Breaking News

ಶಾಸಕರ ಪ್ರತ್ಯೇಕ ಸಭೆ ಬಗ್ಗೆ ನನಗೆ ಮಾಹಿತಿ ಇಲ್ಲ : ಸುರೇಶ್ ಕುಮಾರ್

Spread the love

ಮೈಸೂರು,ಮೇ.29- ಬಿಜೆಪಿ ಶಾಸಕರ ಪ್ರತ್ಯೇಕ ಸಭೆ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದು ಶಿಕ್ಷಣ ಸಚಿವ ಎಸ ಸುರೇಶ ಕುಮಾರ್ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತ್ಯೇಕ ಸಭೆ ನಡೆದಿದೆ ಎಂದು ನನಗೆ ಅನಿಸುವುದಿಲ್ಲ ಎಂದರು. ರಾಜ್ಯ ಸಭೆ ಹಾಗೂ ವಿಧಾನಪರಿಷತ್ ಚುನಾವಣೆ ವಿಚಾರ ದಲ್ಲಿ ಅಭ್ಯರ್ಥಿ ಆಯ್ಕೆ ಸಿಎಂ ಯಡಿಯೋರಪ್ಪ ಅವರಿಗೆ ಬಿಟ್ಟ ವಿಚಾರ ಎಂದು ಸ್ವಷ್ಟ ಪಡಿಸಿದರು.

ಪರಿಷತ ಚುನಾವಣೆ ಇನ್ನು ಘೋಷಣೆಯಾಗಿಲ್ಲ. ಈಗ ಏನಿದ್ದರೂ ಕೊರೊನಾ ವಿರುದ್ದದ ಹೋರಾಟ.ನಮಗೆ ಕೊರೊನಾ ನಿಭಾಯಿಸಲು ಸಮಯ ಇಲ್ಲ.ತಮ್ಮ ಸಮಯವನ್ನು ಅದಕ್ಕೇ ಮೀಸಲಿಡಬೇಕು ಎಂದರು. ಇನ್ನು ಆಪರೇಷನ್ ಹಸ್ತ ವಿಚಾರವಾಗಿ ಕೇಳಿದ ಪ್ರಶ್ನೆಗೆ ಪ್ರತಿಕ್ರಯಿಸಿದ ಅವರು, ಈಗ ಆಪರೇಷನ್ ಕೊರೊನಾ ಮಾಡಬೇಕಿದೆ. ಎಲ್ಲಾ ಪಕ್ಷದವರು ಕೊರೊನಾ ವಿರುದ್ದದ ಹೋರಾಟದತ್ತ ಗಮನಹರಿಸಬೇಕು ಎಂದು ತಿಳಿಸಿದರು.

ಆನ್‍ಲೈನ ಕ್ಲಾಸ್‍ಗೆ ತಿಲಾಂಜಲಿ : ಈ ಬಗ್ಗೆ ಮಾನಸಿಕ ತಜ್ಞರ ಅಭಿಪ್ರಾಯ ಪಡೆಯಲಾಗಿದೆ. ನಿಮ್ಹಾನ್ಸ್ ವೈದ್ಯರಿಂದ ಸಂಪೂರ್ಣ ವರದಿ ಪಡೆಯಲಾಗಿದೆ. 6 ವರ್ಷದ ಮಕ್ಕಳವರೆಗೆ ಆನ್‍ಲೈನ್ ತರಗತಿ ನಡೆಸಲು ಸಾಧ್ಯವಿಲ್ಲ ಎಂದು ಅವರ ಸ್ಪಷ್ಟಪಡಿಸಿದ್ದಾರೆ ಎಂದು ಸುರೇಶ ಕುಮಾರ್ ತಿಳಿಸಿದರು.

ಶೈಕ್ಷಣಿಕ ವರ್ಷದ ಆರಂಭ ವಿಚಾರ ಇನ್ನು ನಿರ್ಧಾರ ಮಾಡಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ಪೋಷಕರ ಅಭಿಪ್ರಾಯ ಸಂಗ್ರಹಿಸಲಾಗಿದೆ. ಶೇ.90ರಷ್ಟು ಪೋಷಕರು ಮಕ್ಕಳನ್ನು ಶಾಲೆಗೆ ಕಳುಹಿಸಲು ಸಿದ್ದರಿಲ್ಲ ಎಂಬ ಮಾಹಿತಿ ನೀಡಿದರು. ಹೀಗಾಗಿ ಕೇಂದ್ರದ ಮಾರ್ಗದರ್ಶಿ ಬಂದ ನಂತರವೇ ತೀರ್ಮಾನ ಮಾಡುವುದಾಗಿ ಹೇಲಿದರು.

ಸಾವರ್ಕರ ಹೆಸರು ವಿವಾದ: ಈ ನಿರ್ಧಾರದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಪ್ರತಿಭಟನೆಗೆ ವಿರೋಧಕ್ಕೆ ನಾವು ಮಣಿದಿಲ್ಲ. ಲಾಕ್‍ಡೌನ್ ಹಿನ್ನೆಲೆಯಲ್ಲಿ ತಾತ್ಕಾಲಿವಾಗಿ ಮುಂದೂಡಿದ್ದೇವೆ. ಬಿಬಿಎಂಪಿಯೂ ಹೇಳಿದೆ ಸರ್ಕಾರವು ಸಾರ್ವPರ್ ಹೆಸರಿಡಲು ಬದ್ದವಾಗಿದೆ ಎಂದರು


Spread the love

About Laxminews 24x7

Check Also

ಕೇವಲ 1 ಗಂಟೆ ಅವಧಿಯಲ್ಲಿ ಎರಡು ಖಾತೆಗಳಿಂದ 19.30 ಲಕ್ಷ ಮಂಗಮಾಯ..!

Spread the loveಮೈಸೂರು:ಕೇವಲ 1 ಗಂಟೆ ಅವಧಿಯಲ್ಲಿ ಎರಡು ಖಾತೆಗಳಿಂದ ಖದೀಮರು 19.30 ಲಕ್ಷ ಲಪಟಾಯಿಸಿ ವಂಚಿಸಿರುವ ಪ್ರಕರಣ ಸೆನ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ