Breaking News
Home / new delhi / ಮೂರ್ನಾಲ್ಕು ವರ್ಷಗಳಿಂದ ಶೀತಿಲಗೊಂಡ ಸರ್ಕಾರಿ ಶಾಲೆ

ಮೂರ್ನಾಲ್ಕು ವರ್ಷಗಳಿಂದ ಶೀತಿಲಗೊಂಡ ಸರ್ಕಾರಿ ಶಾಲೆ

Spread the love

ರಾಯಬಾಗ : ಮೂರ್ನಾಲ್ಕು ವರ್ಷಗಳಿಂದ ಶೀತಿಲಗೊಂಡ ಸರ್ಕಾರಿ ಶಾಲೆ

ಮೂರ್ನಾಲ್ಕು ವರ್ಷಗಳಿಂದ ಶಾಲೆ ಶೀತಿಲಗೊಂಡಿದ್ದು ಇದರಿಂದ ವಿದ್ಯಾರ್ಥಿಗಳು ತೊಂದರೆ ಅನುಭವಿಸುತ್ತಿದ್ದು ಈ ಬಗ್ಗೆ ಹಲವಾರು ಬಾರಿ ಶಾಸಕರಿಗೆ, ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು ಕೂಡಾ ಕ್ಯಾರೆ ಎನ್ನದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು.

ಹೌದು ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ದಿಗ್ಗೇವಾಡಿ ಗ್ರಾಮದಲ್ಲಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸಂಪೂರ್ಣ ಶೀತಲ ಗೊಂಡಿದ್ದು ಸುಮಾರು ಮೂರ್ನಾಲ್ಕು ವರ್ಷಗಳಿಂದ ಹಂಚುಗಳು ಒಡೆದ ಪರಿಣಾಮ ಮಳೆಗಾಲದಲ್ಲಿ ಶಾಲೆ ಸೋರುತ್ತಿದ್ದೆ . ಸರ್ಕಾರಿ‌ ಶಾಲೆಯ ಅವ್ಯವಸ್ಥೆಯಿಂದ ವಿದ್ಯಾರ್ಥಿಗಳು ಶಾಲೆಗೆ ಬರುತ್ತಿಲ್ಲ. ಕೆಲ ವಿದ್ಯಾರ್ಥಿಗಳು ಬೇರೆ ಶಾಲೆಗೆ ವರ್ಗಾವಣೆ ತೆಗೆದುಕೊಂಡಿದ್ದಾರೆ. ಮೊದಲು ನೂರಕ್ಕೂ ಹೆಚ್ವು ಇದ್ದ ವಿದ್ಯಾರ್ಥಿಗಳು ಈಗ ನೂರು ಮಾತ್ರ ವಿದ್ಯಾರ್ಥಿಗಳು ಇದ್ದಾರೆ ಎಂದು ಎಸ್ ಎಸ್ ವಿ ಟಿವಿ ಗೆ ಮುಖ್ಯೋಪಾಧ್ಯಾಯೆ ಎಸ್ ಬಿ ಯಾತಗಿರಿ ಮಾಹಿತಿ ನೀಡಿದ್ದಾರೆ.

ದಿಗ್ಗೇವಾಡಿ ಸರ್ಕಾರಿ ಕನ್ನಡ ಶಾಲೆಯ ಅವ್ಯವಸ್ಥೆ ಇಂದು ನಿನ್ನೆಯದಲ್ಲಾ ಮೂರ್ನಾಲ್ಕು ವರ್ಷಗಳಿಂದ ಇಲ್ಲಿನ ಮುಖ್ಯೋಪಾಧ್ಯರು ಹಾಗೂ ಸ್ಥಳಿಯ ಎಸ್‌ಡಿಎಂಸಿ ಅಧ್ಯಕ್ಷ ಶ್ರವಣಕುಮಾರ ಕಾಂಬಳೆ ಅವರು ಹಲವಾರು ಬಾರಿ ರಾಯಬಾಗ ಕ್ಷೇತ್ರ ಶಿಕ್ಷಣ ಅಧಿಕಾರಿ, ಚಿಕ್ಕೋಡಿ ಡಿಡಿಪಿಐ ಕಚೇರಿ ಹಾಗೂ ಸ್ಥಳೀಯ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದರೂ ಕೂಡಾ ಪ್ರಯೋಜನವಾಗಿಲ್ಲ‌. ಮುಂದಿನ ದಿನಗಳಲ್ಲಿ ಶಾಲೆ ಪ್ರಾರಂಭ ಮಾಡಲು ಸರಿಯಾದ ಕೊಠಡಿ ವ್ಯವಸ್ಥೆ ಇಲ್ಲಾ ಕಂಪೌಂಡ ಒಡೆದು ಹೋಗಿದ್ದು ಸ್ಥಳಿಯ ಯುವಕರು ಶಾಲೆಯನ್ನು ಕುಡುಕರ ಅಡ್ಡೆ ಮಾಡಿಕೊಂಡಿದ್ದಾರೆ ಹಾಗೂ ಇಸ್ಪಿಟ್ ಸಹಿತ ಆಡುತ್ತಿದ್ದು ಶಾಲೆಗೆ ಶಿಕ್ಷಕರು ಬರಲು ಮುಜಗುರವಾಗುತ್ತಿದೆ‌.

ಆದಷ್ಟು ಬೇಗ ಇದಕ್ಕೆ ಸಂಬಂಧಪಟ್ಟ ಜನಪ್ರತಿನಿಧಿಗಳು, ಅಧಿಕಾರಿಗಳು ಈ ಶಾಲೆಯನ್ನು ದುರಸ್ಥಿಗೊಳಿಸಬೇಕು. ಒಂದು ವೇಳೆ ಶಾಲೆ ಪ್ರಾರಂಭದ ಸಮಯದಲ್ಲಿ ಶಾಲೆ ಬಿದ್ದು ಜೀವ ಹಾನಿ ಉಂಟಾದರೆ ಅದಕ್ಕೆ ನೇರವಾಗಿ ಶಿಕ್ಷಣಾಧಿಕಾರಿಗಳು ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಜವಾಬ್ದಾರರು ಎಂದು ಎಸ್‌ಡಿಎಂಸಿ ಅಧ್ಯಕ್ಷ ಶ್ರವಣಕುಮಾರ್ ಕಾಂಬಳೆ ತಿಳಿಸಿದ್ದಾರೆ.

ಶ್ರವಣಕುಮಾರ್ ಕಾಂಬಳೆ – ಎಸ್‌ಡಿಎಂಸಿ ಅಧ್ಯಕ್ಷ ದಿಗ್ಗೇವಾಡಿ*


Spread the love

About Laxminews 24x7

Check Also

ಭೀಕರ ಅಪಘಾತದಲ್ಲಿ ಗಾಯಗೊಂಡ ಮಾಜಿ ಪೊಲೀಸ್ ಕಮಿಷನರ್ ಭಾಸ್ಕರ್ ರಾವ್

Spread the loveಭೀಕರ ಅಪಘಾತದಲ್ಲಿ ಗಾಯಗೊಂಡ ಮಾಜಿ ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಬೆಂಗಳೂರು, ಮೇ. 03 : ಬೆಂಗಳೂರಿನ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ