Breaking News
Home / ಜಿಲ್ಲೆ / ಬೆಳಗಾವಿ / ಪ್ರತಿ ಮನೆಗೂ ಶುದ್ಧ ನೀರು ಪ್ರಧಾನಿ ಆಶಯ :,ದುರ್ಯೋಧನ ಐಹೊಳೆ

ಪ್ರತಿ ಮನೆಗೂ ಶುದ್ಧ ನೀರು ಪ್ರಧಾನಿ ಆಶಯ :,ದುರ್ಯೋಧನ ಐಹೊಳೆ

Spread the love

ಚಿಕ್ಕೋಡಿ: ‘ಜನರ ಆರೋಗ್ಯದ ಹಿತದೃಷ್ಟಿಯಿಂದ ರಾಯಬಾಗ ಕ್ಷೇತ್ರದ ಜನರಿಗೆ ಶುದ್ಧ ಕುಡಿಯುವ ನೀರಿನ ಯೋಜನೆ ಅನುಷ್ಠಾನ ಮಾಡಲಾಗಿದೆ. ಪ್ರತಿ ಮನೆಗೂ ಶುದ್ಧ ನೀರು ದೊರೆಯಬೇಕು ಎನ್ನುವುದು ಪ್ರಧಾನಿ ನರೇಂದ್ರ ಮೋದಿ ಅವರ ಆಶಯವಾಗಿದೆ’ ಎಂದು ಶಾಸಕ ದುರ್ಯೋಧನ ಐಹೊಳೆ ಹೇಳಿದರು.

ರಾಯಬಾಗ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ತಾಲ್ಲೂಕಿನ ಬಂಬಲವಾಡ, ಕುಂಗಟೋಳ್ಳಿ, ಕರೋಶಿ ಗ್ರಾಮದಲ್ಲಿ ಜಲಜೀವನ ಅಭಿಯಾನದಲ್ಲಿ ₹ 4 ಕೋಟಿ ವೆಚ್ಚದಲ್ಲಿ ಕೈಗೊಂಡಿರುವ ಕುಡಿಯುವ ನೀರಿನ ಯೋಜನೆಗೆ ಶನಿವಾರ ಚಾಲನೆ ನೀಡಿ ಅವರು ಮಾತನಾಡಿದರು.

‘ಪ್ರತಿ ಹಳ್ಳಿಗೂ ಶುದ್ಧ ನೀರು ಕೊಡುವ ಯೋಜನೆಗೆ ಯಾವ ಸರ್ಕಾರವೂ ಕೈಹಾಕಲಿಲ್ಲ. ಆದರೆ, ಮೋದಿ ಅವರು ಜಲಜೀವನ ಅಭಿಯಾನ ಆರಂಭಿಸಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಯೋಗದಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ. ಅನುದಾನ ಬಿಡುಗಡೆ ಮಾಡಲಾಗುತ್ತಿದೆ’ ಎಂದರು.

ಹೆಸ್ಕಾಂ ನಿರ್ದೇಶಕ ಮಹೇಶ ಭಾತೆ, ಬಿಜೆಪಿ ರೈತ ಮೋರ್ಚಾ ರಾಜ್ಯ ಉಪಾಧ್ಯಕ್ಷ ದುಂಡಪ್ಪ ಬೆಂಡವಾಡೆ, ಮುಖಂಡರಾದ ಪ್ರಭು ಡಬ್ಬನ್ನವರ, ವಿಜಯ ಕೊಠಿವಾಲೆ, ಕರೋಶಿ ಗ್ರಾ.ಪಂ. ಅಧ್ಯಕ್ಷ ಸಾವಿತ್ರಿ ಜೇಧೆ, ರಾಜು ಡೊಂಗರೆ, ಮಲ್ಲಪ್ಪ ಕುಂದರಗಿ, ಭರಮಪ್ಪ ಹುಚ್ಚನ್ನವರ, ಹಸನ ಸನದಿ, ಸದ್ಸಾಂ ಸನದಿ, ಕೆಂಪಣ್ಣ ಹೂವಪ್ಪಗೋಳ, ವಿಜಯ ಮೋಟನ್ನವರ, ರಾಮಗೌಡ ಪಾಟೀಲ ಇದ್ದರು


Spread the love

About Laxminews 24x7

Check Also

ಬೆಳಗಾವಿ: ಡಿಸಿಪಿ ಹೆಸರಲ್ಲೇ ನಕಲಿ ಫೇಸ್‌ಬುಕ್‌ ಖಾತೆ

Spread the love ಬೆಳಗಾವಿ: ಬೆಳಗಾವಿಯ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ರೋಹನ್ ಜಗದೀಶ ಅವರ ಹೆಸರಲ್ಲಿ ನಕಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ