Breaking News

ರಾಯಬಾಗ

ಕೊಟ್ಟ ಮಾತು ಉಳಿಸಿಕೊಂಡ ಕಾಂಗ್ರೆಸ್: ರಾಹುಲ ಜಾರಕಿಹೊಳಿ

ರಾಯಬಾಗ: ‘ಕಾಂಗ್ರೆಸ್‌ ಸರ್ಕಾರ ಕೊಟ್ಟ ಭರವಸೆಯನ್ನು ಈಡೇರಿಸಿದೆ. ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡುವುದರೊಂದಿಗೆ ಅಭಿವೃದ್ಧಿ ಕೆಲಸಗಳನ್ನೂ ಮಾಡುತ್ತಿದೆ. ಬಿಜೆಪಿ ಮಾತ್ರ ಸುಳ್ಳು ಹೇಳಿಕೊಂಡೇ ಬಂದಿದೆ’ ಎಂದು ರಾಹುಲ ಜಾರಕಿಹೊಳಿ ಹೇಳಿದರು. ಪಟ್ಟಣದ ಅರ್ಫಾ ಪ್ಯಾಲೇಸ್‌ನಲ್ಲಿ ನಡೆದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಪ್ರಿಯಾಂಕಾ ಜಾರಕಿಹೊಳಿ ಪರ ಮತಯಾಚನೆ ಮಾಡಿ ಅವರು ಮಾತನಾಡಿದರು. ಚಿಕ್ಕೋಡಿ ಲೋಕಸಭಾ ಮತಕ್ಷೇತ್ರದ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಎಂದರು. ಈ ಸಂದರ್ಭದಲ್ಲಿ ನಿರ್ಮಲಾ ಪಾಟೀಲ, …

Read More »

ಬಸ್ತವಾಡ ಗ್ರಾಮದ ಶ್ರೀಅರಣ್ಯ ಸಿದ್ದೇಶ್ವರ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ಜರಗಿತು

ಬಸ್ತವಾಡ ಗ್ರಾಮದ ಶ್ರೀಅರಣ್ಯ ಸಿದ್ದೇಶ್ವರ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ಜರಗಿತು ರಾಯಬಾಗ ತಾಲೂಕೀನ ಬಸ್ತವಾಡ ಗ್ರಾಮಸಲ್ಲಿ ಶ್ರೀ ಅರಣ್ಯ ಸಿದ್ದೇಶ್ವರ ಜಾತ್ರೆಯು ವಿಜೃಂಭಣೆಯಿಂದ ನಡೆಯಿತು ಈ ಜಾತ್ರೆಯ ಅಂಗವಾಗಿ ಬೇರೆ ಬೇರೆ ಗ್ರಾಮಗಳಿಂದ ಪಲ್ಲಕ್ಕಿ ಗಳು ದೇವಸ್ಥಾನದ ಆವರಣಕ್ಕೆ ಆಗಮಿಸಿದವು ಭಕ್ತರು ಭಂಡಾರದ ಒಡೆಯನಿಗೆ ಭಂಡಾರ ಹಾರಿಸಿ ಭಕ್ತಿಸೇವೆ ಅರ್ಪಿಸಿದರು   ಹರಕೆ ಹೊತ್ತ ಭಕ್ತರು ದೇವರ ಆಶೀರ್ವಾದದಿಂದ ಹರಕೆ ಫಲ ಈಡೇರಿದ ನಂತರ ಹತ್ತು ಜನ ಭಕ್ತರು ಸಿದ್ದಪ್ಪ …

Read More »

ಹಾರೂಗೇರಿ ಪೊಲೀಸರ ಕಾರ್ಯಾಚರಣೆ ಯಿಂದ ಅಪಹರಣ ಪ್ರಕರಣ ಭೇದಿಸಲು ಯಶಸ್ವಿ ಯಾದ ತಂಡ

ರಾಯಬಾಗ :ತಾಲೂಕಿನ ಖನದಾಳ ಗ್ರಾಮದ ಅಪಹರಣ ಪ್ರಕರಣ ಭೇದಿಸಲಾಗಿದ್ದು ಈ ಸಂಬಂಧ ಆರೋಪಿಗಳನ್ನು ಬಂಧಿಸಿ ಆರೋಪಿಗಳಿಂದ ನಾಲ್ಕು ಲಕ್ಷ ಹತ್ತು ಸಾವಿರ ನಗದು ಕೃತಕ್ಕೆ ಬಳಸಿದ್ದ ಎರಡು ಕಾರು ಒಂದು ತಲವಾರ ಚಾಕು ಅಪಹರಣ ಮಾಡಿದವನಿಗೆ ಹಾಕುವ ಕರಿ ಬಣ್ಣದ ಕನ್ನಡಕಾ ಆರೋಪಿತದ ಎಳು ಮೊಬೈಲ್ ಫೋನುಗಳನ್ನು ವಶಪಡಿಸಿಕೊಳ್ಳುವಲ್ಲಿ ಹಾರೂಗೇರಿ ಪೋಲಿಸ ತಂಡ ಯಶಸ್ವಿ ಆಗಿದೆ. ಈ ಸಂಬಂಧ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಬೆಳಗಾವಿ ಪೋಲಿಸ ವರಿಷ್ಠಾಧಿಕಾರಿ ಡಾ. ಸಂಜೀವ ಪಾಟೀಲ …

Read More »

ರಾಯಬಾಗ :A.T.M.ಕಳವು ಯತ್ನ: ಆರೋಪಿ ಬಂಧನ

ರಾಯಬಾಗ: ತಾಲ್ಲೂಕಿನ ಬಾವನಸೌದತ್ತಿ ಗ್ರಾಮದಲ್ಲಿ ಎಟಿಎಂ ಒಡೆಯಲು ಯತ್ನಿಸಿದ ಆರೋ‍ಪಿಯನ್ನು ಎಂಟು ತಿಂಗಳ ಬಳಿಕ ಪೊಲೀಸರು ಬಂಧಿಸಿದ್ದಾರೆ. ಬಾವಾನಸೌದತ್ತಿ ನಿವಾಸಿ ಖಾಜಾಸಾಬ್‌ ಬಾಬಾಸಾಬ್‌ ಮುಜಾವರ (25) ಬಂಧಿತ. 2022ರ ಫೆಬ್ರುವರಿ 4ರಂದು ರಾತ್ರಿ ಎಟಿಎಂ ಮುರಿದು ಕಳ್ಳತನಕ್ಕೆ ಯತ್ನಿಸಿದ ಯುವಕ ತಲೆ ಮರೆಸಿಕೊಂಡಿದ್ದ. ಕಬ್ಬಿಣದ ರಾಡ್‌ ಬಳಸಿ ಎಟಿಎಂ ಮುರಿಯಲು ಯತ್ನಿಸಿದ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದವು. ಆದರೆ, ಆರೋಪಿ ಗುರುತು ಸರಿಯಾಗಿ ಪತ್ತೆಯಾಗಿರಲಿಲ್ಲ. ಪ್ರಕರಣದ ತನಿಖೆ ಕೈಗೊಂಡ ರಾಯಬಾಗ …

Read More »

ಜಮೀನಿನಲ್ಲಿ ಗಾಂಜಾ ಬೆಳೆದಿದ್ದ ಆರೋಪಿ ಬಂಧಿಸಿ೪೫ ಕೆಜಿ ಗಾಂಜಾವನ್ನು ವಶಕ್ಕೆ ಪಡೆದ ಪೊಲೀಸರು

ರಾಯಬಾಗ ತಾಲೂಕಿನ ನಿಡಗುಂದಿ ಗ್ರಾಮದಲ್ಲಿ ಜಮೀನಿನಲ್ಲಿ ಗಾಂಜಾ ಬೆಳೆದಿದ್ದ ಆರೋಪಿಯನ್ನು ಬಂಧಿಸಿ ಆತನಿಂದ ೪೫ ಕೆಜಿ ಗಾಂಜಾವನ್ನು ವಶಕ್ಕೆ ಪಡೆದುಕೊಳ್ಳುವಲ್ಲಿ ಬೆಳಗಾವಿ ಸಿಇಎನ್ ಅಪರಾಧ ವಿಭಾಗದ ಪೊಲೀಸರು ಯಶಸ್ವಿಯಾಗಿದ್ದಾರೆ. ರಾಯಬಾಗ ತಾಲೂಕಿನ ನಿಡಗುಂದಿ ಗ್ರಾಮದ ಜಮೀನಿನಲ್ಲಿ ಆರೋಪಿಯೊಬ್ಬ ತನ್ನ ಜಮೀನಿನಲ್ಲಿ ಗಾಂಜಾ ಬೆಳೆದಿದ್ದ. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಸಿಇಎನ್ ಅಪರಾಧ ವಿಭಾಗದ ಪೊಲೀಸರು ಆರೋಪಿಯನ್ನು ಬಂಧಿಸಿ ಆತನ ಜಮೀನಿನಲ್ಲಿ ಬೆಳೆದಿದ್ದ ೪೫ ಕೆಜಿ ಗಾಂಜಾವನ್ನು ವಶಕ್ಕೆ ಪಡೆದಿದ್ದಾರೆ. …

Read More »

ಕಾಂಗ್ರೆಸ್ ಅಭಿವೃದ್ಧಿ ಕೆಲಸಗಳೇ ಮುಂದಿನ ಚುನಾವಣೆಯಲ್ಲಿ ವರದಾನ: ಶಾಸಕಿ ಲಕ್ಷ್ಮೀ ಹೆಬ್ಬಾಳಕರ

ಕುಡಚಿ: ಕಳೆದ ಅವಧಿಯಲ್ಲಿ ಕಾಂಗ್ರೆಸ್ ಸರ್ಕಾರ ಉತ್ತಮ ಆಡಳಿತ ನೀಡುವುದರ ಜೊತೆಗೆ ಅನೇಕ ಅಭಿವೃದ್ಧಿ ಕೆಲಸಗಳನ್ನು ಮಾಡಿದೆ, ಈ ಅಭಿವೃದ್ಧಿ ಕೆಲಸಗಳೇ ಮುಂಬರಲಿರುವ ವಿಧಾನಸಭಾ ಚುನಾವಣೆಗೆ ವರದಾನವಾಗಲಿವೆ ಎಂದು ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಹೇಳಿದರು.       ಅವರು ಕುಡಚಿ ವಿಧಾನಸಭಾ ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ಮತ್ತು ಪಕ್ಷದ ಸಂಘಟನೆಯ ಹಿತ ದೃಷ್ಟಿಯಿಂದ 6 ದಿನಗಳ ಕಾಲ ಹಮ್ಮಿಕೊಳ್ಳಲಾಗಿದ್ದ ಬೃಹತ್ ಸೈಕಲ್ ಜಾಥಾದ ಕೊನೆಯ …

Read More »

ಪ್ರತಿ ಮನೆಗೂ ಶುದ್ಧ ನೀರು ಪ್ರಧಾನಿ ಆಶಯ :,ದುರ್ಯೋಧನ ಐಹೊಳೆ

ಚಿಕ್ಕೋಡಿ: ‘ಜನರ ಆರೋಗ್ಯದ ಹಿತದೃಷ್ಟಿಯಿಂದ ರಾಯಬಾಗ ಕ್ಷೇತ್ರದ ಜನರಿಗೆ ಶುದ್ಧ ಕುಡಿಯುವ ನೀರಿನ ಯೋಜನೆ ಅನುಷ್ಠಾನ ಮಾಡಲಾಗಿದೆ. ಪ್ರತಿ ಮನೆಗೂ ಶುದ್ಧ ನೀರು ದೊರೆಯಬೇಕು ಎನ್ನುವುದು ಪ್ರಧಾನಿ ನರೇಂದ್ರ ಮೋದಿ ಅವರ ಆಶಯವಾಗಿದೆ’ ಎಂದು ಶಾಸಕ ದುರ್ಯೋಧನ ಐಹೊಳೆ ಹೇಳಿದರು. ರಾಯಬಾಗ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ತಾಲ್ಲೂಕಿನ ಬಂಬಲವಾಡ, ಕುಂಗಟೋಳ್ಳಿ, ಕರೋಶಿ ಗ್ರಾಮದಲ್ಲಿ ಜಲಜೀವನ ಅಭಿಯಾನದಲ್ಲಿ ₹ 4 ಕೋಟಿ ವೆಚ್ಚದಲ್ಲಿ ಕೈಗೊಂಡಿರುವ ಕುಡಿಯುವ ನೀರಿನ ಯೋಜನೆಗೆ ಶನಿವಾರ ಚಾಲನೆ …

Read More »

ಇಲ್ಲಿ ಈದ್ ಮಿಲಾದ್ ಹಬ್ಬವನ್ನು ಮುಸ್ಲಿಮರು ಕೋವಿಡ್ ಕಾರಣದಿಂದಾಗಿ ಸರಳವಾಗಿ ಶನಿವಾರ ಆಚರಿಸಿದರು.

ಕುಡಚಿ: ಇಲ್ಲಿ ಈದ್ ಮಿಲಾದ್ ಹಬ್ಬವನ್ನು ಮುಸ್ಲಿಮರು ಕೋವಿಡ್ ಕಾರಣದಿಂದಾಗಿ ಸರಳವಾಗಿ ಶನಿವಾರ ಆಚರಿಸಿದರು. ಪಟ್ಟಣ ಹಾಗೂ ಗ್ರಾಮೀಣ ಭಾಗದಿಂದ ಬಂದಿದ್ದ ಅವರು ಮಾಸಾಹೇಬಾ ದರ್ಗಾದಿಂದ ಮುಖ್ಯ ರಸ್ತೆಗಳಲ್ಲಿ ಮೆರವಣಿಗೆ ನಡೆಸಿದರು. ಮೆರವಣಿಗೆಯುದ್ದಕ್ಕೂ ದೇವರ ನಾಮಸ್ಮರಣೆ ಮಾಡಿದರು. ಅವರಿಗೆ ಮುಖಂಡರು ಸಿಹಿ, ಶರಬತ್, ಚಹಾ ವಿತರಿಸಿದರು. ಮುಖಂಡರಾದ ಮಹಮ್ಮದ ಹುಸೇನ ಓಮಿನಿ, ಸುಲ್ತಾನ ವಾಟೆ, ರಾಜು ನಿಡಗುಂದಿ, ಆಶಿಫ ಚಮನಶೇಖ, ಆತೀಫ ಪಟಾಯಿತ, ಅಮೀನ ವಾಟೆ ಇದ್ದರು. ಮಸೀದಿಗಳನ್ನು ಸಿಂಗರಿಸಲಾಗಿತ್ತು. ಪಿಎಸ್‌ಐ …

Read More »

ಮೂರ್ನಾಲ್ಕು ವರ್ಷಗಳಿಂದ ಶೀತಿಲಗೊಂಡ ಸರ್ಕಾರಿ ಶಾಲೆ

ರಾಯಬಾಗ : ಮೂರ್ನಾಲ್ಕು ವರ್ಷಗಳಿಂದ ಶೀತಿಲಗೊಂಡ ಸರ್ಕಾರಿ ಶಾಲೆ ಮೂರ್ನಾಲ್ಕು ವರ್ಷಗಳಿಂದ ಶಾಲೆ ಶೀತಿಲಗೊಂಡಿದ್ದು ಇದರಿಂದ ವಿದ್ಯಾರ್ಥಿಗಳು ತೊಂದರೆ ಅನುಭವಿಸುತ್ತಿದ್ದು ಈ ಬಗ್ಗೆ ಹಲವಾರು ಬಾರಿ ಶಾಸಕರಿಗೆ, ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು ಕೂಡಾ ಕ್ಯಾರೆ ಎನ್ನದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು. ಹೌದು ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ದಿಗ್ಗೇವಾಡಿ ಗ್ರಾಮದಲ್ಲಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸಂಪೂರ್ಣ ಶೀತಲ ಗೊಂಡಿದ್ದು ಸುಮಾರು ಮೂರ್ನಾಲ್ಕು ವರ್ಷಗಳಿಂದ ಹಂಚುಗಳು ಒಡೆದ …

Read More »

ಹಸೀಲ್ದಾರ್ ಚಂದ್ರಕಾಂತ ಭಜಂತ್ರಿ ಅವರನ್ನು ರಾತ್ರೋ ರಾತ್ರಿ ಸಾಮಗ್ರಿಗಳ ಸಮೇತ ಮನೆ ಖಾಲಿ ಮಾಡಿಸಿದ ಆರೋಪ

ರಾಯಬಾಗ:  ವರ್ಗಾವಣೆಗೊಂಡಿರುವ ತಹಸೀಲ್ದಾರ್ ಚಂದ್ರಕಾಂತ ಭಜಂತ್ರಿ ಅವರನ್ನು ರಾತ್ರೋ ರಾತ್ರಿ  ಸಾಮಗ್ರಿಗಳ ಸಮೇತ ಮನೆ ಖಾಲಿ ಮಾಡಿಸಿದ ಆರೋಪ ಕೇಳಿ ಬಂದಿದೆ. ರಾಯಬಾಗ ತಾಲೂಕಿನ ಕಂಕಣವಾಡಿ ಗ್ರಾಮದ ಗೈರಾಣ ಜಾಗ ಸಲುವಾಗಿ ಶಾಸಕ ದುರ್ಯೋಧನ ಐಹೊಳೆ ಹಾಗೂ ತಹಸೀಲ್ದಾರ್ ಚಂದ್ರಕಾಂತ ಅವರ ಮಧ್ಯೆ ಕಿತ್ತಾಟ ನಡೆದಿತ್ತು. ಶಾಸಕ ಐಹೊಳೆ ಅವರು ಮುಖ್ಯಮಂತ್ರಿಗೆ ಪತ್ರ ಬರೆದು ತಹಸೀಲ್ದಾರ್ ಅವರ ವರ್ಗಾವಣೆ ಮಾಡಿಸಿದ್ದರು. ದಿಢೀರ್ ವರ್ಗಾವಣೆ ವಿರೋಧಿಸಿ ತಹಸೀಲ್ದಾರ್ ಕೆಇಟಿಯಲ್ಲಿ ಅರ್ಜಿ ಸಲ್ಲಿಸಿ …

Read More »