ ಹಾಸನದ ಮಹಿಳೆ‌ಗೆ ಕೊನೆಗೂ ಮನೆಗೆ ತೆರಳು ಅನುಮತಿಯನ್ನು ನೀಡಲಾಗಿದೆ. ಕೊರೋನಾ ಹಿನ್ನೆಲೆ ಲಾಕ್‌ಡೌನ್ ಜಾರಿಯಲ್ಲಿರುವ ಕಾರಣ ಮಹಾರಾಷ್ಟ್ರದಿಂದ ಹಾಸನಕ್ಕೆ ತೆರಳಲು ಅನುಮತಿ ಸಿಗದೆ ಇರದ ಕಾರಣ ಕೊಗನೊಳ್ಳಿ ಚೆಕ್ ಪೊಸ್ಟ್ ಸುಮಾರು ನಾಲ್ಕು ದಿನಗಳಿಂದ ಮಹಿಳೆ‌ ಮತ್ತು ಅವರ 15 ಸದಸ್ಯರ ಕುಟುಂಬ ಪರದಾಡುತ್ತಿದ್ದರು. ಊಟ ಮತ್ತು …

Read More »

ಕ್ವಾರಂಟೈನ್‍ನಲ್ಲಿರೋ ಮಗನಿಗಾಗಿ ಓಡೋಡಿ ಬುತ್ತಿತಂದ ತಾಯಿ……..

ಯಾದಗಿರಿ: ತಾಯಿ ಈ ಜಗದ ಕಾಣಿಸುವ ದೇವರು, ತಾನು ಹೆತ್ತ ಕೂಸುಗಳು ಮುದುಕರಾದ್ರು ತಾಯಿಗೆ ಅವರು ಯಾವಾಗಲೂ ಹಸುಗೂಸುಗಳೇ. ಇಂತಹ ತಾಯಿ ಹೃದಯ ಎಲ್ಲಕ್ಕಿಂತಲೂ ಶ್ರೇಷ್ಠ ಅನ್ನೋದು ಮತ್ತೊಮ್ಮೆ ನಿಜವಾಗಿದೆ. ಅಧಿಕಾರಿಗಳ ಮತ್ತು ಕೊರೊನಾ ಭೀತಿಯ ನಡುವೆಯೂ ಕ್ವಾರಂಟೈನ್ ನಲ್ಲಿ ತನ್ನ ಮಗ ಎರಡು ದಿನದಿಂದ ಉಪವಾಸವಿರುವುದನ್ನು ತಿಳಿದ ತಾಯಿಯೊಬ್ಬಳು, ಕ್ವಾರಂಟೈನ್ ಕೇಂದ್ರ ದತ್ತ ಓಡಿಬಂದು ಬುತ್ತಿತಂದು ಹೆತ್ತ ಕರಳಿನ ಮಹತ್ವವನ್ನು ತಿಳಿಸಿದ್ದಾಳೆ. ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಸೂಗೂರು ಗ್ರಾಮದ …

Read More »

ಮಾರುಕಟ್ಟೆಗೆ ವಿಶೇಷ ಮಾಸ್ಕ್‌ಗಳು ಲಗ್ಗೆ ಇಡುತ್ತಿವೆ. ಇದೀಗ ಬೆಳ್ಳಿ ಬಳಸಿ ಸಿದ್ಧಪಡಿಸಿರುವ ಬೆಳ್ಳಿ ಮಾಸ್ಕ್……..

ಬೆಳಗಾವಿ/ಚಿಕ್ಕೋಡಿ: ಕೊರೊನಾ ಅಟ್ಟಹಾಸದಿಂದ ಮಾಸ್ಕ್ ಧರಿಸುವುದು ಕಡ್ಡಾಯವಾದ ಹಿನ್ನೆಲೆಯಲ್ಲಿ ಮಾರುಕಟ್ಟೆಗೆ ವಿಶೇಷ ಮಾಸ್ಕ್‌ಗಳು ಲಗ್ಗೆ ಇಡುತ್ತಿವೆ. ಇದೀಗ ಬೆಳ್ಳಿ ಬಳಸಿ ಸಿದ್ಧಪಡಿಸಿರುವ ಬೆಳ್ಳಿ ಮಾಸ್ಕ್ ತಯಾರಿಸಲಾಗಿದೆ. ಮಹಾರಾಷ್ಟ್ರದ ಕೊಲ್ಲಾಪೂರ ನಗರದ ಆಭರಣ ವ್ಯಾಪಾರಿ ಸಂದೀಪ್ ಸಾಂಗವಕರ ಬೆಳ್ಳಿ ಮಾಸ್ಕ್ ತಯಾರಿಸಿದ್ದಾರೆ. ವಿಶೇಷವಾಗಿ ಕೊರೊನಾ ಭೀತಿಯಲ್ಲಿ ಮದುವೆ ಆಗುತ್ತಿರುವ ನೂತನ ವಧು-ವರರಿಗಾಗಿ ಈ ಮಾಸ್ಕ್ ತಯಾರಿಸಲಾಗಿದೆ. ಮದುವೆ ಸಮಾರಂಭದಲ್ಲಿ ವಧು-ವರರೂ ಈ ಮಾಸ್ಕ್ ಧರಿಸಿ ರಿಚ್ ಆಗಿ ಮದುವೆ ಮಾಡಿಕೊಳ್ಳುವರಿಗೆ ಈ ಮಾಸ್ಕ್ …

Read More »

ಕರ್ನಾಟಕಕ್ಕೆ ಕಂಟಕವಾಗುತ್ತಿದ್ದಾರೆ ಹೊರರಾಜ್ಯ ಮತ್ತು ವಿದೇಶಗಳಿಂದ ಬಂದವರು..!

ಬೆಂಗಳೂರು, ಮೇ 16- ರಾಜ್ಯಕ್ಕೆ ಹೊರರಾಜ್ಯ ಮತ್ತು ದೇಶಗಳಿಂದ ಬಂದವರೇ ಕಂಟಕರಾಗಿ ಪರಿಣಮಿಸಿದ್ದಾರೆ. ಇದುವರೆಗಿನ ಪ್ರಕರಣಗಳಲ್ಲಿ ಹೊರಗಡೆಯಿಂದ ಬಂದ ಪ್ರಯಾಣಿಕರಿಗೆ ಹೆಚ್ಚು ಕೊರೊನಾ ಸೋಂಕು ತಗುಲಿರುವುದು ಅಂಕಿ-ಅಂಶಗಳಿಂದ ದೃಢಪಟ್ಟಿದೆ. ಗುಜರಾತ್‍ನಿಂದ ರಾಜ್ಯಕ್ಕೆ ಆಗಮಿಸಿದ 55 ಪ್ರಯಾಣಿಕರು, ಮುಂಬೈ ಮತ್ತು ಮಹಾರಾಷ್ಟ್ರದಿಂದ ಬಂದ 53, ರಾಜಸ್ತಾನದ 30, ದುಬೈನ 20, ಚೆನ್ನೈನ 4, ಒರಿಸ್ಸಾದ 2, ತೆಲಂಗಾಣದಿಂದ ಬಂದ 3 ಮಂದಿಗೆ ಹಾಗೂ ಲಂಡನ್‍ನಿಂದ ಬಂದ ಒಬ್ಬ ವ್ಯಕ್ತಿಗೆ ಸೋಂಕು ತಗುಲಿದೆ. …

Read More »