ಬೆಳಗಾವಿ ಜಿಲ್ಲೆಯಲ್ಲಿ ಪ್ರಸ್ತುತ 13 ಕಂಟೈನ್ಮೆಂಟ್ ಝೋನ್ ಗಳು ಅಸ್ತಿತ್ವದಲ್ಲಿವೆ.
ಕೊರೋನಾ ಪಾಸಿಟಿವ್ ಕಂಡು ಬಂದ ಪ್ರದೇಶಗಳನ್ನು ಕಂಟೈನ್ಮೆಂಟ್ ಝೋನ್ ಗಳೆಂದು ಗುರುತಿಸಿ, ಆ ಪ್ರದೇಶದಲ್ಲಿ ಸಂಪೂರ್ಣ ಜನರ ಓಡಾಟವನ್ನು ಪ್ರತಿಬಂಧಿಸಲಾಗುತ್ತದೆ. ಅಲ್ಲಿಂದ ಯಾರೂ ಹೊರಗೆ ಹೂಗುವುದನ್ನು ಮತ್ತು ಆ ಪ್ರದೇಶಕ್ಕೆ ಹೊರಗಿನವರ ಪ್ರವೇಶವನ್ನು ನಿರ್ಭಂದಿಸಲಾಗುತ್ತದೆ.
ಬೆಳಗಾವಿ ತಾಲೂಕಿನ ಹಿರೇಬಾಗೇವಾಡಿ, ಸದಾಶಿವನಗರ, ಮಳೆನಟ್ಟಿ, ಕಂಗ್ರಾಳಿ ಕೆಎಚ್, ಅಗಸಗಾ, ರಾಯಬಾಗ ತಾಲೂಕಿನ ಕುಡಚಿ, ಕುಡಚಿ ಗ್ರಾಮೀಣ, ರಾಮದುರ್ಗ ತಾಲೂಕಿನ ಕಲ್ಲೂರು, ಹುಕ್ಕೇರಿ ತಾಲೂಕಿನ ದೊಂಡಗಟ್ಟಿ, ದಡ್ಡಿ, ಚಿಕ್ಕೋಡಿ ತಾಲೂಕಿನ ಚಿಕ್ಕೋಡಿ, ಹಿರೇಕುಡಿ, ನನದಿವಾಡಿ ಸಧ್ಯಕ್ಕೆ ಬೆಳಗಾವಿ ಜಿಲ್ಲೆಯಲ್ಲಿರುವ ಕಂಟೈನ್ಮೆಂಟ್ ಝೋನ್ ಪ್ರದೇಶಗಳಾಗಿವೆ.