Breaking News
Home / new delhi / ನಟಿ ಮೇಘನಾ ರಾಜ್ ನಿವಾಸದಲ್ಲಿ ಮನೆಮಾಡಿದ ಸಂಭ್ರಮ..!

ನಟಿ ಮೇಘನಾ ರಾಜ್ ನಿವಾಸದಲ್ಲಿ ಮನೆಮಾಡಿದ ಸಂಭ್ರಮ..!

Spread the love

ಚಂದನವನದ ಯುವ ಸಾಮ್ರಾಟ ಚಿರಂಜೀವಿ ಸರ್ಜಾ ಅಕಾಲಿಕ ಮರಣ ಅವರ ಇಡೀ ಕುಟುಣಬಕ್ಕೆ ಬರ ಸಿಡಿಲು ಬಡಿದಂತಾಗಿದೆ. ಚಿರು ಕಳೆದುಕೊಂಡು ನೋವಿನಲ್ಲಿರುವ ಕುಟುಂಬಸ್ಥರು ಸ್ವಲ್ಪ ಸ್ಲಲ್ಪವೇ ಚೇತರಿಸಿಕೊಂಡು ಸಹಜ ಜೀವನಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಮುದ್ದಾದ ಮಗುವಿನ ನಿರೀಕ್ಷೆಯಲ್ಲಿದ್ದ ಸ್ಯಾಂಡಲ್​ ವುಡ್​ ನ ಕ್ಯೂಟ್ ಜೋಡಿ, ಚಿರು ಹಾಗೂ ಮೇಘನಾ ರಾಜ್, ಮುಗುವಿನ ಮುಖನೋಡುವ ಮೊದಲೆ ಚಿರು ಸರ್ಜಾ ತುಂಬು ಗರ್ಭಣಿ ಮೇಘನಳನ್ನು ಒಬ್ಬಂಟಿ ಮಾಡಿ ಚಿರ ನಿದ್ರೆಗೆ ಜಾರಿದರು.

ಪ್ರೀತಿಯ ಪತಿ ಯಿಲ್ಲದೆ ಮೇಘನಾ ಪ್ರತಿ ದಿನ..ಕ್ಷಣ ಕ್ಷಣಕ್ಕೂ ಬಿಕ್ಕಳಿಸ್ತಿದ್ದಾರೆ. ನಿದ್ದೆಗಣ್ಣಿನಲ್ಲಿಯೂ ಚಿರು ಚಿರು ಅಂತ ಕನವರಿಸುತ್ತಿದ್ದಾರೆ.. ನೋವಿನ ಮಡುವಿನಲ್ಲಿ, ಚಿರು ನೆನಪಿನಲ್ಲಿ ದಿನ ಕಳೆಯುತ್ತಿರೋ ಮೇಘನಾರನ್ನು ಸ್ಯಾಂಡಲ್​ವುಡ್​ ನಟಿಮಣಿಯರು ಭೇಟಿ ನೀಡಿ ಸಾಂತ್ವಾನ ಹೇಳಿದ್ದಾರೆ.

ಚಿರಂಜೀವಿ ಸರ್ಜಾ ಸಾವಿನ ಸುದ್ದಿ ಇತ್ತಿಚೆಗೆ ಸಾಕಷ್ಟು ಚರ್ಚೆಯಾಗಿತ್ತು, ಈ ಆರೋಪ ಕೇಳಿ ಸರ್ಜಾ ಕುಟುಂಬದವರು ಹಾಗು ಮೇಘನಾ ಕುಗ್ಗಿ ಹೋಗಿದ್ರು ಹೀಗಾಗಿ ತುಂಬು ಗರ್ಭಿಣಿ ಯಾಗಿರೋ‌ ಮೇಘನಾರನ್ನು ಹಿರಿಯರ ನಟಿಯರು ಭೇಟಿ ಮಾಡಿ ಧೈರ್ಯ ತುಂಬಿದ್ದಾರೆ.

ಮೇಘನಾ ಮನೆಗೆ ತೆರಳಿದ ಶೃತಿ, ಸುಧಾರಣಿ ಮಾಳವಿಕ, ಮೇಘನಾ ಕುಟುಂಬದ ಜೊತೆ ಕಾಲ‌ ಕಳೆದಿದ್ದು, ಮೇಘನಾ ಸಂಭ್ರಮಕ್ಕೆ ಕಾರಣವಾಗಿದ್ದಾರೆ. ಸ್ಯಾಂಡಲ್‍ವುಡ್ ಹಿರಿಯ ತಾರೆಯರು ನಟ ಚಿರಂಜೀವಿ ಸರ್ಜಾ ಪತ್ನಿ, ನಟಿ ಮೇಘನಾ ರಾಜ್ ಅವರನ್ನು ಭೇಟಿ ಮಾಡಿ, ಕುಶಲೋಪಚರಿ ವಿಚಾರಿಸಿದ್ದಾರೆ. ಮಾಳವಿಕಾ ಅವಿನಾಶ್, ಸುಧಾರಾಣಿ, ಶೃತಿ ಹಾಗೂ ಶೃತಿ ಮಗಳು ಮಿಲಿ ಕೂಡ ಸುಂದರ್ ರಾಜ್ ಕುಟುಂಬದವರನ್ನ ಭೇಟಿ ಮಾಡಿ, ಪ್ರಮೀಳಾ ಮಾಡಿದ ಮಸಾಲಾ ದೋಸೆಯನ್ನು ಸವಿದಿದ್ದಾರೆ.

 

ಈ ಸುಂದರ ಕ್ಷಣಗಳನ್ನು ಸೆರೆಹಿಡಿದ ಫೋಟೋಗಳನ್ನು ಮಾಳವಿಕಾ ಅವಿನಾಶ್ ತಮ್ಮ ಟ್ವಿಟರ್​ನಲ್ಲಿ ಅಪ್​ಲೋಡ್ ಮಾಡಿ, ತಾಯಿಯಾಗುತ್ತಿರುವ ಮೇಘನಾ ಅವರನ್ನು ನಾವೆಲ್ಲ ಭೇಟಿಯಾದೆವು. ಇದೊಂದು ಹೃದಯಸ್ಪರ್ಶಿ ಕ್ಷಣವಾಗಿತ್ತು ಎಂದು ಭಾವನಾತ್ಮಕ ಸಾಲುಗಳನ್ನು ಬರೆದುಕೊಂಡಿದ್ದಾರೆ. ಈ ಫೋಟೋಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಹಲವು ಸಮಯವನ್ನು ಒಟ್ಟಿಗೆ ಕಳೆದ ಇವರು ಸ್ಯಾಂಡಲ್‍ವುಡ್ ಹಿರಿಯ ನಟಿಯರು ಮೇಘನಾ ಗೆ ಹೊಸ ಹುರುಪು ತುಂಬುವ ಯತ್ನ ಮಾಡಿದ್ದಾರೆ. ಪರಸ್ಪರ ಮಾತುಕತೆ ನಡೆಸಿ, ಮೇಘನಾ ಅವರ ಆರೋಗ್ಯ ವಿಚಾರಿಸಿ, ಕುಟುಂಬದೊಂದಿಗೆ ಕಾಲ ಕಳೆದು ಹರಟೆ ಹೊಡೆದಿದ್ದಾರೆ.


Spread the love

About Laxminews 24x7

Check Also

ಭೀಕರ ಅಪಘಾತದಲ್ಲಿ ಗಾಯಗೊಂಡ ಮಾಜಿ ಪೊಲೀಸ್ ಕಮಿಷನರ್ ಭಾಸ್ಕರ್ ರಾವ್

Spread the loveಭೀಕರ ಅಪಘಾತದಲ್ಲಿ ಗಾಯಗೊಂಡ ಮಾಜಿ ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಬೆಂಗಳೂರು, ಮೇ. 03 : ಬೆಂಗಳೂರಿನ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ