Breaking News
Home / ಜಿಲ್ಲೆ / ಚಿಕ್ಕ ಮಂಗಳೂರು (page 7)

ಚಿಕ್ಕ ಮಂಗಳೂರು

ಚಾರ್ಮಾಡಿ ಘಾಟ್‍ನಲ್ಲಿ ವಾಹನ ನಿಲುಗಡೆ ನಿಷೇಧ…………

ಚಿಕ್ಕಮಗಳೂರು: ಜಿಲ್ಲೆಯ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟ್‍ನಲ್ಲಿ ವಾಹನ ನಿಲುಗಡೆ ನಿಷೇಧ ಮಾಡಲಾಗಿದೆ. ಹೀಗಾಗಿ ಇನ್ನು ಮುಂದೆ ಚಾರ್ಮಾಡಿ ಘಾಟಿಯಲ್ಲಿ ವಾಹನಗಳನ್ನು ನಿಲ್ಲಿಸಿದರೆ ಕೇಸ್ ಬೀಳೋದು ಗ್ಯಾರಂಟಿಯಾಗಿದೆ. ಈ ಸಂಬಂಧ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆಯ ಬಣಕಲ್ ಪೊಲೀಸರು ಸೂಚನೆ ನೀಡುತ್ತಿದ್ದಾರೆ. ಅಲ್ಲದೆ ಜಿಲ್ಲಾಡಳಿತ ಕೊಟ್ಟಿಗೆಹಾರ ಚೆಕ್ ಪೋಸ್ಟ್ ನಲ್ಲಿ ನಾಮಫಲಕ ಕೂಡ ಹಾಕಿದೆ. ಮಳೆಯ ನಡುವೆ ವಾಹನ ನಿಲ್ಲಿಸಿ ಅಪಾಯ ಸ್ಥಳಗಳಲ್ಲಿ ಜನ ಓಡಾಟ ಮಾಡುವುದು ಹೆಚ್ಚಾಗಿದೆ. ಈ ಹಿಂದೆ …

Read More »

ವೈದ್ಯ, ಕಂಡಕ್ಟರ್, ಪೇದೆಗೆ ಕೊರೊನಾಜನರ ಆತಂಕ ಕೂಡ ಹೆಚ್ಚಾಗುತ್ತಿದೆ.

ಚಿಕ್ಕಮಗಳೂರು: ಕಳೆದ 45 ದಿನಗಳಿಂದ ಬರುತ್ತಿರುವ ಒಂದು-ಎರಡು ಕೇಸ್ ಮೂಲಕ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 85ರ ಗಡಿ ತಲುಪಿದ್ದು, ದಿನ ಕಳೆದಂತೆ ಜಿಲ್ಲೆಯ ಜನರ ಆತಂಕ ಕೂಡ ಹೆಚ್ಚಾಗುತ್ತಿದೆ. ಇಂದು ಜಿಲ್ಲೆಯಲ್ಲಿ ಮೂರು ಕೊರೊನಾ ಪ್ರಕರಣಗಳು ಪತ್ತೆಯಾಗಿವೆ. ಮೂರು ಹೊಸ ಪ್ರಕರಣಗಳಲ್ಲಿ ಓರ್ವ ವೈದ್ಯ, ಮತ್ತೋರ್ವ ಸರ್ಕಾರಿ ಬಸ್ ಕಂಡಕ್ಟರ್, ಮಗದೊಬ್ಬ ಬೆಂಗಳೂರಿನಿಂದ ಹಿಂದಿರುಗಿದ ಪೇದೆ. ವೈದ್ಯ ಹಾಗೂ ಕಂಡಕ್ಟರ್ ಈ ಎರಡೂ ಪ್ರಕರಣಗಳು ಜಿಲ್ಲಾಡಳಿತ ಹಾಗೂ ಜನರ …

Read More »

ರುದ್ರ-ರಮಣೀಯ ತಾಣ ದೇವರಮನೆ ಗುಡ್ಡಕ್ಕೆ ತಾತ್ಕಾಲಿಕವಾಗಿ ಪ್ರವಾಸಿಗರನ್ನ ಸಂಪೂರ್ಣ ನಿಷೇಧ…….

ಚಿಕ್ಕಮಗಳೂರು: ಕೊರೊನಾ ಮಹಾಮಾರಿಯಿಂದ ಜಿಲ್ಲೆಯ ಮೂಡಿಗೆರೆ ತಾಲೂಕಿನ ರುದ್ರ-ರಮಣೀಯ ತಾಣ ದೇವರಮನೆ ಗುಡ್ಡಕ್ಕೆ ತಾತ್ಕಾಲಿಕವಾಗಿ ಪ್ರವಾಸಿಗರನ್ನ ಸಂಪೂರ್ಣ ನಿಷೇಧಿಸಿದೆ. ಜಿಲ್ಲೆಯ ಮೂಡಿಗೆರೆ ತಾಲೂಕಿನ ರುದ್ರ-ರಮಣೀಯ ತಾಣ ದೇವರಮನೆ ಗುಡ್ಡದ ಸೌಂದರ್ಯ ಪ್ರವಾಸಿಗರನ್ನ ಕೈಬೀಸಿ ಕರೆಯುತ್ತಿತ್ತು. ಲಾಕ್‍ಡೌನ್ ಸಡಿಲವಾಗುತ್ತಿದ್ದಂತೆ ಜಿಲ್ಲೆಯ ಪ್ರವಾಸಿ ತಾಣಗಳಲ್ಲಿ ಜನಜಾತ್ರೆ ಏರ್ಪಡುತ್ತಿತ್ತು. ಅದರಲ್ಲೂ ಮೂಡಿಗೆರೆ ತಾಲೂಕಿನ ದೇವರಮನೆ ಗುಡ್ಡಕ್ಕೆ ಭಾರೀ ಪ್ರವಾಸಿಗರು ಭೇಟಿ ಕೊಡುತ್ತಿದ್ದರು. ದೇವರಮನೆ ಗುಡ್ಡಕ್ಕೆ ಬರುತ್ತಿದ್ದ ಪ್ರವಾಸಿಗರು ಎಲ್ಲೆಂದರಲ್ಲಿ ಮಧ್ಯದ ಬಾಟಲಿ ಹಾಗೂ ಪ್ಲಾಸ್ಟಿಕ್, …

Read More »

ಆರ್.ಅಶೋಕ್ ಹುಟ್ಟುಹಬ್ಬದ ನೆಪದಲ್ಲಿ ಸಚಿವರ ಡಿನ್ನರ್ ಪಾರ್ಟಿ

ಚಿಕ್ಕಮಗಳೂರು: ಕಂದಾಯ ಸಚಿವ ಆರ್ ಅಶೋಕ್ ಅವರ ಹುಟ್ಟುಹಬ್ಬ ಬುಧವಾರವಿದ್ದು, ಈ ಹಿನ್ನೆಲೆಯಲ್ಲಿ ಸಚಿವರೇ ರಾತ್ರಿ ಕರ್ಫ್ಯೂ ಉಲ್ಲಂಘಿಸಿ ಪಾರ್ಟಿ ಆಯೋಜನೆ ಮಾಡಿದ್ದಾರೆ. ಹೌದು. ಚಿಕ್ಕಮಗಳೂರಿನ ಕೈಮರ ಸಮೀಪ ಇರುವ ಖಾಸಗಿ ಹೋಟೆಲಿನಲ್ಲಿ ಬರ್ತ್ ಡೇ ಪಾರ್ಟಿ ಆಯೋಜಿಸಿದ್ದಾರೆ. ನೈಟ್ ಪಾರ್ಟಿಯಿಂದ ಸೋಂಕು ಹೆಚ್ಚುತ್ತೆ ಅಂದವರೇ ಪಾರ್ಟಿ ಮಾಡಿರುವುದು ಇದೀಗ ಹಲವು ಪ್ರಶ್ನೆಗಳನ್ನು ಹುಟ್ಟು ಹಾಕಿದೆ. ಆರ್.ಅಶೋಕ್ ಹುಟ್ಟುಹಬ್ಬದ ನೆಪದಲ್ಲಿ ಸಚಿವರ ಡಿನ್ನರ್ ಪಾರ್ಟಿ ಆಯೋಜಿಸಿದ್ದು, ಪಾರ್ಟಿಯಲ್ಲಿ ಶೆಟ್ಟರ್, ಸಿ.ಟಿ.ರವಿ, …

Read More »

ಧಾರಾಕಾರ ಮಳೆಯಿಂದಾಗಿ ಜನ ಜೀವನ ಅಸ್ತವ್ಯಸ್ಥ……

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಕಳೆದೊಂದು ವಾರದಿಂದ ಬಿಡುವ ನೀಡಿದ್ದ ವರುಣದೇವ ಜಿಲ್ಲೆಯಲ್ಲಿ ಇಂದು ಮತ್ತೆ ಅಬ್ಬರಿಸಿ ಬೊಬ್ಬಿರಿದಿದ್ದಾನೆ. ಚಿಕ್ಕಮಗಳೂರು ನಗರದಲ್ಲಿ ಸಂಜೆ ಸುಮಾರು ಅರ್ಧ ಗಂಟೆಗಳ ಕಾಲ ಧಾರಾಕಾರ ಮಳೆ ಆಗಿದೆ. ಸಂಜೆಯ ದಿಢೀರ್ ಮಳೆಯಿಂದಾಗಿ ಜನ ಜೀವನ ಅಸ್ತವ್ಯಸ್ಥಗೊಂಡಿತು. ಚಿಕ್ಕಮಗಳೂರು ನಗರದಲ್ಲಿ ಅರ್ಧ ಗಂಟೆಗೂ ಹೆಚ್ಚು ಹೊತ್ತು ಸುರಿದ ವರ್ಷದ ಮೊದಲ ಮಳೆ ಇದಾಗಿದೆ. ಚಿಕ್ಕಮಗಳೂರು ನಗರದಲ್ಲಷ್ಟೇ ಅಲ್ಲದೆ ಜಿಲ್ಲೆಯ ಮಲೆನಾಡು ಭಾಗದಲ್ಲೂ ಅಲ್ಲಲ್ಲಿ ಮಳೆ ಸುರಿದಿದೆ. ಕೊಪ್ಪ, ಬಾಳೆಹೊನ್ನೂರು, …

Read More »

ಕಾಫಿನಾಡಿನ ಪ್ರವಾಸ ಮುಂದೂಡಿ- ಜಿಲ್ಲಾಡಳಿತ ಮನವಿ………..

ಚಿಕ್ಕಮಗಳೂರು: ದಿನೇ ದಿನೇ ಕೊರೊನಾ ಆತಂಕ ಹೆಚ್ಚುತ್ತಿದ್ದರೂ, ಇದಾವುದನ್ನೂ ಲೆಕ್ಕಿಸದ ಪ್ರವಾಸಿಗರು ಸಾವಿರಾರು ಸಂಖ್ಯೆಯಲ್ಲಿ ಚಿಕ್ಕಮಗಳೂರಿಗೆ ಭೇಟಿ ನೀಡುತ್ತಿದ್ದು, ಜಿಲ್ಲೆಯಲ್ಲಿ ಕೊರೊನಾ ಸ್ಫೋಟವಾಗುವ ಆತಂಕ ಎದುರಾಗಿದೆ. ಈ ಹಿನ್ನೆಲೆ ಪ್ರವಾಸಿಗರು ಚಿಕ್ಕಮಗಳೂರು ಪ್ರವಾಸವನ್ನು ತಾತ್ಕಾಲಿಕವಾಗಿ ರದ್ದುಗೊಳಿಸಿ ಎಂದು ಜಿಲ್ಲಾಡಳಿತ ಪ್ರವಾಸಿಗರಲ್ಲಿ ಮನವಿ ಮಾಡಿದೆ. ಕೊರೊನಾ ಆರಂಭದ ಮೊದಲ 55 ದಿನಗಳ ಕಾಲ ಒಂದೂ ಕೊರೊನಾ ಪಾಸಿಟಿವ್ ಪ್ರಕರಣವಿಲ್ಲದ ಚಿಕ್ಕಮಗಳೂರಿನಲ್ಲಿ ಇಂದು ಸೋಂಕಿತರ ಸಂಖ್ಯೆ 70ರ ಗಡಿ ಮುಟ್ಟಿದೆ. ಬೆಂಗಳೂರಿಗೆ ಹೋಗಿ …

Read More »

ವಧುವನ್ನು ನೋಡಲು ಹೋದ 8 ಮಂದಿಗೆ ಕೊರೊನಾ ಪಾಸಿಟಿವ್

ಚಿಕ್ಕಮಗಳೂರು: ವಧುವನ್ನು ನೋಡಲು ಹೋದ 8 ಮಂದಿಗೆ ಕೊರೊನಾ ಪಾಸಿಟಿವ್ ಬಂದಿರುವಂತಹ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಜಿಲ್ಲೆಯ ತರೀಕೆರೆ ತಾಲೂಕಿನ ಗಡಿ ಗಿರಿಯಾಪುರ ಹಾಗೂ ದಂದೂರು ಸೇರಿದಂತೆ ಒಂದೇ ವಂಶದ ಮೂರು ಹಳ್ಳಿಯ ಸುಮಾರು 20 ಮಂದಿ ಭದ್ರಾವತಿ ಮೂಲದ ವ್ಯಕ್ತಿ ಜೊತೆ ತುಮಕೂರಿಗೆ ವಧುವನ್ನು ನೋಡಲು ಹೋಗಿದ್ದರು. ವಧುವನ್ನು ನೋಡಿ ಹಿಂದಿರುಗುವಾಗ ಹೆಮ್ಮಾರಿ ಕೊರೊನಾ ಜೊತೆ ವಾಪಾಸ್ ಆಗಿದ್ದಾರೆ. ವಧು ನೋಡಲು ತೆರಳಿದ್ದ ಸುಮಾರು 20 ಮಂದಿಯಲ್ಲಿ 8 …

Read More »

ಕಾಂಗ್ರೆಸ್ ಮುಖಂಡನಿಗೂ ಕೊರೊನಾ ಪಾಸಿಟಿವ್ ದೃಢಪಟ್ಟಿದ್ದು, ಕಾಂಗ್ರೆಸ್ ವಲಯದಲ್ಲೂ ಆತಂಕ ಹೆಚ್ಚಾಗಿದೆ.

ಚಿಕ್ಕಮಗಳೂರು: ಕಾಫಿನಾಡಲ್ಲಿ ಕಾಂಗ್ರೆಸ್ ಮುಖಂಡನಿಗೂ ಕೊರೊನಾ ಪಾಸಿಟಿವ್ ದೃಢಪಟ್ಟಿದ್ದು, ಕಾಂಗ್ರೆಸ್ ವಲಯದಲ್ಲೂ ಆತಂಕ ಹೆಚ್ಚಾಗಿದೆ. ಕಲ್ಯಾಣ ನಗರದಲ್ಲಿ ವಾಸವಿರುವ 37 ವರ್ಷದ ಕಾಂಗ್ರೆಸ್ ಮುಖಂಡನಿಗೂ ಕೊರೊನಾ ಪಾಸಿಟಿವ್ ದೃಢಪಟ್ಟಿದೆ. ಇವರು ಬೆಂಗಳೂರಿಗೆ ಹೋಗಿ ಬಂದಿದ್ದರು ಎಂದು ಹೇಳಲಾಗುತ್ತಿದೆ. ಜಿಲ್ಲಾಡಳಿತ ಈಗಾಗಲೇ ಕಾಂಗ್ರೆಸ್ ಮುಖಂಡನನ್ನ ಚಿಕ್ಕಮಗಳೂರು ಕೋವಿಡ್ ಆಸ್ಪತ್ರೆಗೆ ದಾಖಲಿಸಿದೆ. ಕಾಂಗ್ರೆಸ್ ಮುಖಂಡ ಬೆಂಗಳೂರಿಗೆ ಪ್ರಯಾಣ ಮಾಡಿದ್ದರು ಎಂದು ತಿಳಿದುಬಂದಿದ್ದು, ಜಿಲ್ಲಾಡಳಿತ ಇವರ ಟ್ರಾವೆಲ್ ಹಿಸ್ಟರಿ ಪ್ ತ್ತೆ  ಹಚ್ಚಲು ಮುಂದಾಗಿದೆ. …

Read More »

ಕಾಡಿನ ಮಧ್ಯೆ ನಿಗೂಢ ಕ್ಯಾಮೆರಾ ಪತ್ತೆ.,ಮಾಧ್ಯಮಗಳಿಗೆ ತಿಳಿಯುತ್ತಿದ್ದಂತೆ ಸ್ಥಳದಿಂದ ಕ್ಯಾಮೆರಾ ನಾಪತ್ತೆ

ಚಿಕ್ಕಮಗಳೂರು: ಮೀಸಲು ಅರಣ್ಯದಲ್ಲಿ ಎನ್‍ಜಿಓ ಹೆಸರಲ್ಲಿ ಖಾಸಗಿ ವ್ಯಕ್ತಿಗಳು ಅರಣ್ಯ ಇಲಾಖೆಯ ಅನುಮತಿ ಪಡೆಯದೇ ಕಾಡಿನ ಮಧ್ಯೆ ಟ್ರ್ಯಾಪಿಂಗ್ ಕ್ಯಾಮೆರಾ ಅಳವಡಿಸಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಚಿಕ್ಕಮಗಳೂರು ತಾಲೂಕಿನ ಹಿರೇಗೌಜ ವ್ಯಾಪ್ತಿಯ ಚುರ್ಚೆಗುಡ್ಡ ಮೀಸಲು ಅರಣ್ಯದಲ್ಲಿ ಈ ಕ್ಯಾಮರಾಗಳು ಪತ್ತೆಯಾಗಿದ್ದು, ಹಲವು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಕಳೆದೊಂದು ವಾರದಿಂದ ಚುರ್ಚೆಗುಡ್ಡದ ಶ್ರೀಗಂಧದ ರಸ್ತೆ ಮಾರ್ಗದ ಒಂದೆರಡು ಕಿ.ಮೀ. ದೂರದಲ್ಲಿ ಕಾಡು ಪ್ರಾಣಿಗಳು ಬಾಯಾರಿಕೆ ನೀಗಿಸಿಕೊಳ್ಳಲು ಬರುವ ನೀರುಗುಂಡಿಯ ಬಳಿಯ ಮರಕ್ಕೆ ಕ್ಯಾಮರಾಗಳನ್ನು …

Read More »

ಕೊರೊನಾ ರೂಲ್ಸ್ ಬ್ರೇಕ್, ಐವರ ವಿರುದ್ಧ ಕೇಸ್………….

ಚಿಕ್ಕಮಗಳೂರು: ರಾಜ್ಯಾದ್ಯಂತ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಏರುತ್ತಲೇ ಇದೆ. ಆದರೆ ಜನ ಮಾತ್ರ ನಿರ್ಲಕ್ಷ್ಯ ವಹಿಸುತ್ತಲೇ ಇದ್ದಾರೆ. ಸರ್ಕಾರದ ಆದೇಶಕ್ಕೂ ಕಿಮ್ಮತ್ತು ನೀಡದೆ, ಸಂಬಂಧವೇ ಇಲ್ಲ ಎಂಬಂತೆ ಬೇಕಾಬಿಟ್ಟಿ ಓಡಾಡುತ್ತಿದ್ದಾರೆ. ಹೀಗೆ ಮನಸೋ ಇಚ್ಛೆ ಓಡಾಡುತ್ತಿದ್ದ ಐವರ ವಿರುದ್ಧ ಜಿಲ್ಲೆಯ ಎರಡು ಪ್ರತ್ಯೇಕ ಠಾಣೆಯಲ್ಲಿ ದೂರು ದಾಖಲಾಗಿದೆ. ಚಿಕ್ಕಮಗಳೂರು ನಗರದಲ್ಲಿ ಹೊರ ಜಿಲ್ಲೆಯಿಂದ ಬಂದವರಿಗೆ ಜಿಲ್ಲಾಡಳಿತ ಕ್ವಾರಂಟೈನ್ ನಲ್ಲಿರುವಂತೆ ಸೂಚಿಸಿತ್ತು. ಆದರೆ ಸರ್ಕಾರದ ಆದೇಶವನ್ನು ಮೀರಿ ನಾಲ್ವರು …

Read More »