ರಾಯಚೂರು: ನಗರದ ಹೊರವಲಯದ ಬೋಳಮಾನದೊಡ್ಡಿ ರಸ್ತೆಯಲ್ಲಿರುವ ಸಾಂಸ್ಥಿಕ ಕ್ವಾರಂಟೈನ್ ಕೇಂದ್ರದ ಜನ ಆಹಾರ ಪದಾರ್ಥಗಳಿಗಾಗಿ ಹೊರಬರುತ್ತಿದ್ದಾರೆ. ಬ್ರೆಡ್, ಮೊಟ್ಟೆ ಹಾಗೂ ತಿನಿಸು ಪದಾರ್ಥಗಳ ಖರೀದಿಸಲು ಕ್ವಾರಂಟೈನ್ ಕೇಂದ್ರದಿಂದ ಜನ ಹೊರಬರುತ್ತಿದ್ದಾರೆ. ಕ್ವಾರಂಟೈನ್ ಕೇಂದ್ರದ ಮುಂದೆಯೇ ವ್ಯಾಪಾರಿಗಳು ಬ್ರೆಡ್ ಸೇರಿ ಇತರೆ ಆಹಾರ ಪದಾರ್ಥಗಳನ್ನ ತಂದು ಮಾರಾಟ ಮಾಡುತ್ತಿದ್ದಾರೆ.
ಆಂಧ್ರಪ್ರದೇಶ, ತೆಲಂಗಾಣದಿಂದ ಬಂದವರಿಗಾಗಿ ಮಾಡಿರುವ ಕ್ವಾರಂಟೈನ್ ಕೇಂದ್ರದಲ್ಲಿ ಜನರ ಓಡಾಟಕ್ಕೆ ಯಾವುದೇ ನಿರ್ಭಂದವಿಲ್ಲದಂತಾಗಿದೆ. ಕಾವಲಿಗೆ ಪೊಲೀಸರು ಇದ್ದರೂ ಕ್ವಾರಂಟೈನ್ ಕೇಂದ್ರದ ಗೇಟ್ ಮುಂದೆಯೇ ನಿಂತು ಬ್ರೆಡ್ ಮಾರಾಟ ನಡೆದಿದೆ. ಪ್ರತಿದಿನ ವ್ಯಾಪಾರಿಗಳು ಬಂದ ಕೂಡಲೇ ಜನ ಓಡಿ ಬಂದು ಬ್ರೆಡ್ ಖರೀದಿಸುತ್ತಾರೆ.
ಕ್ವಾರಂಟೈನ್‍ನಲ್ಲಿರುವ ಜನರು ಹೊರಗಡೆಗೂ ಓಡಾಟ ನಡೆಸಿರುವುದರಿಂದ ಸ್ಥಳೀಯರಿಗೆ ಕೊರೊನಾ ಸೋಂಕಿನ ಆತಂಕ ಕಾಡುತ್ತಿದೆ. ಪ್ರತಿದಿನ ಒಂದೇ ತರಹದ ಊಟ ಮಾಡಲಾಗುತ್ತಿದೆ. ಮಕ್ಕಳಿಗೆ ಹಾಲು, ಬ್ರೆಡ್ ವ್ಯವಸ್ಥೆಯಿಲ್ಲ ಅಂತ ಜನ ನಿತ್ಯ ಹೊರಗಡೆ ಬಂದು ಹೋಗುತ್ತಿದ್ದಾರೆ. ಇದಕ್ಕೆ ಕೂಡಲೇ ನಿಯಂತ್ರಣ ಹಾಕಬೇಕು ಅಂತ ಕ್ವಾರಂಟೈನ್ ಕೇಂದ್ರದ ಸುತ್ತಲ ಬಡಾವಣೆ ಜನ ಆಗ್ರಹಿಸಿದ್ದಾರೆ.e