ಬೆಂಗಳೂರು: ಪೌರತ್ವ ಕಾಯ್ದೆ(ಸಿಎಎ) ವಿರುದ್ಧ ರಾಜ್ಯದಲ್ಲಿ ಪ್ರತಿಭಟನೆ ಕಾವು ಇನ್ನೂ ಆರಿಲ್ಲ. ಪ್ರತಿದಿನವೂ ಪ್ರತಿಭಟನೆಗಳು ನಡೆಯುತ್ತಿದ್ದು, ಕಾಯ್ದೆಯ ವಿರೋಧದ ಬಗ್ಗೆ ಜನ ಪ್ರತಿಭಟನೆ ಮೂಲಕ ತಮ್ಮ ಆಕ್ರೋಶವನ್ನ ಹೊರ ಹಾಕುತ್ತಿದ್ದಾರೆ. ಇಂದು ಕೂಡ ಬೆಂಗಳೂರಿನಲ್ಲಿ ಸಿಎಎ ವಿರುದ್ಧ ಪ್ರತಿಭಟನೆ ಜೋರಾಗಿದ್ದು ನಗರದ 6 ಕಡೆ ಪ್ರತಿಭಟನೆ ನಡೆಯಲಿದೆ.
ಬೆಂಗಳೂರಿನಲ್ಲಿ 6 ಕಡೆ ಪ್ರತಿಭಟನೆ ನಡೆಯುತ್ತಿರುವ ಕಾರಣ ಇಂದು ಬೆಂಗಳೂರಿಗರಿಗೆ ಟ್ರಾಫಿಕ್ ಬಿಸಿ ಹೆಚ್ಚಾಗುವ ಸಾಧ್ಯತೆ ಇದೆ. ಶುಕ್ರವಾರ ಆಶಾ ಕಾರ್ಯಕರ್ತೆಯರ ಪ್ರೋಟೆಸ್ಟ್ ಮತ್ತು ಚಾಮರಾಜ ಪೇಟೆಯಲ್ಲಿ ನಡೆದ ಸಿಎಎ ಪ್ರತಿಭಟನೆಯಿಂದಾಗಿ ನಿನ್ನೆ ಟ್ರಾಫಿಕ್ ಸಮಸ್ಯೆಯಿಂದ ಸಿಲಿಕಾನ್ ಸಿಟಿ ಜನ ಹೈರಾಣಾಗಿದ್ರು. ಇಂದು ಸಹ ಅದೇ ಟ್ರಾಫಿಕ್ ಬಿಸಿ ತಟ್ಟುವ ಸಾಧ್ಯತೆ ಇದೆ. ಮೆಜೆಸ್ಟಿಕ್, ಟೌನ್ ಹಾಲ್, ಹೆಬ್ಬಾಳ, ಆರ್.ಟಿ ನಗರ, ಹೊಸೂರು ಸುತ್ತಮುತ್ತ ಟ್ರಾಫಿಕ್ ಸಮಸ್ಯೆ ಹೆಚ್ಚಾಗುವ ಸಾಧ್ಯತೆಗಳಿವೆ.
ಎಲ್ಲೆಲ್ಲಿ ಪ್ರತಿಭಟನೆ?:
* ಫ್ರೀಡಂಪಾರ್ಕ್ ನಲ್ಲಿ ಸತ್ಯಾಗ್ರಹ ಸಂಘಟನೆಯಿಂದ ಪ್ರತಿಭಟನೆ
* ಮಹಾರಾಣಿ ಕಾಲೇಜಿನಲ್ಲಿ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ವತಿಯಿಂದ ಸಿಎಎ ಕುರಿತು ಚರ್ಚೆ
* ಬನ್ನೇರುಘಟ್ಟ ಈದ್ಗಾ ಮೈದಾನದಲ್ಲಿ ಜಯನಗರ ಮಸೀದಿ ಫೆಡರೇಷನ್ ವತಿಯಿಂದ ಪ್ರತಿಭಟನೆ
* ಆರ್ ಟಿ ನಗರದ ಹೆಚ್ ಎಂಟಿ ಮೈದಾನದಲ್ಲಿ ಹೆಬ್ಬಾಳ ಸಾರ್ವಜನಿಕ ಶಾಂತಿ ಒಕ್ಕೂಟದಿಂದ ಪ್ರತಿಭಟನೆ
* ಹೊಸೂರು ರಸ್ತೆಯ ಮೈದಾನದಲ್ಲಿ ಕರ್ನಾಟಕ ಅಲ್ಪಸಂಖ್ಯಾತರ ಪೋರಂನಿಂದ ಪ್ರತಿಭಟನೆ
* ಸಂಜೆ ಟೌನ್ ಹಾಲ್ ಬಳಿ ಹಮ್ ಭಾರತ್ ಕೆ ಲೋಗೋ ಸಂಘಟನೆಯಿಂದ ಪ್ರತಿಭಟನೆ