Breaking News
Home / ಅಂತರಾಷ್ಟ್ರೀಯ (page 28)

ಅಂತರಾಷ್ಟ್ರೀಯ

ಸಾವಿನಲ್ಲೂ ಸಾರ್ಥಕತೆ ಮೆರೆದ ಮಹಿಳೆ; ಅಂಗಾಂಗ ದಾನ ಮಾಡಿ ಮೂವರ ಬಾಳಿಗೆ ಬೆಳಕಾದ ಕಮಲವ್ವ

ಬೆಳಗಾವಿ: ಧಾರವಾಡದ ಕೃಷಿ ವಿಶ್ವವಿದ್ಯಾಲಯದ ಹತ್ತಿರ ಸಂಭವಿಸಿದ ರಸ್ತೆ ಅಪಘಾತದಲ್ಲಿ ತೀವ್ರ ಗಾಯಗೊಂಡು ಎಸ್ ಡಿ ಎಂ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೆಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮೆದಳು ನಿಷ್ಕ್ರೀಯಗೊಂಡು ಜೀವನ್ಮರಣದ ನಡುವೆ ಹೋರಾಡುತ್ತಿದ್ದ ಎತ್ತಿನಗುಡ್ಡ ಗ್ರಾಮದ 48 ವರ್ಷದ ಕಮಲವ್ವ ಕೆಲಗೇರಿ ಅವರು ತಮ್ಮ ಅಂಗಾಂಗಳನ್ನು ದಾನ ಮಾಡಿ ಮೂವರ ಜೀವ ಉಳಿಸಿ ಸಮಾಜಕ್ಕೆ ಪ್ರೇರಣಾದಾಯಿಯಾಗಿದ್ದಾರೆ.   ಕಮಲವ್ವ ಅವರ ಒಂದು ಕಿಡ್ನಿಯನ್ನು ಬೆಳಗಾವಿಯ ಕೆಎಲ್‌ಇ ಸಂಸ್ಥೆಯ ಡಾ. …

Read More »

ಗೋಕಾಕದಲ್ಲಿಂದು ಗೋಕಾಕ ಮತ್ತು ಮೂಡಲಗಿ ತಾಲೂಕು ಮಟ್ಟದ ಅಧಿಕಾರಿಗಳ ಸಭೆ ನಡೆಸಿದ ಬಾಲಚಂದ್ರ ಜಾರಕಿಹೊಳಿ

  *ಗೋಕಾಕ*: ಪ್ರಸಕ್ತ ಸನ್ನಿವೇಶದಲ್ಲಿ ಪ್ರವಾಹ ಭೀತಿ ಇಲ್ಲದಿದ್ದರೂ ಪಶ್ಚಿಮ ಘಟ್ಟದಲ್ಲಿ ಸುರಿಯುತ್ತಿರುವ ಸತತ ಮಳೆಯಿಂದಾಗಿ ಪ್ರವಾಹ ಎದುರಾದರೂ ಅದನ್ನು ಸಮರ್ಥವಾಗಿ ಎದುರಿಸಲು ಈಗಿನಿಂದಲೇ ಅಧಿಕಾರಿಗಳು ಮುಂಜಾಗ್ರತಾ ಕ್ರಮವಾಗಿ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುವಂತೆ ಕೆಎಂಎಫ್ ಅಧ್ಯಕ್ಷ ಹಾಗೂ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು. ಇಲ್ಲಿಯ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಸಂಜೆ ಜರುಗಿದ ಗೋಕಾಕ ಮತ್ತು ಮೂಡಲಗಿ ತಾಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, …

Read More »

ಚಂದ್ರಶೇಖರ್ ಗುರೂಜಿ ಹತ್ಯೆ ಕೇಸ್;ಮರಣೋತ್ತರ ಪರೀಕ್ಷಾ ವರದಿ ಬಹಿರಂಗ

ಹುಬ್ಬಳ್ಳಿ: ಸರಳವಾಸ್ತು ಖ್ಯಾತಿಯ, ವಾಸ್ತು ತಜ್ಞ ಡಾ.ಚಂದ್ರಶೇಖರ್ ಗುರೂಜಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತ ದೇಹದ ಮರಣೋತ್ತರ ಪರೀಕ್ಷೆ ಮುಕ್ತಾಯಗೊಂಡಿದ್ದು, ವರದಿ ಬಹಿರಂಗವಾಗಿದೆ. ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯ ವಿಧಿವಿಜ್ಞಾನ ವಿಭಾಗದ ಡಾ.ಸುನೀಲ್ ಬಿರಾದಾರ್ ನೇತೃತ್ವದಲ್ಲಿ ಚಂದ್ರಶೇಖರ್ ಗುರೂಜಿ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ವರದಿಯಲ್ಲಿ ಗುರೂಜಿಯವರಿಗೆ ಬರೋಬ್ಬರಿ 42 ಬಾರಿ ಚಾಕುವಿನಿಂದ ಇರಿದ ಬಗ್ಗೆ ಮಾಹಿತಿ ಲಭ್ಯವಾಗಿದೆ. ಚಂದ್ರಶೇಖರ್ ಗುರೂಜಿ ಕುತ್ತಿಗೆಯ ಭಾಗದಲ್ಲಿ ಎರಡು ಕಡೆ ಇರಿದ ಗುರುತು ಪತ್ತೆಯಾಗಿದ್ದು, …

Read More »

ಬೆಳಗಾವಿಗೆ ಇಂದು ಹಲವು ಸಚಿವರು ನಿಪ್ಪಾಣಿಯಲ್ಲಿ ಜ್ಯೋತಿ ಪ್ರಸಾದ ಜೊಲ್ಲೆ ವಿವಾಹ ಸಮಾರಂಭ

ಬೆಳಗಾವಿ: ಕುಂದಾನಗರಿ ಬೆಳಗಾವಿ ಜಿಲ್ಲೆಗೆ ಇಂದು ಸಚಿವರ ದಂಡೆ ಆಗಮಿಸಲಿದೆ. ಗೃಹ ಸಚಿವ ಅರಗ ಜ್ಞಾನೇಂದ್ರ, ಉನ್ನತ ಶಿಕ್ಷಣ ಸಚಿವ ಅಶ್ವತ್ಥನಾರಾಯಣ ಸೇರಿದಂತೆ ಹಲವು ಸಚಿವರು ಆಗಮಿಸಲಿದ್ದಾರೆ. ಮುಜರಾಯಿ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಹಾಗೂ ಸಂಸದ ಅಣ್ಣಾಸಾಹೇಬ ಜೊಲ್ಲೆ ಪುತ್ರ ಜ್ಯೊತಿ ಪ್ರಾಸಾದ್ ಜೊಲ್ಲೆ ಅವರ ವಿವಾಹ ಸಮಾರಂಭದ ಆರತಕ್ಷತೆ ಕಾರ್ಯಕ್ರಮ ಇಂದು ನಿಪ್ಪಾಣಿಯಲ್ಲಿ ನಡೆಯಲಿದ್ದು, ರಾಜ್ಯ ಸರ್ಕಾರದ ಸಚಿವರು, ಶಾಸಕರು ಕಾರ್ಯಕ್ರಮದಲ್ಲಿ ಭಾಗವಹಿಸಿ ವಧು-ವರರಿಗೆ ಶುಭ ಹಾರೈಸಲಿದ್ದಾರೆ. …

Read More »

ಸಹಾಯಧನ ಚೇಕ್ ವಿತರಿಸಿದ ಶಾಸಕ ರಮೇಶ ಜಾರಕಿಹೊಳಿ.!

ಸಹಾಯಧನ ಚೇಕ್ ವಿತರಿಸಿದ ಶಾಸಕ ರಮೇಶ ಜಾರಕಿಹೊಳಿ.!     ಗೋಕಾಕ: ಆಕಸ್ಮೀಕ ಸಿಡಿಲು ಬಡಿದು ಮೃತಪಟ್ಟ ಜಾನುವಾರು ಮಾಲಕಿ ನಾಗವ್ವ ಪರಸನ್ನವರ ಅವರಿಗೆ ಶಾಸಕ ರಮೇಶ ಜಾರಕಿಹೊಳಿ ಬುಧವಾರದಂದು ತಮ್ಮ ಗೃಹ ಕಚೇರಿಯಲ್ಲಿ ೩೦ಸಾವಿರ ರೂಗಳ ಚೇಕ್ ವಿತರಣೆ ಮಾಡಿದರು. ಈ ಸಂದರ್ಭದಲ್ಲಿ ತಹಶೀಲ್ದಾರ ಪ್ರಕಾಶ ಹೊಳೆಪ್ಪಗೋಳ, ಮಾಜಿ ಜಿಪಂ ಸದಸ್ಯ ಟಿ ಆರ್ ಕಾಗಲ, ಗ್ರಾಮ ಲೆಕ್ಕಾಧಿಗಳು ಇದ್ದರು.

Read More »

ಕಾರು-ಕಂಟೇನರ್ ಮುಖಾಮುಖಿ ಡಿಕ್ಕಿ: ಕಾರು ಚಾಲಕ ಸಹಿತ ಸ್ಥಳದಲ್ಲೇ ಇಬ್ಬರ ಸಾವು, ನಾಲ್ವರಿಗೆ ಗಂಭೀರ ಗಾಯ

ಖಾನಾಪುರ: ಖಾನಾಪುರ ಪೊಲೀಸ್ ಠಾಣೆ ವ್ಯಾಪ್ತಿಯ ನಾಗರಾಳಿ ಬಳಿ ಕಾರು-ಕಂಟೇನರ್ ಮುಖಾಮುಖಿ ಡಿಕ್ಕಿಯಾಗಿ ಕಾರು ಚಾಲಕ ಸಹಿತ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು ನಾಲ್ವರು ಗಂಭೀರ ಗಾಯಗೊಂಡಿದ್ದಾರೆ.       ಧಾರವಾಡ ಜಿಲ್ಲೆಯ ಅಳ್ನಾವರ ಪಟ್ಟಣದ ಕಾರು ಚಾಲಕ ಸಾಗರ ಬಿಡಕರ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತಪಟ್ಟ ಇನ್ನೊಬ್ಬ ಬಾಲಕನಾಗಿದ್ದು ಹೆಸರು ತಿಳಿದುಬರಬೇಕಿದೆ. ಅಳ್ನಾವರದ ಗಿರೀಶ್ ನಾಂದೋಲ್ಕರ್, ವೀರಣ್ಣ ಕೋಟಾರಶೆಟ್ಟಿ, ರೇಮಾಕಾಂತ ಪಾಲ್ಕರ್, ವಿಠ್ಠಲ ಕಾಕಡೆ ಅವರಿಗೆ ಗಂಭೀರ ಗಾಯಗಳಾಗಿವೆ.   …

Read More »

2022ರ ವಿಧಾನಸಭೆ ಚುನಾವಣೆ ಮಾಜಿ ಸಿಎಂ ಸಿದ್ದರಾಮಯ್ಯ ಸವದತ್ತಿ ಯಿಂದ ಸ್ಪರ್ಧೆ ?

ಬೆಳಗಾವಿ: 2023ರ ವಿಧಾನಸಭೆ ಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸ ಹೆಚ್ಚಿರುವ ವಿಧಾನಸಭೆ ಕ್ಷೇತ್ರಗಳ ಮೇಲೆ ಕಾಂಗ್ರೆಸ್‌ನ ಕೆಲವು ಪ್ರಮುಖ ನಾಯಕರು ಕಣ್ಣಿಟ್ಟಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಸೇರಿದಂತೆ ಕೆಲವು ಕಾಂಗ್ರೆಸ್ ನಾಯಕರು ತಾವು ಈಗ ಶಾಸಕರಾಗಿರುವ ಕ್ಷೇತ್ರವನ್ನು ಮುಂದಿನ ಚುನಾವಣೆಯಲ್ಲಿ ಉಳಿಸಿಕೊಳ್ಳಲು ಸಮರ್ಥರಿದ್ದರೂ ಕೂಡ ಕ್ಷೇತ್ರ ಬದಲಾಯಿಸಬಹುದು ಎಂಬ ಮಾತುಗಳು ಕೇಳಿಬರುತ್ತಿವೆ. ಕಳೆದ ಮೂರು ಚುನಾವಣೆಗಳಲ್ಲಿ ಬಿಜೆಪಿಯ ಆನಂದ್ ಮಾಮ್ನಿ ಗೆದ್ದಿರುವ ಪಕ್ಷದ ಮತಗಳ …

Read More »

ಪಕ್ಷ ಸಂಘಟನೆಗೆ ಸಾಮಾಜಿಕ ಜಾಲತಾಣ ಸದ್ಬಳಕೆ ಅಗತ್ಯ: ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್‌ ಜಾರಕಿಹೊಳಿ

    ಘಟಫ್ರಭ: ಸಾಮಾಜಿಕ ಜಾಲತಾಣ ಸದ್ಬಳಕೆ ಮಾಡಿಕೊಂಡು ಕಾಂಗ್ರೆಸ್‌ ಪಕ್ಷವನ್ನು ತಳ ಮಟ್ಟದಲ್ಲಿ ಸಂಘಟಿಸಲು ಆದ್ಯತೆ ನೀಡಬೇಕೆಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ್‌ ಜಾರಕಿಹೊಳಿ ಅವರು ಹೇಳಿದರು.   ಪಟ್ಟಣದ ಡಾ. ಎನ್.ಎಸ್.‌ ಹರ್ಡೇಕರ್‌ ತರಬೇತಿ ಕೇಂದ್ರದಲ್ಲಿ ಚಿಕ್ಕೋಡಿ ಜಿಲ್ಲಾ ಕಾಂಗ್ರೆಸ್‌ ಹಮ್ಮಿಕೊಂಡಿದ್ದ ನವ ಸಂಕಲ್ಪ ಚಿಂತನಾ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ಸಾಮಾಜಿಕ ಜಾಲತಾಣಗಳು ದೇಶ-ವಿದೇಶಗಳಲ್ಲಿನ ಬೆಳೆವಣಿಗೆಗಳನ್ನು ಸೆಂಕೆಂಡ್‌ಗಳಲ್ಲಿ ಜನಸಾಮಾನ್ಯರಿಗೆ ತಲುಪಿಸಿ ಅವರ ನಡುವೆ ಸಂವಹನ ಸಾಮರ್ಥ್ಯ‌ವನ್ನು …

Read More »

40 ದಿನ ಬೆಳಗಾವಿ, ಬಳ್ಳಾರಿ ಜೈಲಿನಲ್ಲಿದ್ದ ಏಕನಾಥ ಶಿಂಧೆ!

ಬೆಳಗಾವಿ: ಅತ್ಯಂತ ತಳಮಟ್ಟದಿಂದ ಬದುಕು ಆರಂಭಿಸಿ ಇಂದು ಮಹಾರಾಷ್ಟ್ರದ ಮುಖ್ಯಮಂತ್ರಿ ಸ್ಥಾನದವರೆಗೂ ಪಯಣ ಬೆಳೆಸಿರುವ ಏಕನಾಥ ಶಿಂದೆ ತಮ್ಮ ಹೋರಾಟದ ಬದುಕಿನಲ್ಲಿ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಸುಮಾರು 40 ದಿನಗಳ ಕಾಲ ಬೆಳಗಾವಿಯ ಹಿಂಡಲಗಾ ಹಾಗೂ ಬಳ್ಳಾರಿ ಜೈಲಿನಲ್ಲಿ ಕಳೆದಿದ್ದರು.   1985 ರಲ್ಲಿ ಭುಗಿಲೆದ್ದಿದ್ದ ಕರ್ನಾಟಕ- ಮಹಾರಾಷ್ಟ್ರ ಗಡಿ ವಿವಾದದ ದಳ್ಳುರಿ ಬೆಳಗಾವಿಯನ್ನು ಅಕ್ಷರಶಃ ಬೆಂಕಿಯುಂಡೆಯಾಗಿಸಿತ್ತು. ಈ ವೇಳೆ ಬೆಳಗಾವಿಯಲ್ಲಿ ಶರದ್ ಪವಾರ್ ನೀಡಿದ ಕರೆಯಂತೆ ನಡೆದ ಗಡಿ …

Read More »

ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಸಾವನ್ನೇ ಬಯಸಿದರಾ ಮಾಜಿ ಶಾಸಕ?

ಹಾಸನ: ರಾಜಕಾರಣಿಗಳು ವಾಗ್ದಾಳಿ ನಡೆಸುವ ಬರದಲ್ಲಿ ಮಾತಿನ ನಿಯಂತ್ರಣ ಕಳೆದುಕೊಳ್ಳುತ್ತಾರೆ ಎಂಬುದು ಪದೇ ಪದೇ ಗೋಚರಿಸುತ್ತಿರುತ್ತದೆ. ಆದರೆ ಅದು ಮಾಜಿ ಪ್ರಧಾನಿಯೊಬ್ಬರ ಸಾವನ್ನು ಬಯಸುವ ಮಟ್ಟಕ್ಕೆ ಹೋಗುತ್ತದೆ ಎಂಬುದು ವಿಪರ್ಯಾಸ. ಇಂಥದ್ದೊಂದು ವಿವಾದವನ್ನು ಸೃಷ್ಟಿಸಿದ್ದಾರೆ ಮಾಜಿ ಶಾಸಕ ಕೆ.ಎನ್.ರಾಜಣ್ಣ.   ಸಮಾರಂಭವೊಂದರಲ್ಲಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌರ‍ದ ವಿರುದ್ಧ ವಾಗ್ದಾಳಿ ನಡೆಸಿದ ಮಾಜಿ ಶಾಸಕ ಕೆ.ಎನ್ ರಾಜಣ್ಣ, ಪರೋಕ್ಷವಾಗಿ ದೇವೇಗೌಡರ ಸಾವಿನ ಬಗ್ಗೆ ಮಾತನಾಡಿದ್ದು, ಜನಾಕ್ರೋಶಕ್ಕೆ ಗುರಿಯಾಗಿದ್ದಾರೆ.   ಹೆಚ್.ಡಿ.ದೇವೇಗೌಡರು ಈಗಾಗಲೇ …

Read More »