Breaking News
Home / ಜಿಲ್ಲೆ / ಬೆಳಗಾವಿ (page 408)

ಬೆಳಗಾವಿ

ನದಿ ತೀರದ ಗ್ರಾಮಗಳಿಗೆ ಪ್ರವಾಹ ಬೀತಿ ಸೇತುವೆಗಳು ಜಲಾವೃತ, ಸಂಚಾರ ಸ್ಥಗಿತ

ಮೂಡಲಗಿ: ಬೆಳಗಾವಿ ಜಿಲ್ಲೆ ಹಾಗೂ ಮಹಾರಾಷ್ಟ್ರದಲ್ಲಿ ಎಡಬಿಡದೆ ಸುರಿಯುತ್ತಿರುವ ಮಳೆಯಿಂದ ಮಾರ್ಕಂಡೇಯ ನದಿಯಿಂದ ಘಟಪ್ರಭಾ ನದಿಗೆ ಗುರುವಾರದಂದು ಅಪಾರ ಪ್ರಮಾಣದ ನೀರು ಹರಿದು ಬರುತ್ತಿರುವದರಿಂದ ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ನದಿ ತೀರದ ಗ್ರಾಮಗಳಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಮಹಾರಾಷ್ಟ್ರ ಭಾಗದಲ್ಲಿ ಭಾರಿ ಮಳೆ ಮೈದುಂಬಿ ಸುರಿಯುತ್ತಿರುವ ಘಟಪ್ರಭೆ ನದಿ ಮೈದುಂಬಿ ಹರಿಯುತ್ತಿದ್ದು ಮೂಡಲಗಿ ತಾಲೂಕಿನ ಸುಣಧೋಳಿ, ಕಮ¯ದಿನ್ನಿ, ಹುಣಶ್ಯಾಳ ಪಿ.ವಾಯ್, ಢವಳೇಶ್ವರ, ಅವರಾದಿ ಹಾಗೂ ಗೋಕಾಕ ತಾಲೂಕಿನ ಉದಗಟ್ಟಿ …

Read More »

ಪ್ರವಾಹ ಸಮಸ್ಯೆ ಎದುರಾದರೆ ಅದನ್ನು ಎದುರಿಸುವ ಎಲ್ಲ ಮುಂಜಾಗೃತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ: ತಹಶೀಲ್ದಾರ ಪ್ರಕಾಶ ಹೂಳೆಪ್ಪಗೋಳ

ಗೋಕಾಕ: ಪ್ರವಾಹ ಸಮಸ್ಯೆ ಎದುರಾದರೆ ಅದನ್ನು ಎದುರಿಸುವ ಎಲ್ಲ ಮುಂಜಾಗೃತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದ್ದು ಯಾರೂ ಆತಂಕಪಡುವ ಅಗತ್ಯವಿಲ್ಲ ಎಂದು ಗೋಕಾಕ ತಹಶೀಲ್ದಾರ ಪ್ರಕಾಶ ಹೂಳೆಪ್ಪಗೋಳ ಹೇಳಿದರು. ಇಂದು ಮಾದ್ಯಮದವರೊಂದಿಗೆ ಮಾತನಾಡಿ, ಪ್ರವಾಹ ಸಮಸ್ಯೆ ಇನ್ನೂ ಎದುರಾಗಿಲ್ಲ. ಹಿರಣ್ಯಕೇಶಿ, ಮಾರ್ಕಂಡೇಯ  ನದಿಗಳಲ್ಲಿ  ನೀರು ಹೆಚ್ಚಿನ ಪ್ರಮಾಣದಲ್ಲಿ ಬರುತ್ತಿದೆ. ಮತ್ತು ಶಿರೂರು ಡ್ಯಾಂನಿಂದ  ನೀರು ಬಿಡುಗಡೆಯಾಗಿದೆ ಹೀಗಾಗಿ ನದಿಗಳು ತುಂಬಿ ಹರಿಯುತ್ತಿವೆ. ಹಿಡಕಲ್ ಜಲಾಶಯ ಇನ್ನೂ ಅರ್ಧದಷ್ಟು ಖಾಲಿಯಿದೆ. ಅದು ಭರ್ತಿಯಾಗುವರೆಗೂ ಪ್ರವಾಹ …

Read More »

ಸೊಂಕಿತರ ಆರೈಕೆಗಾಗಿ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಅವಿರತವಾಗಿ ಶ್ರಮಿ

ಮೂಡಲಗಿ : ಹೆಚ್ಚುತ್ತಿರುವ ಕೊರೋನಾ ಸೊಂಕಿನ ಹಿನ್ನೆಲೆಯಲ್ಲಿ ಸೊಂಕಿತರ ಆರೈಕೆಗಾಗಿ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಅವಿರತವಾಗಿ ಶ್ರಮಿಸುತ್ತಿದ್ದು, ಅವರ ಜನಪರ ಕಾಳಜಿಯು ನಮ್ಮ ನಾಡಿಗೆ ಮಾದರಿಯಾಗಿದೆ ಎಂದು ತಹಶೀಲ್ದಾರ ದಿಲ್‌ಶಾದ್ ಮಹಾತ್ ಶ್ಲಾಘಿಸಿದರು. ಬುಧವಾರದಂದು ಕೊರೋನಾ ಸೊಂಕಿತರಿಗೆ ಇಲ್ಲಿಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕೇಂದ್ರಿಕೃತ ಆಮ್ಲಜನಕ ಪೂರೈಕೆ ಘಟಕಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕೊರೋನಾ ಸೊಂಕಿತರಿಗೆ ತಮ್ಮ ಅನನ್ಯ ಸೇವೆ ನೀಡುವ ಮೂಲಕ ಅವರ ಪ್ರೀತಿಗೆ …

Read More »

ತಂದೆಯ ಜೊತೆ ಆಸ್ಪತ್ರೆಗೆ ಬಂದಿದ್ದ ಯುವಕ ಕಟ್ಟಡ ಮೇಲಿಂದ ಬಿದ್ದು ಸಾವ

ಬೆಳಗಾವಿ:  ತಂದೆಯ ಜೊತೆ ಆಸ್ಪತ್ರೆಗೆ ಬಂದಿದ್ದ ಯುವಕ ಕಟ್ಟಡ ಮೇಲಿಂದ ಬಿದ್ದು ಸಾವನ್ನಪ್ಪಿರುವ ದಾರುಣ ಘಟನೆ ನಡೆದಿದೆ. ನಗರದ ಕಡೋಲ್ಕರ್ ಗಲ್ಲಿಯಲ್ಲಿ  ಘಟನೆ ನಡೆದಿದ್ದು, ಕಟ್ಟಡ ಮೇಲಿಂದ ಯುವಕ ಬಿದ್ದಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.  ಹಿಂಡಲಗಾ ಗ್ರಾಮದ ರೋಹನ್ ಕುಪ್ಪೇಕರ್(25) ಮೃತ ದುರ್ದೈವಿ. ಕಟ್ಟಡ ಮೇಲಿಂದ ಯುವಕ ಬೀಳಲು ನಿಖರ ಕಾರಣ ಪತ್ತೆಯಾಗಿಲ್ಲ. ಪ್ರಕರಣ ಕುರಿತು ತನಿಖೆ ನಡೆಸುತ್ತಿರುವ ಪೊಲೀಸರು ಬೆಳಗಾವಿ ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ಯುವಕನ ಮೃತದೇಹ ರವಾನಿಸಿದ್ದಾರೆ. …

Read More »

ಜಿಲ್ಲೆಯಾದ್ಯಂತ ಗುರುವಾರವೂ ಮಳೆ ಮುಂದುವರೆದಿದ್ದು, ನದಿಗಳು ಮೈದುಂಬಿ ಹರಿಯುತ್ತಿವೆ. ಜಲಾಶಯಗಳಿಗೆ ಅಪಾರ ಪ್ರಮಾಣದಲ್ಲಿ ನೀರು ಹರಿದುಬರುತ್ತಿದೆ.

ಬೆಳಗಾವಿ:  ಜಿಲ್ಲೆಯಾದ್ಯಂತ ಗುರುವಾರವೂ ಮಳೆ ಮುಂದುವರೆದಿದ್ದು, ನದಿಗಳು ಮೈದುಂಬಿ ಹರಿಯುತ್ತಿವೆ. ಜಲಾಶಯಗಳಿಗೆ ಅಪಾರ ಪ್ರಮಾಣದಲ್ಲಿ ನೀರು ಹರಿದುಬರುತ್ತಿದೆ. ಹುಕ್ಕೇರಿ ತಾಲ್ಲೂಕಿನ ಶಿರೂರು ಬಳಿ ಮಾರ್ಕಂಡೇಯ ನದಿಗೆ 9,500 ಕ್ಯುಸೆಕ್‌ ನೀರು ಹರಿದುಬರುತ್ತಿದ್ದು, ಅಷ್ಟೇ ಪ್ರಮಾಣದ ನೀರನ್ನು ಜಲಾಶಯದಿಂದ ಹೊರಬಿಡಲಾಗುತ್ತಿದೆ.  3.69 ಟಿಎಂಸಿ ಅಡಿ ಸಾಮರ್ಥ್ಯದ ಜಲಾಶಯದಲ್ಲಿ 3.40 ಟಿಎಂಸಿ ಅಡಿಗಳಷ್ಟು ನೀರು ಭರ್ತಿಯಾಗಿದೆ. ಘಟಪ್ರಭಾ ನದಿಗೂ ಅಪಾರ ಪ್ರಮಾಣದಲ್ಲಿ ನೀರು ಹರಿದುಬರುತ್ತಿದೆ. ಹಿಡಕಲ್‌ ಬಳಿ ಜಲಾಶಯಕ್ಕೆ 43,402 ಕ್ಯುಸೆಕ್‌ ನೀರು …

Read More »

ರಸ್ತೆಯ ಮೇಲೆ ನೀರಿನ ಸೆಳೆತಕ್ಕೆ ಬೈಕ್ ಸಮೇತವಾಗಿ ಕೊಚ್ಚಿ ಹೋಗುತ್ತಿದ್ದ ವ್ಯಕ್ತಿಯನ್ನು ಸ್ಥಳೀಯ ಯುವಕರು ರಕ್ಷಣೆ ಮಾಡಿದ್ದಾರೆ.

ಬೆಳಗಾವಿ:  ಚಿಕ್ಕೋಡಿ ತಾಲ್ಲೂಕಿನ ಸದಲಗಾ ಬೋರ್ ಗಾಂವ ರಸ್ತೆಯ ಮೇಲೆ ನೀರಿನ ಸೆಳೆತಕ್ಕೆ ಬೈಕ್ ಸಮೇತವಾಗಿ ಕೊಚ್ಚಿ ಹೋಗುತ್ತಿದ್ದ ವ್ಯಕ್ತಿಯನ್ನು ಸ್ಥಳೀಯ ಯುವಕರು ಗುರುವಾರ ರಕ್ಷಣೆ ಮಾಡಿದ್ದಾರೆ. ರಸ್ತೆಯ ಮೇಲೆ ನೀರಿನ ಹರಿವು ಹೆಚ್ಚಳವಿತ್ತು, ಆದ್ರು ವ್ಯಕ್ತಿ ದ್ವಿಚಕ್ರ ವಾಹನದೊಂದಿಗೆ ಹೊರಟ್ಟಿದ್ದನು. ಸಾಗುತ್ತಿರುವ ಸಂದರ್ಭದಲ್ಲಿ ನೀರಿನ ಸೆಳೆತಕ್ಕೆ ಬೈಕ್ ಸಮೇತವಾಗಿ ವ್ಯಕ್ತಿ ಕೊಚ್ಚಿ ಹೋಗುತ್ತಿದ್ದನು. ತಕ್ಷಣ ಗಮನಿಸಿದ ಸ್ಥಳೀಯ ಯುವಕರು ವ್ಯಕ್ತಿಯನ್ನು ರಕ್ಷಣೆ ಮಾಡಿದ್ದಾರೆ. ಜಿಲ್ಲೆಯಾದ್ಯಂತ  ಬಿರುಸಿನ ಮಳೆ ಆರಂಭವಾಗಿರುವುದರಿಂದ …

Read More »

ಭಾರಿ ಮಳೆಯ ಅಬ್ಬರಕ್ಕೆ ನಗರದ ಜನರು ತತ್ತರಿಸಿ ಹೋಗಿದ್ದಾರೆ.

ಬೆಳಗಾವಿ: ಭಾರಿ ಮಳೆಯ ಅಬ್ಬರಕ್ಕೆ ನಗರದ ಜನರು ತತ್ತರಿಸಿ ಹೋಗಿದ್ದಾರೆ. ಧಾರಾಕಾರ ಮಳೆಯಿಂದ, ಟಿಳಕವಾಡಿಯ ಕರಿಯಪ್ಪಾ ಕಾಲೋನಿ, ಯಳ್ಳೂರ ರಸ್ತೆ, ಆನಂದ ನಗರ, ವಡಗಾಂವ್​ನಲ್ಲಿ ಮಳೆ ನೀರು ನಿಲ್ಲುತ್ತಿದೆ. ಹೀಗಾಗಿ, ಏರಿಯಾದ ಅರ್ಧದಷ್ಟು ಮನೆಗಳು ಮುಳುಗಡೆಯಾಗುತ್ತಿದೆ. ರಾತ್ರಿಯಿಡೀ ಸುರಿದ ಮಳೆಯಿಂದ ಮನೆಗಳಿಗೆ ನೀರು ನುಗುತ್ತಿದ್ದು ಮೂರು ಕಾಲೋನಿಗಳು ಭಾಗಶಃ ಆವೃತವಾಗಿವೆ. ಬೃಹತ್ ಮರಗಳು ಬಿದ್ದು ರಸ್ತೆ ಸಂಚಾರಕ್ಕೆ ಅಡೆತಡೆ ಉಂಟಾಗಿದೆ. ರಸ್ತೆಯಲ್ಲಿ ತುಂಬಿರೋ ನೀರಲ್ಲಿ ಮಹಿಳೆಯರು, ವೃದ್ಧರು ಓಡಾಡುವ ಸ್ಥಿತಿ …

Read More »

ತನ್ನ ಮಗಳು ಶಿಕ್ಷಣಕ್ಕಾಗಿ ತಾಯಿಯೊಬ್ಬಳು ಕಿವಿಯೊಲೆ ಮಾರಿದ ಕಣ್ಣೀರಿನ ಕಥೆ ಬೆಳಗಾವಿಯಲ್ಲಿ

ಬೆಳಗಾವಿ: ತನ್ನ ಮಗಳು ಎಸ್‍ಎಸ್‍ಎಲ್‍ಸಿ ಆನ್‍ಲೈನ್ ಶಿಕ್ಷಣಕ್ಕಾಗಿ ತಾಯಿಯೊಬ್ಬಳು ಕಿವಿಯೊಲೆ ಮಾರಿದ ಕಣ್ಣೀರಿನ ಕಥೆ ಬೆಳಗಾವಿಯಲ್ಲಿ ನಡೆದಿದೆ. ಮಹಾನಗರದ ಕ್ಲಬ್ ರಸ್ತೆಯಲ್ಲಿರುವ ತಗಡಿನ ಶೆಡ್‍ನಲ್ಲಿ ವಾಸವಿರುವ ದೇವದಾಸಿ ಜೋಗಮ್ಮ ಸರೋಜಿನಿ ಬೇವಿನಕಟ್ಟಿ ಮಕ್ಕಳಿಗಾಗಿ ಕಿವಿಯೊಲೆ ಮಾರಿ ಮೊಬೈಲ್ ತಂದುಕೊಟ್ಟಿದ್ದಾರೆ.ಜೋಗ ಬೇಡಿ ತುತ್ತಿನ ಚೀಲ ತುಂಬಿಸಿಕೊಳ್ಳುತ್ತಿದ್ದ ಈ ಜೋಗಮ್ಮನ ಕುಟುಂಬಕ್ಕೆ ಕೊರೊನಾ ಬರಸಿಡಿಲು ಬಡಿದಂತಾಗಿದೆ. ಕಳೆದ ಐದು ತಿಂಗಳಿಂದ ತಾಯಿ ಸರೋಜಾಗೆ ಕೆಲಸ ಕೂಡ ಇಲ್ಲ ಇತ್ತ ಇದ್ದೊಬ್ಬ ಮಗ ಅಪಘಾತದಲ್ಲಿ …

Read More »

ಮಂಗಳವಾರದಿಂದ ಸತತವಾಗಿ ಮಳೆ ಸುರಿಯುತ್ತಿದ್ದು ಕಳೆದ ವರ್ಷದ ಪ್ರವಾಹದ ಭೀತಿ ಮತ್ತೆ

ಬೆಳಗಾವಿ: ಮಹಾನಗರ ಸಹಿತ ಜಿಲ್ಲೆಯ ಅನೇಕ ಕಡೆಗಳಲ್ಲಿ ನಿನ್ನೆ ಮಂಗಳವಾರದಿಂದ ಸತತವಾಗಿ ಮಳೆ ಸುರಿಯುತ್ತಿದ್ದು ಕಳೆದ ವರ್ಷದ ಪ್ರವಾಹದ ಭೀತಿ ಮತ್ತೆ ಉಂಟಾಗಿದೆ. ಖಾನಾಪುರ, ಬೈಲಹೊಂಗಲ ಮುಂತಾದ ಪ್ರದೇಶಗಳಲ್ಲಿ ಬಿಟ್ಟೂ ಬಿಡದೇ ಮಳೆ ಸುರಿಯುತ್ತಿರು ವದರಿಂದ ಜಿಲ್ಲೆಯ ಸವದತ್ತಿ ಬಳಿಯ ನವಿಲುತೀರ್ಥ ಆಣೆಗೆ ಒಳಹರಿವಿನ ಪ್ರಮಾಣ ಬುಧವಾರ ಸಂಜೆಗೆ 30 ಸಾವಿರ ಕ್ಯೂಸೆಕ್ಸ ತಲುಪಿದೆ. ಆಣೆಕಟ್ಟಿನ ಒಟ್ಟು ಎತ್ತರ 2079.5 ಅಡಿ.ಸದ್ಯ 2023 ಅಡಿಗಳವರೆಗೆ ನೀರು ನಿಂತಿದೆ.ಆಣೆಯ ಒಟ್ಟು ಸಾಮರ್ಥ್ಯ …

Read More »

ಬೆಳಗಾವಿ: ಬುಧವಾರ ಒಂದೇ ದಿನಕ್ಕೆ 293 ಹೊಸ ಕೇಸ್ ಪತ್ತೆ

ಬೆಳಗಾವಿ: ಜಿಲ್ಲೆಯಲ್ಲಿಂದು ಮಾರಕ ಕೊರೊನಾ ರಣಕೇಕೆ ಮುಂದುವರೆದಿದ್ದು,ಬುಧವಾರ ಒಂದೇ ದಿನಕ್ಕೆ 293 ಹೊಸ ಕೇಸ್ ಪತ್ತೆಯಾಗಿವೆ. ನಾಲ್ಕು ಜನರು ಬಲಿಯಾಗಿದ್ದಾರೆ. ಆರೋಗ್ಯ ಇಲಾಖೆ ಹೆಲ್ತ್ ಬುಲೆಟಿನ್‍ನಲ್ಲಿ ಮಾಹಿತಿ ನೀಡಿದ್ದು, 293 ಜನರಿಗೆ ಕೊರೊನಾ ಸೋಂಕು ತಗುಲಿದ್ದು, ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 4221ಕ್ಕೆ ಏರಿಕೆಯಾಗಿದೆ. ಇನ್ನೂ ಜಿಲ್ಲೆಯಲ್ಲಿ ನಾಲ್ಕು ಜನರು ಕೊರೊನಾ ಸೋಂಕಿಗೆ ಬಲಿಯಾಗಿದ್ದು, ಸಾವಿನ ಸಂಖ್ಯೆ 90ಕ್ಕೆ ಹೆಚ್ಚಳವಾಗಿದೆ. ಇಲ್ಲಿಯವರೆಗೂ 1162 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. 2969 …

Read More »