Breaking News
Home / ಜಿಲ್ಲೆ / ಬಿಜಾಪುರ (page 9)

ಬಿಜಾಪುರ

ವಿಜಯಪುರ : ನೀರಾವರಿ ಯೋಜನೆ ಅನುಷ್ಠಾನಕ್ಕೆ ಆಗ್ರಹಿಸಿ ಹೆದ್ದಾರಿ ತಡೆದು ಪ್ರತಿಭಟನೆ

ವಿಜಯಪುರ : ರೇವಣಸಿದ್ಧೇಶರ ಏತ ನೀರಾವರಿ ಸೇರಿದಂತೆ ಇಂಡಿ ಕ್ಷೇತ್ರದ ಸಮಗ್ರ ನೀರಾವರಿ ಯೋಜನೆಗಳ ಅನುಷ್ಟಾನಕ್ಕೆ ಆಗ್ರಹಿಸಿ ಹೆದ್ದಾರಿ ಸಂಚಾರ ತಡೆದು ಪ್ರತಿಭಟನೆ ನಡೆಸಲಾಗುತ್ತಿದೆ. ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಹೊರ್ತಿ ಗ್ರಾಮದ ಬಳಿ ಜೆಡಿಎಸ್ ನೇತೃತ್ವದಲ್ಲಿ ರೈತರು ರಾಷ್ಟ್ರೀಯ ಹೆದ್ದಾರಿ- 50 ಸಂಚಾರ ಬಂದ್ ಮಾಡಿ ಹೋರಾಟ ನಡೆಸಿದ್ದಾರೆ. ಬಿ.ಡಿ.ಪಾಟೀಲ ನೇತೃತ್ವದಲ್ಲಿ ನಡೆಯುತ್ತಿರುವ ಹೋರಾಗಾರರು ರೇವಣಸಿದ್ದೇಶ್ವರ ಏತ ನೀರಾವರಿ ಯೋಜನೆಗೆ ಚಾಲನೆ ನೀಡಬೇಕು, ಇಂಡಿ ತಾಲೂಕಿನ ಕೆರೆಗಳಿಗೆ ನೀರು ತುಂಬಿಸೋ ಕಾಮಗಾರಿಗೆ …

Read More »

ಮಾತೃವಂದನಾ: ಗರ್ಭಿಣಿ, ಬಾಣಂತಿಯರಿಗೆ ವರದಾನ

ವಿಜಯಪುರ: ಗರ್ಭಿಣಿ, ಬಾಣಂತಿಯರ ಆರೋಗ್ಯ ಕಾಪಾಡಲು ಹಾಗೂ ಅಪೌಷ್ಟಿಕತೆ, ರಕ್ತಹೀನತೆ, ಶಿಶುಮರಣ, ಬಾಣಂತಿ ಮರಣ ನಿಯಂತ್ರಿಸಲು ಕೇಂದ್ರ ಸರ್ಕಾರವು ಜಾರಿಗೆ ತಂದಿರುವ ಪ್ರಧಾನಮಂತ್ರಿ ಮಾತೃವಂದನಾ ಯೋಜನೆಯು ಮಹಿಳೆಯರಿಗೆ ವರದಾನವಾಗಿದೆ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪನಿರ್ದೇಶಕ ಕೆ.ಕೆ.ಚವ್ಹಾಣ ಹೇಳಿದರು. ನಗರದ ಜಿಲ್ಲಾ ಸ್ತ್ರೀಶಕ್ತಿ ಭವನದಲ್ಲಿ ಏರ್ಪಡಿಸಿದ್ದ ಕೇಂದ್ರ ಪುರಸ್ಕೃತ ಪ್ರಧಾನಮಂತ್ರಿ ಮಾತೃವಂದನ ಸಪ್ತಾಹ ಹಾಗೂ ಪೋಷಣ್ ಅಭಿಯಾನ ಮಾಸಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಪ್ರಧಾನಮಂತ್ರಿ ಮಾತೃ …

Read More »

ವಿರಕ್ತಮಠದ ಪೀಠಾಧಿಕಾರಿಗಳಾಗಿದ್ದ ಸಿದ್ದಲಿಂಗ ಸ್ವಾಮೀಜಿ ಲಿಂಗೈಕ್ಯ

ವಿಜಯಪುರ: ಸಿಂದಗಿ ಪಟ್ಟಣದ ವಿರಕ್ತಮಠದ ಪೀಠಾಧಿಕಾರಿಗಳಾಗಿದ್ದ ಸಿದ್ದಲಿಂಗ ಸ್ವಾಮೀಜಿ (58) ಭಾನುವಾರ ಬೆಳಿಗ್ಗೆ ಲಿಂಗ್ಯೆಕ್ಯರಾದರು. ಸುದೀರ್ಘ ಪರಂಪರೆ ಹೊಂದಿದ ವಿರಕ್ತಮಠದ 18 ನೇ ಪೀಠಾಧಿಕಾರಿಗಳಾಗಿದ್ದರು. 1985 ರಲ್ಲಿ ಶ್ರೀಗಳ ಪಟ್ಟಾಧಿಕಾರ ಅದ್ದೂರಿಯಾಗಿ ನಡೆದಿತ್ತು. ತಪಸ್ವಿಗಳು, ಮಾತೃಹೃದಯಿಗಳಾಗಿದ್ದರು. ಈ ಭಾಗದಲ್ಲಿ ಅಪಾರ ಭಕ್ತರು ಶ್ರೀಮಠದ ಶಿಷ್ಯರಾಗಿದ್ದಾರೆ. ಶ್ರೀಗಳ ಅಂತ್ಯಕ್ರಿಯೆ ಭಾನುವಾರ ಸಂಜೆ ಶ್ರೀಮಠದ ಆವರಣದಲ್ಲಿ ವಿರಕ್ತ ಸಂಪ್ರದಾಯದಂತೆ ನೆರವೇರಲಿದೆ.

Read More »

ಮಹಿಳಾ ಮತ್ತು ಮಕ್ಕಳ ಖಾತೆ ಕೊಡದೆ ಡಿಮೋಷನ್ ಮಾಡಿದ್ದಾರೆ ಅನ್ನಿಸುದಿಲ್ಲವೇ ಎನ್ನುವ ಸುದ್ದಿಗಾರರ ಪ್ರಶ್ನೆಗೆ ಸಮರ್ಪಕ ಉತ್ತರ ನೀಡದ ಸಚಿವೆ ಹಾಗೇನೂ ಇಲ್ಲ ಎಂದು ಜಾರಿಕೊಂಡರು.

ಮುದ್ದೇಬಿಹಾಳ: ಮುಖ್ಯಮಂತ್ರಿಗಳು ಕೊಟ್ಟಿರುವ ಹಜ್ ಮತ್ತು ವಕ್ಫ್ ಇಲಾಖೆ ಸಚಿವ ಸ್ಥಾನ ತೃಪ್ತಿ ನೀಡಿದೆ ಎಂದು ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ತಿಳಿಸಿದರು. ಮುದ್ದೇಬಿಹಾಳದಲ್ಲಿ ಪ್ರವಾಹ ನಂತರದ ಪರಿಸ್ಥಿತಿ ವೀಕ್ಷಣೆಗೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನನಗೆ ಯಾವ ಖಾತೆ ಕೊಟ್ಟರೂ ನಿಭಾಯಿಸುವ ಸಾಮರ್ಥ್ಯ ಇದೆ ಎಂದರು. ನಿಮಗೆ ಮಹಿಳಾ ಮತ್ತು ಮಕ್ಕಳ ಖಾತೆ ಕೊಡದೆ ಡಿಮೋಷನ್ ಮಾಡಿದ್ದಾರೆ ಅನ್ನಿಸುದಿಲ್ಲವೇ ಎನ್ನುವ ಸುದ್ದಿಗಾರರ ಪ್ರಶ್ನೆಗೆ ಸಮರ್ಪಕ ಉತ್ತರ …

Read More »

ನದಿಯಲ್ಲಿ ಹುಚ್ಚು ಸಾಹಸ; ಸೇತುವೆ ಕೆಳಕ್ಕೆ ಉರುಳಿಬಿದ್ದ ಟ್ರ್ಯಾಕ್ಟರ್

ವಿಜಯಪುರ: ಜಿಲ್ಲೆಯಲ್ಲಿ ಡೋಣಿ ನದಿಯ ರಭಸಕ್ಕೆ ಸೇತುವೆಯ ಕೆಳಗೆ ಟ್ರ್ಯಾಕ್ಟರ್ ಉರುಳಿದ ಘಟನೆ ನಡೆದಿದೆ. ವಿಜಯಪುರ ಜಿಲ್ಲೆಯ ತಾಳಿಕೋಟೆ ತಾಲೂಕಿನ ಗುಂಡಕಾನಾಳ ಗ್ರಾಮದ ಮಧುಗೌಡ ಪಾಟೀಲ ಅವರ ಎಂಬುವವರಿಗೆ ಸೇರಿದ್ದ ಟ್ರ್ಯಾಕ್ಟರ್ ಹಡಗಿನಾಳ ಮಾರ್ಗದಲ್ಲಿ ಡೋಣಿ ಸೇತುವೆಗೆ ಅಡ್ಡಲಾಗಿ ನಿರ್ಮಿಸಲಾಗಿರುವ ನೆಲಮಟ್ಟದ ಸೇತುವೆಯ ಮೇಲೆ ವಾಹನ ಚಲಾಯಿಸುತ್ತಿರುವಾಗ ಟ್ರ್ಯಾಕ್ಟರ್ ಸೇತುವೆಯ ಕೆಳಗೆ ಉರುಳಿದೆ. ತಾಳಿಕೋಟಿ ಪಟ್ಟಣದಿಂದ ಮೂಕಿಹಾಳ ಗ್ರಾಮದತ್ತ ಹೊರಟಿದ್ದ ಟ್ರ್ಯಾಕ್ಟರ್ ಡೋಣಿ ನದಿಯ ಮೇಲೆ ಪ್ರವಾಹದ ನೀರು ಇದ್ದರೂ …

Read More »

ಯಡಿಯೂರಪ್ಪ ಪರ ಎಂ.ಬಿ.ಪಾಟೀಲ ಬ್ಯಾಟಿಂಗ್

ವಿಜಯಪುರ : ಕಾಂಗ್ರೆಸ್ ಪಕ್ಷದ‌ ಲಿಂಗಾಯತ ಸಮುದಾಯದ ಹಿರಿಯ ಶಾಸಕ‌ ಎಂ.ಬಿ.ಪಾಟೀಲ‌ ಮುಖ್ಯಮಂತ್ರಿ ಯಡಿಯೂರಪ್ಪ ಪರ ಬ್ಯಾಟಿಂಗ್ ಮಾಡಿದ್ದಾರೆ. ತಮ್ಮ ಟ್ವಿಟರ್ ಖಾತೆಯಲ್ಲಿ ,ಲಿಂಗಾಯತ ಸಮುದಾಯದ ಧೀಮಂತ ನಾಯಕರಾಗಿರುವ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದ ಅಧಿಕಾರದಿಂದ ಪದಚ್ಯುತಿ ಮಾಡಕೂಡದು. ಒಂದೊಮ್ಮೆ ಬಿಜೆಪಿ ಇಂಥ ಕೆಲಸಕ್ಕೆ ಕೈ ಹಾಕಿದರೆ ಬಿಜೆಪಿ ವರಿಷ್ಠರು ಖಂಡಿತವಾಗಿ ಲಿಂಗಾಯತರ ಅವಕೃಪೆಗೆ ಗುರಿ ಆಗಲಿದ್ದಾರೆ ಎಂದೂ ಎಚ್ಚರಿಸಿದ್ದಾರೆ. ಯಡಿಯೂರಪ್ಪ ಅವರ ವಯಸ್ಸು, ಪಕ್ಷ ಹಾಗೂ‌ ನಾಡಿಗೆ ನೀಡಿದ …

Read More »

ತಿಡಗುಂದಿ ಕಾಲುವೆ, ಕೆರೆ ತುಂಬುವ ನೀರಾವರಿ ನನ್ನ ಕನಸಿನ ಯೋಜನೆ : ಎಂ.ಬಿ.ಪಾಟೀಲ

ವಿಜಯಪುರ : ರಾಜ್ಯದ ಜಲಸಂಪನ್ಮೂಲ ಸಚಿವನಾಗಿ ಸೇವೆ ಸಲ್ಲಿಸಿರುವ ನಾನು ವಿಜಯಪುರ ಜಿಲ್ಲೆ ಮಾತ್ರವಲ್ಲ ರಾಜ್ಯದ ಎಲ್ಲ ನೀರಾವರಿ ಯೋಜನೆ ಬಗ್ಗೆ ಮಾತನಾಡುವ ಅಧಿಕಾರ ಹೊಂದಿದ್ದೇನೆ. ತಿಡಗುಂದಿ ಶಾಖಾ‌ ಕಾಲುವೆ ಹಾಗೂ 16 ಕೆರೆ ತುಂಬುವ ಯೋಜನೆ ನನ್ನ ಕನಸಿನ ಯೋಜನೆ. ಈ ಬಗ್ಗೆ ವಿಪಕ್ಷದಲ್ಲಿದ್ದರೂ ಮಾತನಾಡುವುದಕ್ಕೆ ಯಾರ ಅನುಮತಿ ಬೇಕಿಲ್ಲ ಎಂದು ಜಲಸಂಪನ್ಮೂಲ ಮಾಜಿ ಸಚಿವ ಎಂ.ಬಿ.ಪಾಟೀಲ ಪ್ರತಿಕ್ರಿಯಿಸಿದ್ದಾರೆ. ಮಂಗಳವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತಮ್ಮದೇ ಕಾಂಗ್ರೆಸ್ …

Read More »

ಕ್ರಷರ್ ಘಟಕದಲ್ಲಿ ಹಗಲಿನಲ್ಲೇ ಬ್ಲಾಸ್ಟ್: ಕಲ್ಲುಬಡಿದು ಓರ್ವ ಸಾವು, ಇಬ್ಬರ ಸ್ಥಿತಿ ಚಿಂತಾಜನಕ

ವಿಜಯಪುರ: ಜಲ್ಲಿ ಕಲ್ಲು ಹಾಗೂ ಕ್ರಷರ್ ಘಟಕದಲ್ಲಿ ಬ್ಲಾಸ್ಟ್ ನಡೆಸಿದ ಪರಿಣಾಮ ಕಲ್ಲು ಸಿಡಿದು ರಸ್ತೆ ಬದಿ ನಿಂತಿದ್ದ ಮೂವರು ಗಾಯಗೊಂಡು ಆಸ್ಪತ್ರೆಯಲ್ಲಿ ಮೂವರ ಪೈಕಿ ಓರ್ವ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ ಘಟನೆ ನಡೆದಿದೆ. ವಿಜಯಪುರ ತಾಲೂಕಿನ ಅಲಿಯಾಬಾದ್ ಕಲ್ಲು ಕ್ರಷರ್ ಘಟಕದ ಬಳಿ ಘಟನೆ ನಡೆದಿದ್ದು ಸಾವಳಗಿ ಕಲ್ಲು ಕ್ರಷರ್ ಘಟಕದಲ್ಲಿನ ಕಲ್ಲಿನ ಕಣಿಯಲ್ಲಿ ಬ್ಲಾಸ್ಟ್ ಮಾಡಲಾಗಿದೆ. ಮೂವರು ಗಾಯಾಳುಗಳನ್ನ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.. ಈ …

Read More »

ಭಾರತೀಯ ಪುರಾತತ್ವ ಸರ್ವೇಕ್ಷಣಾ ಕಛೇರಿ ವಿಜಯಪುರಕ್ಕೆ ಸ್ಥಳಾಂತರವಾಗಲಿ : ಯತ್ನಾಳ್ ಆಗ್ರಹ

ವಿಜಯಪುರ : ಪಾರಂಪರಿಕ ಹಿನ್ನೆಲೆ ವಿಜಯಪುರ ನಗರ ವಿಶ್ವವಿಖ್ಯಾತ ಐತಿಹಾಸಿಕ ಸ್ಮಾರಕಗಳನ್ನು ಹೊಂದಿದೆ. ಜಗತ್ತಪ್ರಸಿದ್ಧ ಗೋಲಗುಮ್ಮಟ, ಇಬ್ರಾಹಿಂ ರೋಜಾ ಸೇರಿದಂತೆ ನೂರಕ್ಕೂ ಹೆಚ್ಚು ಸ್ಮಾರಕಗಳು ವಿಜಯಪುರ ನಗರದಲ್ಲಿವೆ. ಹೀಗಾಗಿ ವಿಶ್ವದರ್ಜೆಯ ಸ್ಮಾಕರಗಳೇ ಇಲ್ಲದ ಧಾರವಾಡ ನಗರದಲ್ಲಿರುವ ಭಾರತೀಯ ಪುರಾತತ್ವ ಸರ್ವೇಕ್ಷಣಾ ಕಛೇರಿಯನ್ನು ವಿಜಯಪುರ ಪಾರಂಪರಿಕ ನಗರಕ್ಕೆ ಸ್ಥಳಾಂತರ ಮಾಡಲು ಕ್ರಮ ಕೈಗೊಳ್ಳುವಂತೆ ಶಾಸಕ ಬಸನಗೌಡ ಪಾಟೀಲ ಯತ್ನಾಳ ಆಗ್ರಹಿಸಿದರು. ಮಂಗಳವಾರ ನಗರದಲ್ಲಿ ಭೂತನಾಳ ಬಳಿ ಪ್ರವಾಸೋದ್ಯಮ ನಿಮಗದಿಂದ ನಿರ್ಮಿಸುತ್ತಿರುವ ತ್ರಿಸ್ಟಾರ್ …

Read More »

ವಿಜಯಪುರ ಪೊಲೀಸರ ಭರ್ಜರಿ ಕಾರ್ಯಾಚರಣೆ : 50 ಕೆಜಿ ಗಾಂಜಾ ಸಹಿತ ಓರ್ವನ ವಶ

ವಿಜಯಪುರ: ಜಿಲ್ಲೆಯ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಅಕ್ರಮವಾಗಿ ಸಂಗ್ರಹಿಸಿದ್ದ 50 ಕೆಜಿ‌ ಗಾಂಜಾ ಸಹಿತ ಓರ್ವನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ವಿಜಯಪುರ ಗ್ರಾಮೀಣ ಠಾಣೆ ಪೊಲೀಸರು ಖಚಿತ ಮಾಹಿತಿ ಮೇರೆಗೆ ನಾಗಠಾಣ ಗ್ರಾಮದಲ್ಲಿ ದಾಳಿ ನಡೆಸಿ ಮಂಜುನಾಥ ಪಾಟೀಲ ಎಂಬ ಆರೋಪಿಯನ್ನು ಬಂಧಿಸಿದ್ದಾರೆ. ಈ ಕುರಿತು ವಿಜಯಪುರ ಗ್ರಾಮೀಣ ಠಾಣೆಯಲ್ಲಿ ಪ್ತಕರಣ ದಾಖಲಾಗಿದೆ.

Read More »