Breaking News
Home / ಜಿಲ್ಲೆ / ಬಳ್ಳಾರಿ / ಎಣ್ಣೆ ಮುಗಿತು ಈಗ ತಂಬಾಕಿಗೂ ಕ್ಯೂ!

ಎಣ್ಣೆ ಮುಗಿತು ಈಗ ತಂಬಾಕಿಗೂ ಕ್ಯೂ!

Spread the love

ಬಳ್ಳಾರಿ: ನಾಲ್ಕನೆಯ ಹಂತದ ಲಾಕ್‍ಡೌನ್ ಸಡಿಲಿಕೆ ಹಿನ್ನೆಲೆ ಗಣಿನಾಡು ಬಳ್ಳಾರಿ ಜಿಲ್ಲೆಯಲ್ಲಿ ಎಣ್ಣೆ ಆಯ್ತು ಈಗ ಜಗಿಯುವ ತಂಬಾಕು ಖರೀದಿಗೂ ಭಾರೀ ಪ್ರಮಾಣದ ಕ್ಯೂ ನಿಂತುಕೊಂಡು ಖರೀದಿಸಿದ್ದಾರೆ.

ಜಿಲ್ಲೆಯ ಹಗರಿಬೊಮ್ಮನಹಳ್ಳಿ ಪಟ್ಟಣದ ಹಳೇ ಬಸ್ ನಿಲ್ದಾಣದ ಬಳಿ ಜಗಿಯುವ ತಂಬಾಕು ಉತ್ಪನ್ನಗಳಾದ ವಿಮಲ್, ಗುಟ್ಕಾ ಡೀಲರ್ ಅಂಗಡಿಗಳ ಮುಂದೆ ಇಂದು ನೂರಾರು ಮಂದಿ ನಿಂತಿದ್ದರು. ಬೆಳಗ್ಗೆ 5 ಗಂಟೆಯಿಂದಲೇ ಸರದಿ ಸಾಲಿನಲ್ಲಿ ನಿಂತ ಜನರು ಗುಟ್ಕಾ ಖರೀದಿಸಿದ್ದಾರೆ.

ಒಬ್ಬರಿಗೆ 2 ಪಾಕೆಟ್ ಮಾತ್ರ ವಿತರಿಸಲಾಗುತ್ತಿದ್ದು, ಒಂದು ಪಾಕೆಟ್‍ಗೆ ರೂ. 125ರಂತೆ ಮಾರಾಟ ಮಾಡಲಾಗುತ್ತಿದೆ. ಚಿಲ್ಲರೆ ಅಂಗಡಿಗಳಲ್ಲಿ ದುಪ್ಪಟ್ಟು ಬೆಲೆಗೆ ಮಾರಾಟ ಮಾಡುತ್ತಿರುವ ಹಿನ್ನೆಲೆಯಲ್ಲಿ ಗುಟ್ಕಾ ಪ್ರಿಯರು ನೇರವಾಗಿ ಹೋಲ್‍ಸೇಲ್ ಡೀಲರ್ ಬಳಿಯೇ ಹೋಗಿ ಜಗಿಯುವ ತಂಬಾಕು ಖರೀದಿಸಿದ್ದಾರೆ.

ಲಾಕ್‍ಡೌನ್ ಬಳಿಕ ಗುಟ್ಕಾ, ತಂಬಾಕು ಉತ್ಪನ್ನಗಳ ಮಾರಾಟವನ್ನು ಮೂರ್ನಾಲ್ಕು ಪಟ್ಟು ಹೆಚ್ಚಿನ ದರದಲ್ಲಿ ಡೀಲರ್ ಗಳು ಮಾರಾಟಕ್ಕೆ ಮುಂದಾಗಿದ್ದರು. ಸದ್ಯ ನಿಗದಿತ ದರದಲ್ಲಿ ಮಾರಾಟವಾಗುತ್ತಿದ್ದರೂ ಗ್ರಾಹಕರು ಸಾಮಾಜಿಕ ಅಂತರ, ಮುಂಜಾಗ್ರತಾ ಕ್ರಮಕೈಗೊಳ್ಳದೆ ಕ್ಯೂನಲ್ಲಿ ನಿಂತಿದ್ದರು.


Spread the love

About Laxminews 24x7

Check Also

ಜನಾರ್ದನ ರೆಡ್ಡಿ ವಿರುದ್ಧ ಸ್ಪರ್ಧೆಗೆ ಸಿದ್ಧ: ಸೋಮಶೇಖರ್ ರೆಡ್ಡಿ

Spread the love ಬಳ್ಳಾರಿ: ಹೊಸ ಪಕ್ಷವನ್ನು ಸ್ಥಾಪಿಸಿರುವ ಜನಾರ್ದನ ರೆಡ್ಡಿ ವಿರುದ್ಧವೇ ಅವರ ಸಹೋದರ ಸೋಮಶೇಖರ ರೆಡ್ಡಿ ಅವರು ಅಸಮಾಧಾನ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ