Breaking News
Home / ಜಿಲ್ಲೆ (page 1014)

ಜಿಲ್ಲೆ

ಪತ್ನಿ ಮಕ್ಕಳನ್ನು ಕಂಡು ಆನಂದಬಾಷ್ಪ ಹರಿಸಿದ ಪತಿ – ಕೊರೊನಾದಿಂದಾಗಿ ಮಕ್ಕಳಿಗೆ ಸಿಗಲಿಲ್ಲ ಅಪ್ಪನ ಅಪ್ಪುಗೆ

ಗದಗ: ಲಾಕ್‍ಡೌನ್‍ನಿಂದಾ ಭಾರೀ ಅನಾಹುತಗಳು ಸಂಭವಿಸಿದ್ದು, ಕಾರ್ಮಿಕ ಗೋಳು ಒಂದು ಕಡೆಯಾದರೆ. ಊರಿಗೆ ಹೋಗಿದ್ದ ಎಷ್ಟೋ ಕುಟುಂಬಗಳು ಅಲ್ಲೇ ಲಾಕ್ ಆಗಿದ್ದವು. ತುಂಬಾ ಜನ ಕುಟುಂಬದಿಂದ ದೂರ ಉಳಿದಿದ್ದರು. ಅದೇ ರೀತಿ ಮುಂಬೈನಲ್ಲಿ ಸಿಲುಕಿದ್ದ ಹುಬ್ಬಳ್ಳಿ ಮೂಲಕ ಕುಟುಂಬ ವಾಪಾಸ್ಸಾಗಿದ್ದು, ಪತಿ ಆನಂದಬಾಷ್ಪ ಹರಿಸಿದ್ದಾರೆ. ಲಾಕ್‍ಡೌನ್‍ನಿಂದಾಗಿ ಮುಂಬೈನಲ್ಲಿ ಸಿಲುಕಿದ್ದ ಹುಬ್ಬಳ್ಳಿ ಮೂಲದ ಕುಟುಂಬವೊಂದು ನಗರದ ರೈಲ್ವೆ ನಿಲ್ದಾಣಕ್ಕೆ ಬಂದಿಳಿಯಿತು. ಮುಂಬೈನಿಂದ ಬಂದ ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಕಂಡ ಪತಿಯ …

Read More »

ಬೆಳಗಾವಿ ಜಿಲ್ಲೆಯಲ್ಲಿ ಪ್ರಸ್ತುತ 13 ಕಂಟೈನ್ಮೆಂಟ್ ಝೋನ್ …….

ಬೆಳಗಾವಿ ಜಿಲ್ಲೆಯಲ್ಲಿ ಪ್ರಸ್ತುತ 13 ಕಂಟೈನ್ಮೆಂಟ್ ಝೋನ್ ಗಳು ಅಸ್ತಿತ್ವದಲ್ಲಿವೆ. ಕೊರೋನಾ ಪಾಸಿಟಿವ್ ಕಂಡು ಬಂದ ಪ್ರದೇಶಗಳನ್ನು ಕಂಟೈನ್ಮೆಂಟ್ ಝೋನ್ ಗಳೆಂದು ಗುರುತಿಸಿ, ಆ ಪ್ರದೇಶದಲ್ಲಿ ಸಂಪೂರ್ಣ ಜನರ ಓಡಾಟವನ್ನು ಪ್ರತಿಬಂಧಿಸಲಾಗುತ್ತದೆ. ಅಲ್ಲಿಂದ ಯಾರೂ ಹೊರಗೆ ಹೂಗುವುದನ್ನು ಮತ್ತು ಆ ಪ್ರದೇಶಕ್ಕೆ ಹೊರಗಿನವರ ಪ್ರವೇಶವನ್ನು ನಿರ್ಭಂದಿಸಲಾಗುತ್ತದೆ. ಬೆಳಗಾವಿ ತಾಲೂಕಿನ ಹಿರೇಬಾಗೇವಾಡಿ, ಸದಾಶಿವನಗರ, ಮಳೆನಟ್ಟಿ, ಕಂಗ್ರಾಳಿ ಕೆಎಚ್, ಅಗಸಗಾ, ರಾಯಬಾಗ ತಾಲೂಕಿನ ಕುಡಚಿ, ಕುಡಚಿ ಗ್ರಾಮೀಣ, ರಾಮದುರ್ಗ ತಾಲೂಕಿನ ಕಲ್ಲೂರು, ಹುಕ್ಕೇರಿ …

Read More »

ಎಂಟಿಬಿ ಸಮ್ಮುಖದಲ್ಲಿ ಬಿಜೆಪಿ ಸೇರಿದ ಕಾಂಗ್ರೆಸಿಗರು…………

ಹೊಸಕೋಟೆ, ಜೂ.3- ಕಾಂಗ್ರೆಸ್‍ನ ಹಲವಾರು ಮುಖಂಡರು ಮಾಜಿ ಸಚಿವ ಎಂಟಿಬಿ ನಾಗರಾಜ್ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಗೊಂಡರು. ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮುಖಂಡರು ಸ್ಥಳೀಯರ ಸಮಸ್ಯೆ ಬಗೆಹರಿಸಲು ಮುಂದಾಗದಿರುವ ಹಿನ್ನೆಲೆಯಲ್ಲಿ ಆ ಪಕ್ಷದ ಮುಖಂಡರ ವರ್ತನೆಯಿಂದ ಬೇಸತ್ತು ರಾಮಮೂರ್ತಿ ಮತ್ತಿತರರು ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ ಎಂದು ಎಂಟಿಬಿ ನಾಗರಾಜ್ ತಿಳಿಸಿದರು. ರಾಮಮೂರ್ತಿ ಮತ್ತು ಅವರ ಸ್ನೇಹಿತರ ಜತೆಗೂಡಿ ಗಣಗಲು ಗ್ರಾಮದಲ್ಲಿ ಉಚಿತ ಆಹಾರ ಕಿಟ್‍ಗಳನ್ನು ವಿತರಿಸಿದ ನಂತರ ಅವರು ಮಾತನಾಡಿದರು. …

Read More »

ರಾಜ್ಯಸಭೆಗೆ ಚುನಾವಣೆಗೆ ಬಿಜೆಪಿಯಿಂದ ತೇಜಸ್ವಿನಿ-ಸುಧಾಮೂರ್ತಿ ಸ್ಪರ್ಧೆ…?

ಬೆಂಗಳೂರು,ಜೂ.3- ಇದೇ 19ರಂದು ರಾಜ್ಯಸಭೆಗೆ ನಡೆಯುವ ಚುನಾವಣೆಗೆ ಆಡಳಿತಾರೂಢ ಬಿಜೆಪಿಯಿಂದ ಕೇಂದ್ರದ ಮಾಜಿ ಸಚಿವ ದಿವಂಗತ ಅನಂತಕುಮಾರ್ ಪತ್ನಿ ತೇಜಸ್ವಿನಿ ಅನಂತಕುಮಾರ್ ಹಾಗೂ ಇನ್ಫೋಸಿಸ್ ಸುಧಾಮೂರ್ತಿ ಹೆಸರುಗಳು ಕೇಳಿಬಂದಿವೆ. ಬಿಜೆಪಿಯಿಂದ ರಾಜ್ಯಸಭೆಗೆ ಇಬ್ಬರು ಆಯ್ಕೆಯಾಗುವ ಅವಕಾಶ ಇರುವುದರಿಂದ ಸಮಾಜ ಸೇವೆ ಕೋಟಾದಡಿ ಈ ಇಬ್ಬರಲ್ಲಿ ಒಬ್ಬರನ್ನು ರಾಜ್ಯಸಭೆಗೆ ಕಳುಹಿಸಲು ಪಕ್ಷದ ವಲಯದಲ್ಲಿ ಚಿಂತನೆ ನಡೆದಿದೆ. ಹಾಲಿ ರಾಜ್ಯಸಭಾ ಸದಸ್ಯರಾಗಿರುವ ಪ್ರಭಾಕರ್ ಕೋರೆ ಅವರ ಅಧಿಕಾರ ಅವಧಿ ಈ ತಿಂಗಳ ಅಂತ್ಯಕ್ಕೆ …

Read More »

ಶನಿವಾರ ಬಿಜೆಪಿಯ ಕೋರ್ ಕಮಿಟಿ ಸಭೆ…………..

ಬೆಂಗಳೂರು,ಜೂ.3-ರಾಜ್ಯಸಭೆ ಹಾಗೂ ವಿಧಾನಪರಿಷತ್ ಚುನಾವಣೆ ಮತ್ತು ವಿಧಾನಪರಿಷತ್‍ಗೆ ನಾಮನಿರ್ದೇಶನ ಮಾಡುವ ಕುರಿತು ಶನಿವಾರ ಬಿಜೆಪಿಯ ಕೋರ್ ಕಮಿಟಿ ಸಭೆ ನಡೆಯಲಿದೆ. ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‍ಕುಮಾರ್ ಕಟೀಲ್ ಅವರು ಶನಿವಾರ ಮಲ್ಲೇಶ್ವರಂನಲ್ಲಿರುವ ಪಕ್ಷದ ಕಚೇರಿಯಲ್ಲಿ ಸಭೆ ನಡೆಸಿ ಅಭ್ಯರ್ಥಿ ಆಯ್ಕೆ ಸಂಬಂಧ ಮುಖಂಡರ ಜೊತೆ ಮಾತುಕತೆ ನಡೆಸುವರು. ಈ ಸಭೆಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಕೋರ್ ಕಮಿಟಿ ಸದಸ್ಯರಾದ ಕೆ.ಎಸ್.ಈಶ್ವರಪ್ಪ, ಜಗದೀಶ್ ಶೆಟ್ಟರ್, ಆರ್.ಅಶೋಕ್, ಗೋವಿಂದ ಕಾರಜೋಳ, ರಾಜ್ಯ ಉಸ್ತುವಾರಿ ಮುರುಳೀಧರ್ ರಾವ್, …

Read More »

ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರಿಗೆ ಊಟೋಪಚಾರ ನೀಡಿ ಆರೈಕೆ ಮಾಡಿದ್ದ ಚಿಕ್ಕೋಡಿ ತಾಲೂಕಿನ ಕರೋಶಿ ಗ್ರಾಮದ ಜಗಣಭೀ ಬಾಪುಲಾಲ್ ಪಟೇಲ್ ಅಜ್ಜಿ (108) ಇಂದು ನಿಧನ

ಚಿಕ್ಕೋಡಿ: ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರಿಗೆ ಊಟೋಪಚಾರ ನೀಡಿ ಆರೈಕೆ ಮಾಡಿದ್ದ ಚಿಕ್ಕೋಡಿ ತಾಲೂಕಿನ ಕರೋಶಿ ಗ್ರಾಮದ ಜಗಣಭೀ ಬಾಪುಲಾಲ್ ಪಟೇಲ್ ಅಜ್ಜಿ (108) ಇಂದು ನಿಧನರಾಗಿದ್ದಾರೆ. 1972ರಲ್ಲಿ ಮಹಾರಾಷ್ಟ್ರದ ಔರವಾಡ ಗ್ರಾಮದ ದೇವಸ್ಥಾನದ ಜಮೀನು ವಾದವನ್ನು ಡಾ.ಬಿ.ಆರ್.ಅಂಬೇಡ್ಕರ್ ಅವರು ಕೈಗೆತ್ತಿಕೊಂಡಿದ್ದರು. ಈ ಹಿನ್ನೆಲೆ ಚಿಕ್ಕೋಡಿಯ ಕರೋಶಿ ಗ್ರಾಮದಲ್ಲಿ ಅಂಬೇಡ್ಕರ್ ಅವರು 9 ದಿನ ತಂಗಿದ್ದರು. ಈ ವೇಳೆ ಅವರಿಗೆ ಜಗಣಭೀ ಅವರೇ ಊಟೋಪಚಾರದ ವ್ಯವಸ್ಥೆಯನ್ನು ಮಾಡಿದ್ದರು. ಅಂದು ಅಂಬೇಡ್ಕರ್ ಮುನ್ನಿ …

Read More »

ಸೋನಿಯಾ ಗಾಂಧಿ ಪ್ರಕರಣದಲ್ಲಿ ಪೊಲೀಸರ ಮೇಲೆ ಡಿಕೆಶಿ ಒತ್ತಡ ಆರೋಪ; ……….

ಬೆಂಗಳೂರು: ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಪ್ರಕರಣದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಪೊಲೀಸರ ಮೇಲೆ ಒತ್ತಡ ಹಾಕಿದ್ದಾರೆ ಎಂದು ಆರೋಪಿಸಿ ಅವರ ವಿರುದ್ಧ ದೂರು ದಾಖಲಿಸಲಾಗಿದೆ. ಪೊಲೀಸರ  ತನಿಖೆಯಲ್ಲಿ ಮಧ್ಯ ಪ್ರವೇಶಿಸಿಸುವ ಯತ್ನ ಮಾಡುವ ಮೂಲಕ ಡಿಕೆಶಿ ಸೋನಿಯಾ ಗಾಂಧಿ ರಕ್ಷಣೆಗಾಗಿ ಪೊಲೀಸರ ಮೇಲೆ ಡಿಕೆಶಿ ಒತ್ತಡ ಹಾಕಿದ್ದಾರೆ ಎಂದು ವಕೀಲರಾದ ಯೋಗೇಂದ್ರ ಹೊಡಘಟ್ಟ ಹಾಗೂ ನರೇಂದ್ರ ಪಿ.ಆರ್ ಅವರು, ಸಿಎಂ, ಗೃಹ ಸಚಿವರು, ಡಿಜಿ/ಐಜಿಪಿ, ಬೆಂಗಳೂರು ಪೊಲೀಸ್ …

Read More »

ಮಾಜಿ ಸಿಎಂ ಕುಮಾರಸ್ವಾಮಿ ಹಾಗೂ ಅವರ ಮಗ ನಿಖಿಲ್‌ಗೆ ಅನ್ವಯವಾಗಲ್ವ ಕಾನೂನು ?

ರಾಮನಗರ (ಜೂನ್‌ 03); ಕೊರೋನಾ ಪಿಡುಗು ಇಡೀ ರಾಷ್ಟ್ರವನ್ನೇ  ಭಯದ ವಾತಾವರಣಕ್ಕೆ ದೂಡಿದೆ. ಲಾಕ್‌ಡೌನ್‌ ಘೋಷಿಸಿಯೂ ಈ ಪೆಡಂಭೂತವನ್ನು ನಿಯಂತ್ರಿಸುವುದು ಸಾಧ್ಯವಾಗುತ್ತಿಲ್ಲ. ಇದೇ ಕಾರಣಕ್ಕೆ ಸರ್ಕಾರ ಜನರಲ್ಲಿ ಸಾಮಾಜಿಕ ಅಂತರದ ಕುರಿತು ಅರಿವು ಮೂಡಿಸುತ್ತಿದೆ. ಅಲ್ಲದೆ, ನಿಯಮವನ್ನೂ ರೂಪಿಸಲಾಗಿದೆ. ಆದರೆ, ಈ ನಿಯಮ ಮಾಜಿ ಸಿಎಂ ಕುಮಾರಸ್ವಾಮಿ ಹಾಗೂ ಅವರ ಮಗ ನಿಖಿಲ್‌ಗೆ ಅನ್ವಯವಾಗಲ್ವ? ಎಂಬ ಪ್ರಶ್ನೆ ಇದೀಗ ಮೂಡಿದೆ. ಚನ್ನಪಟ್ಟಣದಲ್ಲಿ ನಿನ್ನೆ ಮಾಜಿ ಸಿಎಂ ಕುಮಾರಸ್ವಾಮಿ ವಿವಿಧ ಕಾರ್ಯಕ್ರಮಗಳಲ್ಲಿ …

Read More »

ಸಿಎಂ ಸಂಧಿಸಿದ ಕತ್ತಿ; ಯಡಿಯೂರಪ್ಪ ಮೇಲಿನ ಮುನಿಸು ಮರೆತರಾ ಕತ್ತಿ?………..

ನಿನ್ನ ತಮ್ಮನಿಗೆ ರಾಜ್ಯಸಭೆಗೆ ಟಿಕೆಟ್ ಕೊಡುವುದು, ಬಿಡುವುದು ಪಕ್ಷದ ಹೈಕಮಾಂಡ್​ಗೆ ಬಿಟ್ಟಿದ್ದು. ಶೀಘ್ರದಲ್ಲೇ ಸಚಿವ ಸಂಪುಟ ವಿಸ್ತರಣೆ ಮಾಡಿ ನಿನ್ನನ್ನು ಸಂಪುಟಕ್ಕೆ ಸೇರಿಸಿಕೊಳ್ಳುವುದಾಗಿ ಉಮೇಶ್ ಕತ್ತಿಗೆ ಸಿಎಂ ಭರವಸೆ ನೀಡಿದ್ದಾರೆ. ಬೆಂಗಳೂರು(ಜೂನ್ 03): ಕಳೆದ ವಾರವಷ್ಟೇ ಶಾಸಕರನ್ನು ಸೇರಿಸಿಕೊಂಡು ಸರ್ಕಾರದ ವಿರುದ್ಧ ಸಭೆ ನಡೆಸಿದ್ದ ಬಿಜೆಪಿ ನಾಯಕ ಉಮೇಶ್ ಕತ್ತಿ ಇಂದು ಸಿಎಂ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಮುಖ್ಯಮಂತ್ರಿಗಳ ಅಧಿಕೃತ ಕಾವೇರಿ ನಿವಾಸಕ್ಕೆ ಭೇಟಿ ನೀಡಿ ಅವರ ಜೊತೆ …

Read More »

BS Y ಭೇಟಿ ಯಾಗಿ ಅಭಿನಂದನೆ ಸಲ್ಲಿಸಿದ ಸಾಹುಕಾರರು ಹಾಗೂ, ಮಹೇಶಕುಮಟಳ್ಳಿ…..

ಬೆಂಗಳೂರು –  ಬೆಳಗಾವಿ ಜಿಲ್ಲೆಯ ಉಸ್ತುವಾರಿ ಸಚಿವರಾಗಿ ನೇಮಕಗೊಂಡಿರುವ ಜಲಸಂಪನ್ಮೂಲ ಸಚಿವ  ರಮೇಶ್ ಜಾರಕಿಹೊಳಿ‌ ಹಾಗೂ ಕೊಳಚೆ ನಿರ್ಮೂಲನಾ ಮಂಡಳಿಯ ನೂತನ ಅಧ್ಯಕ್ಷ ಮಹೇಶ ಕುಮಟಳ್ಳಿ ಬುಧವಾರ ಬೆಂಗಳೂರಿನಲ್ಲಿ  ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರನ್ನು  ಭೇಟಿಯಾಗಿ ತಮ್ಮ ನೇಮಕಕ್ಕೆ ಧನ್ಯವಾದ ಸಲ್ಲಿಸಿದರು. ಜಿಲ್ಲೆಯ ಸಮಗ್ರ ವಿಕಾಸಕ್ಕಾಗಿ ಹೆಚ್ಚಿನ ಅನುದಾನ ಸೇರಿದಂತೆ ಎಲ್ಲಾ ರೀತಿಯ ಸಹಕಾರ ಕೊಡುವುದಾಗಿ ಮುಖ್ಯಮಂತ್ರಿಗಳು ತಿಳಿಸಿದರು ಎಂದು ನಂತರ ರಮೇಶ ಜಾರಕಿಹೊಳಿ ತಿಳಿಸಿದರು. ಮುಖ್ಯಮಂತ್ರಿಗಳ ರಾಜಕೀಯ …

Read More »