ಬೆಂಗಳೂರು: ಸುಪ್ರೀಂಕೋರ್ಟ್ ವಕೀಲ ಸಂಕೇತ್ ಮಾತನಾಡಿದ್ದು, ಮೋದಿ ಮತ್ತು ಯಡಿಯೂರಪ್ಪ ವಿರುದ್ಧ ಹರಿಹಾಯ್ದಿದ್ದಾರೆ.
ಮೋದಿ ಕಾರ್ಯಕ್ರಮದಲ್ಲಿ ಸಿಎಂ ಯಡಿಯೂರಪ್ಪ ಐಡೆಂಟಿಟಿ ಕಾರ್ಡ್ ಹಾಕ್ಕೊಂಡಿದ್ದಾರೆ. ಯಡಿಯೂರಪ್ಪ ಸೆಕ್ಯೂರಿಟಿ ಗಾರ್ಡಾ..? ಯಾಕೇ ಮೋದಿ ಕಾರ್ಯಕ್ರಮ ದಲ್ಲಿ ಐಡೆಂಟಿಟಿ ಕಾರ್ಡ್ ಹಾಕ್ಕೋಬೇಕು..? ಒಂದು ರಾಜ್ಯದ ಸಿಎಂ , ಇಲ್ಲಿಗೆ ಬಂದಿರೋದು ಮೋದಿ. ಆ ಕಾರ್ಯಕ್ರಮದಲ್ಲಿ ಯಾಕೇ ಹಾಕಬೇಕು ಐಡೆಂಟಿಟಿ ಕಾರ್ಡ್? ನಮ್ಮ ಇಪ್ಪತ್ತೈದು ಜನ ಸಂಸದರು ನಾಮರ್ಧರು. ಮಾತಾನಾಡೋಕೆ ಬರಲ್ಲ ಎಂದು ಹರಿಹಾಯ್ದಿದ್ದಾರೆ.
ಅಲ್ಲದೇ, ಕಳ್ಸಿ ನಮ್ಮನ್ನು ಪಾಕಿಸ್ತಾನಕ್ಕೆ. ಅಲ್ಲಿಗೆ ಹೋಗಿ ಮತ್ತೆ ಸಿಎಎ ಪಡ್ಕೊಂಡು ಭಾರತಕ್ಕೆ ಬರ್ತೀವಿ. ಮಕ್ಕಳ ಎದುರಲ್ಲಿ ರಾಜಕೀಯ ಮಾತಾನಾಡೋ ಆಯೋಗ್ಯರು ನೀವು ಎಂದು ಬಿಜೆಪಿ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಪಂಕ್ಚರ್ ಪಂಕ್ಚರ್ ಅಂತಾ ಮಾತಾನಾಡ್ತೀರಾ. ನಮ್ ಸುದ್ದಿಗೆ ಬಂದ್ ನೋಡಿ. ಪಂಕ್ಚರ್ ನಾವ್ ಮಾಡ್ತೀವಿ ಎಂದು ವಕೀಲ ಸಂಕೇತ್, ತೇಜಸ್ವಿ ಸೂರ್ಯಾಗೆ ಟಾಂಗ್ ನೀಡಿದ್ದಾರೆ. ತ್ರಿವಳಿ ತಲಾಖ್ ತಂದ್ರಿ. ಆದ್ರೇ ನೀವು ನಿಮ್ಮಪತ್ನಿಗೆ ನಿರ್ವಹಣಾ ವೆಚ್ಚ ಕೊಟ್ರಾ ಮೋದಿಯವರೇ?ಎಂದು ಸಂಕೇತ್ ಪ್ರಧಾನಿಯನ್ನ ಪ್ರಶ್ನಿಸಿದ್ದಾರೆ.