Breaking News
Home / ಜಿಲ್ಲೆ / ಬೆಳಗಾವಿ (page 411)

ಬೆಳಗಾವಿ

ಮರಾಠಿಯಲ್ಲಿ ಮಾತನಾಡಿದ ಸಚಿವ ಶ್ರೀಮಂತ ಪಾಟೀಲ!

ಅಥಣಿ: ತಾಲ್ಲೂಕಿನ ಬಳ್ಳಿಗೇರಿ ಗ್ರಾಮದಲ್ಲಿ ಶ್ರೀ ಬಸವೇಶ್ವರ ಸಕ್ಕರೆ ಕಾರ್ಖಾನೆ ಶನಿವಾರ ನಡೆದ ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಪಾಲ್ಗೊಂಡಿದ್ದ ಜವಳಿ ಸಚಿವ ಶ್ರೀಮಂತ ಪಾಟೀಲ ಮರಾಠಿಯಲ್ಲಿ ಮಾತನಾಡುವ ಮೂಲಕ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ಅವರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ.   ‘ನಮ್ಮ ಭಾಗದಲ್ಲಿ ಸಕ್ಕರೆ ಕಾರ್ಖಾನೆ ನಿರ್ಮಾಣವಾಗುತ್ತಿರುವುದು ತುಂಬಾ ಖುಷಿಯಾಗಿದೆ. ಕಾರ್ಖಾನೆಯ ಶೇ 75 ರಷ್ಟು ಹುದ್ದೆಗಳನ್ನು ಸ್ಥಳೀಯರಿಗೆ ನೀಡಬೇಕು’ ಎಂದು ಮರಾಠಿಯಲ್ಲಿ ಮನವಿ ಮಾಡಿದ್ದರು. …

Read More »

ಬಕ್ರೀದ್‌; ಸರಳವಾಗಿ ಆಚರಿಸಿದ ಮುಸ್ಲಿಂ ಬಾಂಧವರು

ಬೆಳಗಾವಿ: ಕೋವಿಡ್‌ ಸೋಂಕಿನ ಹಿನ್ನೆಲೆಯಲ್ಲಿ ಶನಿವಾರ ಮುಸ್ಲಿಂ ಬಾಂಧವರು ಬಕ್ರೀದ್‌ ಹಬ್ಬವನ್ನು ಸರಳವಾಗಿ ಆಚರಿಸಿದರು. ಪ್ರತಿವರ್ಷ ಈದ್ಗಾ ಮೈದಾನಗಳಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಗುತ್ತಿತ್ತು. ಆದರೆ, ಈ ಸಲ ಕೋವಿಡ್‌ ಹಿನ್ನೆಲೆಯಲ್ಲಿ ಸಾಮೂಹಿಕ ಪ್ರಾರ್ಥನೆ ನಿರ್ಬಂಧಿಸಲಾಗಿತ್ತು. ಹಾಗಾಗಿ, ಮಸೀದಿಗಳಲ್ಲಿ ಹಾಗೂ ಮನೆಗಳಲ್ಲಿ ಪರಸ್ಪರ ಅಂತರ ಕಾಪಾಡಿಕೊಂಡು ಪ್ರಾರ್ಥನೆ ಸಲ್ಲಿಸಿದರು. ಅಡುಗೆ ಕೂಡ ಸರಳವಾಗಿತ್ತು. ಪ್ರತಿವರ್ಷ ಹೊಸ ಉಡುಗೆ ತೊಟ್ಟು ಹಬ್ಬ ಆಚರಿಸುತ್ತಿದ್ದ ಆ ಸಂಭ್ರಮ ಕಾಣಲಿಲ್ಲ. ಪ್ರತಿ ವರ್ಷ ತಮ್ಮ ನೆಂಟರು ಹಾಗೂ …

Read More »

​ ತಿಂಗಳ ಪ್ರಯಾಣಿಕರ ಸಂಖ್ಯೆಯಲ್ಲಿ 2ನೇ ಸ್ಥಾನಕ್ಕೇರಿದ ಬೆಳಗಾವಿ ವಿಮಾನ ನಿಲ್ದಾಣ

ಬೆಳಗಾವಿ: ಜೂನ್ ತಿಂಗಳ ವಿಮಾನ ಪ್ರಯಾಣದ ಮಾಹಿತಿಯನ್ನ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ರಾಜ್ಯದಲ್ಲಿನ ಪ್ರಯಾಣಿಕರ ಸಂಖ್ಯೆಯ ವಿಚಾರದಲ್ಲಿ ಬೆಳಗಾವಿ ವಿಮಾನ ನಿಲ್ದಾಣ 2ನೇ ಸ್ಥಾನಕ್ಕೇರಿದೆ ಈ ಮೂಲಕ ಬೆಳಗಾವಿ, ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನೇ ಹಿಂದಿಕ್ಕಿದೆ. ಬೆಂಗಳೂರು ಮೊದಲನೇ ಸ್ಥಾನದಲ್ಲಿದ್ದು ನಂತರದ ಸ್ಥಾನವನ್ನ ಬೆಳಗಾವಿ ಪಡೆದುಕೊಂಡಿದೆ. ಜೂನ್ ತಿಂಗಳಲ್ಲಿ ಬೆಳಗಾವಿಯಿಂದ 391 ವಿಮಾನಗಳ ಹಾರಾಟವಾಗಿದ್ದು, ಒಟ್ಟು 10,224 ಪ್ರಯಾಣಿಕರು ಸಂಚಾರ ಮಾಡಿದ್ದಾರೆ. ಇನ್ನು …

Read More »

ಪಿಪಿಇ ಕಿಟ್​ ಧರಿಸದೇ ಸೋಂಕಿತರ ಅಂತ್ಯಸಂಸ್ಕಾರಕ್ಕೆ ಗುಂಪಾಗಿ ಸೇರಿದ ಸಂಬಂಧಿಕರು

ಬೆಳಗಾವಿ: ಕೊರೊನಾ ಸೋಂಕಿತರ ಅಂತ್ಯಸಂಸ್ಕಾರದ ವೇಳೆ ಸಂಬಂಧಿಕರು ಸೋಂಕಿನ ಭಯ ಮೆರತು ‌ ಸ್ಮಶಾನದೊಳಗೆ‌ ನುಗ್ಗಿದ ಘಟನೆ ಜಿಲ್ಲೆಯ ಸದಾಶಿವ‌ನಗರದ ಸ್ಮಶಾನದಲ್ಲಿ ನಡೆದಿದೆ. ನಿನ್ನೆ ಸಂಜೆ ನಗರ ಪಾಲಿಕೆ ಸಿಬ್ಬಂದಿ ಕೊರೊನಾ ಸೋಂಕಿತರೊಬ್ಬರ ಅಂತ್ಯಕ್ರಿಯೆ ನಡೆಸಲು ಸದಾಶಿವ‌ನಗರದ ಸ್ಮಶಾನಕ್ಕೆ ಮೃತದೇಹ ತಂದಿದ್ದಾರೆ. ಈ ವೇಳೆ ಸೋಂಕಿತರ ಸಂಬಂಧಿಕರು ಪಿಪಿಇ‌ ಕಿಟ್ ಇಲ್ಲದೇ, ಶವದ ಅಕ್ಕಪಕ್ಕ ಓಡಾಡಿದ್ದಾರೆ. ಅಲ್ಲದೇ ಅಂತ್ಯಸಂಸ್ಕಾರದ ವೇಳೆ‌ ಬೆಂಕಿ‌ ಸರಿಪಡಿಸಲು ಪಾಲಿಕೆ ಸಿಬ್ಬಂದಿ ಕೂಡ ಪಿಪಿಇ‌ ಕಿಟ್ …

Read More »

ಬೆಳಗಾವಿ | ಕಾಣೆಯಾದ ಬೆಳಗಾವಿಯ ಜಡಿಮಳೆ..!

ಬೆಳಗಾವಿ: ಮಳೆಗಾಲ ಆರಂಭದ ಮೊದಲ ತಿಂಗಳು, ಕಳೆದ ಜೂನ್‌ನಲ್ಲಿ ಜಿಲ್ಲೆಯಲ್ಲಿ ಅಬ್ಬರಿಸಿದ್ದ ಮಳೆರಾಯ ಜುಲೈನಲ್ಲಿ ತಣ್ಣಗಾಗಿದ್ದಾನೆ. ಪ್ರತಿವರ್ಷ ಜೂನ್‌ಗಿಂತಲೂ ಜುಲೈನಲ್ಲಿಯೇ ಹೆಚ್ಚು ಮಳೆಯಾಗುತ್ತಿತ್ತು. ವಾರಗಟ್ಟಲೆ ಜಿಟಿಜಿಟಿ ಸುರಿಯುತ್ತಿತ್ತು. ಆದರೆ, ಈ ಸಲ ಬೆಳಗಾವಿಯ ಜಡಿಮಳೆ ಕಾಣೆಯಾಗಿದೆ. ವಾಡಿಕೆಗಿಂತ ಶೇ 20ರಷ್ಟು ಕಡಿಮೆ ಮಳೆಯಾಗಿದ್ದು, ರೈತರಲ್ಲಿ ಆತಂಕ ಸೃಷ್ಟಿಸಿದೆ. ಜೂನ್‌ನಲ್ಲಿ 180.9 ಸೆಂ.ಮೀ ವಾಡಿಕೆ ಮಳೆಗೆ ಹೋಲಿಸಿದರೆ 228.4 ಸೆಂ.ಮೀ.ನಷ್ಟು (ಶೇ 25ರಷ್ಟು ಹೆಚ್ಚು) ಮಳೆಯಾಗಿತ್ತು. ಅದೇ ರಭಸ ಜುಲೈನಲ್ಲಿ ಕಂಡುಬರಲಿಲ್ಲ. ಮೊದಲ …

Read More »

63,922 ಪಡಿತರ ಕಾರ್ಡ್‌ ರದ್ದು: ಗಡಾದ

ಮೂಡಲಗಿ: ರಾಜ್ಯದಲ್ಲಿ ಒಟ್ಟು 1,27,00,451 ಪಡಿತರ ಕಾರ್ಡ್‌ಗಳು ಇದ್ದು ಇವುಗಳಲ್ಲಿ 63,922 ಕಾರ್ಡ್‌ಗಳನ್ನು ಅನರ್ಹ ಪಡಿತರ ಕಾರ್ಡ್‌ಗಳೆಂದು ಗುರುತಿಸಿ ರದ್ದು ಪಡಿಸಲಾಗಿದೆ ಎಂದು ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪ ಗಡಾದ ತಿಳಿಸಿದ್ದಾರೆ. ಈ ಕುರಿತು ಪ್ರಕಟಣೆಯಲ್ಲಿ ತಿಳಿಸಿದ ಅವರು, 43,138 ಕಾರ್ಡ್‌ಗಳನ್ನು ಬಿಪಿಎಲ್‌ದಿಂದ ಎಪಿಎಲ್‌ಗೆ ಪರಿವರ್ತಿಸಲಾಗಿದೆ ಮತ್ತು ಅಕ್ರಮ ಬಿಪಿಎಲ್‌ ಕಾರ್ಡ್‌ಗಳನ್ನು ವಾಪಸ್‌ ಪಡೆಯುವಾಗ ಕಾರ್ಡ್‌ದಾರರಿಂದ ದಂಡದ ರೂಪದಲ್ಲಿ ಒಟ್ಟು 96,27,961 ರೂ. ಖಜಾನೆಗೆ ಪಾವತಿಸಿಕೊಳ್ಳಲಾಗಿರುವ ಅಂಶವು ಮಾಹಿತಿ ಹಕ್ಕಿನಿಂದ ಬೆಳಕಿಗೆ …

Read More »

ಚಿಕ್ಕೋಡಿಯ ಗಣ್ಯ ವ್ಯಕ್ತಿರೋರ್ವರಿಗೆ ಕೋವಿಡ್ ಪಾಸಿಟಿವ್: ಬೆಚ್ಚಿಬೀಳಿಸಿದ ಟ್ರಾವೆಲ್ ಹಿಸ್ಟರಿ

ಚಿಕ್ಕೋಡಿ: ನಗರದಲ್ಲಿ ಸಕ್ರಿಯವಾಗಿದ್ದ ಗಣ್ಯ ವ್ಯಕ್ತಿಯೋರ್ವರಿಗೆ ಕೋವಿಡ್-19 ಸೋಂಕು ತಗುಲಿದ್ದು, ಚಿಕ್ಕೋಡಿ ನಗರದ ಜನರನ್ನು ಬೆಚ್ಚಿ ಬೀಳಿಸಿದೆ. ಚಿಕ್ಕೋಡಿ ನಗರದ ಸಾಯಿ ಮಂದಿರ ಹತ್ತಿರ ಇರುವ ಓರ್ವ ಗಣ್ಯ ವ್ಯಕ್ತಿಗೆ ಶುಕ್ರವಾರ ಕೋವಿಡ್ ಪಾಸಿಟಿವ್ ಆಗಿರುವುದು ದೃಢವಾಗಿದೆ. ಪಾಸಿಟಿವ್ ಬಂದಿರುವ ಈ ವ್ಯಕ್ತಿ ಕಳೆದ ಎರಡು ದಿನಗಳ ಹಿಂದೆ ಪುರಸಭೆ ಆವರಣದಲ್ಲಿ ನಡೆದ ಸಭೆಯಲ್ಲಿ ಪಾಲ್ಗೊಂಡಿದ್ದರು. ಹೀಗಾಗಿ ನಗರದ ಜನ ಮತ್ತಷ್ಟು ಭೀತಿಗೆ ಒಳಗಾಗಿದ್ದಾರೆ. ಹಾಲಿ ಪುರಸಭೆ ಸದಸ್ಯರು, ಪುರಸಭೆ ಅಧಿಕಾರಿಗಳು …

Read More »

30 ವರ್ಷಗಳ ಕಾಲ ಬಿಜೆಪಿ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿರುವ ಕಡಾಡಿ ಅವರಿಗೆ ರಾಜ್ಯಸಭಾ ಜೊತೆಗೆ ರಾಜ್ಯ ರೈತ ಮೋರ್ಚಾ ಅಧ್ಯಕ್ಷ ಪಟ್ಟ

ಮೂಡಲಗಿ: ಕರ್ನಾಟಕ ರಾಜ್ಯ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷರನ್ನಾಗಿ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಅವರನ್ನು ರಾಜ್ಯ ಬಿಜೆಪಿ ಅಧ್ಯಕ್ಷ ನಳಿನಕುಮಾರ ಕಟೀಲು ಅವರು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ. ಕಳೆದ 30 ವರ್ಷಗಳ ಕಾಲ ಬಿಜೆಪಿ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ, ಮುಖಂಡರಾಗಿ ಪಕ್ಷದ ಸಂಘಟನೆಗೆ ನಿರಂತರ ಶ್ರಮಿಸುತ್ತಾ ಬಂದಿರುವ ನೂತನ ರಾಜ್ಯಸಭಾ ಸದಸ್ಯರಾಗಿ ಆಯ್ಕೆಗೊಂಡ ಈರಣ್ಣ ಕಡಾಡಿ ಅವರು, ಈ ಮೊದಲು ಬಿಜೆಪಿ ರಾಜ್ಯ ಕಾರ್ಯದರ್ಶಿಯಾಗಿ, 2 ಸಲ ಬೆಳಗಾವಿ …

Read More »

ಸಿಇಟಿ: 1,998 ವಿದ್ಯಾರ್ಥಿಗಳು ಗೈರು

ಬೆಳಗಾವಿ: ಜಿಲ್ಲೆಯ ವಿವಿಧ 29 ಕೇಂದ್ರಗಳಲ್ಲಿ ಶುಕ್ರವಾರ ನಡೆದ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ)ಗೆ 1,998 ವಿದ್ಯಾರ್ಥಿಗಳು ಗೈರು ಹಾಜರಾದರು. ಬೆಳಗಾವಿ ಶೈಕ್ಷಣಿಕ ಜಿಲ್ಲೆ ವ್ಯಾಪ್ತಿಗೆ ಒಳಪಡುವ ನಗರದ 11, ರಾಮದುರ್ಗದ ಸ್ಟೇಟ್ ಪಿಯು ಕಾಲೇಜು, ಸವದತ್ತಿಯ ಎಸ್‌.ಕೆ. ಪಿಯು ಕಾಲೇಜು ಹಾಗೂ ಬೈಲಹೊಂಗಲದ ಜಿಜಿಡಿ ಪಿಯು ಕಾಲೇಜಿನ ಕೇಂದ್ರಗಳಲ್ಲಿ ಬೆಳಿಗ್ಗೆ ಭೌತವಿಜ್ಞಾನ ಮತ್ತು ಮಧ್ಯಾಹ್ನ ರಸಾಯನವಿಜ್ಞಾನ ವಿಷಯದ ಪರೀಕ್ಷೆಗಳು ನಡೆದವು. ಭೌತವಿಜ್ಞಾನಕ್ಕೆ 5,316 ವಿದ್ಯಾರ್ಥಿಗಳು ನೋಂದಾಯಿಸಿದ್ದರು. ಈ ಪೈಕಿ …

Read More »

ಕೋವಿಡ್‌ ನಿಯಂತ್ರಣಕ್ಕೆ ಬಿಡುಗಡೆಯಾಗಿದ್ದು ಕೇವಲ ₹ 230 ಕೋಟಿ!

ಬೆಳಗಾವಿ: ಕೋವಿಡ್‌ ರೋಗವನ್ನು ನಿಯಂತ್ರಿಸಲು ರಾಜ್ಯದ ಎಲ್ಲ ಜಿಲ್ಲೆಗಳಿಗೆ ಸರ್ಕಾರ ಇದುವರೆಗೆ ಒಟ್ಟು ₹ 230.73 ಕೋಟಿ ಅನುದಾನ ಬಿಡುಗಡೆ ಮಾಡಿದೆ. ಇದರಲ್ಲಿ ಬೆಳಗಾವಿ ಜಿಲ್ಲೆಗೆ ₹ 13.97 ಕೋಟಿ ದೊರೆತಿದೆ. ಮಾಹಿತಿ ಹಕ್ಕು ಕಾರ್ಯಕರ್ತ (ಆರ್‌ಟಿಐ) ಸುರೇಂದ್ರ ಉಗಾರೆ ಅವರು ಮಾಹಿತಿ ಹಕ್ಕಿನಡಿ ಪಡೆದುಕೊಂಡ ಮಾಹಿತಿಯಿಂದ ಇದು ಬೆಳಕಿಗೆ ಬಂದಿದೆ. ‘ರಾಜ್ಯ ಸರ್ಕಾರ ಹೇಳುವಂತೆ ₹ 2,000 ಕೋಟಿ ಬಿಡುಗಡೆಯಾಗಿಲ್ಲ. ಇದಲ್ಲದೇ, ವಿರೋಧ ಪಕ್ಷದವರು ಹೇಳುವಂತೆ ಸಾವಿರಾರು ಕೋಟಿ ರೂಪಾಯಿಯ …

Read More »