Breaking News
Home / new delhi / ತಮಿಳುನಾಡಿನ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿದ ಅಣ್ಣಾಮಲೈ ಸಂದರ್ಶನ

ತಮಿಳುನಾಡಿನ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿದ ಅಣ್ಣಾಮಲೈ ಸಂದರ್ಶನ

Spread the love

ಚೆನ್ನೈ: ಮಾಜಿ ಐಪಿಎಸ್​ ಅಧಿಕಾರಿ ಅಣ್ಣಾಮಲೈ ರಾಜಕೀಯ ಸೇರುವುದಂತೂ ಪಕ್ಕಾ ಆಗಿದೆ. ಅದಕ್ಕೂ ಮುನ್ನ ತನ್ನೂರು ಕರೂರಿನಲ್ಲಿ ಜನರೊಂದಿಗೆ ಬೆರೆತು ವಿವಿಧ ಚಟುವಟಿಕಗೆಳಲ್ಲಿ ಅವರು ತೊಡಗಿಕೊಂಡಿದ್ದಾರೆ. ರೈತರ ಕಲ್ಯಾಣಕ್ಕಾಗಿ ಯೋಜನೆಗಳನ್ನು ರೂಪಿಸಿದ್ದಾರೆ.

ಇತ್ತೀಚೆಗೆ ತಮಿಳು ವಾಹಿನಿಯೊಂದಕ್ಕೆ ಅವರ ನೀಡಿರುವ ಸಂದರ್ಶನ ತಮಿಳುನಾಡಿನ ರಾಜಕೀಯದಲ್ಲಿಯೇ ಸಂಚಲನ ಸೃಷ್ಟಿಸಿದೆ. ಪ್ರಧಾನಿ ನರೇಂದ್ರ ಮೋದಿ ಕೈಗೊಂಡ ಅಪಮೌಲ್ಯೀಕರಣವನ್ನು ಶ್ಲಾಘಿಸಿದ್ದಾರೆ. ಪ್ರಧಾನಿ ಕಚೇರಿಯನ್ನು ಸಾರ್ವಜನಿಕರ ಸಂಪರ್ಕಕಕ್ಕೂ ಲಭ್ಯವಾಗುವಂತೆ ಮಾಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಮೋದಿ ಆಡಳಿತವನ್ನು ಮೆಚ್ಚಿದ್ದು ಸಹಜವಾಗಿಯೇ ದ್ರಾವಿಡ ಪಕ್ಷಗಳ ಕೆಂಗಣ್ಣಿಗೆ ಕಾರಣವಾಗಿದೆ.

ಮೊದಲೆಲ್ಲ ಪ್ರಧಾನಿ ಕಚೇರಿಯನ್ನು ಸಂಪರ್ಕಿಸಬೇಕೆಂದು 2-3 ಲಕ್ಷ ರೂ.

ಬೇಕಾಗುತ್ತಿತ್ತು. 2014ರ ಬಳಿಕ ಮೋದಿ ಇದನ್ನು ತೊಡೆದು ಹಾಕಿದ್ದಾರೆ. ಇದು ಒಬ್ಬ ಸಾಮಾನ್ಯ ವ್ಯಕ್ತಿಯಿಂದಾಗುವ ಕೆಲಸವಲ್ಲ. ಆದರೆ, ಇದನ್ನು ಮೋದಿ ಬಹಳ ಕ್ಷಮತೆಯಿಂದ ಮಾಡಿದ್ದಾರೆ. ದೇಶದ ಅಭಿವೃದ್ಧಿಗೆ ಅವರು ಹೊಂದಿರುವ ವಿಶಾಲ ದೃಷ್ಟಿಕೋನದ ಕಾರಣದಿಂದಾಗಿ ಅವರನ್ನು ಗೌರವಿಸುತ್ತೇನೆ ಎಂದು ಅಣ್ಣಾಮಲೈ ಹೇಳಿದ್ದಾರೆ.

ಶಾಂಘೈಗೆ 100 ಕಿ.ಮೀ ಗಿಂತಲೂ ಹತ್ತಿರದಲ್ಲಿ ಅಮೆರಿಕ ಯುದ್ಧ ವಿಮಾನ ಹಾರಾಟ; ಅಚ್ಚರಿ ಮೂಡಿಸಿದ ದೊಡ್ಡಣ್ಣನ ನಡೆ

ನೋಟು ರದ್ಧತಿಯಿಂದಾಗಿ ಅಲ್ಪಕಾಲದ ತೊಂದರೆ ಎದುರಾದರೂ ದೀರ್ಘಕಾಲದ ಪ್ರಯೋಜನವನ್ನು ಮನಗಂಡು ಇಂಥ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸಮರ್ಥಿಸಿಕೊಂಡಿದ್ದಾರೆ.

ಸಿಎಎ, ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನದ ರದ್ಧತಿ ಮೊದಲಾದ ಕಾರಣಗಳಿಗಾಗಿ ದೇಶಾದ್ಯಂತ ನಡೆದ ಪ್ರತಿಭಟನೆಗಳಿಗೆ ಸಾಮಾಜಿಕ ಜಾಲತಾಣದ ಹೆಚ್ಚಿದ ಬಳಕೆಯೇ ಕಾರಣ ಎಂದು ಅಣ್ಣಾಮಲೈ ವಿಶ್ಲೇಷಿಸಿದ್ದಾರೆ. ಭಾರತದಲ್ಲಿ ಇವುಗಳ ಬಳಕೆ ಹೆಚ್ಚಾಗಿದೆ. ಅಂತೆಯೇ, ಫ್ರಾನ್ಸ್​, ಹಾಂಗ್​ಕಾಂಗ್​ ಹಾಗೂ ಚೀನಾದಲ್ಲೂ ಭಾರಿ ಪ್ರಮಾಣದ ಪ್ರತಿಭಟನೆಗಳು ನಡೆದಿವೆ. ಪ್ರತಿಭಟನೆಗಳ ಆಧಾರದಲ್ಲಿ ದೇಶವನ್ನು ಮುನ್ನಡೆಸುವುದು ಕಷ್ಟಸಾಧ್ಯ ಎಂದರು.

ಜನರಿಗೆ ಬಿಡುವೇ ಇಲ್ಲದಂತಾಗಿದ್ದರೆ, ಗುಂಪಿಗೆ ನಾಯಕನೇ ಇಲ್ಲದ ಸ್ಥಿತಿ ಉಂಟಾಗಿದೆ ಎಂದಿರುವ ಅಣ್ಣಾಮಲೈ, ತಮಿಳುನಾಡು ಸಿಎಂ ಎಡಪ್ಪಾಡಿ ಕೆ. ಪಳನಿಸ್ವಾಮಿ ಹಾಗೂ ಎಂ.ಕೆ. ಸ್ಟಾಲಿನ್​ ಬಗ್ಗೆಯೂ ಮೆಚ್ಚುಗೆಯ ಮಾತನಾಡಿದ್ದಾರೆ.

ಕೋವಿಡ್​ ಕಾಲದಲ್ಲಿ ಚಿಕ್ಕಮಕ್ಕಳಲ್ಲಿ ಕಾಣಿಸಿಕೊಳ್ಳುತ್ತಿದೆ ಹೊಸದೊಂದು ಕಾಯಿಲೆ? ಪಾಲಕರ ಚಿಂತೆಗೀಡು ಮಾಡಿದೆ ಕರೊನಾ

ರಜನಿಕಾಂತ್​ ಜತೆ ಸಂಪರ್ಕ: ಹೊಸ ರಾಜಕೀಯ ಪಕ್ಷವೊಂದನ್ನು ಘೋಷಿಸಲಿರುವ ಸೂಪರ್​ಸ್ಟಾರ್​ ರಜನಿಕಾಂತ್​ ಜತೆ ಸಂಪರ್ಕದಲ್ಲಿದ್ದೀರಾ ಎಂಬ ಪ್ರಶ್ನೆಗೆ ಸ್ಪಷ್ಟ ಉತ್ತರ ನೀಡದ ಅಣ್ಣಾಮಲೈ, ರಜನಿಕಾಂತ್ ಪರ್ಯಾಯ ವೇದಿಕೆಯೊಂದನ್ನು ಒದಗಿಸುತ್ತಿದ್ದಾರೆ. ಅವರಿಗೆ ನಾವು ಸಹಕಾರ ನೀಡಬೇಕಿದೆ ಎಂದು ಉತ್ತರಿಸಿದರು.

ಈ ಎಲ್ಲ ಹೇಳಿಕೆಗಳಿಂದಾಗಿ ದ್ರಾವಿಡ ಪಕ್ಷಗಳೊಂದಿಗೆ ನಂಟು ಹೊಂದಿರುವ ಕೆಲ ಸಂಘಟನೆಗಳು ಅಣ್ಣಾಮಲೈ ಅವರನ್ನು ‘ಹೊಸ ಸಂಘಿ’ ‘ಸಂಘಿ ಅಣ್ಣಾಮಲೈ’ಎಂದೇ ಕರೆದಿವೆ. ಇದಕ್ಕೆ ಕಾರಣವಿಲ್ಲದಿಲ್ಲ. ತಮಿಳುನಾಡಿನಲ್ಲಿ ಸಂಬಳ ಹಾಗೂ ಪಿಂಚಣಿಗಾಗಿ 85 ಸಾವಿರ ಕೋಟಿ ರೂ. ಖರ್ಚು ಮಾಡಲಾಗುತ್ತಿದೆ ಎಂಬುದನ್ನು ಪ್ರಶ್ನಿಸಿದ್ದಕ್ಕೆ ಈ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ. ಜತೆಗೆ, ಕರ್ನಾಟಕದಲ್ಲಿ ದಕ್ಷ ಕರ್ತವ್ಯ ನಿರ್ವಹಿಸಿದ ಅಣ್ಣಾಮಲೈ ಪರ ದೊಡ್ಡ ಅಭಿಮಾನ ವರ್ಗವೂ ಹುಟ್ಟಿಕೊಂಡಿದೆ.

ಕರೊನಾ ಲಸಿಕೆಗೆ ಜಗತ್ತಿನ ಅತಿ ದೊಡ್ಡ ಕ್ಲಿನಿಕಲ್​ ಟ್ರಯಲ್​; 30 ಸಾವಿರ ಜನರ ಮೇಲೆ ಪ್ರಯೋಗ


Spread the love

About Laxminews 24x7

Check Also

ಗಟ್ಟಿಯಾಗಿ ಬಿಜೆಪಿಗೆ ವೋಟ್ ಮಾಡಿ, ಕಾಂಗ್ರೆಸ್ಸಿಗರ ಸುಳ್ಳು ವದಂತಿಗಳನ್ನು ನಂಬಬೇಡಿ- ಶಾಸಕ ಬಾಲಚಂದ್ರ ಜಾರಕಿಹೊಳಿ

Spread the love  ಬೆಳಗಾವಿಗೆ ಬೆಂಗಳೂರು ಸ್ಥಾನಮಾನಕ್ಕೆ ಪ್ರಯತ್ನ- ಜಗದೀಶ ಶೆಟ್ಟರ್ ಮೂಡಲಗಿಯಲ್ಲಿ ಬಿಜೆಪಿ ಪ್ರಚಾರ ಸಭೆಯಲ್ಲಿ ಶೆಟ್ಟರ್ ಪರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ