Breaking News
Home / new delhi / ಕೊಲೆ, ಸುಲಿಗೆ, ಅಕ್ರಮ ಚಟುವಟಿಕೆಗಳೇ ತುಂಬಿದ್ದ ಗ್ರಾಮದಲ್ಲಿ ಈಗ ಶಿಕ್ಷಣ ಕ್ರಾಂತಿ, ಯಾವೂರದು?

ಕೊಲೆ, ಸುಲಿಗೆ, ಅಕ್ರಮ ಚಟುವಟಿಕೆಗಳೇ ತುಂಬಿದ್ದ ಗ್ರಾಮದಲ್ಲಿ ಈಗ ಶಿಕ್ಷಣ ಕ್ರಾಂತಿ, ಯಾವೂರದು?

Spread the love

ಬೆಳಗಾವಿ : ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ ಎಂಬ ದಾಸವಾಣಿ ಇದೆ.. ಈ ಮಾತು ನಿಜಕ್ಕೂ ಸತ್ಯ. ಜೀವನ ಅರ್ಥ ತಿಳಿಯಲು, ಗುರಿ ಸಾಧಿಸಲು ಗುರು ಬೇಕೆ ಬೇಕು. ಶಿಕ್ಷಕರು ಪ್ರತಿಯೊಬ್ಬರ ಜೀವನದಲ್ಲಿ ಮುಖ್ಯ ಪಾತ್ರ ವಹಿಸುತ್ತಾರೆ. ಅಂತಹ ಶಿಕ್ಷಕರ ತವರು ಎಂದು ಈ ಗ್ರಾಮ ಖ್ಯಾತಿ ಪಡೆದಿದೆ.
 ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನಲ್ಲಿರುವ ಈ ಇಂಚಲ ಗ್ರಾಮ ಶಿಕ್ಷಕರಿಂದಲೇ ರಾಜ್ಯದಲ್ಲಿ ಹೆಸರುವಾಸಿಯಾಗಿದೆ.

ಈ ಗ್ರಾಮದಲ್ಲಿ ಮನೆಗೆ ಒಬ್ಬರಂತೆ ಶಿಕ್ಷಕರಿದ್ದಾರೆ. ಕಳೆದ 45 ವರ್ಷದ ಹಿಂದೆ ಈ ಇಂಚಲ ಗ್ರಾಮದಲ್ಲಿ ಕೊಲೆ ಸುಲಿಗೆ ಅಕ್ರಮ ಚಟುವಟಿಕೆಗಳೇ ಹೆಚ್ಚಾಗಿತ್ತು.

ಇದನ್ನ ಕಂಡ ಇಂಚಲ ಮಠದ‌ ಶಿವಾನಂದ ಭಾರತಿ ಮಹಾಸ್ವಾಮಿಗಳು ಗ್ರಾಮದಲ್ಲಿ ಎಲ್ಲರೂ ವಿದ್ಯಾವಂತರಾದ್ರೇ ನೆಮ್ಮದಿ ನೆಲಸಬಹುದು ಅಂದುಕೊಂಡು ಶಿಕ್ಷಣ ಸಂಸ್ಥೆಯೊಂದನ್ನು ಪ್ರಾರಂಭಿಸುತ್ತಾರೆ. ಈಗ ಆ ವಿದ್ಯಾ ಸಂಸ್ಥೆಯಲ್ಲಿ ಓದಿದ ವಿದ್ಯಾರ್ಥಿಗಳು ಹೆಚ್ಚಾಗಿ ಶಿಕ್ಷಕ ವೃತ್ತಿಯನ್ನ ಮಾಡುತ್ತಿದ್ದಾರೆ.

900 ಕ್ಕೂ ಅಧಿಕ ಶಿಕ್ಷಕರಿದ್ದಾರೆ ಈ ಗ್ರಾಮದಲ್ಲಿದ್ದಾರೆ..
ಈ ಗ್ರಾಮದಲ್ಲಿ 10.000ಕ್ಕೂ ಅಧಿಕ ಜನಸಂಖ್ಯೆಯಿದ್ದು, ಒಂದು ಸಾವಿರಕ್ಕೂ ಹೆಚ್ಚು ಮನೆಗಳು ಇವೆ. ಇನ್ನು ಗ್ರಾಮದಲ್ಲಿ ಇಲ್ಲಿವರೆಗೂ ಸುಮಾರು 900 ಕ್ಕೂ ಹೆಚ್ಚು ಶಿಕ್ಷಕರಿದ್ದು, ಎಲ್ಲರೂ ಸರ್ಕಾರಿ ಶಿಕ್ಷಕರೇ ಎಂಬುದು ವಿಶೇಷವಾಗಿದೆ.

ಕೆಲವೊಂದು ಮನೆಗಳಲ್ಲಿ 12 ಮಂದಿಯೂ ಶಿಕ್ಷಕರಿದ್ದಾರೆ. ಇವರೆಲ್ಲಾ ಶಿಕ್ಷಣ ಇಲಾಖೆಯಲ್ಲಷ್ಡೆ ಸೇವೆ ಸಲ್ಲಿಸುತ್ತಿಲ್ಲ, 300ಕ್ಕೂ ಹೆಚ್ಚು ಯುವಕರು ಭಾರತೀಯ ಸೇನೆಯಲ್ಲಿಯೂ ಸೇವೆ ಸಲ್ಲಿಸುತ್ತಿದ್ದಾರೆ.

ಒಟ್ನಲ್ಲಿ, ಮಠಗಳು ಮನಸ್ಸು ಮಾಡಿದ್ರೆ ಸಮಾಜದಲ್ಲಿ ಏನೆಲ್ಲಾ ಬದಲಾವಣೆ ತರಬಹುದು ಎಂಬುದಕ್ಕೆ ಶಿವಾನಂದ ಭಾರತಿ ಮಹಾಸ್ವಾಮೀಜಿ ಅವರೆ ಸಾಕ್ಷಿ. ಇತರೆ ಮಠಗಳೂ ಇವರನ್ನ ಮಾದರಿಯಾಗಿ ಸ್ವೀಕರಿಸಿದ್ರೆ ಸಮಾಜದಲ್ಲೆಷ್ಟು ಬದಲಾವಣೆ ಬರಬಹುದಲ್ವಾ?


Spread the love

About Laxminews 24x7

Check Also

ಕೊಲೆಯಾದ ನೇಹಾ ಹಿರೇಮಠ ತಂದೆಗೆ ಪೊಲೀಸ್ ಭದ್ರತೆ

Spread the love ಹುಬ್ಬಳ್ಳಿ: ನೇಹಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿ, ಮೃತಳ ತಂದೆ ನಿರಂಜನಯ್ಯ ಹಿರೇಮಠ ಅವರಿಗೆ ಪೊಲೀಸ್ ಭದ್ರತೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ