Breaking News

ಪ್ರಾಮಾಣಿಕತೆ ಮೆರೆದ ಬಸ್ ಚಾಲಕ, ನಿರ್ವಾಹಕ: ಪ್ರಯಾಣಿಕರಿಗೆ 2.50 ಲಕ್ಷ ರೂ. ಬ್ಯಾಗ್ ವಾಪಸ್

Spread the love

ರಾಯಚೂರು: ಬಸ್ ನಲ್ಲಿಯೇ ಹಣ ಇದ್ದ ಬ್ಯಾಗ್ ಬಿಟ್ಟು ಹೋದ ಪ್ರಯಾಣಿಕನಿಗೆ ಚಾಲಕ ಮತ್ತು ನಿರ್ವಾಹಕ ಅದನ್ನು ಮರಳಿಸಿದ್ದಾರೆ.

ಹುಬ್ಬಳ್ಳಿಯಿಂದ ಹೈದರಾಬಾದ್ ಗೆ ತೆರಳುತ್ತಿದ್ದ ಬಸ್ ನಲ್ಲಿ ಮಾನ್ವಿ ಬಸ್ ನಿಲ್ದಾಣದಿಂದ ರಾಯಚೂರಿಗೆ ಬರುತ್ತಿದ್ದ ಪ್ರಯಾಣಿಕ ಸೋಮಶೇಖರ ಪಾಟೀಲ ಅವರು 2.50 ಲಕ್ಷ ರೂ.

ಇದ್ದ ಬ್ಯಾಗ್ ಅನ್ನು ಬಸ್ ನಲ್ಲಿ ಬಿಟ್ಟು ರಾಯಚೂರಿನಲ್ಲಿ ಇಳಿದು ಹೋಗಿದ್ದಾರೆ.

ಹೈದರಾಬಾದ್ ಬಸ್ ನಿಲ್ದಾಣದಲ್ಲಿ ಎಲ್ಲಾ ಪ್ರಯಾಣಿಕರು ಬಸ್ ನಿಂದ ಇಳಿದ ನಂತರ ಕಂಡಕ್ಟರ್ ಬ್ಯಾಗ್ ಗಮನಿಸಿದ್ದಾರೆ. ಅದನ್ನು ತೆಗೆದು ನೋಡಿದಾಗ 2.50 ಲಕ್ಷ ರೂಪಾಯಿ, ಬ್ಯಾಂಕ್ ಪಾಸ್ ಬುಕ್ ಇರುವುದು ಕಂಡು ಬಂದಿದೆ. ಬ್ಯಾಂಕ್ ಪುಸ್ತಕದಲ್ಲಿದ್ದ ಮೊಬೈಲ್ ಸಂಖ್ಯೆಗೆ ಕರೆ ಮಾಡಿ ಸೋಮಶೇಖರ ಪಾಟೀಲ್ ಅವರನ್ನು ರಾಯಚೂರು ಬಸ್ ನಿಲ್ದಾಣಕ್ಕೆ ಕರೆಸಿಕೊಂಡು ಹಣದ ಸಮೇತ ಬ್ಯಾಗ್ ಹಸ್ತಾಂತರಿಸಿದ್ದಾರೆ ಎಂದು ಚಾಲಕರಾದ ಮಂಜುನಾಥ ನವಲಗುಂದ ಅವರು ಮಾಹಿತಿ ನೀಡಿದ್ದಾರೆ.


Spread the love

About Laxminews 24x7

Check Also

ಸೈಫ್​ ಅಲಿ ಖಾನ್ ಮೇಲಿನ ದಾಳಿ ಆಘಾತ ತಂದಿದೆ: ನಟಿ ಶಿಲ್ಪಾ ಶೆಟ್ಟಿ

Spread the loveರಾಯಚೂರು: ಬಾಲಿವುಡ್ ನಟ ಸೈಫ್​ ಅಲಿ ಖಾನ್ ಮೇಲೆ ನಡೆದಿರುವ ದಾಳಿ ಆಘಾತ ಮೂಡಿಸಿದೆ ಎಂದು ಬಾಲಿವುಡ್‌ ನಟಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ