Breaking News
Home / ಜಿಲ್ಲೆ / ಬೆಳಗಾವಿ / ಬೈಲ್ ಹೊಂಗಲ್

ಬೈಲ್ ಹೊಂಗಲ್

ಮಕ್ಕಳಲ್ಲಿ ದೇಶಾಭಿಮಾನ ಮೂಡಿಸಿ’

ಬೈಲಹೊಂಗಲ: ‘ಕಿತ್ತೂರು ರಾಣಿ ಚನ್ನಮ್ಮ, ಸಂಗೊಳ್ಳಿ ರಾಯಣ್ಣನ ತ್ಯಾಗ, ಬಲಿದಾನ, ರಾಷ್ಟ್ರಪ್ರೇಮದ ಕುರಿತು ಮಕ್ಕಳಿಗೆ ತಿಳಿಸಿ, ಅವರಲ್ಲಿ ದೇಶಾಭಿಮಾನ ಬೆಳೆಸಬೇಕು’ ಎಂದು ಶಾಸಕ ಮಹಾಂತೇಶ ಕೌಜಲಗಿ ಹೇಳಿದರು. ಪಟ್ಟಣದ ಕಿತ್ತೂರು ಚನ್ನಮ್ಮನ ಸಮಾಧಿ ಸ್ಥಳದಲ್ಲಿ ಶನಿವಾರ ವೀರಜ್ಯೋತಿ ವಾಹನಕ್ಕೆ ಪೂಜೆ ಸಲ್ಲಿಸುವ ಮೂಲಕ ಸ್ವಾಗತಿಸಿ ಅವರು ಮಾತನಾಡಿದರು.   ‘ಇದೇ ಮೊದಲ ಬಾರಿಗೆ ರಾಜ್ಯದಾದ್ಯಂತ ಸಂಚರಿಸಿದ ಜ್ಯೋತಿ ವಾಹನಕ್ಕೆ ಉತ್ತಮ ಪ್ರತಿಕ್ರಿಯೆ ದೊರೆತಿದೆ. ಬರುವ ದಿನಗಳಲ್ಲಿ ಕಿತ್ತೂರು ಉತ್ಸವ ರಾಷ್ಟ್ರ ಮಟ್ಟದಲ್ಲಿ …

Read More »

ಸಾವಿನಲ್ಲೂ ಸಾರ್ಥಕತೆ: ಇಬ್ಬರು ಅಂಧರ ಬಾಳಿಗೆ ಬೆಳಕಾದ ರುದ್ರಮ್ಮ ಹೊಂಗಲ್

ಬೈಲಹೊಂಗಲ ತಾಲೂಕಿನ ತಿರುಳ್ಗನ್ನಡನಾಡು ಒಕ್ಕುಂದ ಗ್ರಾಮದ ಹಿರಿಯ ಜೀವಿ ರುದ್ರಮ್ಮ ಬಸವಣೆಪ್ಪ ಹೊಂಗಲ(ಕುದರಿ) ತಮ್ಮ ಕಣ್ಣುಗಳನ್ನು ದಾನ ಮಾಡುವ ಮೂಲಕ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ. ಒಕ್ಕುಂದ ಗ್ರಾಮದ 93 ವರ್ಷದ ರುದ್ರಮ್ಮ ಹೊಂಗಲ ಅವರು ವಯೋಸಹಜ ಕಾಯಿಲೆಯಿಂದ ಮಂಗಳವಾರ ರಾತ್ರಿ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ. ಬಳಿಕ ಅವರ ಕುಟುಂಬಸ್ಥರ ನಿರ್ಧಾರದಂತೆ‌ ಬೆಳಗಾವಿ ಕೆಎಲ್ಇ ಡಾ.ಪ್ರಭಾಕರ ಕೋರೆ ಆಸ್ಪತ್ರೆಯ ನೇತ್ರ ಭಂಡಾರಕ್ಕೆ ಬೈಲಹೊಂಗಲದ ಡಾ.ರಾಮಣ್ಣವರ ಚಾರಿಟೇಬಲ್ ಟ್ರಸ್ಟ್ ಮುಖಾಂತರ ನೇತ್ರಗಳನ್ನು ದಾನ …

Read More »

ಇಂಚಲ ಗ್ರಾಮದ ಪ್ರಸಿದ್ಧ ಅಂಬಾ ಪರಮೇಶ್ವರಿ ದೇವಸ್ಥಾನದಲ್ಲಿ ದುರ್ಗಾಷ್ಟಮಿ ಕಾರ್ಯಕ್ರಮಗಳು ವೈಭವದಿಂದ ನೆರವೇರಿದವು.

ಬೈಲಹೊಂಗಲ (ಬೆಳಗಾವಿ ಜಿಲ್ಲೆ): ನವರಾತ್ರಿ ಮಹೋತ್ಸವ ಅಂಗವಾಗಿ ಸಮೀಪದ ಇಂಚಲ ಗ್ರಾಮದ ಪ್ರಸಿದ್ಧ ಅಂಬಾ ಪರಮೇಶ್ವರಿ ದೇವಸ್ಥಾನದಲ್ಲಿ ದುರ್ಗಾಷ್ಟಮಿ ಕಾರ್ಯಕ್ರಮಗಳು ವೈಭವದಿಂದ ನೆರವೇರಿದವು. ಹಲವಾರು ಮಹಿಳೆಯರು ಉಡಿ ತುಂಬುವ ಸಂಪ್ರದಾಯದಲ್ಲಿ ಪಾಲ್ಗೊಂಡರು.   ಇಂಚಲ ಶಿವಯೋಗೀಶ್ವರ ಸಾಧು ಸಂಸ್ಥಾನಮಠದ ಪೀಠಾಧಿಪತಿ ಡಾ.ಶಿವಾನಂದ ಭಾರತಿ ಸ್ವಾಮೀಜಿ ಮಾರ್ಗದರ್ಶನದಲ್ಲಿ ದೇವಸ್ಥಾನ ಆಡಳಿತ ಮಂಡಳಿ, ಸಕಲ ವ್ಯವಸ್ಥೆ ಕಲ್ಪಿಸಿದರು. ಪರಮೇಶ್ವರಿ ಮೂರ್ತಿಗೆ ವಿಶೇಷ ಅಲಂಕಾರ, ಪೂಜೆ ನೆರವೇರಿಸಲಾಯಿತು. ಮಹಿಳೆಯರು ಆರತಿ ತಟ್ಟೆ ಹಿಡಿದು, ಕುಂಕುಮ, …

Read More »

ಟಿಕ್‍ಟಾಕ್, ಯೂಟೂಬ್ ಸ್ಟಾರ್ ರುಕ್ಮವ್ವ ಅಜ್ಜಿ ಇನ್ನಿಲ್ಲ

ತಮ್ಮ ಅಮೋಘ ಅಭಿನಯದ ಮೂಲಕ ಟಿಕ್‍ಟಾಕ್ ಮತ್ತು ಯೂಟೂಬ್ ಸ್ಟಾರ್ ಆಗಿ ಮನೆ ಮಾತಾಗಿದ್ದ ಬೈಲಹೊಂಗಲ ತಾಲೂಕಿನ ತಿರುಳ್ಗನ್ನಡನಾಡು ಒಕ್ಕುಂದ ಗ್ರಾಮದ ಅಜ್ಜಿ ರುಕ್ಮವ್ವ ಗೋವಿಂದಪ್ಪ ಲೋಕರಿ ವಯೋಸಹಜ ಕಾಯಿಲೆಯಿಂದ ಸೋಮವಾರ ಬೆಳಿಗ್ಗೆ ಮೃತರಾಗಿದ್ದಾರೆ. ಹೌದು ಟಿಕ್‍ಟಾಕ್‍ನಲ್ಲಿ ತಮ್ಮ ವಿಭಿನ್ನ ಕಾಮಿಡಿ ವಿಡಿಯೋ ಮೂಲಕ ಈ ರುಕ್ಮವ್ವ ಅಜ್ಜಿ ಲಕ್ಷಾಂತರ ಅಭಿಮಾನಿಗಳನ್ನು ಸಂಪಾದಿಸಿದ್ದರು. ಅಲ್ಲದೇ ಹಲವು ವಾಹಿನಿಗಳ ಕಾಮಿಡಿ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುವ ಮೂಲಕ ತಮ್ಮ ಇಳಿ ವಯಸ್ಸಿಲ್ಲಿಯೂ ತಮ್ಮಲ್ಲಿನ ಕಲೆಯನ್ನು …

Read More »

ಬೈಲಹೊಂಗಲ: ಉಪವಿಭಾಗಾಧಿಕಾರಿ ಕಚೇರಿ ಎದುರು ಪ್ರತಿಭಟನೆ

ಬೈಲಹೊಂಗಲ: ಮಲಪ್ರಭಾ ಏತ ನೀರಾವರಿಗಾಗಿ ಭೂ ಸ್ವಾಧೀನಗೊಂಡ ಪ್ರದೇಶವನ್ನು 50 ವರ್ಷಗಳ ನಂತರ 2022 ರಲ್ಲಿ ದಾಖಲಿಸಿರುವ ತಹಶೀಲ್ದಾರ್ ಕ್ರಮವನ್ನು ರದ್ದುಪಡಿಸುವಂತೆ ಆಗ್ರಹಿಸಿ ಉಪವಿಭಾಗಾಧಿಕಾರಿ ಕಚೇರಿ ಎದುರು ರೈತರು ಸೋಮವಾರ ಪ್ರತಿಭಟನೆ ನಡೆಸಿದರು.   ಹೊಸೂರು ಮಡಿವಾಳೇಶ್ವರ ಮಠದ ಗಂಗಾಧರ ಮಹಾಸ್ವಾಮೀಜಿ, ವೇದಮೂರ್ತಿ ಮಾಹಾಂತಯ್ಯ ಆರಾದ್ರಿಮಠ ಶಾಸ್ತ್ರಿಗಳು, ಪಟ್ಟಣದ ಬೆಳಗಾವಿ ರಸ್ತೆಯಲ್ಲಿರುವ ಕಿತ್ತೂರು ರಾಣಿ ಚೆನ್ನಮ್ಮ ಪುತ್ಥಳಿಗೆ ಮಾಲಾರ್ಪಣೆ ಮಾಡುವುದರ ಮೂಲಕ ಪ್ರತಿಭಟನೆಗೆ ಚಾಲನೆ ನೀಡಿದರು. ಚನ್ನಮ್ಮ ವೃತ್ತದಿಂದ ಇಂಚಲ …

Read More »

ಇಂಚಿಂಚಿಗೂ ಸಮಸ್ಯೆ ಮೂಲಸೌಕರ್ಯ ಮತ್ತು ಸ್ವಚ್ಛತೆಯಲ್ಲಿ ಇನ್ನೂ ಹಿಂದೆ ಬಿದ್ದಿದೆ ಇಂಚಲ ಗ್ರಾಮ

ಬೈಲಹೊಂಗಲ: ಶೈಕ್ಷಣಿಕ, ಆಧ್ಯಾತ್ಮಿಕ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ತನ್ನದೆಯಾದ ಕೊಡುಗೆ ನೀಡುವಲ್ಲಿ ಜಿಲ್ಲೆಯಲ್ಲಿ ಹೆಸರು ಮಾಡಿದ ಊರು ಇಂಚಲ. ಆದರೆ, ಮೂಲಸೌಕರ್ಯ ಮತ್ತು ಸ್ವಚ್ಛತೆಯಲ್ಲಿ ಇನ್ನೂ ಹಿಂದೆ ಬಿದ್ದಿದೆ. ಈ ಗ್ರಾಮದಲ್ಲಿ 10 ಸಾವಿರ ಜನಸಂಖ್ಯೆ ಇದೆ. 300ಕ್ಕೂ ಅಧಿಕ ಶಿಕ್ಷಕರು ಸರ್ಕಾರಿ, ಅನುದಾನಿತ ಶಾಲೆಗಳಲ್ಲಿ ಸೇವೆಯಲ್ಲಿದ್ದಾರೆ. ತಾಲ್ಲೂಕಿನಲ್ಲಿ ಅತಿ ಹೆಚ್ಚು ಶಿಕ್ಷಕರನ್ನು ಹೊಂದಿದ ಗ್ರಾಮ ಎಂಬ ಖ್ಯಾತಿ ದಶಕಗಳಿಂದಲೂ ಈ ಊರಿಗೆ ಇದೆ. ಶಿಕ್ಷಣ ಮಾತ್ರವಲ್ಲದೇ ಸರ್ಕಾರದ ಎಲ್ಲ …

Read More »

ಮಠದ ಆವರಣದಲ್ಲೇ ನೇಣಿಗೆ ಶರಣಾದ ಮಡಿವಾಳೇಶ್ವರ ಮಠದ ಬಸವಸಿದ್ದಲಿಂಗ ಮಹಾಸ್ವಾಮೀಜಿ

ಬೈಲಹೊಂಗಲ : ತಾಲೂಕಿನ ನೇಗಿನಹಾಳ ಗ್ರಾಮದ ಗುರು ಮಡಿವಾಳೇಶ್ವರಮಠದ ಪೀಠಾಧಿಪತಿ ಬಸವಸಿದ್ದಲಿಂಗ ಮಹಾಸ್ವಾಮೀಜಿ ಮಠದ ಆವರಣದಲ್ಲೇ ಸ್ವಾಮೀಜಿಗಳು ನೇಣಿಗೆ ಶರಣಾಗಿದ್ದಾರೆ‌. ಮುರಘಾಮಠದ ಶರಣರ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಮಹಿಳೆಯರು ಆಡಿಯೋದಲ್ಲಿ ಈ ಸ್ವಾಮೀಜಿಗಳ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದನ್ನು ಕೇಳಿ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆನ್ನಲಾಗಿದೆ. ಸ್ಥಳಕ್ಕೆ ಬೈಲಹೊಂಗಲ ಡಿಎಸ್ ಪಿ ಶಿವಾನಂದ ಕಟಗಿ, ಸಿಪಿಐ ಯು.ಎಚ್.ಸಾತೇನಹಳ್ಳಿ ಭೇಟಿ ನೀಡಿ ಪರಿಶಿಲಿಸುತ್ತಿದ್ದಾರೆ.

Read More »

ಬೈಲಹೊಂಗಲ: ದರ್ಗಾದಲ್ಲಿಯೇ ಗಣೇಶ ಮೂರ್ತಿ ಪ್ರತಿಷ್ಠಾಪನೆ

ಬೈಲಹೊಂಗಲ (ಬೆಳಗಾವಿ ಜಿಲ್ಲೆ): ಪ್ರತಿಬಾರಿಯಂತೆ ಈ ವರ್ಷವೂ ಪಟ್ಟಣದ ದರ್ಗಾದಲ್ಲಿ ಹಿಂದೂ ಮುಸ್ಲಿಮರು ಸೇರಿಕೊಂಡು ವಿಘ್ನನಿವಾರಕನ ಮೂರ್ತಿ ಪ್ರತಿಷ್ಠಾಪನೆ ಮಾಡಿದ್ದಾರೆ. ಪಟ್ಟಣದ ಕಂಠಿ ಗಲ್ಲಿಯಲ್ಲಿರುವ ಆಲಕಟ್ಟಿ ಫಕ್ಕೀರಸ್ವಾಮಿ ದರ್ಗಾ ಕೋಮು ಸೌಹಾರ್ದಕ್ಕೆ ಸಾಕ್ಷಿಯಾಗಿ ನಿಂತಿದೆ.   ಸಂಪ್ರದಾಯದಂತೆ ಬುಧವಾರ ಗಣಪನ ಮೂರ್ತಿಯನ್ನು ಹಿಂದೂ ಮುಸ್ಲಿಮ್ ಯುವಕರು ಮೆರವಣಿಗೆ ಮೂಲಕ ತಂದು ದರ್ಗಾದಲ್ಲಿ ಪ್ರತಿಸ್ಥಾಪನೆ ಮಾಡಿದರು. ಮುಸ್ಲಿಮರು ಗಣಪನಿಗೆ ಹೂವು ಮಾಲೆ ಹಾಕಿ, ಕಾಯಿ, ಕರ್ಪೂರ ಬೆಳಗಿದರು, ಹಿಂದೂಗಳು ಆರತಿ ಮಾಡಿ, ನೈವೇದ್ಯ …

Read More »

ಪಲ್ಚಿಯಾದ ಕಾರು: ಪ್ರಯಾಣಿಕರು ಪಾರು

ಬೈಲಹೊಂಗಲ : ಸಮೀಪದ ಚಚಡಿ ಗ್ರಾಮದ ಹೊರವಲಯದಲ್ಲಿ ಬುಧವಾರ ನಸುಕಿನಲ್ಲಿ ಕಾರ್ ಪಲ್ಟಿಯಾಗಿ, ಇಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಚಚಡಿ ಗ್ರಾಮದಿಂದ ನಯಾನಗರ ಗ್ರಾಮದ ಮಲಪ್ರಭಾ ನದಿ ಸೇತುವೆ ಮಾರ್ಗವಾಗಿ ಚಲಿಸುತ್ತಿದ್ದ ಕಾರ್ ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾಯಿತು. ಅಷ್ಟರಲ್ಲಿ ಏರ್ ಬ್ಯಾಗ್ ತೆರೆದುಕೊಂಡಿದ್ದರಿಂದ ಅದರಲ್ಲಿದ್ದವರಿಗೆ ಹೆಚ್ಚಿನ ಗಾಯಗಳಾಗಿಲ್ಲ. ಕಾರ್ ತಲೆ ಕೆಳಗಾಗಿ ಬಿದ್ದರೂ ಪ್ರಯಾಣಿಕರು ಪ್ರಾಣಾಪಾಯದಿಂದ ಬಚಾವಾಗಿದ್ದಾರೆ. ಸಿಪಿಐ ಯು.ಎಚ್.ಸಾತೇನಹಳ್ಳಿ ಹಾಗೂ ಪೊಲೀಸ್ ಸಿಬ್ಬಂದಿ …

Read More »

ಇಸ್ಟೀಟ್ ಅಡ್ಡೆ ಮೇಲೆ ಬೈಲಹೊಂಗಲ ಪೊಲೀಸ್ ಭರ್ಜರಿ ದಾಳಿ

ಬೈಲಹೊಂಗಲ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು. ಗ್ಯಾಂಬ್ಲಿಂಗ್ ಅಡ್ಡೆಯನ್ನು ಭೇದಿಸಿದ್ದಾರೆ. ಹೌದು ನಿನ್ನೆ ತಡರಾತ್ರಿ ಬೈಲಹೊಂಗಲ ಪಟ್ಟಣದಲ್ಲಿ ಖಚಿತ ಮಾಹಿತಿ ಮೇರೆಗೆ ಇಸ್ಪೀಟ್ ಅಡ್ಡೆ ಮೇಲೆ ದಾಳಿ ಮಾಡಿದ ಪೊಲೀಸರು ಇಸ್ಪೀಟ್ ಆಡುತ್ತಿದ್ದ 7 ಮಂದಿಯನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳಿಂದ 1,10,320 ರೂಪಾಯಿ ನಗದು ಜಪ್ತಿ ಮಾಡಿದ್ದಾರೆ. ಈ ಸಂಬಂಧ ಬೈಲಹೊಂಗಲ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ

Read More »