Breaking News
Home / ಜಿಲ್ಲೆ / ಬೆಳಗಾವಿ / 28 ವರ್ಷಗಳ ಸುದೀರ್ಘ ಸೇವೆಯನ್ನು ಸಲ್ಲಿಸಿ ನಿವೃತ್ತರಾಗಿ ತಮ್ಮ ಊರಿಗೆ ಆಗಮಿಸಿದ ತಾಲೂಕಿನ ಸುತಗಟ್ಟಿ ಗ್ರಾಮದ ಯೋಧ ಈರಪ್ಪ ಬಾಳಿಗಟ್ಟಿ ಅವರಿಗೆ ಗ್ರಾಮದಲ್ಲಿ ಅದ್ದೂರಿ ಸ್ವಾಗತ

28 ವರ್ಷಗಳ ಸುದೀರ್ಘ ಸೇವೆಯನ್ನು ಸಲ್ಲಿಸಿ ನಿವೃತ್ತರಾಗಿ ತಮ್ಮ ಊರಿಗೆ ಆಗಮಿಸಿದ ತಾಲೂಕಿನ ಸುತಗಟ್ಟಿ ಗ್ರಾಮದ ಯೋಧ ಈರಪ್ಪ ಬಾಳಿಗಟ್ಟಿ ಅವರಿಗೆ ಗ್ರಾಮದಲ್ಲಿ ಅದ್ದೂರಿ ಸ್ವಾಗತ

Spread the love

ಬೈಲಹೊಂಗಲ: ಭಾರತೀಯ ಸೇನೆಯಲ್ಲಿ 28 ವರ್ಷಗಳ ಸುದೀರ್ಘ ಸೇವೆಯನ್ನು ಸಲ್ಲಿಸಿ ನಿವೃತ್ತರಾಗಿ ತಮ್ಮ ಊರಿಗೆ ಆಗಮಿಸಿದ ತಾಲೂಕಿನ ಸುತಗಟ್ಟಿ ಗ್ರಾಮದ ಯೋಧ ಈರಪ್ಪ ಬಾಳಿಗಟ್ಟಿ ಅವರಿಗೆ ಗ್ರಾಮದಲ್ಲಿ ಅದ್ದೂರಿ ಸ್ವಾಗತ ಕೋರಲಾಯಿತು.

ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘ ಬೆಳಗಾವಿ ಜಿಲ್ಲಾ ಘಟಕ ಹಾಗೂ ಊರಿನ ಎಲ್ಲ ಮಾಜಿ ಸೈನಿಕರು ಹಮ್ಮಿಕೊಂಡಿದ್ದರು ಊರಿನ ದ್ವಾರದಿಂದ ಶ್ರೀ ಜೋಡು ಬಸವಣ್ಣನ ಗುಡಿಯವರಿಗೆ ತೆರೆದ ವಾಹನದಲ್ಲಿ ಮೆರವಣಿಗೆ ಮೂಲಕ ಬಸವಂತಪ್ಪ ಕರಾಂವಿ ಇವರ ನೇತೃತ್ವದಲ್ಲಿ ಈರಪ್ಪ ಬಾಳಿಗಟ್ಟಿ ಅವರನ್ನು ಕರೆತರಲಾಯಿತು.

ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘ ಬೆಳಗಾವಿ ಜಿಲ್ಲಾ ಘಟಕದ ಕಾರ್ಯದರ್ಶಿ ಜಗದೀಶ ಪೂಜೇರಿ ಮಾತನಾಡಿ, “ಒಬ್ಬ ಮಾಜಿ ಸೈನಿಕ 28 ವರ್ಷಗಳ ಕಾಲ ಯಶಸ್ವಿಯಾಗಿ ಸೇವೆ ಸಲ್ಲಿಸಿ ಹತ್ತಾರು ಕಷ್ಟಗಳನ್ನ ಎದುರಿಸಿ ಯಶಸ್ವಿ 28 ವರ್ಷಗಳ ಮುಗಿಸಿ ಇಂದು ಸ್ವಗ್ರಾಮಕ್ಕೆ ಆಗಮಿಸುತ್ತಿರುವ ಯೋಧನಿಗೆ ಈ ಸಂಭ್ರಮದ ಆಚರಣೆಗಿಂತಲೂ ನಿವೃತ್ತಿ ಜೀವನದ ಪ್ರತಿ ಹೆಜ್ಜೆಗೂ ನಾವು ಜೊತೆಗಿದ್ದೇವೆ” ಎಂದರು.

“ಊರಿನ ಎಲ್ಲ ಮಾಜಿ ಸೈನಿಕರು ಸಂಘಟನೆಯೊಂದಿಗೆ ಕೈಜೋಡಿಸಿ ಕೆಲಸ ಮಾಡಿದ್ದೆ ಆದರೆ ಎಂತಹ ಪರಿಸ್ಥಿತಿಗಳನ್ನು ಯಾವ ಸಮಸ್ಯೆಗಳನ್ನು ಎದುರಿಸಲು ನಾವು ಸನ್ನದ್ಧರು,” ಎಂದು ಅವರು ಹೇಳಿದರು.

 


Spread the love

About Laxminews 24x7

Check Also

ಅಥಣಿಯ ಇಬ್ಬರು ವಿದ್ಯಾರ್ಥಿನಿಯರಿಗೆ ತೃತೀಯ ರ್‍ಯಾಂಕ್‌

Spread the love ಬೆಳಗಾವಿ: ಜಿಲ್ಲೆಯ ಅಥಣಿಯ ಬಣಜವಾಡ ವಸತಿ ಪದವಿಪೂರ್ವ ಕಾಲೇಜಿನ ಇಬ್ಬರು ವಿದ್ಯಾರ್ಥಿನಿಯರು ವಿಜ್ಞಾನ ಹಾಗೂ ವಾಣಿಜ್ಯ ವಿಭಾಗದಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ