Breaking News

ವಿದ್ಯುತ್​​​ ಅವಘಡ​​​: ಅಜ್ಜಿಯನ್ನು ರಕ್ಷಣೆ ಮಾಡಲು ಹೋದ ಮೊಮ್ಮಗ ಕೂಡ ಸಾವು

Spread the love

ಚಿಕ್ಕೋಡಿ: ವಿದ್ಯುತ್​ ಶಾಕ್​​​ಗೆ ಒಳಗಾಗಿದ್ದ ಅಜ್ಜಿಯನ್ನು ರಕ್ಷಣೆ ಮಾಡಲು ಹೋಗಿದ್ದ ಮೊಮ್ಮಗ ಕೂಡ ಶಾಕ್​ ತಗುಲಿ ಸಾವನ್ನಪ್ಪಿದ ಘಟನೆ ಜಿಲ್ಲೆಯ ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣದ ಮಡ್ಡಿ ಗಲ್ಲಿಯಲ್ಲಿ ನಡೆದಿದೆ.

ಅಜ್ಜಿ ಶಾಂತವ್ವಾ ಬಸ್ತವಾಡೆ, ಮೊಮ್ಮಗ ಸಿದ್ದಾರ್ಥ ಬಸ್ತವಾಡೆ (24) ಸ್ಥಳದಲ್ಲೇ ಸಾವನ್ನಪ್ಪಿದ ಮೃತ ದುರ್ದೈವಿಗಳು. ಘಟನೆಯಲ್ಲಿ ಇಬ್ಬರು ಸಾವನ್ನಪ್ಪಿದ್ದರೆ ಮತೋರ್ವ ಮಹಿಳೆ ಗಂಭೀರವಾಗಿ ಗಾಯಗೊಂಡಿದ್ದಾರೆ.

 

ನಿನ್ನೆ ರಾತ್ರಿ ಮಳೆ ಸುರಿದ ಹಿನ್ನಲೆ ಹಿತ್ತಲಿನಲ್ಲಿ ಬಟ್ಟೆ ಹಾಕುವ ತಂತಿಗೆ ವಿದ್ಯುತ್ ತಗುಲಿದೆ. ಇದನ್ನು ಗಮನಿಸದೆ ಅಜ್ಜಿ ಬಟ್ಟೆ ಒಣಗಿಸಲು ತಂತಿ ಮೇಲೆ ಬಟ್ಟೆ ಹಾಕಲು ಹೋದಾಗ ಅಜ್ಜಿಗೆ ಮೊದಲು ಕರೆಂಟ್ ಶಾಕ್​ ತಗುಲಿದ್ದು, ಅವರನ್ನು ರಕ್ಷಣೆ ಮಾಡಲು ಹೋದ ಮೊಮ್ಮಗ ಕೂಡ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಸ್ಥಳಕ್ಕೆ ಸಂಕೇಶ್ವರ ಪೊಲೀಸರ ಭೇಟಿ ಪರಿಶೀಲನೆ ನಡೆಸಿದ್ದಾರೆ.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ