Breaking News

ಕಾರ್ಮಿಕರು ಆತುರಪಡ್ಬೇಡಿ, ನಿಮ್ಮನ್ನ ಕಳಿಸಿಕೊಡೋದು ನಮ್ಮ ಜವಾಬ್ದಾರಿ: ಸುಧಾಕರ್

Spread the love

ಚಿಕ್ಕಬಳ್ಳಾಪುರ: ಜಿಲ್ಲಾಸ್ಪತ್ರೆಯಲ್ಲಿ ಕೋವಿಡ್-19 ಕೊರೊನಾ ವೈರಸ್ ಪತ್ತೆ ಹಚ್ಚುವ ಪರೀಕ್ಷಾ ಕೇಂದ್ರವನ್ನು ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ ಸುಧಾಕರ್ ಉದ್ಘಾಟನೆ ಮಾಡಿದರು.

ಈ ವೇಳೆ ಮಾತನಾಡಿದ ಅವರು, ಪರೀಕ್ಷಾ ಕೇಂದ್ರದಲ್ಲಿ ಎರಡು ಯಂತ್ರಗಳಿದ್ದು, ದಿನದ 24 ಗಂಟೆಯೂ ಈ ಕೇಂದ್ರ ಕಾರ್ಯನಿರ್ವಹಿಸಲಿದ್ದು, ಪ್ರತಿದಿನ 80 ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸುಹುದಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಮಾದರಿಗಳ ಪರೀಕ್ಷೆ ನಡೆಸಲು ಅಗತ್ಯವಾದ ಕ್ರಮಗಳನ್ನ ಕೈಗೊಳ್ಳುವುದಾಗಿ ತಿಳಿಸಿದರು.

ಅಂದಹಾಗೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 24 ಕೊರೊನಾ ಪ್ರಕರಣಗಳು ವರದಿಯಾಗಿದ್ದು, ಅದರಲ್ಲಿ ಇಬ್ಬರು ಮೃತಪಟ್ಟಿದ್ದಾರೆ. 16 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಸಹ ಆಗಿದ್ದಾರೆ. 06 ಸಕ್ರಿಯ ಪ್ರಕರಣಗಳಿದ್ದು ಅವರಲ್ಲಿ ಇಂದು ಸಹ ಇಬ್ಬರು ಡಿಸ್ಚಾರ್ಜ್ ಆಗಲಿದ್ದಾರೆ. ಈ ಮೂಲಕ ಜಿಲ್ಲೆಯಲ್ಲಿ ಕೇವಲ 4 ಆ್ಯಕ್ಟೀವ್ ಪ್ರಕರಣಗಳಿರಲಿವೆ ಅಂತ ಸಚಿವ ಸುಧಾಕರ್ ಮಾಹಿತಿ ನೀಡಿದರು.

ಕೊರೊನಾ ಪರೀಕ್ಷೆಗಳನ್ನ ಮಾಡಿರುವುದರಲ್ಲಿ ಇಡೀ ದೇಶದಲ್ಲಿ ಚಿಕ್ಕಬಳ್ಳಾಪುರ ನಂಬರ್ 1 ಮೊದಲ ಸ್ಥಾನದಲ್ಲಿದೆ. ಕಾರಣ ಜಿಲ್ಲೆಯಲ್ಲಿ ಇದುವರೆಗೂ 6,239 ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, ಅದರಲ್ಲಿ 24 ಮಂದಿಗೆ ಕೊರೊನಾ ಪಾಸಿಟಿವ್ ಬಂದಿದೆ. ಸರಾಸರಿ ಆಧಾರದ ಮೇರೆಗೆ 243 ಮಾದರಿ ಪರೀಕ್ಷೆಗಳಿಗೆ ಒಬ್ಬ ಸೋಂಕಿತರಾಗಿದ್ದಾರೆ. ಹೀಗಾಗಿ ಅತಿ ಹೆಚ್ಚಿನ ಟೆಸ್ಟ್ ಗಳನ್ನ ಮಾಡುವ ಮೂಲಕ ದೇಶದಲ್ಲಿ ಚಿಕ್ಕಬಳ್ಳಾಪುರ ಮಾದರಿಯಾಗಿದೆ ಎಂದರು.

ಈ ಕಷ್ಟಕಾಲದಲ್ಲಿ ಜನಜೀವನ ಅಸ್ತವ್ಯಸ್ತವಾಗಿದ್ದು, ಜನ ಅರ್ಥಿಕವಾಗಿ ಪುನಶ್ಚೇತನವಾಗಬೇಕು ಅಂತ ಸರ್ಕಾರ ಹಲವು ಪ್ಯಾಕೇಜ್ ಗಳನ್ನ ಘೋಷಣೆ ಮಾಡಿದೆ. ಇದರ ಜೊತೆ ಜೊತೆ ಎಲ್ಲರ ಜೀವವನ್ನು ಉಳಿಸುವ ಕೆಲಸವನ್ನು ಹೆಲ್ತ್ ವಾರಿಯರ್ಸ್ ಹಾಗೂ ಆಶಾಕಾರ್ಯಕರ್ತೆಯರು, ವೈದ್ಯರು, ಅನೇಕ ಇಲಾಖೆಯ ಆಧಿಕಾರಿಗಳು ಕೊರೊನಾ ನಿಗ್ರಹ ಮಾಡಲು ಭಾಗಿಯಾಗಿದ್ದು ಅವರಿಗೆಲ್ಲಾ ಕೃತಜ್ಞತೆಗಳನ್ನು ಅರ್ಪಿಸುವುದಾಗಿ ತಿಳಿಸಿದರು.

ಹೂ, ಹಣ್ಣು, ತರಕಾರಿ ಬೆಳೆಗಾರರಿಗೆ ಸರ್ಕಾರ ಸ್ಪಂದಿಸಿದೆ. ಮೆಕ್ಕೆಜೋಳ ಬೆಳೆದ ರೈತರಿಗೆ ತಲಾ ರೈತನಿಗೆ 5,000 ಪ್ರೋತ್ಸಾಹ ಧನ. ಆಶಾಕಾಯಕರ್ತೆಯರಿಗೆ 3,000 ಪ್ರೋತ್ಸಾಹ ಧನ ನೀಡಲಾಗುವುದು. ಕೊರೊನಾ ವಾರಿಯರ್ಸ್ ಗೆ ಆರೋಗ್ಯ ವಿಮೆ ಮಾಡಿಸಲಾಗಿದೆ. ಕೊರೊನಾ ಸೋಂಕಿತರು ಹೆಚ್ಚಾಗುತ್ತಾರೆ ಅದಕ್ಕಾಗಿ ಆತಂಕ ಬೇಡ. ಇವತ್ತು ಲಾಕ್‍ಡೌನ್ ಸಡಿಲಿಕೆ ಮಾಡಿರುವುದರಿಂದ ವಿದೇಶದಿಂದ ಕನ್ನಡಿಗರು ಆಗಮಿಸುತ್ತಿದ್ದಾರೆ. ಇತರೆ ರಾಜ್ಯಗಳಿಂದಲೂ ನಮ್ಮ ರಾಜ್ಯದವರು ಆಗಮಿಸುತ್ತಿದ್ದಾರೆ. ಹೀಗಾಗಿ ಅವರಲ್ಲಿ ಸೋಂಕು ಕಾಣಿಸಿಕೊಳ್ಳುತ್ತಿರುವುದರಿಂದ ಸಹಜವಾಗಿ ಪ್ರಕರಣಗಳ ವರದಿ ಹೆಚ್ಚಾಗುತ್ತಿದೆ. ಉದಾಹರಣೆಗೆ ಹೇಳೋದಾದರೆ ನಿನ್ನೆ ದುಬೈ ಹಾಗೂ ಮಹಾರಾಷ್ಟ್ರದಿಂದ ಬಂದವರಿಗೆ ಅತೀ ಹೆಚ್ಚಿನ ಸೋಂಕು ಕಾಣಿಸಿಕೊಂಡಿದೆ. ಹೀಗಾಗಿ ಸಮುದಾಯಕ್ಕೆ ಹರಡದಂತೆ ಜನ ಕೂಡ ಎಚ್ಚರ ವಹಿಸಬೇಕು ಎಂದರು.

ವಲಸೆ ಕಾರ್ಮಿಕರು ವಿಚಾರದಲ್ಲಿ ಕ್ರಮ ಕೈಗೊಳುತ್ತಿದ್ದೇವೆ. ಆದರೆ ಲಾಕ್‍ಡೌನ್ ಸಡಿಲಿಕೆ ಮಾಡಿದ ಕೂಡಲೇ ಒಮ್ಮೆಲೆ ಲಕ್ಷಾಂತರ ಮಂದಿ ಕಾರ್ಮಿಕರನ್ನು ಕಳುಹಿಸಬೇಕಾದರೆ ಸಮಸ್ಯೆ ಆಗುತ್ತದೆ. ಹೀಗಾಗಿ ವಲಸೆ ಕಾರ್ಮಿಕರನ್ನು ತಮ್ಮ ತಮ್ಮ ಊರುಗಳಿಗೆ ಕಳುಹಿಸುವುದು. ನಮ್ಮ ಜವಾಬ್ದಾರಿ, ಹಂತ ಹಂತವಾಗಿ ನಾವು ಕಳುಹಿಸಿಕೊಡುತ್ತೇವೆ. ಅಲ್ಲಿಯವರೆಗೂ ವಲಸೆ ಕಾರ್ಮಿಕರು ಆತುರ ಪಡಬೇಡಿ. ಬೇರೆ ರಾಜ್ಯಗಳಲ್ಲಿರುವ ಕನ್ನಡಿಗರನ್ನ ಕರೆತರುವುದು ನಮ್ಮ ಕರ್ತವ್ಯ ನಾವು ಅದನ್ನ ಮಾಡ್ತೇವೆ ಎಂದರು.


Spread the love

About Laxminews 24x7

Check Also

ಪೂಜೆ ವೇಳೆ ಕಾಲು ಜಾರಿ ಪ್ರಪಾತಕ್ಕೆ ಬಿದ್ದ ಪೂಜಾರಿ ಸಾವು; ನೋಡನೋಡುತ್ತಿದ್ದಂತೆ ನೂರಾರು ಅಡಿ ಆಳಕ್ಕೆ ಉರುಳಿದ ದೇಹ..

Spread the loveಚಿಕ್ಕಬಳ್ಳಾಪುರ: ಪೂಜೆಯ ವೇಳೆ ಕಾಲು ಜಾರಿ ಪ್ರಪಾತಕ್ಕೆ ಬಿದ್ದು ಪೂಜಾರಿಯೊಬ್ಬರು ಮೃತಪಟ್ಟಿದ್ದು, ನೆರೆದಿದ್ದ ಭಕ್ತರೆಲ್ಲ ನೋಡನೋಡುತ್ತಿದ್ದಂತೆ ಅವರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ