Breaking News
Home / ಜಿಲ್ಲೆ / ಬಿಜಾಪುರ / ಭಾರತೀಯ ಪುರಾತತ್ವ ಸರ್ವೇಕ್ಷಣಾ ಕಛೇರಿ ವಿಜಯಪುರಕ್ಕೆ ಸ್ಥಳಾಂತರವಾಗಲಿ : ಯತ್ನಾಳ್ ಆಗ್ರಹ

ಭಾರತೀಯ ಪುರಾತತ್ವ ಸರ್ವೇಕ್ಷಣಾ ಕಛೇರಿ ವಿಜಯಪುರಕ್ಕೆ ಸ್ಥಳಾಂತರವಾಗಲಿ : ಯತ್ನಾಳ್ ಆಗ್ರಹ

Spread the love

ವಿಜಯಪುರ : ಪಾರಂಪರಿಕ ಹಿನ್ನೆಲೆ ವಿಜಯಪುರ ನಗರ ವಿಶ್ವವಿಖ್ಯಾತ ಐತಿಹಾಸಿಕ ಸ್ಮಾರಕಗಳನ್ನು ಹೊಂದಿದೆ. ಜಗತ್ತಪ್ರಸಿದ್ಧ ಗೋಲಗುಮ್ಮಟ, ಇಬ್ರಾಹಿಂ ರೋಜಾ ಸೇರಿದಂತೆ ನೂರಕ್ಕೂ ಹೆಚ್ಚು ಸ್ಮಾರಕಗಳು ವಿಜಯಪುರ ನಗರದಲ್ಲಿವೆ. ಹೀಗಾಗಿ ವಿಶ್ವದರ್ಜೆಯ ಸ್ಮಾಕರಗಳೇ ಇಲ್ಲದ ಧಾರವಾಡ ನಗರದಲ್ಲಿರುವ ಭಾರತೀಯ ಪುರಾತತ್ವ ಸರ್ವೇಕ್ಷಣಾ ಕಛೇರಿಯನ್ನು ವಿಜಯಪುರ ಪಾರಂಪರಿಕ ನಗರಕ್ಕೆ ಸ್ಥಳಾಂತರ ಮಾಡಲು ಕ್ರಮ ಕೈಗೊಳ್ಳುವಂತೆ ಶಾಸಕ ಬಸನಗೌಡ ಪಾಟೀಲ ಯತ್ನಾಳ ಆಗ್ರಹಿಸಿದರು.

ಮಂಗಳವಾರ ನಗರದಲ್ಲಿ ಭೂತನಾಳ ಬಳಿ ಪ್ರವಾಸೋದ್ಯಮ ನಿಮಗದಿಂದ ನಿರ್ಮಿಸುತ್ತಿರುವ ತ್ರಿಸ್ಟಾರ್ ಹೊಟೇಲ್ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯ ಐತಿಹಾಸಿಕ ಎಲ್ಲ ಸ್ಮಾರಕಗಳ ವ್ಯಾಪ್ತಿಯಲ್ಲಿ ಪ್ರವಾಸಿಗರ ಅನುಕೂಲಕ್ಕಾಗಿ ಪ್ರವಾಸೋದ್ಯಮ ಇಲಾಖೆ ಅಗತ್ಯ ಮೂಲಭೂತ ಸೌಲಭ್ಯ ಕಲ್ಪಿಸಬೇಕು. ಇದರಿಂದ ಪ್ರವಾಸಿಗರು ಜಿಲ್ಲೆಗೆ ಹೆಚ್ಚಿನ ಸಂಖ್ಯೆಯಲ್ಲ ಆಗಮಿಸಲು ಸಹಕಾರಿ ಆಗಲಿದೆ, ಹೀಗಾಗಿ ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ಹಾಗೂ ಅಗತ್ಯ ಅನುದಾನ ನೀಡಬೇಕು ಎಂದು ವೇಧಿಕೆ ಮೇಲಿದ್ದ ಪ್ರವಾಸೋದ್ಯಮ ಸಚಿವ ಸಿ.ಪಿ.ಯೋಗೇಶ್ವರ ಅವರಿಗೆ ಮನವಿ ಮಾಡಿದರು.

ಜಿಲ್ಲೆಗೆ ಭೇಟಿ ನೀಡುವ ಪ್ರವಾಸಿಗರನ್ನು ಆಕರ್ಷಿಸುವ ಉದ್ದೇಶದಿಂದ ಐತಿಹಾಸಿಕ ಸ್ಮಾರಕಗಳಿಗೆ ವಿದ್ಯುತ್ ಅಲಂಕಾರ ವ್ಯವಸ್ಥೆ ಕಲ್ಪಿಸಬೇಕು. ಉತ್ತರ ಭಾರತದ ತಾಜ್‍ಮಹಲ್ ರೀತಿಯಲ್ಲಿ ವಿಶ್ವವಿಖ್ಯಾತಿ ಇಬ್ರಾಹೀಂ ರೋಜಾ, ಗೋಲಗುಮ್ಮಟ ಸ್ಮಾರಕಗಳು ವಿಜಯಪುರ ನಗರದಲ್ಲಿವೆ. ಈ ಸ್ಮಾರಕಗಳ ಸೌಂದರ್ಯ ಹಾಗೂ ಅಭಿವೃದ್ಧಿಗೆ ವಿಶೇಷ ಗಮನ ನೀಡಬೇಕು.

ಇದಲ್ಲದೇ ನಿರ್ಮಾಣ ಹಮತದಲ್ಲಿರುವ ವಿಜಯಪುರ ವಿಮಾನ ನಿಲ್ದಾಣ ನನ್ನ ಅವಧಿಯಲ್ಲೇ ಪೂರ್ಣಗೊಳ್ಳಲಿದ್ದು, ನಾನೇ ಅದರ ಉದ್ಘಾಟನೆ ಮಾಡಲಿದ್ದೇನೆ. ಆಹಾರ-ನಾಗರಿಕ ಪೂರೈಕೆ ಸಚಿವ ಉಮೇಶ ಕತ್ತಿ ಅವರು ಯತ್ನಾಳ ಶಾಕರಾಗಿರುವ ವರೆಗೆ ವಿಜಯಪುರ ವಿಮಾನ ನಿಲ್ದಾಣ ಯೋಜನೆ ಪೂರ್ಣಗೊಳ್ಳುವುದಿಲ್ಲ ಎಂದು ಹೇಳಿದ್ದಾಗಿ ಮಾಧ್ಯಮಗಳಲ್ಲಿ ವರದಿಯಾಗಿದೆ.

ಬರುವ ಎರಡು ವರ್ಷಗಳ ಶಾಸಕ್ವದ ಇದೇ ಅವಧಿಯಲ್ಲಿ ವಿಜಯಪುರ ವಿಮಾನ ನಿಲ್ದಾಣದಿಂದ ವಿಮಾನ ಹಾರಾಟ ಮಾಡಲಿವೆ. ಇದರಲ್ಲಿ ಅನುಮಾನವೇ ಬೇಡ ಎಂದು ಸ್ಪಷ್ಟಪಡಿಸಿದರು.


Spread the love

About Laxminews 24x7

Check Also

ಸರಿಯಾಗಿ ಮನೆ ಕೆಲಸ ಮಾಡುತ್ತಿಲ್ಲ, ಮಕ್ಕಳನ್ನು ನೋಡಿಕೊಳ್ಳುತ್ತಿಲ್ಲ ಎಂದು ಕೋಪಗೊಂಡ ಪತಿ ತನ್ನ ಪತ್ನಿ ಮತ್ತು ಆಕೆಯ ತಾಯಿಯನ್ನು ಕೊಲೆಗೈದ

Spread the love ವಿಜಯಪುರ: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಪತಿಯೇ ತನ್ನ ಪತ್ನಿ‌ ಹಾಗೂ ಆಕೆಯ ತಾಯಿಯನ್ನು ಕೊಲೆ‌ ಮಾಡಿರುವ ಘಟನೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ