Breaking News
Home / ಜಿಲ್ಲೆ / ಕೊರೋನಾ ಸೋಂಕು ನಿಯಂತ್ರಣಕ್ಕೆ ಗ್ರಾಮಗಳು ತೆಗೆದುಕೊಂಡ ಕ್ರಮಗಳು ಅನೇಕರಿಗೆ ಮಾದರಿಯಾಗಿವೆ: ಪ್ರಧಾನಿ ಮೋದಿ

ಕೊರೋನಾ ಸೋಂಕು ನಿಯಂತ್ರಣಕ್ಕೆ ಗ್ರಾಮಗಳು ತೆಗೆದುಕೊಂಡ ಕ್ರಮಗಳು ಅನೇಕರಿಗೆ ಮಾದರಿಯಾಗಿವೆ: ಪ್ರಧಾನಿ ಮೋದಿ

Spread the love

ನವದೆಹಲಿ: ಕೊರೋನಾ ಸೋಂಕು ನಿಯಂತ್ರಣಕ್ಕೆ ಗ್ರಾಮಗಳು ತೆಗೆದುಕೊಂಡ ಕ್ರಮಗಳು ಅನೇಕರಿಗೆ ಮಾದರಿಯಾಗಿವೆ ಎಂದು ಪ್ರಧಾನಿ ಮೋದಿ ಶ್ಲಾಘಿಸಿದ್ದಾರೆ.

ಸರಪಂಚರನ್ನು ಉದ್ದೇಶಿಸಿ ವಿಡಿಯೋ ಕಾನ್ಫರೆನ್ಸ್​ನಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಕೊರೋನಾ ವೈರಸ್​ ನಿಯಂತ್ರಣಕ್ಕೆ ಸಾಕಷ್ಟು ಗ್ರಾಮಗಳು ಸ್ವಯಂ ನಿರ್ಬಂಧ ಹೇರಿಕೊಂಡಿವೆ. ಹಳ್ಳಿಗರಿಂದ ಸಾಕಷ್ಟು ಜನರು ಸ್ಫೂರ್ತಿ ಪಡೆದುಕೊಂಡಿದ್ದಾರೆ ಎಂದರು.

ಮೊದಲು ಗ್ರಾಮ ಪಂಚಾಯ್ತಿಯಲ್ಲಿ ಸರಿಯಾದ ಇಂಟರ್​ನೆಟ್​ ಸೌಲಭ್ಯ ಇರುತ್ತಿರಲಿಲ್ಲ. ಆದರೆ, ಇಂದು ಲಕ್ಷಾಂತರ ಪಂಚಾಯತಿಗಳಲ್ಲಿ ವೇಗದ ಇಂಟರ್​ನೆಟ್​ ಇದೆ. ದೇಶದ ಅನೇಕ ಸರಪಂಚರು ತಾಂತ್ರಿಕವಾಗಿ ಅಭಿವೃದ್ಧಿ ಹೊಂದಿದ್ದಾರೆ ಎಂದು ತಿಳಿಸಿದರು.

ಇಡೀ ವಿಶ್ವಕ್ಕೆ ಕೊರೋನಾ ದೊಡ್ಡ ಸಂದೆಶವೊಂದನ್ನು ನೀಡಿದೆ. ಕೊರೋನಾದಿಂದಾಗಿ ​ ಸ್ವಯಂ ಅವಲಂಬನೆ ಕಲಿಯುವ ಅನಿವಾರ್ಯತೆ ಬಂದಿದೆ. ಸ್ವಾವಲಂಬಿಗಳಾಗದೇ ಈ ವೈರಸ್​ ವಿರುದ್ಧ ಹೋರಾಡಲು ಸಾಧ್ಯವಿಲ್ಲ ಎಂದು ಹೇಳಿದರು.


Spread the love

About Laxminews 24x7

Check Also

ಜನರು ತಿಂಗಳುಗಟ್ಟಲೆ ಓಡಾಡಿದರು ವೀಸಾ ಸಿಗಲ್ಲ, ಪ್ರಜ್ವಲ್ ಗೆ ಒಂದೇ ದಿನದಲ್ಲಿ ಹೇಗೆ ಸಿಕ್ಕಿತು? : ವಿನಯ್ ಕುಲಕರ್ಣಿ

Spread the loveಹಾವೇರಿ : ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾವೇರಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ