Breaking News
Home / ಜಿಲ್ಲೆ / ಚಿಕ್ಕ ಮಂಗಳೂರು (page 10)

ಚಿಕ್ಕ ಮಂಗಳೂರು

ಕೋವಿಡ್-19 ವಾರಿಯರ್ಸ್‌ಗೆ ಆರತಿ ಎತ್ತಿ, ಹೂಮಳೆಗೈದ ಗುರೂಜಿ……

ಚಿಕ್ಕಮಗಳೂರು: ಕೊರೊನಾ ವಾರಿಯರ್ಸ್ ಗಳಿಗೆ ಗೌರಿಗದ್ದೆ ದತ್ತಶ್ರಮದ ಅವಧೂತ ವಿನಯ್ ಗುರೂಜಿ ಆರತಿ ಎತ್ತಿ, ಹೂಮಳೆಗೈದಿದ್ದಾರೆ. ಕೊಪ್ಪ ತಾಲೂಕಿನ ಹರಿಹರಪುರ ಸಮೀಪದ ಗೌರಿಗದ್ದೆ ದತ್ತಾಶ್ರಮದಲ್ಲಿ ಬುದ್ಧ ಪೂರ್ಣಿಮೆಯ ಅಂಗವಾಗಿ ಕೊರೊನಾ ವಾರಿಯರ್ಸ್ ಗಳಿಗೆ ಗೌರವ ಸಮರ್ಪಿಸಿದರು. ಹೆಲ್ತ್ ವಾರಿಯರ್ಸ್‍ಗೆ ವಿನಯ್ ಗುರೂಜಿ ಅವರು ಆರತಿ ಎತ್ತಿದರು. ಬಳಿಕ ಮೇಲ್ಭಾಗದಲ್ಲಿ ಕುಳಿತಿದ್ದ ಅವರ ಬಳಿಗೆ ಹೋಗಿ ಹೂಗಳನ್ನ ಸುರಿದು ಪುಷ್ಪಾರ್ಚನೆಯ ಮೂಲಕ ಗೌರವಿಸಿದ್ದಾರೆ. ಈ ವೇಳೆ ಮಾತನಾಡಿದ ವಿನಯ್ ಗುರೂಜಿ, ವೈದ್ಯರು, …

Read More »

ಒಂದೂವರೆ ತಿಂಗಳ ಬಳಿಕ ಎಣ್ಣೆ ಸಿಕ್ಕ ಖುಷಿಗೆ ಮದ್ಯವ್ಯಸನಿಗಳು ಜಗತ್ತನ್ನೇ ಮರೆತು, ಮೈಮರೆತು ಎಣ್ಣೆಯ ನಶೆಯಲ್ಲಿ ತೇಲುತ್ತಿದ್ದಾರೆ.

ಚಿಕ್ಕಮಗಳೂರು: ಒಂದೂವರೆ ತಿಂಗಳ ಬಳಿಕ ಎಣ್ಣೆ ಸಿಕ್ಕ ಖುಷಿಗೆ ಮದ್ಯವ್ಯಸನಿಗಳು ಜಗತ್ತನ್ನೇ ಮರೆತು, ಮೈಮರೆತು ಎಣ್ಣೆಯ ನಶೆಯಲ್ಲಿ ತೇಲುತ್ತಿದ್ದಾರೆ. ಹೊಟ್ಟೆ ತುಂಬಾ ಕುಡಿದು ಎಲ್ಲೆಂದರಲ್ಲಿ ಬಿದ್ದರೂ ಕುಡುಕರಿಗೆ ಇನ್ನೂ ಸಮಾಧಾನ ಆಗಿಲ್ಲ ಅನಿಸುತ್ತಿದೆ. ಯಾಕಂದ್ರೆ ಮದ್ಯ ಪ್ರಿಯರು ಫುಲ್ ಟೈಟಾಗಿ ಮೈಮೇಲೆ ಜ್ಞಾನ ಇಲ್ಲದಂತೆ ಎದ್ದು-ಬಿದ್ದೋ ತೇಲ್ತಿರೋ ಘಟನೆ ಜಿಲ್ಲೆಯ ವಿವಿಧ ಭಾಗದಲ್ಲಿ ಇನ್ನೂ ನಿಂತಿಲ್ಲ. ಫುಲ್ ಟೈಟಾಗಿ ರಸ್ತೆ ಮಧ್ಯೆ ಪ್ರಜ್ಞೆ ತಪ್ಪಿ ಮಲಗುತ್ತಿರುವ ಸನ್ನಿವೇಶಗಳು ಕಡಿಮೆಯಾಗಿಲ್ಲ. ಕೊರೊನಾ …

Read More »

ಲಾಕ್‍ಡೌನ್ ಎಫೆಕ್ಟ್ – ಮೇಷ್ಟ್ರಾದ ಮಾಜಿ ಶಾಸಕ ವೈ.ಎಸ್.ವಿ. ದತ್ತ

ಚಿಕ್ಕಮಗಳೂರು: ಜಿಲ್ಲೆಯ ಕಡೂರಿನ ಮಾಜಿ ಶಾಸಕ ವೈ.ಎಸ್.ವಿ. ದತ್ತ ಲಾಕ್‍ಡೌನ್ ಹಿನ್ನೆಲೆ ಮೇಷ್ಟ್ರಾಗಿ ಮಕ್ಕಳಿಗೆ ಪಾಠ ಮಾಡುತ್ತಿದ್ದಾರೆ. ಎಸ್.ಎಸ್.ಎಲ್.ಸಿ. ಮಕ್ಕಳಿಗೆ ಫೇಸ್ ಬುಕ್ ಲೈವ್‍ನಲ್ಲಿ ಪ್ರತಿ ದಿನ ಸಂಜೆ 7.30 ರಿಂದ 8.30ರವೆಗೆ ಪಾಠ ಮಾಡುತ್ತಿದ್ದಾರೆ. ಒಂದು ವಾರ ಗಣಿತ, ಮತ್ತೊಂದು ವಾರ ಭೌತಶಾಸ್ತ್ರ ಪಾಠ ಮಾಡಲು ಮುಂದಾಗಿದ್ದಾರೆ. ಈಗಾಗಲೇ ಎಸ್.ಎಸ್.ಎಲ್.ಸಿ. ಪರೀಕ್ಷೆಗೆ ದಿನಗಣನೆ ಆರಂಭವಾಗಿದೆ. ಜೂನ್ ಮೊದಲ ವಾರದಲ್ಲಿ ಪರೀಕ್ಷೆ ನಡೆಯಬಹುದು ಎಂದು ಹೇಳಲಾಗುತ್ತಿದೆ. ಪರೀಕ್ಷೆ ನಡೆಸಲು ಸರ್ಕಾರ …

Read More »

ಹಣ ಕೊಡ್ಲಿಲ್ಲ ಅಂತ ಮಾಲೀಕನ ಟಿಪ್ಪರ್ ಎಗರಿಸಿದ ಭೂಪ………

ಚಿಕ್ಕಮಗಳೂರು: ಹೆಂಡತಿ-ಮಕ್ಕಳಿಗೆ ಹಣ ಬೇಕು. ನಿಮ್ಮ ಕಾಲಿಗೆ ಬೀಳ್ತೀನಿ ಅಂದ್ರು ಮಾಲೀಕ ಹಣ ಕೊಡಲಿಲ್ಲ ಅಂತ ಹೇಳದೆ-ಕೇಳದೆ ಎಣ್ಣೆ ಏಟಲ್ಲಿ 14 ಚಕ್ರದ ಟಿಪ್ಪರ್ ಲಾರಿಯನ್ನ ತೆಗೆದುಕೊಂಡು ಊರಿಗೆ ಹೋಗಲು ಯತ್ನಿಸಿದ ಘಟನೆ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರದಲ್ಲಿ ನಡೆದಿದೆ. ಮಂಗಳೂರು ಮೂಲದ ರಂಗಪ್ಪ ಎಂಬವನು ಕಡೂರು ತಾಲೂಕಿನಲ್ಲಿ ಪ್ರಭಾಕರ್ ಅವರ ಬಳಿ ಕೆಲಸ ಮಾಡುತ್ತಿದ್ದ. ಕೊರೊನಾ ವೈರಸ್ ಆತಂಕದಿಂದ ಇಡೀ ದೇಶವೇ ಲಾಕ್‍ಡೌನ್ ಆದಮೇಲೆ ಡ್ರೈವರ್ ರಂಗಪ್ಪ ಒಂದೂವರೆ ತಿಂಗಳು …

Read More »

ಮಲೆನಾಡಲ್ಲಿ ಭಾರೀ ಮಳೆ, ಸಿಡಿಲು ಬಡಿದು ಹೊತ್ತಿ ಉರಿದ ತೆಂಗಿನ ಮರ…

ಚಿಕ್ಕಮಗಳೂರು: ಜಿಲ್ಲೆಯ ಮಲೆನಾಡು ಭಾಗದಲ್ಲಿ ಮಳೆ ಅಬ್ಬರ ಮುಂದುವರೆದಿದ್ದು, ಭರಣಿ ಮಳೆ ಅಬ್ಬರಕ್ಕೆ ಮಲೆನಾಡಿಗರು ತತ್ತರಿಸಿದೆ. ಮೂಡಿಗೆರೆಯಲ್ಲಿ ಸಂಜೆಯಿಂದ ಧಾರಾಕಾರ ಮಳೆ ಸುರಿದಿದ್ದು, ಜನ ಆತಂಕಕ್ಕೀಡಾಗಿ, ಕಳೆದ ವರ್ಷದ ಮಳೆಯನ್ನು ನೆನಪಿಸಿಕೊಂಡಿದ್ದಾರೆ. ಚಿಕ್ಕಮಗಳೂರು ತಾಲೂಕಿನ ಆಲ್ದೂರು ಸಮೀಪದ ತೋರಣಮಾವು ಗ್ರಾಮದಲ್ಲಿ ಮಳೆ ಆರಂಭಕ್ಕೂ ಮುನ್ನ ಸಿಡಿಲು ಬಡಿದು ತೆಂಗಿನ ಮರವೊಂದು ಹೊತ್ತಿ ಉರಿದಿದೆ. ನೋಡನೋಡ್ತಿದ್ದಂತೆ ತೆಂಗಿನ ಸಂಪೂರ್ಣ ಸುಟ್ಟು ಕರಕಲಾಗಿದೆ. ಚಿಕ್ಕಮಗಳೂರು ತಾಲೂಕಿನ ಬಯಲುಸೀಮೆ ಭಾಗ ಕಳಸಾಪುರ, ಬೆಳವಾಡಿ ಹಾಗೂ …

Read More »

ಬಿರುಗಾಳಿ ಸಹಿತ ಮಳೆ,ಎಷ್ಟೇ ಮಳೆ ಸುರಿದರೂ ಕ್ಯೂನಿಂದ ಮಾತ್ರ ಕದಲಿಲ್ಲ. ಎಣ್ಣೆಯನ್ನು ಪಡೆಯುವ ವರೆಗೂ

ಚಿಕ್ಕಮಗಳೂರು: ಜಿಲ್ಲೆಯ ವಿವಿಧ ಭಾಗಗಳಲ್ಲಿ ಸೋಮವಾರ ಸಂಜೆ ಭಾರೀ ಮಳೆಯಾಗಿದ್ದು, ಬಿರುಗಾಳಿ ಸಹಿತ ಮಳೆಗೆ ಬೃಹತ್ ಮರ ಬಿದ್ದಿ ಪರಿಣಾಮ ಕಾರ್ ಜಖಂ ಆಗಿದೆ. ಜಿಲ್ಲೆಯ ಹಲವೆಡೆ ಧಾರಾಕಾರ ಮಳೆಯಾಗಿದ್ದು, ತರೀಕೆರೆಯಲ್ಲಿ ಕಾರಿನ ಮೇಲೆ ಬೃಹತ್ ಮರ ಬಿದ್ದು ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ನಿರಂತರ ಮಳೆಯಿಂದಾಗಿ ಹೆಚ್ಚಿದ ಜಿಲ್ಲೆಯ ಜನರಲ್ಲಿ ಆತಂಕ ಹೆಚ್ಚಾಗಿದ್ದು, ಕೊರೊನಾ, ಲಾಕ್‍ಡೌನ್ ಮಧ್ಯೆ ಮಳೆಯೂ ಸುರಿಯುತ್ತಿದೆ ಎಂದು ಭಯಭೀತರಾಗಿದ್ದಾರೆ. ತರೀಕೆರೆ, ಮೂಡಿಗೆರೆ, ಕಡೂರು ತಾಲೂಕಿನ ಹಲವೆಡೆ …

Read More »

ಮಲೆನಾಡಲ್ಲಿ ಮಳೆಯ ಅಬ್ಬರ – 20 ಕಂಬ, 50 ಮರ ಧರೆಗೆ…………

ಚಿಕ್ಕಮಗಳೂರು: ಕಳೆದ ದಿನ ಅನೇಕ ಕಡೆ ಬಿರುಗಾಳಿ ಸಹಿತ ಜೋರಾಗಿ ಮಳೆಯಾಗಿದೆ. ಜಿಲ್ಲೆಯ ಮಲೆನಾಡು ಭಾಗದಲ್ಲಿ ಕೂಡ ಮಳೆಯ ಅಬ್ಬರ ಮುಂದುವರಿದಿದ್ದು, ಕೊಪ್ಪ, ಎನ್‍ಆರ್ ಪುರ, ಶೃಂಗೇರಿಯಲ್ಲಿ ಭಾರೀ ಗಾಳಿಯೊಂದಿಗೆ ವರುಣ ದೇವ ಅಬ್ಬರಿಸಿದ್ದಾನೆ. ಭಾನುವಾರ ರಾತ್ರಿ ಮೂಡಿಗೆರೆ ತಾಲೂಕಿನಲ್ಲಿ ಸಾಧಾರಣ ಮಳೆಯಾಗಿದೆ. ಆದರೆ ಕೊಪ್ಪದಲ್ಲಿ ಸುಮಾರು ಒಂದೂವರೆ ಗಂಟೆಗಳ ಕಾಲ ಸುರಿದ ಭಾರೀ ಮಳೆಗೆ ಕೊಪ್ಪ ಅಕ್ಷರಶಃ ನಲುಗಿ ಹೋಗಿದೆ. ಕೊಪ್ಪದಲ್ಲಿ ಮಳೆ ಜೊತೆ ಬೀಸಿದ ರಣಗಾಳಿಗೆ ಸುಮಾರು …

Read More »

ಬಾರ್ ಓಪನ್ ಆಗಿದೆ ಅಂತ ಓಡೋಡಿ ಬಂದು ಏನೂ ಸಿಗದೆ ವಾಪಸ್ಸಾದ್ರು!

ಚಿಕ್ಕಮಗಳೂರು: ಬಾರ್ ಓಪನ್ ಆಗಿದೆ ಎಂದು ಓಡೋಡಿ ಬಂದ ಮದ್ಯ ಪ್ರಿಯರು ಬಳಿಕ ನಿರಾಸೆಗೊಂಡ ಘಟನೆ ಕಡೂರು ತಾಲೂಕಿನ ಯಗಟಿ ಬಳಿಯ ಯಳ್ಳಂಬಳಸೆ ಗ್ರಾಮದಲ್ಲಿ ನಡೆದಿದೆ. ಜನ ಎಷ್ಟರ ಮಟ್ಟಿಗೆ ಎಣ್ಣೆ-ಎಣ್ಣೆ ಅಂತಿದ್ದಾರೆ ಅಂದ್ರೆ ಬೆಳಗೆದ್ದು ದೇವರ ಮುಖ ನೋಡ್ತಾರೋ ಇಲ್ವೋ ಗೊತ್ತಿಲ್ಲ. ಆದರೆ ಎಣ್ಣೆ ಅಂಗಡಿ ಓಪನ್ ಆಗುತ್ತಾ, ಸಿಎಂ ಏನಾದರೂ ಹೇಳ್ತಾರಾ ಅಂತ ಟಿವಿ ಹಾಕುವಂತಹ ಸ್ಥಿತಿ ನಿರ್ಮಾಣವಾಗಿದೆ. ಹೀಗಿರುವಾಗ ಯಗಟಿ ಬಳಿ ಓರ್ವ ಎಣ್ಣೆ ಅಂಗಡಿ …

Read More »

ಕೊರೊನಾ ಭೀತಿ ನಡುವೆ ಆಸ್ತಿಗಾಗಿ ಕಿತ್ತಾಟ ನಡೆದಿದ್ದು, ಕೊಲೆ………….

ಚಿಕ್ಕಮಗಳೂರು: ಕೊರೊನಾ ಭೀತಿ ನಡುವೆ ಆಸ್ತಿಗಾಗಿ ಕಿತ್ತಾಟ ನಡೆದಿದ್ದು, ಕೊಲೆಯಲ್ಲಿ ಅಂತ್ಯವಾದ ಘಟನೆ ಮೂಡಿಗೆರೆ ತಾಲೂಕಿನಲ್ಲಿ ನಡೆದಿದೆ. ಮೂಡಿಗೆರೆ ತಾಲೂಕಿನ ಚೇಗು ಗ್ರಾಮದ ನಿವಾಸಿ ಮಂಜಯ್ಯ (58) ಮೃತ ದುರ್ದೈವಿ. ಲಕ್ಷ್ಮಣ ಕೊಲೆಗೈದ ಆರೋಪಿ. ಸೋಮವಾರ ರಾತ್ರಿ ಘಟನೆ ನಡೆದಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ತೋಟದ ವಿಚಾರವಾಗಿ ಮಂಜಯ್ಯ ಹಾಗೂ ಲಕ್ಷ್ಮಣ ಸಹೋದರರ ನಡುವೆ ಕಳೆದ ಕೆಲವು ದಿನಗಳಿಂದ ಜಗಳ ನಡೆದಿತ್ತು. ಈ ವಿಚಾರವಾಗಿ ಸೋಮವಾರವೂ ಸಹೋದರರು ಪರಸ್ಪರ ಗಲಾಟೆ …

Read More »

10 ಮಂದಿಯ ಸಮ್ಮುಖದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಜೋಡಿ……..

ಚಿಕ್ಕಮಗಳೂರು: ಕೊರೊನಾ ಆತಂಕ ಹಾಗೂ ಸರ್ಕಾರದ ಆದೇಶದ ಹಿನ್ನೆಲೆಯಲ್ಲಿ ಜಿಲ್ಲೆಯ ಮೂಡಿಗೆರೆ ತಾಲೂಕಿನಲ್ಲಿ ಕೇವಲ 10 ಮಂದಿಯ ಸಮ್ಮುಖದಲ್ಲಿ ಸರಳವಾದ ಮದುವೆಯೊಂದು ನಡೆದಿದೆ. ಮೂಡಿಗೆರೆ ತಾಲೂಕಿನ ಬೈದುವಳ್ಳಿ ಗ್ರಾಮದ ರಂಜಿತ್ ಹಾಗೂ ಮೇಘ ಮದುವೆ ಇಂದು ಮೂಡಿಗೆರೆ ನಗರದ ರೈತ ಭವನದಲ್ಲಿ ನಿಶ್ಚಯವಾಗಿತ್ತು. ಆದರೆ ಕೊರೊನಾ ಆತಂಕದಿಂದ ದೇಶವೇ ಲಾಕ್‍ಡೌನ್ ಆಗಿದೆ. ಅಲ್ಲದೇ ಮದುವೆ, ಸಭೆ, ಸಮಾರಂಭಗಳಿಗೆ ಸರ್ಕಾರ ಅವಕಾಶ ನೀಡದ ಹಿನ್ನೆಲೆಯಲ್ಲಿ ಈ ಜೋಡಿ ಬೈದುವಳ್ಳಿ ಗ್ರಾಮದಲ್ಲಿನ ಈಶ್ವರ …

Read More »