Breaking News
Home / ಜಿಲ್ಲೆ / ಮಾಜಿ ಸಿಎಂ ಕುಮಾರಸ್ವಾಮಿ ಹಾಗೂ ಅವರ ಮಗ ನಿಖಿಲ್‌ಗೆ ಅನ್ವಯವಾಗಲ್ವ ಕಾನೂನು ?

ಮಾಜಿ ಸಿಎಂ ಕುಮಾರಸ್ವಾಮಿ ಹಾಗೂ ಅವರ ಮಗ ನಿಖಿಲ್‌ಗೆ ಅನ್ವಯವಾಗಲ್ವ ಕಾನೂನು ?

Spread the love

ರಾಮನಗರ (ಜೂನ್‌ 03); ಕೊರೋನಾ ಪಿಡುಗು ಇಡೀ ರಾಷ್ಟ್ರವನ್ನೇ  ಭಯದ ವಾತಾವರಣಕ್ಕೆ ದೂಡಿದೆ. ಲಾಕ್‌ಡೌನ್‌ ಘೋಷಿಸಿಯೂ ಈ ಪೆಡಂಭೂತವನ್ನು ನಿಯಂತ್ರಿಸುವುದು ಸಾಧ್ಯವಾಗುತ್ತಿಲ್ಲ. ಇದೇ ಕಾರಣಕ್ಕೆ ಸರ್ಕಾರ ಜನರಲ್ಲಿ ಸಾಮಾಜಿಕ ಅಂತರದ ಕುರಿತು ಅರಿವು ಮೂಡಿಸುತ್ತಿದೆ. ಅಲ್ಲದೆ, ನಿಯಮವನ್ನೂ ರೂಪಿಸಲಾಗಿದೆ. ಆದರೆ, ಈ ನಿಯಮ ಮಾಜಿ ಸಿಎಂ ಕುಮಾರಸ್ವಾಮಿ ಹಾಗೂ ಅವರ ಮಗ ನಿಖಿಲ್‌ಗೆ ಅನ್ವಯವಾಗಲ್ವ? ಎಂಬ ಪ್ರಶ್ನೆ ಇದೀಗ ಮೂಡಿದೆ.

ಚನ್ನಪಟ್ಟಣದಲ್ಲಿ ಕೊರೋನಾ ನಿಯಮ ಉಲ್ಲಂಘಿಸಿದ ಹೆಚ್‌ಡಿಕೆ ಮತ್ತು ನಿಖಿಲ್; ಇವರಿಗೆ ಕಾನೂನು ಅನ್ವಯವಾಗಲ್ವ?

ಚನ್ನಪಟ್ಟಣದಲ್ಲಿ ನಿನ್ನೆ ಮಾಜಿ ಸಿಎಂ ಕುಮಾರಸ್ವಾಮಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದರು. ತಾಲೂಕಿನ ಸುಣ್ಣಘಟ್ಟ ಗ್ರಾಮದಲ್ಲಿ ಕೃಷಿಯಂತ್ರ ಧಾರೆ ಕಚೇರಿ ಉದ್ಘಾಟನೆ ಮಾಡಿ ಕಾರ್ಯಕರ್ತರ ಜೊತೆಗೆ ಟ್ರಾಕ್ಟರ್ ಏರಿ ಸವಾರಿ ಮಾಡಿದರು. ಈ ಸಂದರ್ಭದಲ್ಲಿ ಯಾವುದೇ ಸಾಮಾಜಿಕ ಅಂತರವಿಲ್ಲದೆ, ಮಾಸ್ಕ್ ಧರಿಸದೇ ಕೊರೋನಾ ನಿಯಮಗಳನ್ನ ಗಾಳಿಗೆ ತೂರಲಾಯ್ತು.

ಹೆಚ್‌ಡಿಕೆ ಅಂತೆಯೇ ಅವರ ಮಗ ನಿಖಿಲ್ ಕುಮಾರಸ್ವಾಮಿ ಸಹ ಕೊರೋನಾ ನಿಯಮ ಉಲ್ಲಂಘನೆ ಮಾಡಿದ್ದಾರೆ. ಚನ್ನಪಟ್ಟಣದ ನಗರಸಭೆ ಆವರಣದಲ್ಲಿ ಪೌರಕಾರ್ಮಿಕರಿಗೆ ಉಚಿತವಾಗಿ ದಿನಸಿ ಕಿಟ್ ಗಳನ್ನ ವಿತರಣೆ ಮಾಡಲಾಗಿತ್ತು. ಈ ವೇಳೆನಿಖಿಲ್ ಜೊತೆಗೆ ಸೆಲ್ಫಿಗಾಗಿ ಮುಗಿಬಿದ್ದ ಅಭಿಮಾನಿಗಳಿಗಾಗಿ ಕೊರೋನಾ ನಿಯಮವನ್ನು ಮುರಿದ ನಿಖಿಲ್ ಎಲ್ಲರ ಜೊತೆ ಸೆಲ್ಫಿಗೆ ಫೋಸ್ ಕೊಟ್ಟಿದ್ದಾರೆ.

ಹೀಗಾಗಿ ಸಾಮಾಜಿಕ ಅಂತರದ ಕುರಿತು ಸಾಮಾನ್ಯ ಜನರಿಗೊಂದು ನ್ಯಾಯ, ಜನಪ್ರತಿನಿಧಿಗಳಿಗೊಂದು ನ್ಯಾಯಾನ? ಎಂದು ಸಾರ್ವಜನಿಕರು ಕುಮಾರಸ್ವಾಮಿ ಮತ್ತು ನಿಖಿಲ್ ಕುರಿತು ಕಟು ಪ್ರಶ್ನೆಗಳನ್ನು ಮುಂದಿಡುತ್ತಿದ್ದಾರೆ.


Spread the love

About Laxminews 24x7

Check Also

ಸರ್ಕಾರಿ ನೌಕರರಿಗೆ ಸಮಾನ ವೇತನ ನೀಡಿ

Spread the loveಬೆಳಗಾವಿ : ಸರ್ಕಾರಿ ನೌಕರರಿಗೆ ಸಮಾನ ವೇತನ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರಾಜ್ಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ